Deuteronomy · chapter 32 · verse 10
Deuteronomy 32:10 in Kannada
ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು.
Aatanu aranyada bhoomiyalliyoo kiruchuva adaviya kaadinalliyoo avanannu kandukondanu; aatanu avanannu nadisi, upadeshisidanu. Tanna kannuguddeyante kaapaadidanu.
Deuteronomy 32:10 in English
- King James Version (KJV)
- He found him in a desert land, and in the waste howling wilderness; he led him about, he instructed him, he kept him as the apple of his eye.
- World English Bible (WEB)
- He found him in a desert land, in the waste howling wilderness. He surrounded him. He cared for him. He kept him as the apple of his eye.
- American Standard Version (ASV)
- He found him in a desert land, And in the waste howling wilderness; He compassed him about, he cared for him, He kept him as the apple of his eye.
- Bible in Basic English (BBE)
- He came to him in the waste land, in the unpeopled waste of sand: putting his arms round him and caring for him, he kept him as the light of his eye.
- Darby Translation (DBY)
- He found him in a desert land, And in the waste, howling wilderness; He compassed him about, he watched over him, He preserved him as the apple of his eye.
- Webster's Bible (WBS)
- He found him in a desert land, and in the waste howling wilderness; he led him about, he instructed him, he kept him as the apple of his eye.
- Young's Literal Translation (YLT)
- He findeth him in a land — a desert, And in a void — a howling wilderness, He turneth him round — He causeth him to understand — He keepeth him as the apple of His eye.
Read in context
- 8ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.
- 9ಕರ್ತನ ಪಾಲು ಆತನ ಜನವೇ; ಯಾಕೋಬು ಆತನ ಸ್ವಾಸ್ತ್ಯದ ಪಾಲು.
- 10ಆತನು ಅರಣ್ಯದ ಭೂಮಿಯಲ್ಲಿಯೂ ಕಿರುಚುವ ಅಡವಿಯ ಕಾಡಿನಲ್ಲಿಯೂ ಅವನನ್ನು ಕಂಡುಕೊಂಡನು; ಆತನು ಅವನನ್ನು ನಡಿಸಿ, ಉಪದೇಶಿಸಿದನು. ತನ್ನ ಕಣ್ಣುಗುಡ್ಡೆಯಂತೆ ಕಾಪಾಡಿದನು.
- 11ಹದ್ದು ತನ್ನ ಗೂಡಿನಿಂದ ಮರಿಗಳನ್ನು ಹೊರಡಿಸಿ ಅವುಗಳ ಮೇಲೆ ರೆಕ್ಕೆಯನ್ನಾಡಿಸಿ ತನ್ನ ರೆಕ್ಕೆಗಳನ್ನು ಚಾಚಿ, ತಕ್ಕೊಂಡು ರೆಕ್ಕೆಯ ಮೇಲೆ ಎತ್ತಿಕೊಳ್ಳುವಂತೆ
- 12ಕರ್ತನು ಒಬ್ಬನೇ ಅವನನ್ನು ನಡಿಸಿದನು. ಅನ್ಯ ದೇವರು ಒಬ್ಬನೂ ಅವನ ಸಂಗಡ ಇದ್ದಿಲ್ಲ.
Cross references
- Zechariah 2:8 ಜೆಕರ್ಯ 2:8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- Psalm 17:8 ಕೀರ್ತನೆಗಳು 17:8ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.
- Deuteronomy 8:15–16 ಧರ್ಮೋಪದೇಶಕಾಂಡ 8:15–16ಅಗ್ನಿ ಸರ್ಪಗಳೂ ಚೇಳುಗಳೂ ಬರವೂ ಉಳ್ಳ ನೀರಿಲ್ಲದ ಆ ಮಹಾ ಭಯಂಕರವಾದ ಅರಣ್ಯದಲ್ಲಿ ನಿನ್ನನ್ನು ನಡಿಸಿದಂಥ, ಬಿಳೀಕಲ್ಲಿನ ಬಂಡೆಯೊಳಗಿಂದ ನಿನಗೆ ನೀರು ಬರ ಮಾಡಿದಂಥ, ನಿನ್ನನ್ನು ಕುಂದಿಸಿ ಶೋಧಿಸಿ ಕಡೆಯಲ್ಲಿ ನಿನಗೆ ಒಳ್ಳೇದನ್ನು ಮಾಡುವಂತೆ, ನಿನ್ನ ಪಿತೃಗಳು ಅರಿಯದ ಮನ್ನವನ್ನು ಅರಣ್ಯದಲ್ಲಿ ನಿನಗೆ ತಿನ್ನಿಸಿ ದಂಥ ನಿನ್ನ ದೇವರಾದ ಕರ್ತನನ್ನು ಮರೆತು--
- Hosea 13:5 ಹೋಶೇಯ 13:5ನಾನು ನಿನ್ನನ್ನು ಅರಣ್ಯದಲ್ಲಿಯೂ ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
- Jeremiah 2:6 ಯೆರೆಮೀಯ 2:6ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
- Song of Solomon 8:5 ಪರಮಗೀತೆ 8:5ತನ್ನ ಪ್ರಿಯನ ಮೇಲೆ ಆತುಕೊಂಡು ಅರಣ್ಯದಿಂದ ಬರುವ ಇವಳು ಯಾರು? ಸೇಬು ಗಿಡದ ಕೆಳಗೆ ನಿನ್ನನ್ನು ಎಚ್ಚರಿಸಿದೆನು; ಅಲ್ಲಿ ನಿನ್ನ ತಾಯಿ ನಿನ್ನನ್ನು ಪಡೆದಳು; ಅಲ್ಲಿ ನಿನ್ನನ್ನು ಹೆತ್ತವಳು ನಿನ್ನನ್ನು ಪಡೆದಳು.
