Ecclesiastes · chapter 3 · verse 8
Ecclesiastes 3:8 in Kannada
ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ.
Preetisuvadakke ondu samaya, dveshisuvadakke ondu samaya; yuddhada samaya, samaadhaanada samaya.
Ecclesiastes 3:8 in English
- King James Version (KJV)
- A time to love, and a time to hate; a time of war, and a time of peace.
- World English Bible (WEB)
- a time to love, and a time to hate; a time for war, and a time for peace.
- American Standard Version (ASV)
- a time to love, and a time to hate; a time for war, and a time for peace.
- Bible in Basic English (BBE)
- A time for love and a time for hate; a time for war and a time for peace.
- Darby Translation (DBY)
- A time to love, and a time to hate; A time of war, and a time of peace.
- Webster's Bible (WBS)
- A time to love, and a time to hate; a time of war, and a time of peace.
- Young's Literal Translation (YLT)
- A time to love, And a time to hate. A time of war, And a time of peace.
Read in context
- 6ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ;
- 7ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
- 8ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ.
- 9ತಾನು ಪ್ರಯಾಸಪಡುವದರಲ್ಲಿ ದುಡಿಯುವವನಿಗೆ ಲಾಭವೇನಿದೆ?
- 10ಅದರಲ್ಲಿ ಅಭ್ಯಾಸಿಸುವಂತೆ ಮನು ಷ್ಯರ ಪುತ್ರರಿಗೆ ದೇವರು ಕೊಟ್ಟ ಪ್ರಯಾಸವನ್ನು ನಾನು ಕಂಡಿದ್ದೇನೆ.
Cross references
- Ephesians 5:25 ಎಫೆಸದವರಿಗೆ 5:25ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.
- Ephesians 5:28–29 ಎಫೆಸದವರಿಗೆ 5:28–29ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೆ ಪ್ರೀತಿಸಿಕೊಳ್ಳುವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ. ಆದರೆ ಅದನ್ನು ಪೋಷಿಸಿ ಸಂರಕ್ಷಿಸುವ ಪ್ರಕಾರ ಕರ್ತನು ಸಭೆಯನ್ನು ಪೋಷಿಸಿ ಸಂರಕ್ಷಿಸುವಾತನಾಗಿದ್ದಾನೆ.
- Luke 14:26 ಲೂಕನು 14:26ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿ ಯರನ್ನಾಗಲೀ ಹೌದು, ತನ್ನ ಸ್ವಂತ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರ ಲಾರನು.
- 1 Kings 5:4 1 ಅರಸುಗಳು 5:4ಆದರೆ ಈಗ ನನ್ನ ದೇವರಾದ ಕರ್ತನು ಶತ್ರುವಿನಿಂದ ತಗಲುವ ಕೇಡು ಒಂದಾದರೂ ಇಲ್ಲದ ಹಾಗೆ ಸಮಸ್ತ ದಿಕ್ಕುಗಳಲ್ಲಿ ನನಗೆ ಸಮಾಧಾನವನ್ನು ಕೊಟ್ಟಿದ್ದಾನೆ.
- 2 Chronicles 19:2 2 ಪೂರ್ವಕಾಲವೃತ್ತಾಂತ 19:2ಆಗ ಪ್ರವಾದಿಯಾಗಿರುವ ಹನಾನೀಯ ಮಗನಾದ ಯೇಹೂ ಅವನನ್ನು ಎದುರುಗೊಳ್ಳಲು ಹೋದನು. ಅರಸನಾದ ಯೆಹೋಷಾಫಾಟನಿಗೆ ಅವನು--ದುಷ್ಟ ನಿಗೆ ಸಹಾಯ ಕೊಡುವವನಾಗಿ ಕರ್ತನನ್ನು ಹಗೆ ಮಾಡುವವರನ್ನು ಪ್ರೀತಿಮಾಡಬಹುದೋ? ಆದ ಕಾರಣ ನಿನ್ನ ಮೇಲೆ ಕರ್ತನ ಸನ್ನಿಧಿಯಿಂದ ರೌದ್ರ ಉಂಟು.
