Amos · chapter 7 · verse 14
Amos 7:14 in Kannada
ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.
Aaga aamosanu amachyanige pratyuttaravaagi heliddenandare--naanu pravaadiyalla, pravaa diya maganoo alla; aadare naanu kurubanoo hatti hannugalannu koodisuvavanoo aagiddene.
Amos 7:14 in English
- King James Version (KJV)
- Then answered Amos, and said to Amaziah, I [was] no prophet, neither [was] I a prophet’s son; but I [was] an herdman, and a gatherer of sycomore fruit:
- World English Bible (WEB)
- Then Amos answered Amaziah, “I was no prophet, neither was I a prophet’s son, but I was a herdsman, and a farmer of sycamore figs;
- American Standard Version (ASV)
- Then answered Amos, and said to Amaziah, I was no prophet, neither was I a prophet’s son; but I was a herdsman, and a dresser of sycomore-trees:
- Bible in Basic English (BBE)
- Then Amos in answer said to Amaziah, I am no prophet, or one of the sons of the prophets; I am a herdman and one who takes care of sycamore-trees:
- Darby Translation (DBY)
- And Amos answered and said to Amaziah, I was no prophet, neither was I a prophet's son; but I was a herdman, and a gatherer of sycamore fruit.
- Webster's Bible (WBS)
- Then answered Amos, and said to Amaziah, I [was] no prophet, neither [was] I a prophet's son; but I [was] a herdman, and a gatherer of sycamore fruit:
- Young's Literal Translation (YLT)
- And Amos answereth and saith unto Amaziah, 'I [am] no prophet, nor a prophet's son [am] I, but a herdsman I [am], and a cultivator of sycamores,
Read in context
- 12ಇನ್ನೂ ಅಮಚ್ಯನು ಆಮೋಸನಿಗೆ ಹೇಳಿದ್ದೇನಂದರೆ--ಓ ದರ್ಶಿಯೇ, ಯೆಹೂದ ದೇಶಕ್ಕೆ ಓಡಿಹೋಗು; ಅಲ್ಲಿ ರೊಟ್ಟಿ ತಿಂದು ಅಲ್ಲಿಯೇ ಪ್ರವಾದಿಸು.
- 13ಆದರೆ ಇನ್ನು ಮೇಲೆ ಬೇತೇಲಿನಲ್ಲಿ ಪ್ರವಾದಿಸಬೇಡ; ಅದು ಅರಸನ ಪರಿಶುದ್ಧ ಸ್ಥಾನವಾಗಿಯೂ ರಾಜನ ಅರಮನೆಯಾಗಿಯೂ ಇದೆ.
- 14ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.
- 15ನಾನು ಕುರಿಯ ಹಿಂಡನ್ನು ಹಿಂಬಾಲಿಸುವ ವೇಳೆ ಯಲ್ಲಿ ಕರ್ತನು ನನ್ನನ್ನು ಕರೆದು ಹೇಳಿದ್ದೇನಂದರೆ--ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದಿಸು.
- 16ಹೀಗಿರುವದರಿಂದ ನೀನು ಈಗ ಕರ್ತನ ವಾಕ್ಯವನ್ನು ಕೇಳು; ಇಸ್ರಾಯೇಲಿಗೆ ಪ್ರವಾದನೆ ಮಾಡಬೇಡವೆಂದೂ ಇಸಾಕನ ಮನೆತನಕ್ಕೆ ವಿರೋಧ ವಾಗಿ ಖಂಡನೆ ಮಾಡಬಾರದೆಂದೂ ನೀನು ಹೇಳುವಿ ಯಲ್ಲಾ.ಆದದರಿಂದ ಕರ್ತನು ಹೇಳುವದೇ ನಂದರೆ--ನಿನ್ನ ಹೆಂಡತಿ ಪಟ್ಟಣದಲ್ಲಿ ಸೂಳೆಯಾಗು ವಳು; ನಿನ್ನ ಕುಮಾರರೂ ಕುಮಾರ್ತೆಯರೂ ಕತ್ತಿ ಯಿಂದ ಬೀಳುವರು; ನಿನ್ನ ದೇಶವು ನೂಲಿನಿಂದ ವಿಭಾಗಿಸಲ್ಪಡುವದು; ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು.
Cross references
- Amos 1:1 ಆಮೋಸ 1:1ತೆಕೋವದ ಕುರುಬರಲಿದ್ದ ಆಮೋಸನು ಯೆಹೂದದ ಅರಸನಾದ ಉಜ್ಜೀಯನ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ದಿನಗಳ ಲ್ಲಿಯೂ ಭೂಕಂಪಕ್ಕೆ ಎರಡು ವರುಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ನೋಡಿದ ವಾಕ್ಯಗಳು.
- Zechariah 13:5 ಜೆಕರ್ಯ 13:5ಆದರೆ ಅವರು--ನಾನು ಪ್ರವಾದಿಯಲ್ಲ, ನಾನು ಭೂಮಿಯಲ್ಲಿ ವ್ಯವಸಾಯಮಾಡುವವನು; ಒಬ್ಬನು ನನ್ನನ್ನು ಚಿಕ್ಕತನದಿಂದ ದನಗಳನ್ನು ಕಾಯುವದಕ್ಕೆ ಕಲಿಸಿದನು ಅನ್ನುವನು.
- 1 Corinthians 1:27 1 ಕೊರಿಂಥದವರಿಗೆ 1:27ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;
- 2 Kings 4:38 2 ಅರಸುಗಳು 4:38ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.
- 2 Kings 2:5 2 ಅರಸುಗಳು 2:5ಆಗ ಯೆರಿಕೋವಿನಲ್ಲಿ ರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಕರ್ತನು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು. ಅದಕ್ಕವನು--ನಾನು ಕೂಡ ಬಲ್ಲೆ, ಸುಮ್ಮನೆ ಇರ್ರಿ ಅಂದನು.
- 2 Kings 2:3 2 ಅರಸುಗಳು 2:3ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು.
- 2 Chronicles 19:2 2 ಪೂರ್ವಕಾಲವೃತ್ತಾಂತ 19:2ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.
- 1 Kings 20:35 1 ಅರಸುಗಳು 20:35ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
- 2 Chronicles 16:7 2 ಪೂರ್ವಕಾಲವೃತ್ತಾಂತ 16:7ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.
- 2 Chronicles 20:34 2 ಪೂರ್ವಕಾಲವೃತ್ತಾಂತ 20:34ಯೆಹೋಷಾಫಾಟನ ಇತರ ಕ್ರಿಯೆಗಳು, ಮೊದಲನೆಯವುಗಳೂ ಕಡೆಯವುಗಳೂ ಇಗೋ, ಇಸ್ರಾಯೇಲಿನ ಅರಸುಗಳ ಪುಸ್ತಕದಲ್ಲಿ ಹೇಳಲ್ಪಟ್ಟ ಹನಾನೀಯ ಮಗನಾದ ಯೇಹೂವಿನ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 2 Kings 6:1 2 ಅರಸುಗಳು 6:1ಪ್ರವಾದಿಗಳ ಮಕ್ಕಳು ಎಲೀಷನಿಗೆ-- ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ.
- 2 Kings 2:7 2 ಅರಸುಗಳು 2:7ಪ್ರವಾದಿಗಳ ಮಕ್ಕಳಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನಿನ ಬಳಿಯಲ್ಲಿ ನಿಂತರು.