Deuteronomy · chapter 1 · verse 31
Deuteronomy 1:31 in Kannada
ಈ ಅರಣ್ಯದಲ್ಲಿ ನಿಮ್ಮ ದೇವ ರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ ಅಂದೆನು.
Ee aranyadalli nimma deva raada kartanu, nimmannu tande maganannu hottu kolluva prakaara neevu hoda maargadallellaa ee sthalakke baruva paryantara hottukondanendu nodiddeerallaa andenu.
Deuteronomy 1:31 in English
- King James Version (KJV)
- And in the wilderness, where thou hast seen how that the LORD thy God bare thee, as a man doth bear his son, in all the way that ye went, until ye came into this place.
- World English Bible (WEB)
- and in the wilderness where you have seen how that the LORD your God carried you, as a man carries his son, in all the way that you went, until you came to this place.”
- American Standard Version (ASV)
- and in the wilderness, where thou hast seen how that Jehovah thy God bare thee, as a man doth bear his son, in all the way that ye went, until ye came unto this place.
- Bible in Basic English (BBE)
- And in the waste land, where you have seen how the Lord was supporting you, as a man does his son, in all your journeying till you came to this place.
- Darby Translation (DBY)
- and in the wilderness where thou hast seen that Jehovah thy God bore thee, as a man doth bear his son, in all the way that ye went, until ye came to this place.
- Webster's Bible (WBS)
- And in the wilderness, where thou hast seen how the LORD thy God bore thee, as a man doth bear his son, in all the way that ye went, until ye came into this place.
- Young's Literal Translation (YLT)
- and in the wilderness, where thou hast seen that Jehovah thy God hath borne thee as a man beareth his son, in all the way which ye have gone, till your coming in unto this place.
Read in context
- 29ಆಗ ನಾನು ನಿಮಗೆ--ಅಂಜಬೇಡಿರಿ; ಅವರಿಗೆ ಭಯಪಡಬೇಡಿರಿ.
- 30ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು.
- 31ಈ ಅರಣ್ಯದಲ್ಲಿ ನಿಮ್ಮ ದೇವ ರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ ಅಂದೆನು.
- 32ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಕರ್ತನನ್ನು ನಂಬಲಿಲ್ಲ.
- 33ಇಳುಕೊಳ್ಳುವದಕ್ಕೆ ನಿಮಗೆ ಸ್ಥಳವನ್ನು ವಿಚಾರಿಸಲೂ ನೀವು ಹೋಗತಕ್ಕ ಮಾರ್ಗ ವನ್ನು ನಿಮಗೆ ತೋರಿಸಲೂ ರಾತ್ರಿಹೊತ್ತು ಬೆಂಕಿ ಯಲ್ಲಿಯೂ ಹಗಲುಹೊತ್ತು ಮೇಘದಲ್ಲಿಯೂ ಮಾರ್ಗದಲ್ಲಿ ಆತನೇ ನಿಮ್ಮ ಮುಂದೆ ಹೋದನು.
Cross references
- Isaiah 46:3–4 ಯೆಶಾಯ 46:3–4ಓ ಯಾಕೋಬನ ಮನೆತನದವರೇ, ಇಸ್ರಾ ಯೇಲ್ ಮನೆತನದಲ್ಲಿ ಉಳಿದಿರುವವರೆಲ್ಲರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ವಹಿಸುತ್ತಿದ್ದಾತನ ಮಾತನ್ನು ಕೇಳಿರಿ-- ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
- Acts 13:18 ಅಪೊಸ್ತಲರ ಕೃತ್ಯಗಳು 13:18ಆತನು ಸುಮಾರು ನಾಲ್ವತ್ತು ವರುಷಗಳ ವರೆಗೂ ಅಡವಿಯಲ್ಲಿ ಅವರ ನಡಾವಳಿಯನ್ನು ಸಹಿಸಿ ಕೊಂಡು
- Deuteronomy 32:10–12 ಧರ್ಮೋಪದೇಶಕಾಂಡ 32:10–12ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು. ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ ಅವುಗಳ ಮೇಲೆ ರೆಕ್ಕೆಯನ್ನಾಡಿಸಿ ತನ್ನ ರೆಕ್ಕೆಗಳನ್ನು ಚಾಚಿ, ತಕ್ಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ.
