2 Samuel · chapter 10 · verse 1
2 Samuel 10:1 in Kannada
ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು.
Idara taruvaaya enaayitandare, ammonana makkala arasanu sattanu; avana maganaada haanoonanu avanige badalaagi arasanaadanu.
2 Samuel 10:1 in English
- King James Version (KJV)
- And it came to pass after this, that the king of the children of Ammon died, and Hanun his son reigned in his stead.
- World English Bible (WEB)
- After this, the king of the children of Ammon died, and Hanun his son reigned in his place.
- American Standard Version (ASV)
- And it came to pass after this, that the king of the children of Ammon died, and Hanun his son reigned in his stead.
- Bible in Basic English (BBE)
- Now after this, death came to the king of the children of Ammon, and Hanun, his son, became king in his place.
- Darby Translation (DBY)
- And it came to pass after this that the king of the children of Ammon died, and Hanun his son reigned in his stead.
- Webster's Bible (WBS)
- And it came to pass after this, that the king of the children of Ammon died, and Hanun his son reigned in his stead.
- Young's Literal Translation (YLT)
- And it cometh to pass afterwards, that the king of the Bene-Ammon dieth, and Hanun his son reigneth in his stead,
Read in context
- 1ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು.
- 2ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ದಯೆತೋರಿಸಿದ ಹಾಗೆಯೇ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು ಅಂದನು. ದಾವೀದನು ಅವನ ತಂದೆಗೋಸ್ಕರ ಅವನಿಗೆ ಆದರಣೆ ಹೇಳುವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು.
- 3ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು.
Cross references
- 1 Samuel 11:1–3 1 ಸಮುವೇಲನು 11:1–3ಅಮ್ಮೋನಿಯನಾದ ನಾಹಾಷನು ಬಂದು ಗಿಲ್ಯಾದಿನಲ್ಲಿರುವ ಯಾಬೇಷಿಗೆ ವಿರೋಧ ವಾಗಿ ದಂಡು ಇರಿಸಿದನು. ಆಗ ಯಾಬೇಷಿನ ಜನರೆ ಲ್ಲರು ನಾಹಾಷನಿಗೆ--ನೀನು ನಮ್ಮ ಸಂಗಡ ಒಡಂಬ ಡಿಕೆ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು. ಅಮ್ಮೋನ್ಯನಾದ ನಾಹಾಷನು ಅವರಿಗೆ--ಇಸ್ರಾಯೇ ಲ್ಯರನ್ನು ಅವಮಾನ ಪಡಿಸುವದಕ್ಕಾಗಿ ನಿಮ್ಮೆಲ್ಲರ ಬಲ ಕಣ್ಣುಗಳನ್ನು ಕಿತ್ತುಹಾಕಿ ನಿಮ್ಮ ಸಂಗಡ ಒಡಂಬಡಿಕೆ ಮಾಡುತ್ತೇನೆ ಅಂದನು. ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ--ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಗಡುವನ್ನು ಕೊಡು. ನಮ್ಮನ್ನು ರಕ್ಷಿಸು ವವರು ಯಾರೂ ಇಲ್ಲದೆ ಹೋದರೆ ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು ಅಂದರು.
- Judges 10:7–9 ನ್ಯಾಯಸ್ಥಾಪಕರು 10:7–9ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು. ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು. ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು.
