Deuteronomy · chapter 4 · verse 25
Deuteronomy 4:25 in Kannada
ನಿನ್ನಿಂದ ಮಕ್ಕಳೂ ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು ತರುವಾಯ ನಿಮ್ಮನ್ನು ಕೆಡಿಸಿಕೊಂಡು ಯಾವದಾದರ ರೂಪವನ್ನು ಕೆತ್ತಿದ ವಿಗ್ರಹವನ್ನು ಮಾಡಿಕೊಂಡು ನಿನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಆತನಿಗೆ ಕೋಪವನ್ನು ಎಬ್ಬಿಸಿದರೆ
Ninninda makkaloo mommakkaloo huttida mele neevu bahukaala deshadalli iddu taruvaaya nimmannu kedisikondu yaavadaadara roopavannu kettida vigrahavannu maadikondu ninna devaraada kartana sammukhadalli kettaddannu maadi aatanige kopavannu ebbisidare
Deuteronomy 4:25 in English
- King James Version (KJV)
- When thou shalt beget children, and children’s children, and ye shall have remained long in the land, and shall corrupt [yourselves], and make a graven image, [or] the likeness of any [thing], and shall do evil in the sight of the LORD thy God, to provoke him to anger:
- World English Bible (WEB)
- When you father children and children’s children, and you have been long in the land, and then corrupt yourselves, and make a carved image in the form of anything, and do that which is evil in the LORD your God’s sight to provoke him to anger,
- American Standard Version (ASV)
- When thou shalt beget children, and children’s children, and ye shall have been long in the land, and shall corrupt yourselves, and make a graven image in the form of anything, and shall do that which is evil in the sight of Jehovah thy God, to provoke him to anger;
- Bible in Basic English (BBE)
- If, when you have had children and children's children, and have been living a long time in the land, you are turned to evil ways, and make an image of any sort, and do evil in the eyes of the Lord your God, moving him to wrath:
- Darby Translation (DBY)
- When thou begettest sons, and sons' sons, and ye have remained long in the land, and shall corrupt yourselves, and make a graven image, the form of anything, and do evil in the sight of Jehovah thy God, to provoke him to anger,
- Webster's Bible (WBS)
- When thou shalt beget children, and children's children, and ye shall have remained long in the land, and shall corrupt [yourselves] , and make a graven image, [or] the likeness of any [thing] , and shall do evil in the sight of the LORD thy God, to provoke him to anger:
- Young's Literal Translation (YLT)
- 'When thou begettest sons and sons' sons, and ye have become old in the land, and have done corruptly, and have made a graven image, a similitude of anything, and have done the evil thing in the eyes of Jehovah, to provoke Him to anger: —
Read in context
- 23ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತು ನಿಮ್ಮ ದೇವರಾದ ಕರ್ತನು ಬೇಡವೆಂದು ಕೆತ್ತಿದ ಯಾವ ರೂಪದ ವಿಗ್ರಹ ವನ್ನೂ ಮಾಡಿಕೊಳ್ಳದ ಹಾಗೆ ಜಾಗ್ರತೆಯಾಗಿರ್ರಿ.
- 24ನಿನ್ನ ದೇವರಾದ ಕರ್ತನು ದಹಿಸುವ ಅಗ್ನಿಯೂ ರೋಷವುಳ್ಳ ದೇವರೂ ಆಗಿದ್ದಾನೆ.
- 25ನಿನ್ನಿಂದ ಮಕ್ಕಳೂ ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು ತರುವಾಯ ನಿಮ್ಮನ್ನು ಕೆಡಿಸಿಕೊಂಡು ಯಾವದಾದರ ರೂಪವನ್ನು ಕೆತ್ತಿದ ವಿಗ್ರಹವನ್ನು ಮಾಡಿಕೊಂಡು ನಿನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಆತನಿಗೆ ಕೋಪವನ್ನು ಎಬ್ಬಿಸಿದರೆ
- 26ನಾನು ಈ ದಿನ ಆಕಾಶ ವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆದು ನಿಮಗೆ ಹೇಳುವ ದೇನಂದರೆ--ನೀವು ಯೊರ್ದನನ್ನು ದಾಟಿ ಸ್ವಾಧೀನ ಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ ಸಂಪೂರ್ಣ ವಾಗಿ ನಶಿಸುವಿರಿ.
