Daniel · chapter 5 · verse 2
Daniel 5:2 in Kannada
ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.
Aa draakshaarasavannu ruchisuttiruvaaga belyachcharanu tanna tandeyaada nebookadnechcharanu yeroosalemina devaalaya dolaginda tanda bellibangaaragala paatregalalli arasanoo avana prabhugaloo avana patni mattu upapatniyaru avugalalli kudiyuva haage taralu aajnyaapisidanu.
Daniel 5:2 in English
- King James Version (KJV)
- Belshazzar, whiles he tasted the wine, commanded to bring the golden and silver vessels which his father Nebuchadnezzar had taken out of the temple which [was] in Jerusalem; that the king, and his princes, his wives, and his concubines, might drink therein.
- World English Bible (WEB)
- Belshazzar, while he tasted the wine, commanded that the golden and silver vessels which Nebuchadnezzar his father had taken out of the temple which was in Jerusalem be brought to him, that the king and his lords, his wives and his concubines, might drink from them.
- American Standard Version (ASV)
- Belshazzar, while he tasted the wine, commanded to bring the golden and silver vessels which Nebuchadnezzar his father had taken out of the temple which was in Jerusalem; that the king and his lords, his wives and his concubines, might drink therefrom.
- Bible in Basic English (BBE)
- Belshazzar, while he was overcome with wine, gave orders for them to put before him the gold and silver vessels which Nebuchadnezzar, his father, had taken from the Temple in Jerusalem; so that the king and his lords, his wives and his other women, might take their drink from them.
- Darby Translation (DBY)
- Belshazzar, while he tasted the wine, commanded to bring the golden and silver vessels that Nebuchadnezzar his father had taken out of the temple which was in Jerusalem; that the king and his nobles, his wives and his concubines, might drink in them.
- Webster's Bible (WBS)
- Belshazzar, while he tasted the wine, commanded to bring the golden and silver vessels which his father Nebuchadnezzar had taken out of the temple which [was] in Jerusalem; that the king, and his princes, his wives, and his concubines, might drink in them.
- Young's Literal Translation (YLT)
- Belshazzar hath said — while tasting the wine — to bring in the vessels of gold and of silver that Nebuchadnezzar his father had taken from the temple that [is] in Jerusalem, that drink with them may the king, and his great men, his wives, and his concubines.
Read in context
- 1ಅರಸನಾದ ಬೆಲ್ಯಚ್ಚರನು ತನ್ನ ಪ್ರಭುಗಳಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಆ ಸಾವಿರ ಮಂದಿಯ ಮುಂದೆ ಅವನು ದ್ರಾಕ್ಷಾರಸವನ್ನು ಕುಡಿದನು.
- 2ಆ ದ್ರಾಕ್ಷಾರಸವನ್ನು ರುಚಿಸುತ್ತಿರುವಾಗ ಬೆಲ್ಯಚ್ಚರನು ತನ್ನ ತಂದೆಯಾದ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯ ದೊಳಗಿಂದ ತಂದ ಬೆಳ್ಳಿಬಂಗಾರಗಳ ಪಾತ್ರೆಗಳಲ್ಲಿ ಅರಸನೂ ಅವನ ಪ್ರಭುಗಳೂ ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವ ಹಾಗೆ ತರಲು ಆಜ್ಞಾಪಿಸಿದನು.
- 3ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
- 4ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು.
Cross references
- Daniel 1:2 ದಾನಿಯೇಲನು 1:2ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
- 2 Kings 24:13 2 ಅರಸುಗಳು 24:13ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.