- Nehemiah 9:19–21 ನೆಹೆಮೀಯ 9:19–21ನೀನು ನಿನ್ನ ಹೇರಳವಾದ ಕರುಣೆಯಿಂದ ಅರಣ್ಯದಲ್ಲಿ ಅವರನ್ನು ಕೈಬಿಡದೆ ಇದ್ದಿ. ಹಗಲಿನಲ್ಲಿ ಅವರಿಗೆ ದಾರಿ ತೋರಿಸತಕ್ಕ ಮೇಘಸ್ತಂಭವಾದರೂ ರಾತ್ರಿಯಲ್ಲಿ ಅವರಿಗೆ ಬೆಳಕನ್ನು, ಅವರು ನಡೆಯತಕ್ಕ ಮಾರ್ಗವನ್ನು ತೋರಿಸುವ ಅಗ್ನಿಸ್ತಂಭವಾದರೂ ಅವರನ್ನು ಬಿಟ್ಟು ಹೋಗಲಿಲ್ಲ. ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ. ಹೀಗೆಯೇ ಅರಣ್ಯದಲ್ಲಿ ನಾಲ್ವತ್ತುವರುಷ ಅವರನ್ನು ಪೋಷಿಸುತ್ತಿದ್ದಿ; ಅವರು ಕೊರತೆಪಡಲಿಲ್ಲ; ಅವರ ವಸ್ತ್ರಗಳು ಹಳೇವಾಗಲಿಲ್ಲ; ಅವರ ಕಾಲುಗಳು ಬಾತು ಹೋಗಲಿಲ್ಲ.
- Psalm 32:7–10 ಕೀರ್ತನೆಗಳು 32:7–10ನೀನು ನನ್ನ ಮರೆಯು; ಇಕ್ಕಟ್ಟಿನಿಂದ ನನ್ನನ್ನು ಕಾಯುತ್ತೀ; ಬಿಡುಗಡೆಯ ಹಾಡುಗಳಿಂದ ನನ್ನನ್ನು ಆವರಿಸಿ ಕೊಳ್ಳುತ್ತೀ ಸೆಲಾ. ನಾನು -- ನಿನಗೆ ಬುದ್ದಿ ಹೇಳುವೆನು; ನೀನು ಹೋಗತಕ್ಕ ಮಾರ್ಗವನ್ನು ನಿನಗೆ ಬೋಧಿಸುವೆನು; ನನ್ನ ಕಣ್ಣಿನಿಂದ ನಿನ್ನನ್ನು ನಡಿಸುವೆನು. ಆದದರಿಂದ ವಿವೇಕವಿಲ್ಲದ ಕುದುರೆಯ ಹಾಗೆಯೂ ಹೇಸರ ಕತ್ತೆಯ ಹಾಗೆಯೂ ಇರಬೇಡಿರಿ; ಅವು ನಿನ್ನ ಸವಿಾಪಕ್ಕೆ ಬಾರದಹಾಗೆ, ಅವುಗಳು ಬಾರಿನಿಂದಲೂ ಕಡಿವಾಣ ದಿಂದಲೂ ಬಿಗಿಸಲ್ಪಡತಕ್ಕದ್ದು. ದುಷ್ಟರಿಗೆ ವ್ಯಥೆಗಳು ಬಹಳ; ಆದರೆ ಕರ್ತನಲ್ಲಿ ಭರವಸವಿಡುವವನನ್ನು ಕರುಣೆಯು ಸುತ್ತಿಕೊಳ್ಳು ವದು.ನೀತಿವಂತರೇ, ಕರ್ತನಲ್ಲಿ ಸಂತೋಷಿಸಿರಿ, ಉಲ್ಲಾಸಪಡಿರಿ; ಯಥಾರ್ಥ ಹೃದಯಉಳ್ಳವರೇ, ಉತ್ಸಾಹ ಧ್ವನಿಮಾಡಿರಿ.
- Proverbs 7:2 ಜ್ಞಾನೋಕ್ತಿಗಳು 7:2ನನ್ನ ಅಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣು ಗುಡ್ಡೆಯಂತೆ ನನ್ನ ಕಟ್ಟಳೆಯನ್ನು ಕಾಪಾಡು.
- Romans 2:18 ರೋಮಾಪುರದವರಿಗೆ 2:18ಆತನ ಚಿತ್ತವನ್ನು ತಿಳಿದವನಾಗಿ ನ್ಯಾಯಪ್ರಮಾಣದಿಂದ ಶಿಕ್ಷಿತ ನಾಗಿದ್ದು ಅತ್ಯುತ್ತಮವಾದವುಗಳನ್ನು ಮೆಚ್ಚುವವನಾ ಗಿದ್ದೀ;
- Psalm 147:19–20 ಕೀರ್ತನೆಗಳು 147:19–20ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ. ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.
- Deuteronomy 4:36 ಧರ್ಮೋಪದೇಶಕಾಂಡ 4:36ಆತನು ನಿನ್ನ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತನ್ನ ಶಬ್ದವನ್ನು ನಿನಗೆ ಕೇಳ ಮಾಡಿದನು; ಭೂಮಿಯ ಮೇಲೆ ತನ್ನ ಮಹಾಅಗ್ನಿ ಯನ್ನು ನಿನಗೆ ತೋರಿಸಿದನು; ಬೆಂಕಿಯೊಳಗಿಂದ ಆತನ ಮಾತುಗಳನ್ನು ಕೇಳಿದಿ.