Numbers · chapter 12 · verse 8
Numbers 12:8 in Kannada
ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
Goodhavaagi alla, mukhaamukhiyaagi andare pratyakshavaagi naanu avana sangada maatanaa duttene. Avanu kartana roopavannu noduttaane; heegiralu neevu nanna sevakanaada moshege virodhavaagi maatanaadalu yaake bhayapadalilla endu helidanu.
Numbers 12:8 in English
- King James Version (KJV)
- With him will I speak mouth to mouth, even apparently, and not in dark speeches; and the similitude of the LORD shall he behold: wherefore then were ye not afraid to speak against my servant Moses?
- World English Bible (WEB)
- With him, I will speak mouth to mouth, even plainly, and not in riddles; and he shall see the LORD’s form. Why then were you not afraid to speak against my servant, against Moses?”
- American Standard Version (ASV)
- with him will I speak mouth to mouth, even manifestly, and not in dark speeches; and the form of Jehovah shall he behold: wherefore then were ye not afraid to speak against my servant, against Moses?
- Bible in Basic English (BBE)
- With him I will have talk mouth to mouth, openly and not in dark sayings; and with his eyes he will see the form of the Lord: why then had you no fear of saying evil against my servant Moses?
- Darby Translation (DBY)
- Mouth to mouth do I speak to him openly, and not in riddles; and the form of Jehovah doth he behold. Why then were ye not afraid to speak against my servant, against Moses?
- Webster's Bible (WBS)
- With him will I speak mouth to mouth, even apparently, and not in dark speeches; and the similitude of the LORD shall he behold: why then were ye not afraid to speak against my servant Moses?
- Young's Literal Translation (YLT)
- mouth unto mouth I speak with him, and [by] an appearance, and not in riddles; and the form of Jehovah he beholdeth attentively; and wherefore have ye not been afraid to speak against My servant — against Moses?'
Read in context
- 6ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.
- 7ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ.
- 8ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- 9ಕರ್ತನ ಕೋಪವು ಅವರ ಮೇಲೆ ಉರಿಯಿತು, ಆತನು ಹೋದನು.
- 10ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.
Cross references
- Deuteronomy 34:10 ಧರ್ಮೋಪದೇಶಕಾಂಡ 34:10ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
- 1 Corinthians 13:12 1 ಕೊರಿಂಥದವರಿಗೆ 13:12ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು; ಈಗ ನಾನು ಅಪೂರ್ಣವಾಗಿ ತಿಳಿದಿದ್ದೇನೆ. ತರುವಾಯ ದೇವರು ನನ್ನನ್ನು ತಿಳಿದು ಕೊಂಡಂತೆಯೇ ನಾನೂ ತಿಳಿದುಕೊಳ್ಳುತ್ತೇನೆ.ಹೀಗೆ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಆದರೆ ಇವುಗಳಲ್ಲಿ ದೊಡ್ಡದು ಪ್ರೀತಿಯೇ.
- Exodus 24:10–11 ವಿಮೋಚನಕಾಂಡ 24:10–11ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು. ಆದರೆ ಇಸ್ರಾಯೇಲ್ ಮಕ್ಕಳ ಶ್ರೇಷ್ಠರ ಮೇಲೆ ಆತನು ಕೈ ಹಾಕಲಿಲ್ಲ. ಅವರು ಸಹ ದೇವರ ದರ್ಶನದ ನಂತರ ತಿಂದು ಕುಡಿದರು.
- Exodus 33:11 ವಿಮೋಚನಕಾಂಡ 33:11ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಕರ್ತನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡು ತ್ತಿದ್ದನು. ತರುವಾಯ ಅವನು ಪಾಳೆಯಕ್ಕೆ ಹಿಂತಿರಿಗಿ ಹೋದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವ ಎಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.
- Luke 10:16 ಲೂಕನು 10:16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
- Exodus 33:23 ವಿಮೋಚನಕಾಂಡ 33:23ತರುವಾಯ ನನ್ನ ಕೈಯನ್ನು ತೆಗೆದು ಬಿಡುವೆನು, ಆಗ ನೀನು ನನ್ನ ಹಿಂಭಾಗವನ್ನು ನೋಡುವಿ, ಆದರೆ ನನ್ನ ಮುಖವು ಕಾಣಿಸುವದಿಲ್ಲ ಅಂದನು.
