1 Kings · chapter 20 · verse 35
1 Kings 20:35 in Kannada
ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
Aadare pravaadigala makkalalli obbanu kartana maatininda tanna jotegaaranige--neenu daya maadi nannannu hode andanu.
1 Kings 20:35 in English
- King James Version (KJV)
- And a certain man of the sons of the prophets said unto his neighbour in the word of the LORD, Smite me, I pray thee. And the man refused to smite him.
- World English Bible (WEB)
- A certain man of the sons of the prophets said to his fellow by the LORD’s word, “Please strike me!” The man refused to strike him.
- American Standard Version (ASV)
- And a certain man of the sons of the prophets said unto his fellow by the word of Jehovah, Smite me, I pray thee. And the man refused to smite him.
- Bible in Basic English (BBE)
- And a certain man of the sons of the prophets said to his neighbour by the word of the Lord, Give me a wound. But the man would not.
- Darby Translation (DBY)
- And a certain man of the sons of the prophets said to another by the word of Jehovah, Smite me, I pray thee. But the man refused to smite him.
- Webster's Bible (WBS)
- And a certain man of the sons of the prophets said to his neighbor in the word of the LORD, Smite me, I pray thee. And the man refused to smite him.
- Young's Literal Translation (YLT)
- And a certain man of the sons of the prophets said unto his neighbour by the word of Jehovah, 'Smite me, I pray thee;' and the man refuseth to smite him,
Read in context
- 33ಈಗ ಆ ಮನುಷ್ಯರು ಅವನ ಮಾತಿನಲ್ಲಿ ಏನಾದರೂ ಬಂದೀತೆಂದು ಜಾಗ್ರೆತೆ ಯಿಂದ ನೋಡಿಕೊಂಡು ಅದನ್ನು ಅವಸರದಿಂದ ಹಿಡಿದರು. ಅವರು--ನಿನ್ನ ಸಹೋದರನಾದ ಬೆನ್ಹದ ದನು ಎಂದು ಹೇಳಿದರು. ಆಗ ಅವನು--ನೀವು ಹೋಗಿ ಅವನನ್ನು ಕರೆತನ್ನಿರಿ ಅಂದನು. ಬೆನ್ಹದದನು ಅವನ ಬಳಿಗೆ ಬಂದಾಗ ಅವನು ಇವನನ್ನು ರಥದ ಲ್ಲೇರ ಮಾಡಿದನು.
- 34ಬೆನ್ಹದದನು ಅವನಿಗೆ--ನನ್ನ ತಂದೆಯು ನಿನ್ನ ತಂದೆಯಿಂದ ತೆಗೆದುಕೊಂಡ ಪಟ್ಟಣ ಗಳನ್ನು ತಿರುಗಿ ಕೊಡುತ್ತೇನೆ; ನನ್ನ ತಂದೆ ಸಮಾರ್ಯ ದಲ್ಲಿ ಮಾಡಿದ ಹಾಗೆಯೇ ದಮಸ್ಕದಲ್ಲಿ ನೀನು ನಿನ ಗಾಗಿ ಬೀದಿಗಳನ್ನು ಮಾಡಿಸಬೇಕು ಅಂದನು. ಅದಕ್ಕ ವನು--ಈ ಒಡಂಬಡಿಕೆಯ ಪ್ರಕಾರವೇ ನಿನ್ನನ್ನು ಕಳು ಹಿಸಿ ಬಿಡುತ್ತೇನೆ ಅಂದನು. ಹೀಗೆಯೆ ಇವನು ಅವನ ಸಂಗಡ ಒಡಂಬಡಿಕೆಯನ್ನು ಮಾಡಿ ಅವನನ್ನು ಕಳುಹಿಸಿ ಬಿಟ್ಟನು.
- 35ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
- 36ಆದರೆ ಆ ಮನುಷ್ಯನು ಅವನನ್ನು ಹೊಡೆಯಲ್ಲೊಲ್ಲದೆ ಇದ್ದನು. ಆಗ ಅವನು ಇವನಿಗೆ--ನೀನು ಕರ್ತನ ಮಾತಿಗೆ ಅವಿಧೇಯನಾದದರಿಂದ ಇಗೋ, ನೀನು ನನ್ನನ್ನು ಬಿಟ್ಟು ಹೋಗುವಾಗ ಸಿಂಹವು ನಿನ್ನನ್ನು ಕೊಲ್ಲು ವದು ಅಂದನು. ಅವನು ಇವನನ್ನು ಬಿಟ್ಟು ಹೋದಾ ಗಲೆ ಸಿಂಹವು ಅವನನ್ನು ಕಂಡು ಕೊಂದುಹಾಕಿತು.