- 1 Chronicles 19:1–19 1 ಪೂರ್ವಕಾಲವೃತ್ತಾಂತ 19:1–19ಇದರ ತರುವಾಯ ಏನಾಯಿತಂದರೆ, ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು; ಅವನ ಮಗನು ಅವನಿಗೆ ಬದಲಾಗಿ ಆಳಿ ದನು. ಆಗ ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ಕೃಪೆ ತೋರಿಸಿದ್ದರಿಂದ ಅವನ ಮಗನಾದ ಹಾನೂನನಿಗೆ ನಾನು ಕೃಪೆ ತೋರಿಸುವೆನು ಅಂದನು. ದಾವೀದನು ಅವನ ತಂದೆಯನ್ನು ಕುರಿತು ಅವನಿಗೆ ಆದರಣೆ ಕೊಡಲು ಸೇವಕರನ್ನು ಕಳುಹಿ ಸಿದನು. ಹೀಗೆಯೇ ದಾವೀದನ ಸೇವಕರು ಅವನಿಗೆ ಆದರಣೆ ಕೊಡಲು ಅಮ್ಮೋನನ ಮಕ್ಕಳ ದೇಶಕ್ಕೆ ಹಾನೂನನ ಬಳಿಗೆ ಬಂದರು. ಆದರೆ ಅಮ್ಮೋನಿಯರ ಪ್ರಧಾನರು ಹಾನೂನನಿಗೆ--ದಾವೀದನು ನಿನ್ನ ಬಳಿಗೆ ಆದರಣೆ ಕೊಡುವವರನ್ನು ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ನೀನು ನೆನಸು ತ್ತಿಯೋ? ಅವನ ಸೇವಕರು ಶೋಧಿಸಲೂ ಕೆಡವಿ ಹಾಕಲೂ ದೇಶವನ್ನು ಪಾಳತಿ ನೋಡಲೂ ನಿನ್ನ ಬಳಿಗೆ ಬರಲಿಲ್ಲವೋ ಅಂದರು. ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು. ಆಗ ಕೆಲವರು ಹೋಗಿ ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದರು. ಆ ಮನುಷ್ಯರು ಬಹಳವಾಗಿ ನಾಚಿಕೆಪಟ್ಟದ್ದರಿಂದ ಅವರನ್ನು ಎದುರುಗೊಳ್ಳಲು ಸೇವ ಕರನ್ನು ಕಳುಹಿಸಿ ಅರಸನು ಅವರಿಗೆ--ನಿಮ್ಮ ಗಡ್ಡಗಳು ಬೆಳೆಯುವ ವರೆಗೂ ಯೆರಿಕೋವಿನಲ್ಲಿ ಇರ್ರಿ; ಆಮೇಲೆ ತಿರಿಗಿ ಬನ್ನಿರಿ ಎಂದು ಹೇಳಿದನು. ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು. ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ ಮಾಕದ ಅರಸನನ್ನೂ ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋ ನಿಯರು ತಮ್ಮ ಪಟ್ಟಣಗಳಿಂದ ಕೂಡಿಕೊಂಡು ಯುದ್ಥಕ್ಕೆ ಬಂದರು. ದಾವೀದನು ಇದನ್ನು ಕೇಳಿದಾಗ ಅವನು ಯೋವಾ ಬನನ್ನೂ ಸಮಸ್ತ ಪರಾಕ್ರಮಶಾಲಿಗಳ ಸೈನ್ಯವನ್ನೂ ಕಳುಹಿಸಿದನು. ಆಗ ಅಮ್ಮೋನಿಯರು ಹೊರಟು ಪಟ್ಟಣದ ಬಾಗಿಲ ದ್ವಾರದ ಹತ್ತಿರ ವ್ಯೂಹಕಟ್ಟಿದರು. ಆದರೆ ಬಂದ ಅರಸುಗಳು ಬೇರೆಯಾಗಿ ಹೊಲದಲ್ಲಿ ನಿಂತಿದ್ದರು. ಯುದ್ಧವು ತನಗೆ ವಿರೋಧವಾಗಿ ಹಿಂದೆಯೂ ಮುಂದೆಯೂ ಇರುವದನ್ನು ಯೋವಾ ಬನು ಕಂಡಾಗ ಅವನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಸಮಸ್ತರೊಳಗೆ ಜನರನ್ನು ಆದುಕೊಂಡು ಅವರನ್ನು ಅರಾಮ್ಯರಿಗೆದುರಾಗಿ ವ್ಯೂಹ ಕಟ್ಟಿದನು. ಆದರೆ ಮಿಕ್ಕಾದವರು ಅಮ್ಮೋನಿಯರಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬ್ಷೈನ ಕೈಯಲ್ಲಿ ಒಪ್ಪಿಸಿಕೊಟ್ಟು ಅವನಿಗೆ-- ಅರಾಮ್ಯರು ನನಗಿಂತ ಬಲವುಳ್ಳವರಾಗಿದ್ದರೆ ನೀನು ನನಗೆ ಸಹಾಯ ಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳ ವರಾಗಿದ್ದರೆ, ನಾನು ನಿನಗೆ ಸಹಾಯ ಮಾಡುವೆನು, ಧೈರ್ಯವಾಗಿರು; ನಾವು ನಮ್ಮ ಜನರಿಗೋಸ್ಕ ರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲ ಗೊಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು. ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡಲು ಮುಂಗೊಂಡರು. ಅವರು ಅವನ ಎದುರಿ ನಿಂದ ಓಡಿಹೋದರು. ಅರಾಮ್ಯರು ಓಡಿಹೋದದ್ದನ್ನು ಅಮ್ಮೋನಿಯರು ನೋಡಿದಾಗ ಅವರು ಹಾಗೆಯೇ ಅವನ ಸಹೋದರನಾದ ಅಬ್ಷೈನ ಎದುರಿನಿಂದ ಓಡಿಹೋಗಿ ಪಟ್ಟಣದೊಳಗೆ ಪ್ರವೇಶಿಸಿದರು. ಆಗ ಯೋವಾಬನು ಯೆರೂಸಲೇಮಿಗೆ ಬಂದನು. ಅರಾಮ್ಯರು ತಾವು ಇಸ್ರಾಯೇಲಿನ ಮುಂದೆ ಸೋತುಹೋದದ್ದನ್ನು ಕಂಡಾಗ ಅವರು ದೂತರನ್ನು ಕಳುಹಿಸಿ ನದಿಯ ಆಚೆಯಲ್ಲಿರುವ ಅರಾಮ್ಯ ರನ್ನು ಕರಕೊಂಡರು. ಹದರೆಜರನ ಸೈನ್ಯಾಧಿಪತಿ ಯಾದ ಶೋಫಕನು ಅವರ ಮೇಲೆ ಇದ್ದನು. ಅದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಸಮಸ್ತ ಇಸ್ರಾಯೇಲ್ಯರನ್ನು ಕೂಡಿಸಿ ಯೊರ್ದನನ್ನು ದಾಟಿ ಅವರಿಗೆದುರಾಗಿ ವ್ಯೂಹಕಟ್ಟಿದನು. ದಾವೀದನು ಅರಾಮ್ಯರಿಗೆದುರಾಗಿ ಸೈನ್ಯವನ್ನು ವ್ಯೂಹಕಟ್ಟಿದ ಮೇಲೆ ಅವರು ಅವನ ಸಂಗಡ ಯುದ್ಧಮಾಡಿದರು. ಆದರೆ ಅರಾಮ್ಯರು ಇಸ್ರಾಯೇಲಿನ ಎದುರಿನಿಂದ ಓಡಿಹೋದರು. ದಾವೀದನು ಅರಾಮ್ಯರಲ್ಲಿ ಏಳು ಸಾವಿರ ರಥವುಳ್ಳವರನ್ನೂ ನಾಲ್ವತ್ತು ಸಾವಿರ ಕಾಲಾಳು ಗಳನ್ನೂ ಸೈನ್ಯಾಧಿಪತಿಯಾದ ಶೋಫಕನನ್ನೂ ಕೊಂದು ಹಾಕಿದನು.ಹದರೆಜರನ ಸೇವಕರು ತಾವು ಇಸ್ರಾ ಯೇಲಿನ ಮುಂದೆ ಸೋಲಿಸಲ್ಪಟ್ಟದ್ದನ್ನು ಕಂಡಾಗ ಅವರು ದಾವೀದನ ಸಂಗಡ ಸಮಾಧಾನ ಮಾಡಿ ಕೊಂಡು ಅವನ ಸೇವಕರಾದರು. ತರುವಾಯ ಅರಾ ಮ್ಯರು ಅಮ್ಮೋನಿಯರಿಗೆ ಇನ್ನು ಸಹಾಯ ಮಾಡಲು ಮನಸ್ಸಿಲ್ಲದೆ ಇದ್ದರು. ಹದರೆಜರನ ಸೇವಕರು ತಾವು ಇಸ್ರಾ ಯೇಲಿನ ಮುಂದೆ ಸೋಲಿಸಲ್ಪಟ್ಟದ್ದನ್ನು ಕಂಡಾಗ ಅವರು ದಾವೀದನ ಸಂಗಡ ಸಮಾಧಾನ ಮಾಡಿ ಕೊಂಡು ಅವನ ಸೇವಕರಾದರು. ತರುವಾಯ ಅರಾ ಮ್ಯರು ಅಮ್ಮೋನಿಯರಿಗೆ ಇನ್ನು ಸಹಾಯ ಮಾಡಲು ಮನಸ್ಸಿಲ್ಲದೆ ಇದ್ದರು.
