Ecclesiastes · chapter 3 · verse 6
Ecclesiastes 3:6 in Kannada
ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
Galisuvadakke ondu samaya, kaleyuvadakke ondu samaya kaapaaduvadakke ondu samaya, bisaaduvadakke ondu samaya;
Ecclesiastes 3:6 in English
- King James Version (KJV)
- A time to get, and a time to lose; a time to keep, and a time to cast away;
- World English Bible (WEB)
- a time to seek, and a time to lose; a time to keep, and a time to cast away;
- American Standard Version (ASV)
- a time to seek, and a time to lose; a time to keep, and a time to cast away;
- Bible in Basic English (BBE)
- A time for search and a time for loss; a time to keep and a time to give away;
- Darby Translation (DBY)
- A time to seek, and a time to lose; A time to keep, and a time to cast away;
- Webster's Bible (WBS)
- A time to get, and a time to lose; a time to keep, and a time to cast away;
- Young's Literal Translation (YLT)
- A time to seek, And a time to destroy. A time to keep, And a time to cast away.
Read in context
- 4ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ;
- 5ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
- 6ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
- 7ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
- 8ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ.
Cross references
- Philippians 3:7–8 ಫಿಲಿಪ್ಪಿಯವರಿಗೆ 3:7–8ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- Luke 9:24–25 ಲೂಕನು 9:24–25ಯಾವನಾದರೂ ತನ್ನ ಪ್ರಾಣವನ್ನು ಉಳಿಸಿಕೊಳ್ಳುವದಾದರೆ ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ಯಾವನಾದರೂ ತನ್ನ ಪ್ರಾಣವನ್ನು ಕಳಕೊಂಡರೆ ಅದನ್ನು ಉಳಿಸಿಕೊಳ್ಳುವನು. ಇದಲ್ಲದೆ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು ತನ್ನನ್ನು ತಾನೇ ಹಾಳು ಮಾಡಿ ಕೊಂಡರೆ ಇಲ್ಲವೆ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?
- Mark 8:35–37 ಮಾರ್ಕನು 8:35–37ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- Matthew 16:25–26 ಮತ್ತಾಯನು 16:25–26ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳ ಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣ ವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಒಬ್ಬ ಮನುಷ್ಯನು ಇಡೀ ಲೋಕವನ್ನು ಸಂಪಾದಿಸಿ ಕೊಂಡು ತನ್ನ ಆತ್ಮವನ್ನು ನಷ್ಟಪಡಿಸಿ ಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ತನ್ನ ಆತ್ಮಕ್ಕೆ ಬದಲಾಗಿ ಒಬ್ಬ ಮನುಷ್ಯನು ಏನು ಕೊಟ್ಟಾನು?
- Ecclesiastes 11:1 ಪ್ರಸಂಗಿ 11:1ನಿನ್ನ ರೊಟ್ಟಿಯನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು.
- Matthew 19:29 ಮತ್ತಾಯನು 19:29ಮತ್ತು ತನ್ನ ಮನೆಗಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯನ್ನಾಗಲೀ ನನ್ನ ಹೆಸರಿ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಹೊಂದಿಕೊಳ್ಳುವನು; ಮತ್ತು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವನುಆದರೆ ಮೊದಲನೆಯ ವರಾದ ಬಹುಮಂದಿ ಕಡೆಯವರಾಗುವರು; ಮತ್ತು ಕಡೆಯವರಾದವರು ಮೊದಲನೆಯವರಾಗುವರು.
- Mark 10:28–30 ಮಾರ್ಕನು 10:28–30ತರುವಾಯ ಪೇತ್ರನು ಆತನಿಗೆ-- ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಲಾರಂಭಿಸಿದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಯಾವನಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲೀ ಸಹೋದರರನ್ನಾಗಲೀ ಸಹೋದರಿಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯ ನ್ನಾಗಲೀ ಬಿಟು ಅವನು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ನೂರರಷ್ಟು ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿ ರನ್ನೂ ಮಕ್ಕಳನ್ನೂ ಭೂಮಿಯನ್ನೂ ಹೊಂದುವದಲ್ಲದೆ ಬರುವ ಲೋಕದಲ್ಲಿ ನಿತ್ಯ ಜೀವವನ್ನು ಹೊಂದುವನು.
- Hebrews 10:34–35 ಇಬ್ರಿಯರಿಗೆ 10:34–35ಬೇಡಿಗಳನ್ನು ಹಾಕಿಸಿ ಕೊಂಡವನಾದ ನನ್ನ ವಿಷಯದಲ್ಲಿ ನೀವು ಅನುತಾಪ ಗೊಂಡು ಪರಲೋಕದಲ್ಲಿ ನಿಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ನಿಮ್ಮಲ್ಲಿ ನೀವೇ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳು ವವರಿಗೆ ಸಂತೋಷದಿಂದ ಬಿಟ್ಟಿರಿ. ಆದದರಿಂದ ನಿಮ್ಮ ಭರವಸವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ನಷ್ಟ ಪರಿಹಾರದ ದೊಡ್ಡ ಪ್ರತಿಫಲ ಉಂಟು.
- 2 Kings 5:26 2 ಅರಸುಗಳು 5:26ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- Psalm 112:9 ಕೀರ್ತನೆಗಳು 112:9ಅವನು ಬಡವರಿಗೆ ಧಾರಾಳವಾಗಿ ಕೊಡುತ್ತಾನೆ; ಅವನ ನೀತಿ ಎಂದೆಂದಿಗೂ ನಿಲ್ಲು ತ್ತದೆ; ಅವನ ಕೊಂಬು ಘನದಿಂದ ಎತ್ತಲ್ಪಡುವದು.ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.
- Acts 27:19 ಅಪೊಸ್ತಲರ ಕೃತ್ಯಗಳು 27:19ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು.
- Genesis 31:18 ಆದಿಕಾಂಡ 31:18ತನ್ನ ಎಲ್ಲಾ ಪಶುಗಳನ್ನೂ ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶ ದಲ್ಲಿದ್ದ ತನ್ನ ತಂದೆಯಾದ ಇಸಾಕನ ಬಳಿಗೆ ತಕ್ಕೊಂಡು ಹೋದನು.