Acts · chapter 13 · verse 19
Acts 13:19 in Kannada
ಕಾನಾನ್ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.
Kaanaan deshadallidda elu janaanga galannu nirmoola maadida mele cheetu haaki aa deshavannu avarige hanchikottanu.
Acts 13:19 in English
- King James Version (KJV)
- And when he had destroyed seven nations in the land of Chanaan, he divided their land to them by lot.
- World English Bible (WEB)
- When he had destroyed seven nations in the land of Canaan, he gave them their land for an inheritance for about four hundred fifty years.
- American Standard Version (ASV)
- And when he had destroyed seven nations in the land of Canaan, he gave [them] their land for an inheritance, for about four hundred and fifty years:
- Bible in Basic English (BBE)
- And having put to destruction seven nations in the land of Canaan, he gave them the land for their heritage for about four hundred and fifty years.
- Darby Translation (DBY)
- And having destroyed seven nations in the land of Canaan, he gave them their land as an inheritance.
- Webster's Bible (WBS)
- And when he had destroyed seven nations in the land of Canaan, he divided their land to them by lot.
- Young's Literal Translation (YLT)
- and having destroyed seven nations in the land of Canaan, He did divide by lot to them their land.
Read in context
- 17ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃ ಗಳನ್ನು ಆರಿಸಿಕೊಂಡು ಆ ಜನರು ಐಗುಪ್ತದೇಶದಲ್ಲಿ ಪ್ರವಾಸವಾಗಿದ್ದಾಗ ಅವರನ್ನು ವೃದ್ಧಿಗೆ ತಂದು ತನ್ನ ಭುಜಬಲದಿಂದ ಆ ದೇಶದೊಳಗಿಂದ ಬರಮಾಡಿ ದನು.
- 18ಆತನು ಸುಮಾರು ನಾಲ್ವತ್ತು ವರುಷಗಳ ವರೆಗೂ ಅಡವಿಯಲ್ಲಿ ಅವರ ನಡಾವಳಿಯನ್ನು ಸಹಿಸಿ ಕೊಂಡು
- 19ಕಾನಾನ್ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.
- 20ಇದಾದ ಮೇಲೆ ಪ್ರವಾದಿಯಾದ ಸಮುವೇಲನ ವರೆಗೆ ಸುಮಾರು ನಾನೂರೈವತ್ತು ವರುಷ ಆತನು ಅವರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು.
- 21ತರುವಾಯ ಅವರು ತಮಗೆ ಅರಸನು ಬೇಕೆಂದು ಅಪೇಕ್ಷೆಪಟ್ಟಾಗ ದೇವರು ಅವರಿಗೆ ಬೆನ್ಯಾವಿಾನನ ಗೋತ್ರದ ಕೀಷನ ಮಗನಾದ ಸೌಲನನ್ನು ನಾಲ್ವತ್ತು ವರುಷದ ವರೆಗೆ ಕೊಟ್ಟನು.
Cross references
- Deuteronomy 7:1 ಧರ್ಮೋಪದೇಶಕಾಂಡ 7:1ನೀನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಬರಮಾಡಿದಾಗ ಆತನು ನಿನಗಿಂತ ದೊಡ್ಡ ವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಅಂದರೆ ಹಿತ್ತಿಯರನ್ನೂ ಗಿರ್ಗಾಷಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗ ಗಳನ್ನು ನಿನ್ನ ಮುಂದೆ ಹೊರಡಿಸಿ
- Psalm 78:55 ಕೀರ್ತನೆಗಳು 78:55ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
- Acts 7:45 ಅಪೊಸ್ತಲರ ಕೃತ್ಯಗಳು 7:45ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.
- Joshua 19:51 ಯೆಹೋಶುವ 19:51ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
- Joshua 14:1 ಯೆಹೋಶುವ 14:1ಅವರ ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ತಂದೆಗಳ ಮುಖ್ಯಸ್ಥರೂ ಅವರಿಗೆ ಬಾಧ್ಯತೆಯಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳು ಬಾಧ್ಯ ವಾಗಿ ಹೊಂದಿದ ದೇಶಗಳು ಇವೇ.
- Genesis 17:8 ಆದಿಕಾಂಡ 17:8ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
- Nehemiah 9:24 ನೆಹೆಮೀಯ 9:24ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ.
- Joshua 18:10 ಯೆಹೋಶುವ 18:10ಆಗ ಯೆಹೋಶುವನು ಶೀಲೋವಿನಲ್ಲಿ ಕರ್ತನ ಮುಂದೆ ಚೀಟುಗಳನ್ನು ಹಾಕಿ ಇಸ್ರಾಯೇಲ್ ಮಕ್ಕಳಿಗೆ ದೇಶವನ್ನು ಅವರ ಪಾಲುಗಳ ಪ್ರಕಾರ ಹಂಚಿಕೊಟ್ಟನು.
- Genesis 12:5 ಆದಿಕಾಂಡ 12:5ಇದಲ್ಲದೆ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ಸಹೋದರನ ಮಗನಾದ ಲೋಟ ನನ್ನೂ ಅವರು ಕೂಡಿಸಿಕೊಂಡಿದ್ದ ಎಲ್ಲಾ ಸಂಪತ್ತನ್ನೂ ಹಾರಾನಿನಲ್ಲಿ ಅವರು ಸಂಪಾದಿಸಿಕೊಂಡವರನ್ನೂ ತಮ್ಮ ಸಂಗಡ ಕರಕೊಂಡು ಕಾನಾನ್ ದೇಶಕ್ಕೆ ಹೊರಟು ಅವರು ಕಾನಾನ್ ದೇಶಕ್ಕೆ ಬಂದರು.
- Joshua 24:11 ಯೆಹೋಶುವ 24:11ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಯೆರಿಕೋವಿನ ನಿವಾಸಿ ಗಳೂ ಅಮೋರಿಯರೂ ಪೆರಿಜ್ಜೀಯರೂ ಕಾನಾನ್ಯರೂ ಹಿತ್ತಿಯರೂ ಗಿರ್ಗಾಷಿಯರೂ ಹಿವ್ವಿಯರೂ ಯೆಬೂಸಿ ಯರೂ ನಿಮ್ಮ ಸಂಗಡ ಯುದ್ಧಮಾಡಿದರು. ಆದರೆ ನಾನು ಅವರನ್ನೂ ನಿಮ್ಮ ಕೈಗೆ ಒಪ್ಪಿಸಿದೆನು.
- Psalm 135:11 ಕೀರ್ತನೆಗಳು 135:11ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.
- Numbers 26:53–56 ಅರಣ್ಯಕಾಂಡ 26:53–56ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
Original words (Greek)
- And · G2532καί kaí
- destroyed · G2507καθαιρέω kathairéō
- seven · G2033ἑπτά heptá
- nations · G1484ἔθνος éthnos
- in · G1722ἐν en
- land · G1093γῆ gē
- Chanaan · G5477Χαναάν Chanaán
- divided · G2624κατακληροδοτέω kataklērodotéō
- their · G846αὐτός autós
- land · G1093γῆ gē
- them · G846αὐτός autós
- lot · G2624κατακληροδοτέω kataklērodotéō