- Judges 11:12–28 ನ್ಯಾಯಸ್ಥಾಪಕರು 11:12–28ಅವನು ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನೀನು ನನಗೆ ವಿರೋಧವಾಗಿ ನನ್ನ ಸಂಗಡ ಯುದ್ಧಮಾಡುವದಕ್ಕೆ ನನ್ನ ದೇಶದಲ್ಲಿ ಬರುವ ಕಾರಣವೇನು. ಅಮ್ಮೋ ನನ ಮಕ್ಕಳ ಅರಸನು ಯೆಫ್ತಾಹನ ದೂತರಿಗೆ--ಇಸ್ರಾಯೇಲು ಐಗುಪ್ತದಿಂದ ಬರುವಾಗ ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಮತ್ತು ಯೊರ್ದನಿನ ವರೆಗೂ ಇರುವ ನನ್ನ ದೇಶವನ್ನು ತಕ್ಕೊಂಡರು. ಆದದರಿಂದ ಈಗ ಅದನ್ನು ನನಗೆ ಸಮಾಧಾನವಾಗಿ ತಿರಿಗಿಕೊಡು ಅಂದನು. ಯೆಫ್ತಾಹನು ತಿರಿಗಿ ಅಮ್ಮೋನನ ಮಕ್ಕಳ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ--ಯೆಫ್ತಾಹನು ಹೇಳುವ ಮಾತು ಇದೇ--ಇಸ್ರಾಯೇಲ್ ಮೋವಾಬಿನ ದೇಶವನ್ನಾ ದರೂ ಅಮ್ಮೋನನ ಮಕ್ಕಳ ದೇಶವನ್ನಾದರೂ ತಕ್ಕೊಂಡ ದ್ದಿಲ್ಲ. ಆದರೆ ಇಸ್ರಾಯೇಲು ಐಗುಪ್ತದಿಂದ ಬರು ವಾಗ ಅರಣ್ಯದಲ್ಲಿ ಕೆಂಪು ಸಮುದ್ರದ ವರೆಗೆ ನಡೆದು ಕಾದೇಶಿಗೆ ಬಂದು ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ--ನಾನು ನಿನ್ನ ದೇಶವನ್ನು ಹಾದು ಹೋಗಲು ಅಪ್ಪಣೆಆಗಬೇಕು ಎಂದು ಹೇಳಿದರು. ಆದರೆ ಎದೋಮಿನ ಅರಸನು ಕೇಳದೆ ಹೋದನು. ಅವರು ಮೋವಾಬಿನ ಅರಸನ ಬಳಿಗೂ ಹಾಗೆಯೇ ಕಳುಹಿಸಿದರು; ಅವನೂ ಒಪ್ಪದೆ ಹೋದನು. ಆದದ ರಿಂದ ಇಸ್ರಾಯೇಲ್ಯರು ಕಾದೇಶಿನಲ್ಲಿ ವಾಸಮಾಡಿದರು. ಅರಣ್ಯದಲ್ಲಿ ನಡೆದು ಎದೋಮ್ ದೇಶವನ್ನೂ ಮೋವಾಬ್ ದೇಶವನ್ನೂ ಸುತ್ತಿಕೊಂಡು ಹೋಗಿ ಮೋವಾಬ್ ದೇಶದ ಪೂರ್ವ ದಿಕ್ಕಿಗೆ ಬಂದು ಮೋವಾಬಿನ ಮೇರೆಯೊಳಗೆ ಪ್ರವೇಶಿಸದೆ ಮೋವಾ ಬಿನ ಮೇರೆಯಾದ ಅರ್ನೋನಿನ ಆಚೆಯಲ್ಲಿ ಇಳು ಕೊಂಡರು. ಇಸ್ರಾಯೇಲು ಹೆಷ್ಬೋನಿನ ಅರಸನಾ ದಂಥ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿದನು. ಅವರು--ನನ್ನ ಸ್ಥಳಕ್ಕೆ ನಿನ್ನ ದೇಶವನ್ನು ನಾವು ದಾಟಿಹೋಗುವದಕ್ಕೆ ಅಪ್ಪಣೆಕೊಡಬೇಕು