Exodus · chapter 23 · verse 7
Exodus 23:7 in Kannada
ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.
Sullina vishayagalinda neenu doora viru; niraparaadhiyannoo neetivantanannoo kolla beda, yaakandare naanu dushtanannu neetivanta nendu nirnayisuvadilla.
Exodus 23:7 in English
- King James Version (KJV)
- Keep thee far from a false matter; and the innocent and righteous slay thou not: for I will not justify the wicked.
- World English Bible (WEB)
- “Keep far from a false charge, and don’t kill the innocent and righteous; for I will not justify the wicked.
- American Standard Version (ASV)
- Keep thee far from a false matter; and the innocent and righteous slay thou not: for I will not justify the wicked.
- Bible in Basic English (BBE)
- Keep yourselves far from any false business; never let the upright or him who has done no wrong be put to death: for I will make the evil-doer responsible for his sin.
- Darby Translation (DBY)
- Thou shalt keep far from the cause of falsehood; and the innocent and righteous slay not; for I will not justify the wicked.
- Webster's Bible (WBS)
- Keep thee far from a false matter; and the innocent and righteous slay thou not: for I will not justify the wicked.
- Young's Literal Translation (YLT)
- from a false matter thou dost keep far off, and an innocent and righteous man thou dost not slay; for I do not justify a wicked man.
Read in context
- 5ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
- 6ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬೇಡ.
- 7ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.
- 8ಲಂಚವನ್ನು ತೆಗೆದು ಕೊಳ್ಳಬೇಡ; ಅದು ಜ್ಞಾನಿಗಳನ್ನು ಕುರುಡರನ್ನಾಗಿ ಮಾಡಿ ನೀತಿವಂತರ ಮಾತುಗಳನ್ನು ವಕ್ರಪಡಿಸುತ್ತದೆ.
- 9ಪರದೇಶಸ್ಥನನ್ನು ಉಪದ್ರವ ಪಡಿಸಬೇಡ; ಪರ ದೇಶಸ್ಥನ ಹೃದಯವನ್ನು ನೀವು ತಿಳಿದಿರುವಿರಿ. ನೀವೂ ಐಗುಪ್ತದೇಶದಲ್ಲಿ ಪರದೇಶಿಗಳಾಗಿದ್ದೀರಷ್ಟೆ.
Cross references
- Ephesians 4:25 ಎಫೆಸದವರಿಗೆ 4:25ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.
- Exodus 23:1 ವಿಮೋಚನಕಾಂಡ 23:1ನೀನು ಸುಳ್ಳು ಸುದ್ಧಿಯನ್ನು ಹಬ್ಬಿಸ ಬಾರದು. ಅನ್ಯಾಯದ ಸಾಕ್ಷಿಯಾಗಿರು ವದಕ್ಕೆ ದುಷ್ಟನೊಂದಿಗೆ ಸೇರಬೇಡ.
- Deuteronomy 27:25 ಧರ್ಮೋಪದೇಶಕಾಂಡ 27:25ಅಪರಾಧವಿಲ್ಲದೆ ಮನುಷ್ಯನನ್ನು ಕೊಲ್ಲುವ ಹಾಗೆ ಲಂಚತೆಗೆದುಕೊಳ್ಳುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ.ಈ ನ್ಯಾಯಪ್ರಮಾಣದ ಮಾತುಗಳನ್ನು ಸ್ಥಾಪಿ ಸದೆ, ಕೈಕೊಳ್ಳದೆ ಇರುವವನಿಗೆ ಶಾಪ. ಜನವೆಲ್ಲಾ ಆಮೆನ್ ಎಂದು ಹೇಳಲಿ ಎಂದು ಹೇಳಬೇಕು.