- 2 Corinthians 4:4–6 2 ಕೊರಿಂಥದವರಿಗೆ 4:4–6ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಮಹಿಮೆಯ ಸುವಾರ್ತೆಯು ಇವರಲ್ಲಿ ಪ್ರಕಾಶಿಸಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ. ನಮ್ಮನ್ನು ನಾವೇ ಅಲ್ಲ, ಆದರೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ಸೇವಕರೆಂದು ಕರ್ತನಾದ ಕ್ರಿಸ್ತ ಯೇಸುವನ್ನೇ ಸಾರುತ್ತೇವೆ. ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.
- John 14:7–10 ಯೋಹಾನನು 14:7–10ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿದವರಾಗಿ ರುತ್ತಿದ್ದಿರಿ; ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ; ಆತನನ್ನು ನೋಡಿದವರಾಗಿದ್ದೀರಿ ಎಂದು ಹೇಳಿದನು. ಫಿಲಿಪ್ಪನು ಆತನಿಗೆ--ಕರ್ತನೇ, ತಂದೆಯನ್ನು ನಮಗೆ ತೋರಿಸು, ನಮಗೆ ಅಷ್ಟೇ ಸಾಕು ಅಂದನು. ಯೇಸು ಅವನಿಗೆ--ಫಿಲಿಪ್ಪನೇ, ನಾನು ನಿಮ್ಮ ಸಂಗಡ ಇಷ್ಟು ಕಾಲ ಇದ್ದರೂ ನೀನು ನನ್ನನ್ನು ತಿಳಿಯಲಿಲ್ಲವೋ? ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ; ಹಾಗಾದರೆ ತಂದೆಯನ್ನು ನಮಗೆ ತೋರಿಸು ಎಂದು ನೀನು ಹೇಳುವದು ಹೇಗೆ? ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವದಿಲ್ಲ; ಆದರೆ ನನ್ನಲ್ಲಿ ವಾಸಿಸುತ್ತಿರುವ ತಂದೆಯೇ ಆ ಕಾರ್ಯಗಳನ್ನು ಮಾಡುತ್ತಾನೆ.
- John 15:15 ಯೋಹಾನನು 15:15ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವದಿಲ್ಲ; ಯಾಕಂದರೆ ತನ್ನ ದಣಿಯು ಮಾಡುವಂಥದ್ದು ಆಳಿಗೆ ತಿಳಿಯುವದಿಲ್ಲ; ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ; ಯಾಕಂದರೆ ನನ್ನ ತಂದೆಯಿಂದ ಕೇಳಿದವುಗಳನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.
- 2 Peter 2:10 2 ಪೇತ್ರನು 2:10ಆದರೆ ಮುಖ್ಯವಾಗಿ ಬಂಡು ತನದ ದುರಾಶೆಯಲ್ಲಿ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ; ದುರಹಂಕಾರದಿಂದ ಗೌರವವುಳ್ಳವರನ್ನು ದೂಷಿಸುತ್ತಾರೆ.
- Psalm 17:15 ಕೀರ್ತನೆಗಳು 17:15ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- 1 Timothy 6:16 1 ತಿಮೊಥೆಯನಿಗೆ 6:16ಆತನೊಬ್ಬನೇ ಅಮರತ್ವವುಳ್ಳವನೂ ಯಾರೂ ಸವಿಾಪಿಸಲಾರದಂತ ಬೆಳಕಿನಲ್ಲಿ ವಾಸಿಸುವಾತನೂ ಆಗಿದ್ದಾನೆ; ಯಾವ ಮನುಷ್ಯನೂ ಆತನನ್ನು ಕಾಣಲಿಲ್ಲ; ಯಾರೂ ಕಾಣ ಲಾರರು; ಆತನಿಗೆ ಮಾನವೂ ನಿತ್ಯಾಧಿಕಾರವೂ ಇರಲಿ. ಆಮೆನ್.