Deuteronomy · chapter 20 · verse 14
Deuteronomy 20:14 in Kannada
ಆದರೆ ಹೆಂಗಸರನ್ನೂ ಚಿಕ್ಕವ ರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ನಿನಗಾಗಿ ಸುಲುಕೊಳ್ಳ ಬೇಕು; ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ನಿನ್ನ ಶತ್ರುಗಳ ಕೊಳ್ಳೆಯನ್ನು ತಿಂದುಬಿಡಬೇಕು.
Aadare hengasarannoo chikkava rannoo pashugalannoo pattanadalliruva ellavannoo adara ellaa kolleyannoo ninagaagi sulukolla beku; ninna devaraada kartanu ninage koduvantha ninna shatrugala kolleyannu tindubidabeku.
Deuteronomy 20:14 in English
- King James Version (KJV)
- But the women, and the little ones, and the cattle, and all that is in the city, [even] all the spoil thereof, shalt thou take unto thyself; and thou shalt eat the spoil of thine enemies, which the LORD thy God hath given thee.
- World English Bible (WEB)
- but the women, the little ones, the livestock, and all that is in the city, even all its plunder, you shall take for plunder for yourself. You may use the plunder of your enemies, which the LORD your God has given you.
- American Standard Version (ASV)
- but the women, and the little ones, and the cattle, and all that is in the city, even all the spoil thereof, shalt thou take for a prey unto thyself; and thou shalt eat the spoil of thine enemies, which Jehovah thy God hath given thee.
- Bible in Basic English (BBE)
- But the women and the children and the cattle and everything in the town and all its wealth, you may take for yourselves: the wealth of your haters, which the Lord your God has given you, will be your food.
- Darby Translation (DBY)
- only the women, and the little ones, and the cattle, and all that shall be in the city, all the spoil thereof, shalt thou take as booty for thyself; and thou shalt eat the spoil of thine enemies, which Jehovah thy God giveth thee
- Webster's Bible (WBS)
- But the women, and the little ones, and the cattle, and all that is in the city, [even] all the spoil of it, shalt thou take to thyself: and thou shalt eat the spoil of thy enemies, which the LORD thy God hath given thee.
- Young's Literal Translation (YLT)
- Only, the women, and the infants, and the cattle, and all that is in the city, all its spoil, thou dost seize for thyself, and thou hast eaten the spoil of thine enemies which Jehovah thy God hath given to thee.
Read in context
- 12ಅದು ನಿನ್ನ ಸಂಗಡ ಸಮಾಧಾನವಾಗಲೊಲ್ಲದೆ ನಿನ್ನ ಸಂಗಡ ಯುದ್ಧಮಾಡಿದರೆ ಅದಕ್ಕೆ ಮುತ್ತಿಗೆ ಹಾಕಬೇಕು.
- 13ನಿನ್ನ ದೇವರಾದ ಕರ್ತನು ಅದನ್ನು ನಿನ್ನ ಕೈಗೆ ಕೊಟ್ಟರೆ ಅದರ ಗಂಡಸರೆಲ್ಲರನ್ನು ಕತ್ತಿಯಿಂದ ಹೊಡೆಯಬೇಕು.
- 14ಆದರೆ ಹೆಂಗಸರನ್ನೂ ಚಿಕ್ಕವ ರನ್ನೂ ಪಶುಗಳನ್ನೂ ಪಟ್ಟಣದಲ್ಲಿರುವ ಎಲ್ಲವನ್ನೂ ಅದರ ಎಲ್ಲಾ ಕೊಳ್ಳೆಯನ್ನೂ ನಿನಗಾಗಿ ಸುಲುಕೊಳ್ಳ ಬೇಕು; ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ನಿನ್ನ ಶತ್ರುಗಳ ಕೊಳ್ಳೆಯನ್ನು ತಿಂದುಬಿಡಬೇಕು.
- 15ಹೀಗೆ ಇಲ್ಲಿರುವ ಈ ಜನಾಂಗಗಳ ಪಟ್ಟಣಗಳಲ್ಲದಂಥ, ನಿನಗೆ ದೂರವಾಗಿರುವಂಥ ಪಟ್ಟಣಗಳಿಗೆಲ್ಲಾ ಹಾಗೇ ಮಾಡ ಬೇಕು.
