Ecclesiastes · chapter 3 · verse 5
Ecclesiastes 3:5 in Kannada
ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
Kallugalannu eseyuvadakke ondu samaya, kallugalannu koodisu vadakke ondu samaya; appikolluvadakke ondu samaya, appikolluvadarinda nigrahisuva sama ya;
Ecclesiastes 3:5 in English
- King James Version (KJV)
- A time to cast away stones, and a time to gather stones together; a time to embrace, and a time to refrain from embracing;
- World English Bible (WEB)
- a time to cast away stones, and a time to gather stones together; a time to embrace, and a time to refrain from embracing;
- American Standard Version (ASV)
- a time to cast away stones, and a time to gather stones together; a time to embrace, and a time to refrain from embracing;
- Bible in Basic English (BBE)
- A time to take stones away and a time to get stones together; a time for kissing and a time to keep from kissing;
- Darby Translation (DBY)
- A time to cast away stones, and a time to gather stones together; A time to embrace, and a time to refrain from embracing;
- Webster's Bible (WBS)
- A time to cast away stones, and a time to gather stones; a time to embrace, and a time to refrain from embracing;
- Young's Literal Translation (YLT)
- A time to cast away stones, And a time to heap up stones. A time to embrace, And a time to be far from embracing.
Read in context
- 3ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ;
- 4ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
- 5ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
- 6ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
- 7ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
Cross references
- 2 Kings 3:25 2 ಅರಸುಗಳು 3:25ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.
- Joshua 10:27 ಯೆಹೋಶುವ 10:27ಆದರೆ ಸೂರ್ಯನು ಅಸ್ತಮಿಸು ವಾಗ ಯೆಹೋಶುವನು ಆಜ್ಞಾಪಿಸಲು ಅವರನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿ ಯಲ್ಲಿ ಅವರನ್ನು ಹಾಕಿ ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.
- Joshua 4:3–9 ಯೆಹೋಶುವ 4:3–9ಯೊರ್ದನಿನ ಮಧ್ಯದಲ್ಲಿ ಯಾಜಕರ ಕಾಲುಗಳು ಸ್ಥಿರವಾಗಿ ನಿಂತ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಅವುಗಳನ್ನು ನಿಮ್ಮ ಸಂಗಡ ಆಚೇದಡಕ್ಕೆ ತಂದು ನೀವು ಈ ರಾತ್ರಿ ಇಳುಕೊಳ್ಳುವ ಸ್ಥಳದಲ್ಲಿ ಅವುಗಳನ್ನು ಹಾಕಿರಿ ಎಂದು ಅವರಿಗೆ ಆಜ್ಞಾ ಪಿಸು ಅಂದನು. ಆಗ ಯೆಹೋಶುವನು ಇಸ್ರಾ ಯೇಲ್ ಮಕ್ಕಳಲ್ಲಿ ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನ ಪ್ರಕಾರ ತಾನು ಏರ್ಪಡಿಸಿದ ಹನ್ನೆರಡು ಮಂದಿಯನ್ನು ಕರೆದನು. ಯೆಹೋಶುವನು ಅವರಿಗೆ--ನೀವು ಯೊರ್ದನಿನ ಮಧ್ಯದಲ್ಲಿ ನಿಮ್ಮ ದೇವರಾದ ಕರ್ತನ ಮಂಜೂಷದ ಮುಂದೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರಿ. ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು; ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಈ ಕಲ್ಲುಗಳೇನೆಂದು ಕೇಳಿದಾಗ ನೀವು ಅವರಿಗೆ--ಯೊರ್ದನಿನ ನೀರು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ವಿಭಾಗಿಸಲ್ಪಟ್ಟಿತು; ಅದು ಯೊರ್ದನನ್ನು ದಾಟುವಾಗ ಯೊರ್ದನಿನ ನೀರು ಭೇದಿಸಲ್ಪಟ್ಟಿತ್ತು. ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳಿಗೆ ಎಂದೆಂದಿಗೂ ಜ್ಞಾಪಕಾರ್ಥ ವಾದ ಗುರುತಾಗಿರುವವು ಎಂದು ಉತ್ತರ ಕೊಡಬೇಕು ಅಂದನು. ಆಗ ಇಸ್ರಾಯೇಲ್ ಮಕ್ಕಳು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು; ಕರ್ತನು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾ ಯೇಲ್ ಮಕ್ಕಳ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನಿನ ಮಧ್ಯದಿಂದ ತೆಗೆದುಕೊಂಡು ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ನಿಲ್ಲಿಸಿ ದರು. ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.
