Amos · chapter 6 · verse 13
Amos 6:13 in Kannada
ಏನೂ ಇಲ್ಲದ್ದರಲ್ಲಿ ಸಂತೋಷಪಡುವ ವರೇ, ನೀವು ಹೆಚ್ಚಳ ಪಡುವದು ಶೂನ್ಯವಾಗಿರುವ ಲ್ಲಿಯೇ? ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿ ಲ್ಲವೇ ಎಂದು ಹೇಳುತ್ತೀರಿ.ಇಗೋ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುತ್ತೇನೆ; ಇಸ್ರಾಯೇಲಿನ ಮನೆತನದವರೇ, ಹಮಾತಿನ ಪ್ರದೇಶದಿಂದ ಹಿಡಿದು ಅರಣ್ಯದ ನದಿಯ ವರೆಗೂ ನಿಮ್ಮನ್ನು ಹಿಂಸಿಸುತ್ತೇನೆ ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
Enoo illaddaralli santoshapaduva vare, neevu hechchala paduvadu shoonyavaagiruva lliye? Svabaladinda kombugalannu tegedukondi llave endu helutteeri.igo, janaangavannu nimage virodhavaagi ebbisuttene; israayelina manetanadavare, hamaatina pradeshadinda hididu aranyada nadiya varegoo nimmannu hinsisuttene endu sainyagala devaraada kartanu heluttaane.
Amos 6:13 in English
- King James Version (KJV)
- Ye which rejoice in a thing of nought, which say, Have we not taken to us horns by our own strength?
- World English Bible (WEB)
- you who rejoice in a thing of nothing, who say, ‘Haven’t we taken for ourselves horns by our own strength?’
- American Standard Version (ASV)
- ye that rejoice in a thing of nought, that say, Have we not taken to us horns by our own strength?
- Bible in Basic English (BBE)
- You whose joy is in a thing of no value, who say, Have we not taken for ourselves horns by the strength which is ours?
- Darby Translation (DBY)
- — ye that rejoice in a thing of nought, that say, Have we not taken to us power by our own strength?
- Webster's Bible (WBS)
- Ye who rejoice in a thing of naught, who say, Have we not taken to us horns by our own strength?
- Young's Literal Translation (YLT)
- O ye who are rejoicing at nothing, Who are saying, 'Have we not by our strength taken to ourselves horns?'
Read in context
- 11ಇಗೋ, ಕರ್ತನು ಆಜ್ಞಾಪಿಸುತ್ತಾನೆ; ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
- 12ಕುದುರೆಗಳು ಬಂಡೆಯ ಮೇಲೆ ಓಡುವದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷಕ್ಕೂ ನೀತಿ ಫಲವನ್ನು ಮಾಚಿಪತ್ರೆಗೂ ಬದಲಾಯಿ ಸಿದ್ದೀರಿ.
- 13ಏನೂ ಇಲ್ಲದ್ದರಲ್ಲಿ ಸಂತೋಷಪಡುವ ವರೇ, ನೀವು ಹೆಚ್ಚಳ ಪಡುವದು ಶೂನ್ಯವಾಗಿರುವ ಲ್ಲಿಯೇ? ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿ ಲ್ಲವೇ ಎಂದು ಹೇಳುತ್ತೀರಿ.ಇಗೋ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುತ್ತೇನೆ; ಇಸ್ರಾಯೇಲಿನ ಮನೆತನದವರೇ, ಹಮಾತಿನ ಪ್ರದೇಶದಿಂದ ಹಿಡಿದು ಅರಣ್ಯದ ನದಿಯ ವರೆಗೂ ನಿಮ್ಮನ್ನು ಹಿಂಸಿಸುತ್ತೇನೆ ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
- 14ಇಗೋ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುತ್ತೇನೆ; ಇಸ್ರಾಯೇಲಿನ ಮನೆತನದವರೇ, ಹಮಾತಿನ ಪ್ರದೇಶದಿಂದ ಹಿಡಿದು ಅರಣ್ಯದ ನದಿಯ ವರೆಗೂ ನಿಮ್ಮನ್ನು ಹಿಂಸಿಸುತ್ತೇನೆ ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
Cross references
- Luke 12:19–20 ಲೂಕನು 12:19–20ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು. ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Isaiah 28:14–15 ಯೆಶಾಯ 28:14–15ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನ ರನ್ನು ಆಳುವ ಹಾಸ್ಯದ ಜನರಾದ ನೀವು ಕರ್ತನ ಮಾತನ್ನು ಕೇಳಿರಿ, ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ (ನರಕದ)ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತವಾದ ಶಿಕ್ಷೆ ಯು ಹಾದುಹೋಗುವಾಗ ನಮ್ಮ ಮೇಲೆ ಬಾರದು; ಸುಳ್ಳನ್ನು ನಮ್ಮ ಆಶ್ರಯವಾಗಿ ಮಾಡಿಕೊಂಡು ಮೋಸದಲ್ಲಿ ಅಡಗಿಕೊಂಡಿದ್ದೇವೆ ಎಂದು ನೀವು ಅನ್ನುತ್ತೀರಲ್ಲಾ?
