Ecclesiastes · chapter 12 · verse 1
Ecclesiastes 12:1 in Kannada
ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ.
Kashtada dinagalu baruvadakke modalu, ivugalalli nanage santoshavillavendu neenu heluva varshagalu saviాpisuvadakke modalu eega ninna yauvanada dinagalalli srushtikarta nannu smarisiko.
Ecclesiastes 12:1 in English
- King James Version (KJV)
- Remember now thy Creator in the days of thy youth, while the evil days come not, nor the years draw nigh, when thou shalt say, I have no pleasure in them;
- World English Bible (WEB)
- Remember also your Creator in the days of your youth, before the evil days come, and the years draw near, when you will say, “I have no pleasure in them;”
- American Standard Version (ASV)
- Remember also thy Creator in the days of thy youth, before the evil days come, and the years draw nigh, when thou shalt say, I have no pleasure in them;
- Bible in Basic English (BBE)
- Let your mind be turned to your Maker in the days of your strength, while the evil days come not, and the years are far away when you will say, I have no pleasure in them;
- Darby Translation (DBY)
- And remember thy Creator in the days of thy youth, before the evil days come, and the years draw nigh, of which thou shalt say, I have no pleasure in them;
- Webster's Bible (WBS)
- Remember now thy Creator in the days of thy youth, while the evil days come not, nor the years draw nigh, when thou shalt say, I have no pleasure in them;
- Young's Literal Translation (YLT)
- Remember also thy Creators in days of thy youth, While that the evil days come not, Nor the years have arrived, that thou sayest, 'I have no pleasure in them.'
Read in context
- 1ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ.
- 2ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಕತ್ತಲಾಗದಿರುವಾಗಲೇ ಮಳೆಯ ಮೋಡ ಗಳು ತಿರಿಗಿ ಬರುವದಕ್ಕಿಂತ ಮುಂಚೆಯೇ ಆತನನ್ನು ಸ್ಮರಿಸು.
- 3ಆ ದಿನದಲ್ಲಿ ಮನೆ ಕಾಯುವವರು ನಡುಗು ವರು; ಬಲವಾದ ಮನುಷ್ಯರು ತಾವಾಗಿಯೇ ಬೊಗ್ಗು ವರು; ಅರೆಯುವವರು ಸ್ವಲ್ಪ ಇರುವದರಿಂದ ಸುಮ್ಮನಿ ರುವರು; ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.
Cross references
- Lamentations 3:27 ಪ್ರಲಾಪಗಳು 3:27ತನ್ನ ಯೌವನದಲ್ಲಿ ನೊಗವನ್ನು ಹೊರುವದು ಅವನಿಗೆ ಒಳ್ಳೆಯದು.
- Ecclesiastes 11:8 ಪ್ರಸಂಗಿ 11:8ಆದರೆ ಅನೇಕ ವರುಷಗಳು ಒಬ್ಬ ಮನುಷ್ಯನು ಬದುಕಿ ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಅವನು ಕತ್ತಲೆಯ ದಿನಗಳನ್ನು ಜ್ಞಾಪಿಸಿಕೊಳ್ಳಲಿ. ಅವು ಅತಿ ಯಾಗಿರುವವು, ಬರುವವುಗಳೆಲ್ಲವು ವ್ಯರ್ಥವಾಗಿವೆ.
- Psalm 71:17–18 ಕೀರ್ತನೆಗಳು 71:17–18ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- Proverbs 22:6 ಜ್ಞಾನೋಕ್ತಿಗಳು 22:6ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ.
- Luke 18:16 ಲೂಕನು 18:16ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರುವಂತೆ ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ದೇವರ ರಾಜ್ಯವು ಅಂಥವರದೇ.
- Psalm 34:11 ಕೀರ್ತನೆಗಳು 34:11ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಕರ್ತನ ಭಯವನ್ನು ನಿಮಗೆ ಕಲಿಸುವೆನು.
- 2 Timothy 3:15 2 ತಿಮೊಥೆಯನಿಗೆ 3:15ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.