- Joel 2:16 ಯೋವೇಲ 2:16ಜನರನ್ನು ಕೂಡಿಸಿರಿ, ಸಭೆಯನ್ನು ಪರಿಶುದ್ಧಮಾಡಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಮೊಲೆ ಕೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳ ಗಿಂದಲೂ ಮದುಮಗಳು ತನ್ನ ಅರೆಯೊಳಗಿಂದಲೂ ಹೊರಡಲಿ.
- 2 Samuel 18:17–18 2 ಸಮುವೇಲನು 18:17–18ಯೋವಾಬನು ಜನರನ್ನು ತಡೆ ದನು. ಅವರು ಅಬ್ಷಾಲೋಮನನ್ನು ತಕ್ಕೊಂಡು ಅಡವಿ ಯಲ್ಲಿರುವ ಒಂದು ದೊಡ್ಡ ಕುಣಿಯಲ್ಲಿ ಹಾಕಿ ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆಗ ಇಸ್ರಾಯೇಲ್ಯರೆಲ್ಲರೂ ತಮ್ಮ ಗುಡಾರಗಳಿಗೆ ಓಡಿ ಹೋದರು. ಆದರೆ ಅಬ್ಷಾಲೋಮನು ಜೀವ ದಿಂದಿರುವಾಗ--ನನ್ನ ಹೆಸರನ್ನು ಜ್ಞಾಪಕಮಾಡುವ ಹಾಗೆ ನನಗೆ ಮಗನಿಲ್ಲವೆಂದು ಹೇಳಿ ಅರಸನ ತಗ್ಗಿನ ಲ್ಲಿರುವ ಒಂದು ಸ್ತಂಭವನ್ನು ತಕ್ಕೊಂಡು ತನಗೋಸ್ಕರ ನಿಲ್ಲಿಸಿ ಆ ಸ್ತಂಭಕ್ಕೆ ತನ್ನ ಹೆಸರನ್ನಿಟ್ಟನು. ಅದು ಈ ದಿನದ ವರೆಗೂ ಅಬ್ಷಾಲೋಮನ ಸ್ಥಳ ಎಂದು ಹೇಳಲ್ಪಡುವದು.
- 1 Samuel 21:4–5 1 ಸಮುವೇಲನು 21:4–5ಯಾಜಕನು ದಾವೀದನಿಗೆ ಪ್ರತ್ಯುತ್ತರ ವಾಗಿ--ಪರಿಶುದ್ಧ ರೊಟ್ಟಿಯ ಹೊರತಾಗಿ ನನ್ನ ಕೈಯಲ್ಲಿ ಬಳಕೆಯಾದ ರೊಟ್ಟಿ ಒಂದಾದರೂ ಇಲ್ಲ; ಯೌವನ ಸ್ಥರು ಸ್ತ್ರೀಯರ ಬಳಿಗೆ ಸೇರದಿದ್ದರೆ ಅದು ಆಗಲಿ ಅಂದನು. ದಾವೀದನು ಯಾಜಕನಿಗೆ ಪ್ರತ್ಯುತ್ತರ ವಾಗಿ--ನಾನು ಹೊರಡುವದಕ್ಕಿಂತ ಮುಂಚೆ ನಿನ್ನೆಯೂ ಮೊನ್ನೆಯೂ ಸ್ತ್ರೀಯರು ನಮಗೆ ದೂರವಾ ಗಿದ್ದರು. ಯೌವನಸ್ಥರ ಪಾತ್ರೆಗಳು ಪರಿಶುದ್ಧವಾಗಿವೆ; ರೊಟ್ಟಿಯು ಈ ಹೊತ್ತು ಪಾತ್ರೆಯಲ್ಲಿ ಪರಿಶುದ್ಧ ಮಾಡಲ್ಪಟ್ಟದ್ದಾಗಿದ್ದರೂ ಅದು ಒಂದು ವಿಧವಾಗಿ ಬಳಕೆಯಾಗಿದೆ ಅಂದನು.