Deuteronomy · chapter 12 · verse 25
Deuteronomy 12:25 in Kannada
ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡುವದರಿಂದ ನಿನಗೂ ನಿನ್ನ ಮುಂದಿರುವ ಮಕ್ಕಳಿಗೂ ಒಳ್ಳೇದಾಗುವ ಹಾಗೆ ಅದನ್ನು ತಿನ್ನಬೇಡ.
Neenu kartana munde sariyaadaddannu maaduvadarinda ninagoo ninna mundiruva makkaligoo olledaaguva haage adannu tinnabeda.
Deuteronomy 12:25 in English
- King James Version (KJV)
- Thou shalt not eat it; that it may go well with thee, and with thy children after thee, when thou shalt do [that which is] right in the sight of the LORD.
- World English Bible (WEB)
- You shall not eat it, that it may go well with you and with your children after you, when you do that which is right in the LORD’s eyes.
- American Standard Version (ASV)
- Thou shalt not eat it; that it may go well with thee, and with thy children after thee, when thou shalt do that which is right in the eyes of Jehovah.
- Bible in Basic English (BBE)
- Do not take it for food; so that it may be well for you and for your children after you, while you do what is right in the eyes of the Lord.
- Darby Translation (DBY)
- thou shalt not eat it; that it may go well with thee, and with thy children after thee, when thou shalt do what is right in the eyes of Jehovah.
- Webster's Bible (WBS)
- Thou shalt not eat it; that it may be well with thee, and with thy children after thee, when thou shalt do [that which is] right in the sight of the LORD.
- Young's Literal Translation (YLT)
- thou dost not eat it, in order that it may be well with thee, and with thy sons after thee, when thou dost that which [is] right in the eyes of Jehovah.
Read in context
- 23ರಕ್ತವನ್ನು ಮಾತ್ರ ತಿನ್ನದ ಹಾಗೆ ಜಾಗ್ರತೆ ಯಾಗಿರು; ಯಾಕಂದರೆ ರಕ್ತವು ಪ್ರಾಣವೇ, ಮತ್ತು ಪ್ರಾಣವನ್ನು ಮಾಂಸದ ಸಂಗಡ ತಿನ್ನಬೇಡ.
- 24ಅದನ್ನು ತಿನ್ನದೆ ನೀರಿನಂತೆ ಭೂಮಿಯ ಮೇಲೆ ಹೊಯ್ಯಬೇಕು.
- 25ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡುವದರಿಂದ ನಿನಗೂ ನಿನ್ನ ಮುಂದಿರುವ ಮಕ್ಕಳಿಗೂ ಒಳ್ಳೇದಾಗುವ ಹಾಗೆ ಅದನ್ನು ತಿನ್ನಬೇಡ.
- 26ನಿನಗಿರುವ ಪರಿಶುದ್ಧವಾದವುಗಳನ್ನೂ ನಿನ್ನ ಪ್ರಮಾಣಗಳನ್ನೂ ಮಾತ್ರ ಕರ್ತನು ಆದುಕೊಳ್ಳುವ ಸ್ಥಳಕ್ಕೆ ತೆಗೆದುಕೊಂಡು ಬರಬೇಕು.
- 27ಆಗ ನಿನ್ನ ದಹನ ಬಲಿಗಳನ್ನೂ ಮಾಂಸವನ್ನೂ ರಕ್ತವನ್ನೂ ನಿನ್ನ ದೇವ ರಾದ ಕರ್ತನ ಬಲಿಪೀಠದ ಮೇಲೆ ಅರ್ಪಿಸಬೇಕು; ಆದರೆ ನಿನ್ನ ಬಲಿಗಳ ರಕ್ತವನ್ನು ನಿನ್ನ ದೇವರಾದ ಕರ್ತನ ಬಲಿಪೀಠದ ಮೇಲೆ ಹೊಯ್ಯಬೇಕು; ಅವುಗಳ ಮಾಂಸವನ್ನು ತಿನ್ನಬೇಕು.
