Ecclesiastes · chapter 10 · verse 6
Ecclesiastes 10:6 in Kannada
ಮೂರ್ಖತನವು ಬಹಳ ಎತ್ತರವಾದ ಸ್ಥಳದಲ್ಲಿಡಲ್ಪಡುತ್ತದೆ. ಸಿರಿತನವು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವದು.
Moorkhatanavu bahala ettaravaada sthaladallidalpaduttade. Siritanavu kelagina sthaladalli kootukolluvadu.
Ecclesiastes 10:6 in English
- King James Version (KJV)
- Folly is set in great dignity, and the rich sit in low place.
- World English Bible (WEB)
- Folly is set in great dignity, and the rich sit in a low place.
- American Standard Version (ASV)
- folly is set in great dignity, and the rich sit in a low place.
- Bible in Basic English (BBE)
- The foolish are placed in high positions, but men of wealth are kept low.
- Darby Translation (DBY)
- folly is set in great dignities, but the rich sit in a low place.
- Webster's Bible (WBS)
- Folly is set in great dignity, and the rich sit in low place.
- Young's Literal Translation (YLT)
- He hath set the fool in many high places, And the rich in a low place do sit.
Read in context
- 4ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- 5ಆಳುವ ವನ ಸಮ್ಮುಖದಿಂದ ಹೊರಟು ಬರುವ ತಪ್ಪಿನ ಹಾಗಿ ರುವ ಒಂದು ಕೇಡನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ.
- 6ಮೂರ್ಖತನವು ಬಹಳ ಎತ್ತರವಾದ ಸ್ಥಳದಲ್ಲಿಡಲ್ಪಡುತ್ತದೆ. ಸಿರಿತನವು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವದು.
- 7ನಾನು ಕುದುರೆಗಳ ಮೇಲೆ ಸೇವಕರನ್ನೂ ಮತ್ತು ಪ್ರಭುಗಳು ಸೇವಕರ ಹಾಗೆ ಭೂಮಿಯ ಮೇಲೆ ನಡೆಯುವದನ್ನೂ ನೋಡಿದ್ದೇನೆ.
- 8ಯಾವನು ಕುಣಿಯನ್ನು ಅಗೆಯುವನೋ ಅದರಲ್ಲೇ ಅವನು ಬೀಳುವನು; ಯಾವನು ಬೇಲಿಯನ್ನು ಮುರಿ ಯುವನೋ ಅವನನ್ನು ಹಾವು ಕಚ್ಚುವದು.
Cross references
- Proverbs 28:12 ಜ್ಞಾನೋಕ್ತಿಗಳು 28:12ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
- Proverbs 29:2 ಜ್ಞಾನೋಕ್ತಿಗಳು 29:2ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ.
- Esther 3:1 ಎಸ್ತೇರಳು 3:1ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು.
- Psalm 12:8 ಕೀರ್ತನೆಗಳು 12:8ಅತಿ ನೀಚರು ಹೆಚ್ಚಿಸಲ್ಪಟ್ಟಾಗ ದುಷ್ಟರು ಪ್ರತಿಯೊಂದು ಕಡೆಗೂ ತಿರುಗಾಡುತ್ತಾರೆ.
- Proverbs 28:28 ಜ್ಞಾನೋಕ್ತಿಗಳು 28:28ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
- 1 Kings 12:13–14 1 ಅರಸುಗಳು 12:13–14ಆದರೆ ಅರಸನು ಜನರಿಗೆ ಕಠಿಣವಾದ ಪ್ರತ್ಯುತ್ತರವನ್ನು ಹೇಳಿ ಹಿರಿಯರು ಅವನಿಗೆ ಹೇಳಿದ ಆಲೋಚನೆಯನ್ನು ಬಿಟ್ಟು ಯುವಕರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ-- ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗ ಮಾಡಿದನು; ನಾನು ಅದಕ್ಕೆ ಕೂಡಿಸುವೆನು; ನನ್ನ ತಂದೆಯು ನಿಮ್ಮನ್ನು ಕೊರಡೆಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು.