- 27ಆಗ ಕರ್ತನು ನಿಮ್ಮನ್ನು ಜನಾಂಗ ಗಳಲ್ಲಿ ಚದರಿಸುವನು; ಕರ್ತನು ನಿಮ್ಮನ್ನು ನಡಿಸುವಲ್ಲಿ ಅವರ ಮಧ್ಯದಲ್ಲಿ ಸ್ವಲ್ಪ ಮಂದಿಯಾಗಿ ಉಳಿಯುವಿರಿ.
Cross references
- Deuteronomy 4:16 ಧರ್ಮೋಪದೇಶಕಾಂಡ 4:16ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಅಂದರೆ ಗಂಡು ಇಲ್ಲವೆ ಹೆಣ್ಣಿನ ಆಕಾರದಲ್ಲಿ ಯಾವ ವಿಧವಾದ ಪ್ರತಿಮೆ ಯನ್ನೂ
- Hosea 9:9 ಹೋಶೇಯ 9:9ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
- 1 Corinthians 10:22 1 ಕೊರಿಂಥದವರಿಗೆ 10:22ಕರ್ತ ನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು?
- Deuteronomy 31:16–18 ಧರ್ಮೋಪದೇಶಕಾಂಡ 31:16–18ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು. ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು. ಅವರು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತವೂ ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತವಾಗಿ ಮರೆಮಾಡುವೆನು.
- 2 Kings 17:17–19 2 ಅರಸುಗಳು 17:17–19ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ. ಆದರೆ ಯೆಹೂದದವರು ತಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳದೆ ಇಸ್ರಾ ಯೇಲು ಮಾಡಿಕೊಂಡ ಕಟ್ಟಳೆಗಳಲ್ಲಿ ನಡೆದರು.
- 2 Chronicles 36:12–16 2 ಪೂರ್ವಕಾಲವೃತ್ತಾಂತ 36:12–16ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- Exodus 32:7 ವಿಮೋಚನಕಾಂಡ 32:7ಆಗ ಕರ್ತನು ಮೋಶೆಗೆ--ನೀನು ಇಳಿದು ಹೋಗು; ನೀನು ಐಗುಪ್ತ ದೇಶದೊಳಗಿಂದ ಬರ ಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.
- 2 Kings 21:2 2 ಅರಸುಗಳು 21:2ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
- Deuteronomy 31:29 ಧರ್ಮೋಪದೇಶಕಾಂಡ 31:29ನಾನು ಸತ್ತ ಮೇಲೆ ನೀವು ಪೂರ್ಣವಾಗಿ ನಿಮ್ಮನ್ನು ನೀವು ಕೆಡಿಸಿ ಕೊಂಡು ನಾನು ನಿಮಗೆ ಆಜ್ಞಾಪಿಸಿದ ಮಾರ್ಗದಿಂದ ತೊಲಗಿ ಹೋಗುವಿರೆಂದು ನಾನು ಬಲ್ಲೆನು; ನೀವು ಕರ್ತನ ಮುಂದೆ ಕೆಟ್ಟದ್ದನ್ನು ಮಾಡಿ ನಿಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನೆಬ್ಬಿಸುವ ಕಾರಣ ಕಡೇ ದಿವಸಗಳಲ್ಲಿ ನಿಮಗೆ ಕೇಡುಸಂಭವಿಸುವದು ಎಂದು ಹೇಳಿದನು.ಆಗ ಮೋಶೆ ಇಸ್ರಾಯೇಲ್ ಸಭೆಗೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಹೇಳಿ ಮುಗಿಸಿದನು.