- 16ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು.
Cross references
- Joshua 8:2 ಯೆಹೋಶುವ 8:2ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದಿಯೋ ಹಾಗೆಯೇ ಆಯಿಗೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ ಪಶುಗಳನ್ನೂ ಮಾತ್ರವೇ ನಿಮಗೋಸ್ಕರ ಸುಲು ಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಒಂದು ಆಸರೆಯನ್ನು ಮಾಡಿಕೊಳ್ಳಿರಿ ಅಂದನು.
- Joshua 22:8 ಯೆಹೋಶುವ 22:8ಅವ ರೊಂದಿಗೆ ಮಾತನಾಡಿ--ನೀವು ಬಹು ಆಸ್ತಿಯುಳ್ಳವ ರಾಗಿ ಪಶುಕುರಿ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣವನ್ನು ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂತಿರುಗಿ ನಿಮ್ಮ ಡೇರೆಗಳಿಗೆ ಹೋಗಿ ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ ಅಂದನು.
- Numbers 31:9 ಅರಣ್ಯಕಾಂಡ 31:9ಇಸ್ರಾಯೇಲ್ ಮಕ್ಕಳು ಮಿದ್ಯಾನ್ಯರ ಸ್ತ್ರೀಯರನ್ನೂ ಅವರ ಮಕ್ಕಳನ್ನೂ ಸೆರೆಹಿಡಿದು ಸಮಸ್ತ ಪಶುಗಳನ್ನೂ ಹಿಂಡುಗಳನ್ನೂ ಸಾಮಗ್ರಿಗಳನ್ನೂ ಸುಲುಕೊಂಡರು.
- Romans 8:37 ರೋಮಾಪುರದವರಿಗೆ 8:37ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- Joshua 11:14 ಯೆಹೋಶುವ 11:14ಆ ಪಟ್ಟಣಗಳ ಕೊಳ್ಳೆಯನ್ನೆಲ್ಲಾ ಪಶು ಗಳನ್ನೆಲ್ಲಾ ಇಸ್ರಾಯೇಲ್ ಮಕ್ಕಳು ತಮಗೋಸ್ಕರ ಸುಲುಕೊಂಡರು; ಆದರೆ ಮನುಷ್ಯರೆಲ್ಲರನ್ನು ಕತ್ತಿಯಿಂದ ನಾಶಮಾಡುವ ವರೆಗೂ ಹೊಡೆದುಬಿಟ್ಟರು. ಶ್ವಾಸವುಳ್ಳ ಒಂದನ್ನೂ ಅವರು ಉಳಿಯಗೊಡಿಸಲಿಲ್ಲ.
- Numbers 31:18 ಅರಣ್ಯಕಾಂಡ 31:18ಆದರೆ ಪುರುಷ ಸಂಗಮ ಮಾಡದಿರುವ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗೆ ಉಳಿಸಿಕೊಳ್ಳಿರಿ.
- Psalm 68:12 ಕೀರ್ತನೆಗಳು 68:12ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
- 2 Chronicles 20:25 2 ಪೂರ್ವಕಾಲವೃತ್ತಾಂತ 20:25ಯೆಹೋಷಾಫಾಟನೂ ಅವನ ಜನರೂ ಅವರ ವಸ್ತುಗಳನ್ನು ಕೊಳ್ಳೆಮಾಡಲು ಬಂದಾಗ ಅವರು ಹೆಣ ಗಳ ಬಳಿಯಲ್ಲಿ ದ್ರವ್ಯವನ್ನೂ ಪ್ರಿಯವಾದ ಆಭರಣ ಗಳನ್ನೂ ಬಹಳವಾಗಿ ಕಂಡುಕೊಂಡು ತಾವು ಹೊರ ಲಾರದಷ್ಟು ಸುಲುಕೊಂಡರು. ಕೊಳ್ಳೆಯು ಅಷ್ಟು ಅಧಿಕವಾದದರಿಂದ ಅದನ್ನು ಮೂರು ದಿವಸಗಳ ವರೆಗೂ ಸುಲುಕೊಳ್ಳುತ್ತಾ ಇದ್ದರು.