- Psalm 139:21 ಕೀರ್ತನೆಗಳು 139:21ಓ ಕರ್ತನೇ, ನಾನು ನಿನ್ನನ್ನು ದ್ವೇಷಿಸುವವರನ್ನು ಹಗೆಮಾಡುವದಿಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವ ದಿಲ್ಲವೋ?
- Titus 2:4 ತೀತನಿಗೆ 2:4ಇದಲ್ಲದೆ ದೇವರ ವಾಕ್ಯವು ದೂಷಿಸಲ್ಪ ಡದಂತೆ ಯೌವನ ಸ್ತ್ರೀಯರು ಸ್ವಸ್ಥಚಿತ್ತರೂ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವವರೂ
- Joshua 11:23 ಯೆಹೋಶುವ 11:23ಹೀಗೆಯೇ ಯೆಹೋಶುವನು ದೇಶವನ್ನೆಲ್ಲಾ ಕರ್ತನು ಮೋಶೆಗೆ ಹೇಳಿದ ಪ್ರಕಾರವೇ ಹಿಡಿದು ಅದನ್ನು ಇಸ್ರಾಯೇಲಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿ ಕೊಂಡಿತು.
- Revelation 2:2 ಪ್ರಕಟನೆ 2:2ನಿನ್ನ ಕ್ರಿಯೆಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು, ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ;
- Ephesians 3:19 ಎಫೆಸದವರಿಗೆ 3:19ಜ್ಞಾನಕ್ಕೆ ವಿಾರುವ ಕ್ರಿಸ್ತನ ಪ್ರೀತಿ ಯನ್ನು ತಿಳಿದುಕೊಂಡು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆಯೂ ನಿಮಗೆ ದಯ ಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.
- Joshua 8:1–29 ಯೆಹೋಶುವ 8:1–29ಆಗ ಕರ್ತನು ಯೆಹೋಶುವನಿಗೆ--ಭಯಪಡಬೇಡ, ನಿರುತ್ಸಾಹಗೊಳ್ಳಬೇಡ. ನೀನು ಸಮಸ್ತ ಯುದ್ಧಸ್ಥರಾದ ಜನರನ್ನು ಕೂಡಿಸಿಕೊಂಡು ಎದ್ದು ಆಯಿಗೆ ಏರಿ ಹೋಗು. ನೋಡು, ನಾನು ಆಯಿಯ ಅರಸನನ್ನೂ ಅವನ ಜನವನ್ನೂ ಪಟ್ಟಣ ವನ್ನೂ ಸೀಮೆಯನ್ನೂ ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ನೀನು ಯೆರಿಕೋವಿಗೂ ಅದರ ಅರಸನಿಗೂ ಯಾವ ಪ್ರಕಾರ ಮಾಡಿದಿಯೋ ಹಾಗೆಯೇ ಆಯಿಗೂ ಅದರ ಅರಸನಿಗೂ ಮಾಡಬೇಕು. ಅದರ ಕೊಳ್ಳೆಯನ್ನೂ ಪಶುಗಳನ್ನೂ ಮಾತ್ರವೇ ನಿಮಗೋಸ್ಕರ ಸುಲು ಕೊಳ್ಳಿರಿ. ನೀವು