- 2 Kings 25:15 2 ಅರಸುಗಳು 25:15ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು.
- Daniel 5:23 ದಾನಿಯೇಲನು 5:23ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- Jeremiah 27:16–22 ಯೆರೆಮೀಯ 27:16–22ನಾನು ಯಾಜಕರ ಸಂಗಡಲೂ ಈ ಜನರೆಲ್ಲರ ಸಂಗಡಲೂ ಮಾತನಾಡಿದೆನು; ಏನಂದರೆ, ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕರ್ತನ ಆಲಯದ ಪಾತ್ರೆಗಳು ಬೇಗ ಬಾಬೆಲಿನಿಂದ ತಿರುಗಿ ತರಲ್ಪಡು ವದೆಂದು ನಿಮಗೆ ಪ್ರವಾದಿಸುವ ನಿಮ್ಮ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. ಅವರಿಗೆ ಕಿವಿಗೊಡ ಬೇಡಿರಿ; ಬಾಬೆಲಿನ ಅರಸನಿಗೆ ಸೇವೆಮಾಡಿ ಬದುಕಿರಿ; ಈ ಪಟ್ಟಣವು ಯಾಕೆ ಹಾಳಾಗಬೇಕು? ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯಯನನ್ನೂ ಯೆಹೂದದ ಮತ್ತು ಯೆರೂಸ ಲೇಮಿನ ಶ್ರೇಷ್ಠರೆಲ್ಲರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ-- ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ. ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
- Ezra 1:7–11 ಎಜ್ರನು 1:7–11ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ತಂದು ತನ್ನ ದೇವರುಗಳ ಮನೆಯಲ್ಲಿ ಇರಿಸಿದ್ದ ಕರ್ತನ ಆಲಯದ ಸಾಮಾನು ಗಳನ್ನು ಅರಸನಾದ ಕೋರೆಷನು ತರಿಸಿದನು. ಅವು ಗಳನ್ನು ಪಾರಸಿಯ ಅರಸನಾದ ಕೋರೆಷನು ಬೊಕ್ಕಸ ದವನಾದ ಮಿತ್ರದಾತನ ಕೈಯಿಂದ ತರಿಸಿ ಯೆಹೂದದ ಪ್ರಭುವಾದ ಶೆಷ್ಬಚ್ಚರನಿಗೆ ಎಣಿಸಿ ಕೊಟ್ಟನು. ಅವುಗಳ ಲೆಕ್ಕವೇನಂದರೆ--ಮೂವತ್ತು ಬಂಗಾರದ ತಟ್ಟೆಗಳು, ಸಾವಿರ ಬೆಳ್ಳಿಯ ತಟ್ಟೆಗಳು, ಇಪ್ಪತ್ತೊಂಭತ್ತು ಕತ್ತಿಗಳು, ಮೂವತ್ತು ಬಂಗಾರದ ದೊಡ್ಡ ಬಟ್ಟಲುಗಳು, ನಾನೂರ ಹತ್ತು ಬೆಳ್ಳಿಯ ಬಟ್ಟಲುಗಳು, ಸಾವಿರ ಬೇರೆ ಸಾಮಾನುಗಳು. ಬಂಗಾರ ಬೆಳ್ಳಿಯ ಸಾಮಾನುಗಳೆಲ್ಲಾ ಐದು ಸಾವಿರದ ನಾನೂರು ಇದ್ದವು.ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು. ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.
- 2 Chronicles 15:16 2 ಪೂರ್ವಕಾಲವೃತ್ತಾಂತ 15:16ಇದಲ್ಲದೆ ಅರಸನಾಗಿರುವ ಆಸನ ತಾಯಿಯಾದ ಮಾಕಳನ್ನು ಕುರಿತು ಏನಂದರೆ, ಅವಳು ಒಂದು ವಿಗ್ರಹವನ್ನು ಮಾಡಿಸಿ ತೋಪಿನಲ್ಲಿ ಇರಿಸಿದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿದನು. ಇದಲ್ಲದೆ ಆಸನು ಅವಳ ವಿಗ್ರಹವನ್ನು ಕಡಿದುಹಾಕಿ ಅದನ್ನು ತುಳಿದು ಕಿದ್ರೋನ್ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.
- Daniel 5:11 ದಾನಿಯೇಲನು 5:11ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
- Daniel 5:18 ದಾನಿಯೇಲನು 5:18ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು.
- 2 Chronicles 36:18 2 ಪೂರ್ವಕಾಲವೃತ್ತಾಂತ 36:18ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
- 2 Samuel 9:7 2 ಸಮುವೇಲನು 9:7ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು.
- 2 Kings 8:25–27 2 ಅರಸುಗಳು 8:25–27ಇಸ್ರಾಯೇಲಿನ ಅರಸನಾಗಿರುವ ಅಹಾಬನ ಮಗನಾದ ಯೋರಾಮನ ಹನ್ನೆರಡನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೆಹೋರಾಮನ ಮಗನಾದ ಅಹಜ್ಯನು ಆಳಲಾರಂಭಿಸಿದನು. ಅಹ ಜ್ಯನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಒಂದು ವರುಷ ಆಳಿದನು. ಅವನ ತಾಯಿ ಅತಲ್ಯಳು; ಅವಳು ಇಸ್ರಾ ಯೇಲಿನ ಅರಸನಾದ ಒಮ್ರಿಯ ಮಗಳು. ಅವನು ಅಹಾಬನ ಮನೆಯ ಮಾರ್ಗದಲ್ಲಿ ನಡೆದು ಅಹಾಬನ ಮನೆಯವರ ಹಾಗೆ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಯಾಕಂದರೆ ಅವನು ಅಹಾಬನ ಅಳಿಯನಾಗಿದ್ದನು.
Original words (Hebrew)
- Belshazzar · H1113בֵּלְשַׁאצַּר Bêlshaʼtstsar
- tasted · H2942טְעֵם ṭᵉʻêm
- wine · H2562חֲמַר chămar
- commanded · H560אֲמַר ʼămar
- bring · H858אָתָה ʼâthâh
- golden · H1722דְּהַב dᵉhab
- silver · H3702כְּסַף kᵉçaph
- vessels · H3984מָאן mâʼn
- father · H2אַב ʼab
- Nebuchadnezzar · H5020נְבוּכַדְנֶצַּר Nᵉbûwkadnetstsar
- taken · H5312נְפַק nᵉphaq
- of · H4481מִן min
- temple · H1965הֵיכַל hêykal
- Jerusalem · H3390יְרוּשָׁלֵם Yᵉrûwshâlêm
- king · H4430מֶלֶךְ melek
- princes · H7261רַבְרְבָן rabrᵉbân
- wives · H7695שֵׁגָל shêgâl
- concubines · H3904לְחֵנָה lᵉchênâh
- drink · H8355שְׁתָה shᵉthâh