- Numbers 31:12 ಅರಣ್ಯಕಾಂಡ 31:12ಅವರು ಸೆರೆಯವರನ್ನೂ ಲೂಟಿಯನ್ನೂ ಸುಲಿಗೆ ಯನ್ನೂ ಮೋಶೆ ಯಾಜಕನಾದ ಎಲ್ಲಾಜಾರನು ಇಸ್ರಾಯೇಲ್ ಮಕ್ಕಳ ಸಭೆಯವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬೈಲುಗಳಲ್ಲಿ ಇದ್ದ ಪಾಳೆಯ ದೊಳಗೆ ತಂದರು.
- 2 Chronicles 14:13–15 2 ಪೂರ್ವಕಾಲವೃತ್ತಾಂತ 14:13–15ಆಗ ಆಸನೂ ಅವನ ಸಂಗಡ ಇದ್ದ ಜನರೂ ಅವರನ್ನು ಗೆರಾರಿನ ವರೆಗೂ ಹಿಂದಟ್ಟಿದರು. ಕೂಷಿಯರು ತಮಗೆ ತ್ರಾಣವಿಲ್ಲದ ಹಾಗೆ ಸೋತುಹೋದರು. ಅವರು ಕರ್ತನ ಮುಂದೆಯೂ ಆತನ ಸೈನ್ಯದ ಮುಂದೆಯೂ ನಾಶ ವಾದರು. ಯೆಹೂದದವರು ಬಹು ಕೊಳ್ಳೆಯನ್ನು ಒಯ್ದರು. ಅವರು ಗೆರಾರಿನ ಸುತ್ತಲಿರುವ ಸಮಸ್ತ ಪಟ್ಟಣಗಳನ್ನು ಹೊಡೆದರು. ಕರ್ತನ ಭಯವು ಅವರ ಮೇಲೆ ಬಂತು. ಆ ಪಟ್ಟಣಗಳಲ್ಲಿ ಬಹು ಕೊಳ್ಳೆ ಇದ್ದದ್ದರಿಂದ ಇವುಗಳನ್ನೆಲ್ಲಾ ಕೊಳ್ಳೆಮಾಡಿದರು.ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು. ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.
- Numbers 31:35–54 ಅರಣ್ಯಕಾಂಡ 31:35–54ಪುರುಷ ಸಂಗಮ ಮಾಡದ ಸ್ತ್ರೀಯರು ಮೂವತ್ತೆ ರಡು ಸಾವಿರ ಮಂದಿ. ಯುದ್ಧಕ್ಕೆ ಹೊರಟವರ ಅರ್ಧ ಲೆಕ್ಕವು ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು; ಕುರಿಗಳಿಂದ ಕರ್ತನಿಗೆ ಕೊಡ ಲ್ಪಟ್ಟ ಕಪ್ಪವು ಆರು ನೂರ ಎಪ್ಪತ್ತೈದು; ದನಗಳು ಮೂವತ್ತಾರು ಸಾವಿರ, ಅವುಗಳಿಂದ ಕರ್ತನಿಗೆ ಉಂಟಾದ ಕಪ್ಪವು ಎಪ್ಪತ್ತೆರಡು. ಕತ್ತೆಗಳು ಮೂವತ್ತು ಸಾವಿರದ ಐನೂರು; ಅವುಗಳಿಂದ ಕರ್ತನಿಗೆ ಉಂಟಾದ ಕಪ್ಪವು ಅರವತ್ತೊಂದು. ಜನರು ಹದಿನಾರು ಸಾವಿರ; ಅವರಿಂದ ಕರ್ತನಿಗೆ ಉಂಟಾದ ಕಪ್ಪವು ಮೂವತ್ತೆರಡು ಜನ. ಆದರೆ ಮೋಶೆಯು ಕರ್ತನಿಗೆ ಎತ್ತುವ ಅರ್ಪಣೆಯಾಗಿರುವ ಕಪ್ಪವನ್ನು ಯಾಜಕನಾದ ಎಲ್ಲಾಜಾರನಿಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಕೊಟ್ಟನು. ಮೋಶೆಯು ಯುದ್ಧಕ್ಕೆ ಹೋದ ಮನುಷ್ಯರಿಂದ ತಕ್ಕೊಂಡು ಇಸ್ರಾಯೇಲ್ ಮಕ್ಕಳಿಗೆ ಹಂಚಿದ ಅರ್ಧ ಎಷ್ಟಂದರೆ-- ಕುರಿಗಳಿಂದ ಸಭೆಯ ಅರ್ಧ, ಮೂರು