ಆ ಪಟ್ಟಣದ ಹಿಂಭಾಗದಲ್ಲಿ ಒಂದು ಆಸರೆಯನ್ನು ಮಾಡಿಕೊಳ್ಳಿರಿ ಅಂದನು. ಆಗ ಆಯಿಗೆ ಏರಿ ಹೋಗಲು ಯೆಹೋಶುವನೂ ಸಮಸ್ತ ಯುದ್ಧಸ್ಥರೂ ಎದ್ದರು. ಆದರೆ ಯೆಹೋಶುವನು ಪರಾಕ್ರಮಶಾಲಿಗಳಾದ ಮೂವತ್ತು ಸಾವಿರ ಜನರನ್ನು ಆದುಕೊಂಡು ರಾತ್ರಿಯಲ್ಲಿ ಅವರನ್ನು ಕಳುಹಿಸಿದನು. ಅವರಿಗೆ ಆಜ್ಞಾಪಿಸಿ--ಇಗೋ, ಪಟ್ಟಣದ ಹಿಂದೆ ನೀವು ಹೊಂಚಿಕೊಂಡಿರ್ರಿ; ಪಟ್ಟಣಕ್ಕೆ ಬಹುದೂರ ಹೋಗಬೇಡಿರಿ; ನೀವೆಲ್ಲರೂ ಸಿದ್ಧವಾಗಿರ್ರಿ. ಆದರೆ ನಾನೂ ನನ್ನ ಸಂಗಡ ಇರುವ ಜನರೆಲ್ಲರೂ ಪಟ್ಟಣದ ಸವಿಾಪಕ್ಕೆ ಸೇರುವೆವು; ಆಗ ಆಗುವದೇನಂದರೆ, ಅವರು ಮುಂಚಿನ ಹಾಗೆಯೇ ನಮಗೆ ವಿರೋಧವಾಗಿ ಪಟ್ಟಣದಿಂದ ಹೊರಟು ಬರುವಾಗ ಅವರ ಮುಂದೆ ನಾವು ಓಡಿ ಹೋಗುವೆವು. ಆಗ ಅವರು--ಮುಂಚಿನ ಹಾಗೆಯೇ ನಮ್ಮ ಮುಂದೆ ಓಡಿ ಹೋಗುತ್ತಾರೆಂದು ಹೇಳಿ (ನಮ್ಮ ಹಿಂದೆ ಹೊರಡುವರು;) ಆದರೆ ನಾವು ಅವರನ್ನು ಪಟ್ಟಣದ ಬಳಿಯಿಂದ ಎಳಕೊಳ್ಳುವ ವರೆಗೂ ಅವರ ಮುಂದೆ ಓಡಿ ಹೋಗುವೆವು. ಆಗ ನೀವು ಹೊಂಚಿಕೊಳ್ಳುವ ಸ್ಥಳದಿಂದ ಎದ್ದು ಬಂದು ಪಟ್ಟಣವನ್ನು ಸ್ವಾಧೀನ ಮಾಡಿಕೊಳ್ಳಬೇಕು; ಯಾಕಂದರೆ ನಿಮ್ಮ ದೇವರಾದ ಕರ್ತನು ಅದನ್ನು ನಿಮ್ಮ ಕೈಗೆ ಒಪ್ಪಿಸಿ ಕೊಡುವನು. ನೀವು ಪಟ್ಟಣವನ್ನು ಹಿಡಿದ ತರುವಾಯ ಬೆಂಕಿ ಹಚ್ಚಿ ಅದನ್ನು ಸುಟ್ಟುಬಿಟ್ಟು ಕರ್ತನ ಆಜ್ಞೆಯ ಪ್ರಕಾರವೇ ನೀವು ಮಾಡಬೇಕು. ನೋಡು, ನಾನು ಇದನ್ನು ನಿಮಗೆ ಆಜ್ಞಾಪಿಸಿದೆನು ಅಂದನು. ಯೆಹೋ ಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿಗೂ ನಡುವೆ ಆಯಿಗೆ ಪಶ್ಚಿಮದ ಕಡೆ ಇಳುಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಇಳುಕೊಂಡನು. ಉದಯ ಕಾಲದಲ್ಲಿ ಯೆಹೋಶುವನು ಎದ್ದು ಜನರನ್ನು ಲೆಕ್ಕ ಮಾಡಿ ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿಗೆ ಏರಿ ಹೋದರು. ಅವನ ಸಂಗಡ ಇದ್ದ ಯುದ್ಧಸ್ಥರೆಲ್ಲಾ ನಡೆದು ಪಟ್ಟಣದ ಸವಿಾಪವಾಗಿ ಬಂದು ಸೇರಿ ಆಯಿಗೆ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಆದರೆ ಆಯಿಗೂ ಅವರಿಗೂ ಮಧ್ಯದಲ್ಲಿ ಒಂದು ತಗ್ಗು ಇತ್ತು. ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆದುಕೊಂಡು ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ ಆಯಿಗೂ ನಡುವೆ ಹೊಂಚಿ ಕೊಳ್ಳುವದಕ್ಕೆ ಅವರನ್ನು ಇಟ್ಟನು. ಪಟ್ಟಣಕ್ಕೆ ಉತ್ತರ ದಲ್ಲಿರುವ ಸಕಲ ಸೈನ್ಯದ ಜನರನ್ನೂ ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಹಾಕುವವರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ತಗ್ಗಿನ ಮಧ್ಯಕ್ಕೆ ಹೋದನು. ಆಯಿಯ ಅರಸನು ಇದನ್ನು ಕಂಡಾಗ ಆ ಪಟ್ಟಣದ ಜನರು ತ್ವರೆಪಟ್ಟು ಉದಯ ಕಾಲದಲ್ಲಿ ಎದ್ದು ನಿಶ್ಚಯಿಸಿದ ವೇಳೆಯಲ್ಲಿ ಅವನೂ ಅವನ ಜನರೆಲ್ಲರೂ ಇಸ್ರಾಯೇಲ್ಯರಿಗೆ ಎದುರಾಗಿ ಯುದ್ಧ ಮಾಡಲು ಬೈಲಿಗೆ ಹೊರಟರು. ಆದರೆ ಅವನು ಪಟ್ಟಣದ ಹಿಂದೆ ತನಗೋಸ್ಕರ ಹೊಂಚಿಕೊಂಡಿರುವ ವರನ್ನು ಅರಿಯದೆ ಇದ್ದನು. ಅವರ ಹಿಂದೆ ಯೆಹೋಶುವನೂ ಇಸ್ರಾಯೇಲ್ಯರೆಲ್ಲರೂ ಬಡಿಯ ಲ್ಪಟ್ಟ ಹಾಗೆ ತೋರಿ ಅರಣ್ಯದ ಮಾರ್ಗವಾಗಿ ಓಡಿ ಹೋದರು. ಆಗ ಪಟ್ಟಣದಲ್ಲಿರುವ ಜನರೆಲ್ಲರೂ ಅವರನ್ನು ಹಿಂದಟ್ಟುವದಕ್ಕೆ ಕರೆಯಲ್ಪಟ್ಟರು; ಯೆಹೋಶುವನನ್ನು ಹಿಂದಟ್ಟುವವರಾಗಿ ಆ ಪಟ್ಟಣದ ಬಳಿಯಿಂದ ದೂರ ಸೆಳೆಯಲ್ಪಟ್ಟು ಹೋದರು. ಆಯಿಯಲ್ಲಿಯೂ ಬೇತೇಲಿನಲ್ಲಿಯೂ ಇಸ್ರಾಯೇ ಲಿನ ಹಿಂದೆ ಹೊರಟು ಹೋಗದ ಮನುಷ್ಯನು ಒಬ್ಬನೂ ಇಲ್ಲ. ಪಟ್ಟಣವನ್ನು ತೆರೆದಿಟ್ಟು ಹೋಗಿ ಇಸ್ರಾಯೇಲ್ಯರನ್ನು ಹಿಂದಟ್ಟಿದರು. ಆಗ ಕರ್ತನು ಯೆಹೋಶುವನಿಗೆ--ನಿನ್ನ ಕೈಯಲ್ಲಿರುವ ಈಟಿಯನ್ನು ಆಯಿಗೆ ಸರಿಯಾಗಿ ಚಾಚು; ಯಾಕಂದರೆ ಅದನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಅಂದನು. ಹಾಗೆಯೇ ಅವನು ತನ್ನ ಕೈಯಲ್ಲಿರುವ ಈಟಿಯನ್ನು