- Hosea 11:3–4 ಹೋಶೇಯ 11:3–4ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವ ರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ. ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
- Isaiah 63:9 ಯೆಶಾಯ 63:9ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
- Exodus 19:4 ವಿಮೋಚನಕಾಂಡ 19:4ನಾನು ಐಗುಪ್ತ್ಯರಿಗೆ ಮಾಡಿದ್ದನ್ನು ನೀವು ನೋಡಿದ್ದೀರಿ; ನಿಮ್ಮನ್ನು ಹದ್ದುಗಳ ರೆಕ್ಕೆಗಳ ಮೇಲೆ ನಾನು ಹೇಗೆ ಹೊತ್ತುಕೊಂಡು ನನ್ನ ಬಳಿಗೆ ಬರಮಾಡಿದೆನೆಂಬದನ್ನೂ ನೀವು ನೋಡಿದ್ದೀರಿ;
- Isaiah 40:11 ಯೆಶಾಯ 40:11ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
- Numbers 11:14 ಅರಣ್ಯಕಾಂಡ 11:14ಒಬ್ಬಂಟಿ ಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವದಕ್ಕೆ ನಾನು ಶಕ್ತನಲ್ಲ, ಅದು ನನಗೆ ಅತಿ ದೊಡ್ಡ ಭಾರ ವಾಗಿದೆ.
- Psalm 105:39–41 ಕೀರ್ತನೆಗಳು 105:39–41ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು. ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು. ಆತನು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಒಣಗಿದ ಸ್ಥಳಗಳಲ್ಲಿ ನದಿಯಾಗಿ ಹರಿಯಿತು.
- Exodus 16:1–17 ವಿಮೋಚನಕಾಂಡ 16:1–17ತರುವಾಯ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣ ಮಾಡಿ ಅವರು ಐಗುಪ್ತದೇಶದಿಂದ ಹೊರಟ ಎರಡ ನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ ಸೀನಾಯಿಗೂ ಮಧ್ಯೆ ಇರುವ ಸೀನ್ ಅರಣ್ಯಕ್ಕೆ ಬಂದರು. ಆಗ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು. ಇಸ್ರಾಯೇಲ್ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು. ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ. ಆರನೆಯ ದಿವಸದಲ್ಲಿ ಅವರು ತಂದದ್ದನ್ನು ಸಿದ್ಧಮಾಡುವಾಗ ಪ್ರತಿದಿನದಲ್ಲಿ ಕೂಡಿಸು ವದಕ್ಕಿಂತ ಎರಡರಷ್ಟಾಗಿರುವದು ಎಂದು ಹೇಳಿದನು. ಆಗ ಮೋಶೆ ಆರೋನರು ಇಸ್ರಾಯೇಲ್ ಮಕ್ಕಳಿ ಗೆಲ್ಲಾ--ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದಾತನು ಕರ್ತನೇ ಎಂದು ಸಾಯಂಕಾಲವಾ ದಾಗ ನಿಮಗೆ ತಿಳಿಯುವದು. ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು. ಆಗ ಮೋಶೆಯು--ಸಾಯಂಕಾಲದಲ್ಲಿ ಕರ್ತನು ನಿಮಗೆ ಮಾಂಸಾಹಾರವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ಕೊಡುವನು. ನೀವು ಗುಣುಗುಟ್ಟುವ ಮಾತುಗಳು ಕರ್ತನಿಗೆ ಕೇಳಿಸಿದವು. ಆ ಗುಣುಗುಟ್ಟುವಿಕೆಯು ಕರ್ತನಿಗೇ ಹೊರತು ನಮ ಗಲ್ಲ. ನಾವು ಎಷ್ಟು ಮಾತ್ರದವರು ಅಂದನು. ಮೋಶೆಯು ಆರೋನನಿಗೆ--ನೀನು ಇಸ್ರಾ ಯೇಲ್ ಮಕ್ಕಳ ಸಭೆಗೆಲ್ಲಾ--ನಿಮ್ಮ ಗುಣುಗುಟ್ಟುವಿಕೆ ಯನ್ನು ಕರ್ತನು ಕೇಳಿದ್ದರಿಂದ ನೀವು ಆತನ ಸವಿಾಪಕ್ಕೆ ಆತನ ಮುಂದೆ ಬನ್ನಿರಿ ಎಂದು ಹೇಳು ಅಂದನು. ಆರೋನನು ಇಸ್ರಾಯೇಲ್ ಮಕ್ಕಳ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಅರಣ್ಯದ ಕಡೆಗೆ ನೋಡಿ ದರು. ಆಗ ಇಗೋ, ಕರ್ತನ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು. ಆಗ ಕರ್ತನು ಮೋಶೆಯ ಸಂಗಡ ಮಾತ ನಾಡಿ-- ಇಸ್ರಾಯೇಲ್ ಮಕ್ಕಳ ಗುಣುಗುಟ್ಟು ವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತ ನಾಡಿ--ನೀವು ಸಾಯಂಕಾಲದಲ್ಲಿ ಮಾಂಸವನ್ನು ಉಣ್ಣು ವಿರಿ, ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ಅವರಿಗೆ ಹೇಳು ಅಂದನು. ಸಾಯಂಕಾಲದಲ್ಲಿ ಆದದ್ದೇನಂದರೆ--ಲಾವಕ್ಕಿ ಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು; ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು. ಬಿದ್ದಿದ್ದ ಮಂಜು ಹೋದ ಮೇಲೆ ಇಗೋ, ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು. ಇಸ್ರಾಯೇಲ್ ಮಕ್ಕಳು ಅದನ್ನು ನೋಡಿದಾಗ ಅವರು ಒಬ್ಬರಿಗೊಬ್ಬರು--ಇದು ಮನ್ನಾ ಅಂದರು. ಯಾಕಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ--ಕರ್ತನು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ ಎಂದು ಹೇಳಿದನು. ಕರ್ತನು ಆಜ್ಞಾಪಿಸಿದ್ದೇನಂದರೆ--ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ, ಪ್ರತಿಯೊಬ್ಬನಿಗೆ ಒಂದು ಓಮೆರದಂತೆ ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತಕ್ಕೊಳ್ಳಿರಿ ಎಂದು ಹೇಳಿದನು. ಇಸ್ರಾಯೇಲ್ ಮಕ್ಕಳು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.
- Psalm 78:14–28 ಕೀರ್ತನೆಗಳು 78:14–28ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು. ಅರಣ್ಯ ದಲ್ಲಿ ಆತನು ಬಂಡೆಗಳನ್ನು ಸೀಳಿ ಅವರಿಗೆ ಮಹಾ ಜಲಾಗಾಧಗಳ ಹಾಗೆ ನೀರು ಕುಡಿಯಲು ಕೊಟ್ಟನು. ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು ನದಿಗಳಂತೆ ನೀರನ್ನು ಹರಿಯಮಾಡಿದನು. ಆದರೆ ಅವರು ಇನ್ನೂ ಆತನಿಗೆ ವಿರೋಧವಾಗಿ ಪಾಪಮಾಡಿ ಅರಣ್ಯದಲ್ಲಿ ಮಹೋನ್ನತನಿಗೆ ಕೋಪ ವನ್ನೆಬ್ಬಿಸಿ ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು. ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು. ಇಗೋ, ಆತನು ಬಂಡೆಯನ್ನು ಹೊಡೆಯಲಾಗಿ ನೀರು ಹೊರಟಿತು; ಹಳ್ಳಗಳು ಹರಿದವು; ರೊಟ್ಟಿಯನ್ನೂ ಕೊಡಬಲ್ಲನೋ? ತನ್ನ ಜನರಿಗೆ ಮಾಂಸವನ್ನು ಸಿದ್ಧ ಮಾಡುವನೋ ಅಂದರು. ಆದದರಿಂದ ಕರ್ತನು ಇದನ್ನು ಕೇಳಿದಾಗ ಉಗ್ರನಾದನು; ಯಾಕೋಬನಲ್ಲಿ ಬೆಂಕಿ ಹೊತ್ತಿತ್ತು; ಇಸ್ರಾಯೇಲಿನ ಮೇಲೆ ಕೋಪವು ಸಹ ಎದ್ದಿತು. ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ. ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು. ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು. ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು. ಧೂಳಿನಂತೆ ಮಾಂಸವನ್ನೂ ಸಮುದ್ರದ ಮರಳಿನಂತೆ ರೆಕ್ಕೆಯುಳ್ಳ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿ ಅವರ ಮಧ್ಯದಲ್ಲಿಯೂ ಅವರ ನಿವಾಸಗಳ ಸುತ್ತಲೂ ಬೀಳಮಾಡಿದನು.