- Judges 2:8–15 ನ್ಯಾಯಸ್ಥಾಪಕರು 2:8–15ಆದರೆ ನೂನನ ಮಗನೆಂಬ ಕರ್ತನ ಸೇವಕನಾದ ಯೆಹೋಶುವನು ನೂರ ಹತ್ತು ವರುಷ ಪ್ರಾಯದವನಾಗಿ ಸತ್ತನು. ಅವನನ್ನು ಎಫ್ರಾಯಾಮಿನ ಬೆಟ್ಟದಲ್ಲಿ ಗಾಷ್ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್ಹೆರೆಸ್ನಲ್ಲಿ ಹೂಣಿಟ್ಟರು. ಆ ಸಂತತಿಯವರೆಲ್ಲರೂ ತಮ್ಮ ತಂದೆಗಳ ಬಳಿಯಲ್ಲಿ ಕೂಡಿಸಿಕೊಳ್ಳಲ್ಪಟ್ಟರು. ಅವರ ತರುವಾಯ ಕರ್ತನನ್ನೂ ಇಸ್ರಾಯೇಲ್ಯರಿಗೋಸ್ಕರ ಮಾಡಿದ ಆತನ ಕಾರ್ಯ ಗಳನ್ನೂ ಅರಿಯದೆ ಇರುವ ಮತ್ತೊಂದು ಸಂತತಿ ಎದ್ದಿತು. ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ಬಾಳನನ್ನು ಸೇವಿಸಿ ತಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಮಾಡಿದ ತಮ್ಮ ದೇವರಾದ ಕರ್ತನನ್ನು ಬಿಟ್ಟು ತಮ್ಮ ಸುತ್ತಲಿರುವ ಜನಗಳ ಅನ್ಯ ದೇವರುಗಳ ಹಿಂದೆಹೋಗಿ ಅವುಗಳಿಗೆ ಅಡ್ಡಬಿದ್ದು ಕರ್ತನಿಗೆ ಕೋಪವನ್ನೆಬ್ಬಿಸಿದರು. ಅವರು ಕರ್ತನನ್ನು ಬಿಟ್ಟು ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದರು. ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು. ಕರ್ತನು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಇಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವದಕ್ಕೆ ಕರ್ತನ ಕೈ ಅವರ ಮೇಲೆ ಇತ್ತು.
- 2 Kings 21:14–16 2 ಅರಸುಗಳು 21:14–16ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವವರನ್ನು ಬಿಟ್ಟು ಬಿಟ್ಟು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ ಸೂರೆಯೂ ಆಗಿ ಹೋಗುವರು. ಅವರ ತಂದೆಗಳು ಐಗುಪ್ತ ದಿಂದ ಹೊರಟ ದಿವಸ ಮೊದಲುಗೊಂಡು ಇಂದಿನ ವರೆಗೂ ಅವರು ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ. ಇದಲ್ಲದೆ ಮನಸ್ಸೆಯು ಕರ್ತನ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯ ವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಾಪರಾಧದ ರಕ್ತದಿಂದ ತುಂಬಿಸಿದನು.
Original words (Hebrew)
- beget · H3205יָלַד yâlad
- children · H1121בֵּן bên
- children’s · H1121בֵּן bên
- children · H1121בֵּן bên
- long · H3462יָשֵׁן yâshên
- land · H776אֶרֶץ ʼerets
- corrupt · H7843שָׁחַת shâchath
- make · H6213עָשָׂה ʻâsâh
- image · H6459פֶּסֶל peçel
- likeness · H8544תְּמוּנָה tᵉmûwnâh
- do · H6213עָשָׂה ʻâsâh
- evil · H7451רַע raʻ
- sight · H5869עַיִן ʻayin
- God · H430אֱלֹהִים ʼĕlôhîym
- anger · H3707כַּעַס kaʻaç