- 37ಅವನು ಮತ್ತೊಬ್ಬನನ್ನು ಕಂಡುಕೊಂಡು--ದಯ ಮಾಡಿ ನನ್ನನ್ನು ಹೊಡೆ ಅಂದನು. ಆ ಮನುಷ್ಯನು ಅವನನ್ನು ಗಾಯವಾಗುವ ಹಾಗೆ ಹೊಡೆದನು.
Cross references
- 1 Kings 13:17–18 1 ಅರಸುಗಳು 13:17–18ಕರ್ತನ ಮಾತು--ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ; ಬಂದ ಮಾರ್ಗ ದಿಂದ ತಿರುಗಿ ಹೋಗಬೇಡ ಎಂದು ನನಗೆ ಹೇಳ ಲ್ಪಟ್ಟಿತು ಅಂದನು. ಇವನು ಅವನಿಗೆ--ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ; ಮತ್ತು ಒಬ್ಬ ದೂತನು ಕರ್ತನ ಮಾತಿನಿಂದ ನನಗೆ--ಅವನು ರೊಟ್ಟಿ ತಿಂದು ನೀರು ಕುಡಿಯಲು ಅವನನ್ನು ಹಿಂದಕ್ಕೆ ನಿನ್ನ ಮನೆಗೆ ಕರಕೊಂಡು ಬಾ ಎಂದು ಹೇಳಿದನು ಅಂದನು. ಆದರೆ ಇವನು ಅವನಿಗೆ ಸುಳ್ಳು ಹೇಳಿದನು.
- 2 Kings 2:15 2 ಅರಸುಗಳು 2:15ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಮಕ್ಕಳು ಅವನನ್ನು ಕಂಡಾಗ--ಎಲೀಯನ ಆತ್ಮನು ಎಲೀಷನ ಮೇಲೆ ನಿಂತಿರುವನು ಎಂದು ಹೇಳಿ ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿದರು.
- 2 Kings 4:1 2 ಅರಸುಗಳು 4:1ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
- 1 Kings 13:1–2 1 ಅರಸುಗಳು 13:1–2ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ ಇಗೋ, ಕರ್ತನ ಮಾತಿನಂತೆ ದೇವರ ಮನುಷ್ಯನು ಯೆಹೂದದಿಂದ ಬೇತೇಲಿಗೆ ಬಂದನು. ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
- Matthew 16:24 ಮತ್ತಾಯನು 16:24ತರುವಾಯ ಯೇಸು ತನ್ನ ಶಿಷ್ಯರಿಗೆ--ಯಾವ ನಾದರೂ ನನ್ನ ಹಿಂದೆ ಬರುವದಕ್ಕೆ ಅಪೇಕ್ಷಿಸಿದರೆ ಅವನು ತನ್ನನ್ನು ತಾನೇ ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
- 2 Kings 4:38 2 ಅರಸುಗಳು 4:38ಎಲೀಷನು ತಿರುಗಿ ಗಿಲ್ಗಾಲಿಗೆ ಬಂದಾಗ ದೇಶ ದಲ್ಲಿ ಬರ ಉಂಟಾಗಿತ್ತು. ಪ್ರವಾದಿಗಳ ಮಕ್ಕಳು ಅವನ ಮುಂದೆ ಕುಳಿತಿರುವಾಗ ಅವನು ತನ್ನ ಸೇವಕನಿಗೆನೀನು ದೊಡ್ಡ ಗಡಿಗೆಯನ್ನು ಮೇಲಿಟ್ಟು ಪ್ರವಾದಿಗಳ ಮಕ್ಕಳಿಗೋಸ್ಕರ ಆಹಾರವನ್ನು ಬೇಯಿಸು ಅಂದನು.
- Jeremiah 27:2–3 ಯೆರೆಮೀಯ 27:2–3ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು. ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು.