Cross references
- Deuteronomy 4:40 ಧರ್ಮೋಪದೇಶಕಾಂಡ 4:40ನಿನಗೂ ನಿನ್ನ ತರುವಾಯ ನಿನ್ನ ಮಕ್ಕಳಿಗೂ ಒಳ್ಳೇದಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಸದಾಕಾಲಕ್ಕೆ ಕೊಡುವ ಭೂಮಿಯ ಮೇಲೆ ನೀನು ಬಹಳ ದಿವಸವಿರುವ ಹಾಗೆಯೂ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ನಿಯಮ ಗಳನ್ನೂ ಆಜ್ಞೆಗಳನ್ನೂ ಕಾಪಾಡು ಎಂದು ಹೇಳಿದನು.
- 1 Kings 11:38 1 ಅರಸುಗಳು 11:38ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು.
- Exodus 15:26 ವಿಮೋಚನಕಾಂಡ 15:26ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
- Isaiah 3:10 ಯೆಶಾಯ 3:10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.
- Deuteronomy 13:18 ಧರ್ಮೋಪದೇಶಕಾಂಡ 13:18ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು.
- Deuteronomy 6:18 ಧರ್ಮೋಪದೇಶಕಾಂಡ 6:18ನಿನಗೆ ಒಳ್ಳೇದಾಗುವ ಹಾಗೆಯೂ ಕರ್ತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ಆ ಒಳ್ಳೇ ದೇಶವನ್ನು ನೀನು ಪ್ರವೇಶಿಸಿ ಸ್ವತಂತ್ರಿಸಿಕೊಂಡು
- Deuteronomy 5:16 ಧರ್ಮೋಪದೇಶಕಾಂಡ 5:16ನಿನ್ನ ದಿವಸಗಳು ಹೆಚ್ಚಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ಭೂಮಿಯಲ್ಲಿ ನಿನಗೆ ಒಳ್ಳೇದಾಗುವ ಹಾಗೆಯೂ ನಿನ್ನ ದೇವರಾದ ಕರ್ತನು ಆಜ್ಞಾಪಿಸಿದಂತೆ ನಿನ್ನ ತಂದೆಯನ್ನೂ ನಿನ್ನ ತಾಯಿಯನ್ನೂ ಸನ್ಮಾನಿಸು.
- Psalm 112:2 ಕೀರ್ತನೆಗಳು 112:2ಅವನ ಸಂತತಿಯು ಭೂಮಿಯಲ್ಲಿ ಪರಾಕ್ರಮಶಾಲಿ ಯಾಗಿರುವದು. ಯಥಾರ್ಥರ ಸಂತತಿಯು ಆಶೀ ರ್ವಾದ ಹೊಂದುವದು.
- Isaiah 48:18–19 ಯೆಶಾಯ 48:18–19ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು; ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು.
- Deuteronomy 12:28 ಧರ್ಮೋಪದೇಶಕಾಂಡ 12:28ನೀನು ನಿನ್ನ ದೇವರಾದ ಕರ್ತನ ಮುಂದೆ ಒಳ್ಳೇದನ್ನೂ ಸರಿಯಾದದ್ದನ್ನೂ ಮಾಡುವದರಿಂದ ನಿನಗೂ ನಿನ್ನ ಮುಂದೆ ಇರುವ ನಿನ್ನ ಮಕ್ಕಳಿಗೂ ಎಂದೆಂದಿಗೂ ಒಳ್ಳೇದಾಗುವ ಹಾಗೆ ನಾನು ನಿನಗೆ ಆಜ್ಞಾಪಿಸುವ ಈ ಮಾತುಗಳನ್ನೆಲ್ಲಾ ಕೇಳಿ ಕಾಪಾಡು.
- Ecclesiastes 2:26 ಪ್ರಸಂಗಿ 2:26ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
- Ezekiel 33:25 ಯೆಹೆಜ್ಕೇಲನು 33:25ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುವರ ಲ್ಲವೇ? ನಿಮ್ಮ ಕಣ್ಣುಗಳು ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವ ನೀವು ದೇಶವನ್ನು ಸ್ವಾಧೀನಪಡಿಸಿ ಕೊಳ್ಳುವಿರೋ?