- 1 Samuel 16:12–13 1 ಸಮುವೇಲನು 16:12–13ಆಗ ಇಷಯನು ಅವನನ್ನು ಕರೇಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ ಸುಂದರ ಮುಖವುಳ್ಳವ ನಾಗಿಯೂ ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಕರ್ತನು ಸಮುವೇಲನಿಗೆ--ನೀನೆದ್ದು ಇವನನ್ನು ಅಭಿಷೇಕಿಸು; ಇವನೇ ಅವನು ಅಂದನು. ಸಮುವೇಲನು ಎಣ್ಣೆ ಇರುವ ಕೊಂಬನ್ನು ತಕ್ಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಕರ್ತನ ಆತ್ಮನು ದಾವೀದನ ಮೇಲೆ ಬಂದನು. ಸಮುವೇಲನು ಎದ್ದು ರಾಮಕ್ಕೆ ಹೋದನು.
- Psalm 90:10 ಕೀರ್ತನೆಗಳು 90:10ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.
- Ecclesiastes 11:10 ಪ್ರಸಂಗಿ 11:10ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Luke 2:40–52 ಲೂಕನು 2:40–52ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು. ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು. ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು. ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ. ಆದರೆ ಆತನು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿ ಚಯವಾದವರಲ್ಲಿಯೂ ಆತನನ್ನು ಹುಡುಕಿದರು. ಆದರೆ ಅವರು ಆತನನ್ನು ಕಂಡುಕೊಳ್ಳದೆ ಹೋದ ದರಿಂದ ಆತನನ್ನು ಹುಡುಕುತ್ತಾ ಮತ್ತೆ ಯೆರೂಸ ಲೇಮಿಗೆ ಹಿಂತಿರುಗಿ ಬಂದರು. ಮೂರು ದಿವಸ ಗಳಾದ ಮೇಲೆ ಆತನು ದೇವಾಲಯದಲ್ಲಿ ಬೋಧಕರ ನಡುವೆ ಕೂತುಕೊಂಡು ಅವರ ಮಾತುಗಳನ್ನು ಕೇಳಿಸಿ ಕೊಳ್ಳುತ್ತಾ ಅವರನ್ನು ಪ್ರಶ್ನಿಸುತ್ತಾ ಇರುವದನ್ನು ಅವರು ಕಂಡರು. ಆತನು ಆಡಿದ ಮಾತುಗಳನ್ನು ಕೇಳಿದ ವರೆಲ್ಲರು ಆತನ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾ ದರು. ಅವರು (ತಂದೆ ತಾಯಿಗಳು) ಆತನನ್ನು ನೋಡಿದಾಗ ಆಶ್ಚರ್ಯಪಟ್ಟರು; ಆಗ ಆತನ ತಾಯಿಯು ಆತನಿಗೆ--ಮಗನೇ, ನೀನು ನಮಗೆ ಹೀಗೇಕೆ ಮಾಡಿದಿ? ಇಗೋ, ನಿನ್ನ ತಂದೆಯೂ ನಾನೂ ವ್ಯಥೆಯಿಂದ ನಿನ್ನನ್ನು ಹುಡುಕಿದೆವು ಅಂದಳು. ಆತನು ಅವರಿಗೆ--ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಕೆಲಸದಲ್ಲಿ ಇರಬೇಕಾದದ್ದು ಅಗತ್ಯವಾಗಿತ್ತೆಂದು ನಿಮಗೆ ತಿಳಿಯಲಿಲ್ಲವೋ ಅಂದನು. ಆದರೆ ಆತನು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ. ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆದರೆ ಆತನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಇಟ್ಟುಕೊಂಡಳು.ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು. ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.
- 2 Samuel 19:35 2 ಸಮುವೇಲನು 19:35ನಾನು ಈಹೊತ್ತು ಎಂಭತ್ತು ವರುಷದವನು; ಇನ್ನು ಒಳ್ಳೇದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವದೂ ಕುಡಿಯುವದೂ ನಿನ್ನ ಸೇವಕನಿಗೆ ರುಚಿಕರ ವಾಗಿರುವದೋ? ಸಂಗೀತಗಾರರ ಸಂಗೀತಗಾರ್ತಿ ಯರ ಶಬ್ದವನ್ನು ಇನ್ನು ಕೇಳುವೆನೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಯಾಕೆ ಇನ್ನು ಭಾರವಾಗಿರಬೇಕು?