- Nehemiah 9:12–23 ನೆಹೆಮೀಯ 9:12–23ಇದಲ್ಲದೆ ಹಗಲಿನಲ್ಲಿ ಮೇಘ ಸ್ತಂಭ ದಿಂದಲೂ ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭ ದಿಂದಲೂ ಅವರನ್ನು ನಡಿಸಿದಿ. ಸೀನಾಯ್ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ. ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ. ಆದರೆ ಅವರೂ ನಮ್ಮ ತಂದೆಗಳೂ ಗರ್ವಪಟ್ಟು ನಡೆದು ತಮ್ಮ ಕುತ್ತಿಗೆಯನ್ನು ಕಠಿಣಮಾಡಿ ನಿನ್ನ ಆಜ್ಞೆ ಗಳನ್ನು ಕೇಳದೆ ಹೋದರು. ಕೇಳದೆಯೂ ನೀನು ಅವರ ಮಧ್ಯದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕ ಮಾಡದೆಯೂ ತಮ್ಮ ಕುತ್ತಿಗೆಯನ್ನು ಕಠಿಣ ಮಾಡಿ ಎದುರುಬಿದ್ದು ತಮ್ಮ ದಾಸತ್ವಕ್ಕೆ ತಿರಿಗಿ ಹೋಗುವ ಹಾಗೆ ಅಧಿಪತಿಯನ್ನು ನೇಮಿಸಿದರು. ಆದರೆ ನೀನು ಮನ್ನಿಸುವ ದೇವರಾಗಿಯೂ ಕೃಪಾಪೂರ್ಣನೂ ಅಂತಃ ಕರಣವೂ ದೀರ್ಘಶಾಂತಿಯೂ ಮಹಾದಯೆಯೂ ಆಗಿರುವವನಾಗಿಯೂ ಇರುವದರಿಂದ ಅವರನ್ನು ಕೈ ಬಿಡಲಿಲ್ಲ. ಅವರು ತಮಗೆ ಎರಕಹೊಯಿದ ಒಂದು ಕರುವನ್ನು ಮಾಡಿಕೊಂಡು -- ಐಗುಪ್ತದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರು ಇದೇ ಎಂದು ಹೇಳಿ ನಿನ್ನನ್ನು ಬಹು ಉದ್ರೇಕಗೊಳಿಸಿದಾಗಲೂ ನೀನು ನಿನ್ನ ಹೇರಳವಾದ ಕರುಣೆಯಿಂದ ಅರಣ್ಯದಲ್ಲಿ ಅವರನ್ನು ಕೈಬಿಡದೆ ಇದ್ದಿ. ಹಗಲಿನಲ್ಲಿ ಅವರಿಗೆ ದಾರಿ ತೋರಿಸತಕ್ಕ ಮೇಘಸ್ತಂಭವಾದರೂ ರಾತ್ರಿಯಲ್ಲಿ ಅವರಿಗೆ ಬೆಳಕನ್ನು, ಅವರು ನಡೆಯತಕ್ಕ ಮಾರ್ಗವನ್ನು ತೋರಿಸುವ ಅಗ್ನಿಸ್ತಂಭವಾದರೂ ಅವರನ್ನು ಬಿಟ್ಟು ಹೋಗಲಿಲ್ಲ. ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ. ಹೀಗೆಯೇ ಅರಣ್ಯದಲ್ಲಿ ನಾಲ್ವತ್ತುವರುಷ ಅವರನ್ನು ಪೋಷಿಸುತ್ತಿದ್ದಿ; ಅವರು ಕೊರತೆಪಡಲಿಲ್ಲ; ಅವರ ವಸ್ತ್ರಗಳು ಹಳೇವಾಗಲಿಲ್ಲ; ಅವರ ಕಾಲುಗಳು ಬಾತು ಹೋಗಲಿಲ್ಲ. ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು. ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿ ಅವರು ಸ್ವಾಧೀನಮಾಡಿಕೊಳ್ಳಲು ಹೋಗುವರೆಂದು ನೀನು ಅವರ ಪಿತೃಗ ಳಿಗೆ ವಾಗ್ದಾನಮಾಡಿದ ದೇಶದಲ್ಲಿ ಅವರನ್ನು ಬರಮಾಡಿದಿ;