- Judges 9:14–20 ನ್ಯಾಯಸ್ಥಾಪಕರು 9:14–20ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು. ಮುಳ್ಳಿನ ಗಿಡವು ಮರಗಳಿಗೆ--ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವದು ಸತ್ಯ ವಾದರೆ ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು ಲೆಬನೋನಿನ ದೇವದಾರುಗಳನ್ನು ದಹಿಸಿಬಿಡಲಿ ಅಂದಿತು. ನೀವು ಈಗ ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ಸತ್ಯದಿಂದಲೂ ಯಥಾರ್ಥದಿಂದಲೂ ಮಾಡಿದ್ದಾದರೆ, ಯೆರುಬ್ಬಾಳನಿಗೂ ಅವನ ಮನೆಗೂ ಒಳ್ಳೇದನ್ನು ಮಾಡಿದ್ದರೆ ನನ್ನ ತಂದೆಯಾದ ಅವನು ನಿಮಗೋಸ್ಕರ ಯುದ್ಧಮಾಡಿದವನಾಗಿಯೂ ತನ್ನ ಪ್ರಾಣವನ್ನು ಲೆಕ್ಕಿಸದೆ ಮಿದ್ಯಾನಿನ ಕೈಯಿಂದ ನಿಮ್ಮನ್ನು ತಪ್ಪಿಸಿದವನಾಗಿಯೂ ಇರಲಾಗಿ ನೀವು ಈಹೊತ್ತು ನನ್ನ ತಂದೆಯ ಮನೆಗೆ ವಿರೋಧವಾಗಿ ಎದ್ದು ಅವನ ಎಪ್ಪತ್ತು ಮಕ್ಕಳನ್ನು ಒಂದೇ ಕಲ್ಲಿನ ಮೇಲೆ ಕೊಂದು ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ಅವನು ನಿಮ್ಮ ಸಹೋದರನಾಗಿರುವದರಿಂದ ಶೆಕೆಮಿನ ಜನರ ಮೇಲೆ ಅರಸನಾಗಿ ಇಟ್ಟದ್ದು, ಯೆರುಬ್ಬಾಳನ ಯೋಗ್ಯ ತೆಗೆ ತಕ್ಕದ್ದಾಗಿದ್ದರೆ ಮತ್ತು ಈಹೊತ್ತು ಅವನಿಗೂ ಅವನ ಮಗನಿಗೂ ನೀವು ಸತ್ಯದಲ್ಲಿಯೂ ಯಥಾರ್ಥ ತೆಯಲ್ಲಿಯೂ ಕಾರ್ಯಮಾಡಿದ್ದರೆ, ಅಬೀಮೆಲೆಕನಲ್ಲಿ ನೀವು ಸಂತೋಷಪಡಿರಿ, ಅವನು ಸಹ ನಿಮ್ಮಲ್ಲಿ ಸಂತೋಷಪಡಲಿ. ಇಲ್ಲದಿದ್ದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನ ಜನರನ್ನೂ ಮಿಲ್ಲೋನಿನ ಮನೆಯವರನ್ನೂ ದಹಿಸಿಬಿಡಲಿ. ಶೆಕೆಮಿನ ಜನ ರಿಂದಲೂ ಮಿಲ್ಲೋನಿನ ಮನೆಯವರಿಂದಲೂ ಬೆಂಕಿ ಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ ಅಂದನು.
- James 2:3–5 ಯಾಕೋಬನು 2:3–5ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಅವನಿಗೆ--ನೀನು ಇಲ್ಲಿ ಈ ಒಳ್ಳೇ ಸ್ಥಳದಲ್ಲಿ ಕೂತುಕೋ ಎಂತಲೂ ಆ ಬಡವನಿಗೆ--ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಹತ್ತಿರ ಕೂತುಕೋ ಎಂತಲೂ ಹೇಳಿದರೆ ನೀವು ನಿಮ್ಮಲ್ಲಿ ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿ ಗಳಾಗಿದ್ದೀರಲ್ಲವೇ? ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?