- 2 Kings 2:3–7 2 ಅರಸುಗಳು 2:3–7ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು. ಅದಕ್ಕ ವನು--ಹೌದು, ನಾನು ಕೂಡ ಬಲ್ಲೆ; ಸುಮ್ಮನೆ ಇರ್ರಿ ಅಂದನು. ಎಲೀಯನು ಅವನಿಗೆ--ಎಲೀಷನೇ, ನೀನು ದಯಮಾಡಿ ಇಲ್ಲೇ ಇರು; ಕರ್ತನು ನನ್ನನ್ನು ಯೆರಿಕೋ ವಿಗೆ ಕಳುಹಿಸುತ್ತಾನೆ ಅಂದನು. ಅದಕ್ಕವನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು. ಆಗ ಯೆರಿಕೋವಿನಲ್ಲಿ ರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಕರ್ತನು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು. ಅದಕ್ಕವನು--ನಾನು ಕೂಡ ಬಲ್ಲೆ, ಸುಮ್ಮನೆ ಇರ್ರಿ ಅಂದನು. ಎಲೀಯನು ಅವನಿಗೆ--ನೀನು ದಯಮಾಡಿ ಇಲ್ಲೇ ಇರು; ಕರ್ತನು ನನ್ನನ್ನು ಯೊರ್ದ ನಿಗೆ ಕಳುಹಿಸುತ್ತಾನೆ ಅಂದನು. ಅದಕ್ಕವನು--ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವದಿಲ್ಲ ಅಂದನು. ಹಾಗೆಯೇ ಅವರಿ ಬ್ಬರೂ ಮುಂದಕ್ಕೆ ನಡೆದರು. ಪ್ರವಾದಿಗಳ ಮಕ್ಕಳಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನಿನ ಬಳಿಯಲ್ಲಿ ನಿಂತರು.
- Amos 7:14 ಆಮೋಸ 7:14ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.
- Ezekiel 4:3 ಯೆಹೆಜ್ಕೇಲನು 4:3ಇದಾದ ಮೇಲೆ ನೀನು ಒಂದು ಕಬ್ಬಿಣದ ತಟ್ಟೆಯನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ಗೋಡೆಯೆಂದು ತಿಳಿದು ನಿನಗೂ ನಗರಕ್ಕೂ ಮಧ್ಯದಲ್ಲಿ ಇರಿಸು. ಆಮೇಲೆ ಅದಕ್ಕೆ ಎದುರಾಗಿ ನಿನ್ನ ಮುಖವನ್ನು ಇಡು. ಆಗ ಅದು ಮುತ್ತಲ್ಪಡುವದು; ನೀನು ಅದಕ್ಕೆ ಎದುರಾಗಿ ಮುತ್ತಿ ದಂತಾಗುವದು. ಇದು ಇಸ್ರಾಯೇಲ್ ಮನೆತನದ ಗುರುತಾಗಿರುವದು.
- Isaiah 20:2–3 ಯೆಶಾಯ 20:2–3ಅದೇ ಸಮಯದಲ್ಲಿ ಕರ್ತನು ಆಮೋ ಚನ ಮಗನಾದ ಯೆಶಾಯನಿಗೆ ಹೋಗಿ ನಿನ್ನ ನಡುವಿನ ಮೇಲಿರುವ ಗೋಣಿತಟ್ಟನ್ನು ಬಿಚ್ಚು, ನಿನ್ನ ಪಾದಗಳ ಲ್ಲಿರುವ ಕೆರಗಳನ್ನು ತೆಗೆದಿಡು ಎಂದು ಹೇಳಿದನು. ಅವನು ಹಾಗೆ ಮಾಡಿ ಬೆತ್ತಲೆಯಾಗಿ ಕೆರವಿಲ್ಲದೆ ತಿರು ಗುತ್ತಿದ್ದನು. ಕರ್ತನು ಹೇಳಿದ್ದೇನಂದರೆ, ನನ್ನ ಸೇವಕ ನಾದ ಯೆಶಾಯನು ಐಗುಪ್ತಕ್ಕೂ ಐಥಿಯೋಪಿ ಯಕ್ಕೂ ಗುರುತಾಗಿಯೂ ಆಶ್ಚರ್ಯವಾಗಿಯೂ ಹೀಗೆ ಮೂರು ವರ್ಷ ಬೆತ್ತಲೆಯಾಗಿ ಕೆರವಿಲ್ಲದೆ ನಡೆದನು.
- 1 Samuel 10:12 1 ಸಮುವೇಲನು 10:12ಅದಕ್ಕೆ ಅಲ್ಲಿಯವನೊಬ್ಬನು ಪ್ರತ್ಯುತ್ತರವಾಗಿ--ಇವರ ತಂದೆ ಯಾರು ಅಂದನು. ಆದದರಿಂದ ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ ಎಂಬ ಸಾಮತಿ ಉಂಟಾ ಯಿತು.