ಅಂದರು. ಆದರೆ ಸೀಹೋ ನನು ತನ್ನ ಮೇರೆಯನ್ನು ದಾಟುವದಕ್ಕೆ ಇಸ್ರಾಯೇಲನ್ನು ನಂಬದೆ ತನ್ನ ಜನವನ್ನೆಲ್ಲಾ ಕೂಡಿಸಿ ಯಹಚಿನಲ್ಲಿ ದಂಡಿಳಿದು ಇಸ್ರಾಯೇಲಿಗೆ ವಿರೋಧವಾಗಿ ಯುದ್ಧ ಮಾಡಿದನು. ಆಗ ಇಸ್ರಾಯೇಲಿನ ದೇವರಾದ ಕರ್ತನು ಸೀಹೋನನನ್ನೂ ಅವನ ಸಕಲ ಜನರನ್ನೂ ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಇವರು ಅವರನ್ನು ಹೊಡೆದುಬಿಟ್ಟರು. ಹಾಗೆಯೇ ಇಸ್ರಾಯೇ ಲ್ಯರು ಆ ದೇಶದಲ್ಲಿ ವಾಸಿಸಿದ್ದ ಅಮೋರಿಯರ ದೇಶ ವನ್ನೆಲ್ಲಾ ಸ್ವಾಧೀನಮಾಡಿಕೊಂಡರು. ಅರ್ನೋನಿ ನಿಂದ ಯಬ್ಬೋಕಿನ ವರೆಗೂ ಅರಣ್ಯದಿಂದ ಯೊರ್ದ ನಿನ ವರೆಗೂ ಇರುವ ಅಮೋರಿಯರ ಮೇರೆಗಳನ್ನೆಲ್ಲಾ ಅವರು ಸ್ವಾಧೀನಮಾಡಿಕೊಂಡರು. ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ? ನಿನ್ನ ದೇವರಾದ ಕೆಮೋಷನು ಸ್ವತಂತ್ರಿ ಸಿಕೊಳ್ಳಲು ನಿನಗೆ ಕೊಡುವ ದೇಶವನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಕರ್ತನು ಯಾರನ್ನು ನಮ್ಮ ಮುಂದೆ ಹೊರಡಿಸುವನೋ ಅವರನ್ನು ನಾವು ಸ್ವಾಧೀನಮಾಡಿ ಕೊಳ್ಳುವೆವು. ಈಗ ಚಿಪ್ಪೋರನ ಮಗನೂ ಮೋವಾ ಬಿನ ಅರಸನೂ ಆದ ಬಾಲಾಕನಿಗಿಂತ ಯಾವದ ರಲ್ಲಾದರೂ ನೀನು ಉತ್ತಮನೋ? ಅವನು ಇಸ್ರಾಯೇಲಿನ ವಿರೋಧವಾಗಿ ಯಾವಾಗಲಾದರೂ ವಿವಾದ ಮಾಡಿದನೋ? ಯಾವಾಗಲಾದರೂ ಅವರಿಗೆ ವಿರೋಧವಾಗಿ ಯುದ್ಧಮಾಡಿದನೋ? ಇಸ್ರಾಯೇಲು ಹೆಷ್ಬೋನಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರೋಯೇರಿನಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ಅರ್ನೋನಿನ ತೀರವಾದ ಎಲ್ಲಾ ಪಟ್ಟಣ ಗಳಲ್ಲಿಯೂ ಮುನ್ನೂರು ವರುಷಗಳಿಂದ ವಾಸಿಸಿರು ವಾಗ ಇಷ್ಟರ ವರೆಗೆ ನೀವು ಅದನ್ನು ಬಿಡಿಸದೆ ಹೋದದ್ದೇನು? ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ. ಹೀಗಿದ್ದರೂ ಯೆಪ್ತಾಹನು ಹೇಳಿ ಕಳುಹಿಸಿದ ಮಾತನ್ನು ಅಮ್ಮೋನನ ಅರಸನು ಕೇಳದೆ ಹೋದನು.