ಲಕ್ಷದ ಮೂವತ್ತೇಳು ಸಾವಿರದ ಐನೂರು ಕುರಿಗಳು; ಮೂವತ್ತಾರು ಸಾವಿರ ಪಶುಗಳು; ಮೂವತ್ತು ಸಾವಿರದ ಐನೂರು ಕತ್ತೆಗಳು; ಹದಿನಾರು ಸಾವಿರ ಜನರು. ಮೋಶೆಯು ಇಸ್ರಾಯೇಲ್ ಮಕ್ಕಳ ಅರ್ಧದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಐವತ್ತರಲ್ಲಿ ಒಂದು ಪಾಲನ್ನು ತಕ್ಕೊಂಡು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಕರ್ತನ ಗುಡಾರದ ಕಾಯಿದೆಯನ್ನು ಕಾಯುವ ಲೇವಿಯರಿಗೆ ಕೊಟ್ಟನು. ದಂಡಿನ ಸಹಸ್ರಗಳ ಮೇಲಿರುವ ಅಧಿಕಾರಿಗಳೂ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು ಮೋಶೆಗೆ ಅವರು--ನಿನ್ನ ಸೇವಕರಾದ ನಾವು ನಮ್ಮ ಕೈಯಲ್ಲಿದ್ದ ಯುದ್ಧಸ್ಥರ ಲೆಕ್ಕವನ್ನು ತಕ್ಕೊಂಡೆವು; ಅವರೊಳಗೆ ಒಬ್ಬನಾದರೂ ಕಡಿಮೆ ಯಾಗಲಿಲ್ಲ. ಆದದರಿಂದ ಕರ್ತನ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ಆಭರಣಗಳಾದ ಸರಗಳನ್ನೂ ಕಡಗಗಳನ್ನೂ ಉಂಗುರಗಳನ್ನೂ ವಾಲೆ ಗಳನ್ನೂ ಪದಕಗಳನ್ನೂ ಕರ್ತನಿಗೆ ಕಾಣಿಕೆಯಾಗಿ ತಂದಿ ದ್ದೇವೆ ಎಂದು ಹೇಳಿದರು. ಹಾಗೆ ಮೋಶೆಯೂ ಯಾಜಕನಾದ ಎಲ್ಲಾಜಾರನೂ ವಿಚಿತ್ರ ಕೆಲಸವಾಗಿ ರುವ ಬಂಗಾರವನ್ನೆಲ್ಲಾ ಅವರಿಂದ ತಕ್ಕೊಂಡರು. ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಕರ್ತನಿಗೆ ಅರ್ಪಿಸಿದ ಕಾಣಿಕೆಯ ಚಿನ್ನವೆಲ್ಲಾ ಹದಿನಾರು ಸಾವಿರದ ಏಳುನೂರ ಐವತ್ತು ಶೇಕೆಲುಗಳಾಗಿತ್ತು. ಯುದ್ಧದ ಜನರಲ್ಲಿ ಒಬ್ಬೊಬ್ಬನು ತನ್ನ ಸ್ವಂತಕ್ಕಾಗಿ ಸುಲುಕೊಂಡಿ ದ್ದನು.ಆಗ ಮೋಶೆಯೂ ಯಾಜಕನಾದ ಎಲ್ಲಾಜಾ ರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತಕ್ಕೊಂಡು ಕರ್ತನ ಸಮ್ಮುಖದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಜ್ಞಾಪಕಕ್ಕಾಗಿ ಸಭೆಯ ಗುಡಾರದೊಳಗೆ ತಂದರು. ಆಗ ಮೋಶೆಯೂ ಯಾಜಕನಾದ ಎಲ್ಲಾಜಾ ರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತಕ್ಕೊಂಡು ಕರ್ತನ ಸಮ್ಮುಖದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಜ್ಞಾಪಕಕ್ಕಾಗಿ ಸಭೆಯ ಗುಡಾರದೊಳಗೆ ತಂದರು.