Deuteronomy · chapter 5 · verse 6
Deuteronomy 5:6 in Kannada
ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
Ninnannu aiguptadeshadolaginda andare daasa tvada maneyolaginda horage baramaadida ninna devaraada kartanu naane.
Deuteronomy 5:6 in English
- King James Version (KJV)
- I [am] the LORD thy God, which brought thee out of the land of Egypt, from the house of bondage.
- World English Bible (WEB)
- “I am the LORD your God, who brought you out of the land of Egypt, out of the house of bondage.
- American Standard Version (ASV)
- I am Jehovah thy God, who brought thee out of the land of Egypt, out of the house of bondage.
- Bible in Basic English (BBE)
- I am the Lord your God, who took you out of the land of Egypt, out of the prison-house.
- Darby Translation (DBY)
- I am Jehovah thy God who have brought thee out of the land of Egypt, out of the house of bondage.
- Webster's Bible (WBS)
- I [am] the LORD thy God, who brought thee out of the land of Egypt, from the house of bondage.
- Young's Literal Translation (YLT)
- 'I Jehovah [am] thy God, who hath brought thee out from the land of Egypt, from a house of servants.
Read in context
- 4ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
- 5(ಆ ಕಾಲದಲ್ಲಿ ನಾನು ಕರ್ತನ ವಾಕ್ಯವನ್ನು ನಿಮಗೆ ತಿಳಿಸುವ ಹಾಗೆ ಕರ್ತನಿಗೂ ನಿಮಗೂ ನಡುವೆ ನಿಂತಿದ್ದೆನು; ನೀವು ಆ ಬೆಂಕಿಗೆ ಭಯಪಟ್ಟು ಬೆಟ್ಟದ ಮೇಲೆ ಏರಲಿಲ್ಲ.) ಆತನು ಹೇಳಿದ್ದೇನಂದರೆ--
- 6ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
- 7ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
- 8ಮೇಲಿನ ಆಕಾಶ ದಲ್ಲಾಗಲಿ ಕೆಳಗಿನ ಭೂಮಿಯಲ್ಲಾಗಲಿ ಭೂಮಿಯ ಕೆಳಗಿನ ನೀರುಗಳಲ್ಲಾಗಲಿ ಇರುವಂಥ ಯಾವ ದೊಂದರ ರೂಪದ ವಿಗ್ರಹವನ್ನು ನಿನಗೆ ಮಾಡಿ ಕೊಳ್ಳಬಾರದು,
Cross references
- Exodus 20:2–17 ವಿಮೋಚನಕಾಂಡ 20:2–17ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ. ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು. ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳ ಬಾರದು. ನೀನು ಅವುಗಳಿಗೆ ಅಡ್ಡಬೀಳಬಾರದು, ಸೇವಿಸಲೂ ಬಾರದು. ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆ ಮಾಡುವ ತಂದೆಗಳ ಅಪರಾಧವನ್ನು ಮಕ್ಕಳ ಮೇಲೆ ಯೂ ಮೂರನೆಯ ನಾಲ್ಕನೆಯ ತಲೆಗಳ ವರೆಗೂ ಬರಮಾಡುವೆನು. ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆ ಗಳನ್ನು ಕೈಕೊಳ್ಳುವವರಿಗೆ ಸಾವಿರ ತಲೆಗಳ ವರೆಗೆ ದಯೆತೋರಿಸುವೆನು. ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ. ಸಬ್ಬತ್ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ. ನೀನು ಆರು ದಿನಗಳು ದುಡಿದು ನಿನ್ನ ಕೆಲಸಗಳನ್ನೆಲ್ಲಾ ಮಾಡಿಕೋ. ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು. ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ ಭೂಮಿಯನ್ನೂ ಸಮುದ್ರ ವನ್ನೂ ಅವುಗಳಲ್ಲಿ ಇರುವವುಗಳೆಲ್ಲವನ್ನೂ ಉಂಟು ಮಾಡಿ ಏಳೆನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದದರಿಂದ ಕರ್ತನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ಪರಿಶುದ್ಧಮಾಡಿದನು. ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು. ಕೊಲೆ ಮಾಡಬಾರದು. ವ್ಯಭಿಚಾರ ಮಾಡಬಾರದು. ಕದಿಯಬಾರದು. ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು. ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.
- Psalm 81:5–10 ಕೀರ್ತನೆಗಳು 81:5–10ನಾನು ತಿಳಿಯದ ಭಾಷೆಯನ್ನು ಕೇಳಿದ ಐಗುಪ್ತದೇಶದಲ್ಲೆಲ್ಲಾ ಆತನು ಹೊರಟಾಗ ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ಅವನ ಹೆಗಲಿನಿಂದ ಹೊರೆಯನ್ನು ತೊಲಗಿಸಿದನು; ಅವನ ಕೈಗಳು ಪುಟ್ಟಿಗಳಿಂದ ಬಿಡುಗಡೆ ಹೊಂದಿದವು. ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ. ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು. ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು. ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
- Deuteronomy 4:4 ಧರ್ಮೋಪದೇಶಕಾಂಡ 4:4ಆದರೆ ನಿಮ್ಮ ದೇವರಾದ ಕರ್ತನಿಗೆ ಅಂಟಿಕೊಂಡವರಾದ ನೀವೆಲ್ಲರು ಇಂದು ಬದುಕುತ್ತೀರಿ.
- Leviticus 26:1–2 ಯಾಜಕಕಾಂಡ 26:1–2ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ. ನನ್ನ ಸಬ್ಬತ್ತುಗಳನ್ನು ನೀವು ಆಚರಿಸಬೇಕು; ನನ್ನ ಪರಿಶುದ್ಧ ಸ್ಥಳಕ್ಕೆ ಭಯಪಡ ಬೇಕು. ನಾನೇ ಕರ್ತನು.