- James 4:16 ಯಾಕೋಬನು 4:16ಆದರೆ ನೀವು ನಿಮ್ಮ ಹೊಗಳಿಕೆಗಳಲ್ಲಿ ಸಂತೋಷಪಡುತ್ತೀರಿ. ಅಂಥ ಸಂತೋಷವೆಲ್ಲಾ ಕೆಟ್ಟದ್ದೇ.ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
- 2 Kings 14:25 2 ಅರಸುಗಳು 14:25ಇದ ಲ್ಲದೆ ಇಸ್ರಾಯೇಲಿನ ದೇವರಾದ ಕರ್ತನು ಗತ್ಹೇಫೆ ರಿನವನಾದ ಪ್ರವಾದಿಯಾಗಿರುವ ಅಮಿತ್ತೈನ ಮಗ ನಾದ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಬಯಲಿನ ಸಮುದ್ರದ ವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರಿಗಿ ತಕ್ಕೊಂಡನು.
- 1 Samuel 4:5 1 ಸಮುವೇಲನು 4:5ಕರ್ತನ ಒಡಂಬಡಿ ಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇ ಲ್ಯರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.
- Jeremiah 50:11 ಯೆರೆಮೀಯ 50:11ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ
- Isaiah 17:3–4 ಯೆಶಾಯ 17:3–4ಎಫ್ರಾ ಯಾಮಿನಿಂದ ಕೋಟೆಯೂ ದಮಸ್ಕದ ರಾಜ್ಯವೂ ಸಿರಿಯಾದ ಉಳಿದವುಗಳೂ ನಿಂತು ಹೋಗುವವು; ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರು ವರು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಆ ದಿವಸದಲ್ಲಿ ಆಗುವದೇನಂದರೆ--ಯಾಕೋ ಬಿನ ವೈಭವ ತಗ್ಗುವದು; ಅದರ ಮಾಂಸದ ಕೊಬ್ಬು ಕರಗಿಸಲ್ಪಡುವದು.
- 2 Kings 13:25 2 ಅರಸುಗಳು 13:25ಆಗ ಯೆಹೋವಾಹಾಜನ ಮಗನಾದ ಯೋವಾ ಷನು ಯುದ್ಧದಲ್ಲಿ ತನ್ನ ತಂದೆಯಾದ ಯೆಹೋ ವಾಹಾಜನ ಕೈಯಿಂದ ಹಜಾಯೇಲನು ತಕ್ಕೊಂಡಿದ್ದ ಪಟ್ಟಣಗಳನ್ನು ಅವನ ಮಗನಾದ ಬೆನ್ಹದದನ ಕೈ ಯಿಂದ ತಿರಿಗಿ ತಕ್ಕೊಂಡನು. ಯೋವಾಷನು ಅವನನ್ನು ಮೂರು ಸಾರಿ ಹೊಡೆದು ಇಸ್ರಾಯೇಲಿನ ಪಟ್ಟಣ ಗಳನ್ನು ತಿರಿಗಿ ತಕ್ಕೊಂಡನು.
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Job 31:25 ಯೋಬನು 31:25ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- Jonah 4:6 ಯೋನ 4:6ದೇವರಾದ ಕರ್ತನು ಒಂದು ಸೋರೇ ಗಿಡವನ್ನು ಎಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು ಅವನ ತಲೆಯ ಮೇಲೆ ನೆರಳುಕೊಟ್ಟು ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದನು: ಯೋನನು ಆ ಸೋರೇ ಗಿಡದ ವಿಷಯವಾಗಿ ಬಹಳ ಸಂತೋಷಪಟ್ಟನು.
- Judges 16:23–25 ನ್ಯಾಯಸ್ಥಾಪಕರು 16:23–25ಫಿಲಿಷ್ಟಿಯರ ಅಧಿಪತಿಗಳು ತಮ್ಮ ದೇವರಾದ ದಾಗೋನನಿಗೆ ದೊಡ್ಡ ಬಲಿಯನ್ನು ಅರ್ಪಿಸುವದಕ್ಕೂ ಸಂತೋಷಪಡುವದಕ್ಕೂ ಕೂಡಿಬಂದರು. ಯಾಕಂದರೆ--ನಮ್ಮ ದೇವರು ನಮ್ಮ ಶತ್ರುವಾದ ಸಂಸೋನನನ್ನು ನಮ್ಮ ಕೈಗೆ ಒಪ್ಪಿಸಿಕೊಟ್ಟನು ಎಂದು ಅವರು ಹೇಳಿಕೊಂಡರು. ಜನರು ಅವನನ್ನು ನೋಡಿ ದಾಗ ತಮ್ಮ ದೇವರನ್ನು ಹೊಗಳಿದರು; ಯಾಕಂದರೆನಮ್ಮ ದೇಶವನ್ನು ಹಾಳು ಮಾಡಿ ನಮ್ಮಲ್ಲಿ ಅನೇಕರನ್ನು ಕೊಂದ ನಮ್ಮ ಶತ್ರುವನ್ನು ನಮ್ಮ ದೇವರು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನೆಂದು ಅವರು ಹೇಳಿಕೊಂಡರು. ತರುವಾಯ ಅವರ ಹೃದಯಗಳು ಸಂಭ್ರಮವಾಗಿ ರುವಾಗ--ನಮ್ಮ ಮುಂದೆ ವಿನೋದ ಮಾಡುವ ಹಾಗೆ ಸಂಸೋನನನ್ನು ಕರಕೊಂಡು ಬನ್ನಿರಿ ಅಂದರು. ಅವರು ಸಂಸೋನನನ್ನು ಸೆರೆಮನೆಯಿಂದ ಕರತಂದಾಗ ಅವನು ಅವರ ಮುಂದೆ ವಿನೋದ ಮಾಡಿದನು; ಅವರು ಅವನನ್ನು ಸ್ತಂಭಗಳ ನಡುವೆ ನಿಲ್ಲಿಸಿದ್ದರು.