- Exodus 34:7 ವಿಮೋಚನಕಾಂಡ 34:7ಸಾವಿರ (ತಲೆಗಳ) ವರೆಗೂ ಕರುಣೆ ತೋರಿಸುವಾತನೂ ದೋಷಾಪರಾಧ ವನ್ನೂ ಪಾಪವನ್ನೂ ಕ್ಷಮಿಸುವಾತನೂ ಅಪರಾಧಿ ಯನ್ನು ನಿರಪರಾಧಿಯೆಂದು ಎಣಿಸದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆ ಗಳವರೆಗೂ ವಿಚಾರಿಸುವಾತನೂ ಎಂದು ಪ್ರಕಟಿಸಿ ಕೊಂಡನು.
- Romans 1:18 ರೋಮಾಪುರದವರಿಗೆ 1:18ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ.
- 1 Thessalonians 5:22 1 ಥೆಸಲೊನೀಕದವರಿಗೆ 5:22ಸಕಲ ವಿಧವಾದ ಕೆಟ್ಟತನದ ತೋರಿಕೆಗೆ ದೂರವಾಗಿರ್ರಿ.
- Leviticus 19:11 ಯಾಜಕಕಾಂಡ 19:11ನೀವು ಕದಿಯಬಾರದು; ಒಬ್ಬರಿಗೊಬ್ಬರು ಸುಳ್ಳಾಡಿ ಮೋಸಮಾಡಬಾರದು.
- Deuteronomy 19:16–21 ಧರ್ಮೋಪದೇಶಕಾಂಡ 19:16–21ತಪ್ಪಾದ ಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವದಕ್ಕೆ ಎದ್ದರೆ ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು. ನ್ಯಾಯಾಧಿಪತಿಗಳು ಒಳ್ಳೆ ವಿಚಾರಣೆಮಾಡಬೇಕು; ಆಗ ಇಗೋ, ಆ ಸಾಕ್ಷಿ ಸುಳ್ಳುಸಾಕ್ಷಿಯಾಗಿದ್ದರೆ,ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ ಅವನು ತನ್ನ ಸಹೋದರನಿಗೆ ಮಾಡುವದಕ್ಕೆ ಯೋಚಿಸಿದ ಪ್ರಕಾರ ಅವನಿಗೆ ಮಾಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಉಳಿದವರು ಕೇಳಿ ಭಯಪಟ್ಟು ಆ ಕೆಟ್ಟಕೃತ್ಯವನ್ನು ಇನ್ನು ಮೇಲೆ ನಿನ್ನ ಮಧ್ಯದಲ್ಲಿ ಮಾಡುವದಿಲ್ಲ.ನಿನ್ನ ಕಣ್ಣು ಕರುಣಿಸಬಾರದು; ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಕೊಡಬೇಕು. ನಿನ್ನ ಕಣ್ಣು ಕರುಣಿಸಬಾರದು; ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ಕೊಡಬೇಕು.
- Romans 2:5–6 ರೋಮಾಪುರದವರಿಗೆ 2:5–6ಹೀಗೆ ನಿನ್ನ ಕಾಠಿಣ್ಯತೆ ಮತ್ತು ಪಶ್ಚಾತ್ತಾಪವಿಲ್ಲದ ಹೃದಯದಿಂದ ಉಗ್ರತೆಯ ದಿನಕ್ಕಾಗಿಯೂ ದೇವರ ನೀತಿಯುಳ್ಳ ನ್ಯಾಯತೀರ್ವಿಕೆಯ ಪ್ರತ್ಯಕ್ಷತೆಗಾಗಿಯೂ ದೇವರ ಕೋಪವನ್ನು ನಿನಗೋಸ್ಕರ ಕೂಡಿಸಿಟ್ಟುಕೊಳ್ಳುತ್ತಾ ಇದ್ಧೀ. ದೇವರು ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿ ಗನುಸಾರವಾಗಿ ಪ್ರತಿಫಲ ಕೊಡುವನು.
- Proverbs 17:15 ಜ್ಞಾನೋಕ್ತಿಗಳು 17:15ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
- Luke 3:14 ಲೂಕನು 3:14ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು.
- Job 22:23 ಯೋಬನು 22:23ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.