ಪಟ್ಟಣಕ್ಕೆ ಎದುರಾಗಿ ಚಾಚಿದನು. ಆಗ ಹೊಂಚಿಕೊಂಡಿ ದ್ದವರು ತ್ವರೆಯಾಗಿ ತಮ್ಮ ಸ್ಥಳದಿಂದ ಎದ್ದು ಅವನು ತನ್ನ ಕೈಯನ್ನು ಚಾಚುತ್ತಲೇ ಪಟ್ಟಣಕ್ಕೆ ಬಂದು ಅದನ್ನು ಹಿಡಿದು ತ್ವರೆಯಾಗಿ ಬೆಂಕಿಯನ್ನು ಹಚ್ಚಿದರು. ಆಯಿಯ ಮನುಷ್ಯರು ಹಿಂದಕ್ಕೆ ತಿರಿಗಿ ನೋಡಿದಾಗ ಇಗೋ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳು ವದನ್ನು ಕಂಡರು; ಆಗ ಈ ಮಾರ್ಗವಾದರೂ ಆ ಮಾರ್ಗವಾದರೂ ಓಡಿಹೋಗಲು ಅವರಿಗೆ ತ್ರಾಣ ವಿಲ್ಲದೆ ಹೋಯಿತು. ಆಗ ಅರಣ್ಯಕ್ಕೆ ಓಡಿ ಹೋದ ಜನರು ಹಿಂದಟ್ಟಿದವರ ಕಡೆಗೆ ತಿರುಗಿದರು. ಹೊಂಚಿ ಕೊಂಡ ಜನರು ಪಟ್ಟಣವನ್ನು ಹಿಡಿದದ್ದನ್ನೂ ಪಟ್ಟಣದ ಹೊಗೆ ಏಳುವದನ್ನೂ ಯೆಹೋಶುವನೂ ಇಸ್ರಾಯೇ ಲ್ಯರೆಲ್ಲರೂ ನೋಡುವಾಗ ತಿರುಗಿಕೊಂಡು ಆಯಿಯ ಮನುಷ್ಯರನ್ನು ಹೊಡೆದುಬಿಟ್ಟರು. ಅವರು ಪಟ್ಟಣ ದೊಳಗಿಂದ ಇವರಿಗೆ ಎದುರಾಗಿ ಬಂದ ಕಾರಣ ಅವರು ಈ ಕಡೆ ಆ ಕಡೆ ಇರುವ ಇಸ್ರಾಯೇಲ್ಯರ ಮಧ್ಯದಲ್ಲಿ ಸಿಕ್ಕಿದರು. ಆದದರಿಂದ ಅವರಲ್ಲಿ ಒಬ್ಬರೂ ತಪ್ಪಿಸಿಕೊಂಡು ಹೋಗದ ಹಾಗೆಯೂ ಜೀವದಲ್ಲಿ ಉಳಿಯದ ಹಾಗೆಯೂ ಅವರನ್ನು ಹೊಡೆದರು. ಆಯಿಯ ಅರಸನನ್ನು ಜೀವಿತನಾಗಿ ಹಿಡಿದು ಯೆಹೋಶುವನ ಬಳಿಗೆ ತಂದರು. ಇಸ್ರಾಯೇಲ್ಯರು ಅರಣ್ಯದಲ್ಲಿ ಓಡಿಸಿದ ಆಯಿಯ ನಿವಾಸಿಗಳೆಲ್ಲರನ್ನು ಕತ್ತಿಯ ಬಾಯಿಂದ ಅವರೆಲ್ಲರು ಬಿದ್ದು ಮುಗಿಯುವ ವರೆಗೂ ಬೈಲಿನಲ್ಲಿ ಸಂಹರಿಸಿ ತೀರಿದ ತರುವಾಯ ಇಸ್ರಾಯೇಲ್ಯರೆಲ್ಲರೂ ಆಯಿಗೆ ತಿರುಗಿ ಅದನ್ನು ಕತ್ತಿಯ ಬಾಯಿಂದ ಹೊಡೆದರು. ಆ ದಿನದಲ್ಲಿ ಬಿದ್ದ ಸ್ತ್ರೀ ಪುರುಷರಾದ ಆಯಿಯ ಮನುಷ್ಯರೆಲ್ಲರು ಹನ್ನೆರಡು ಸಾವಿರ ಜನರು. ಯೆಹೋಶುವನು ಆಯಿಯ ನಿವಾಸಿಗಳೆಲ್ಲರನ್ನು ಸಂಪೂರ್ಣ ನಾಶಮಾಡುವ ವರೆಗೂ ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ. ಆದರೆ ಕರ್ತನು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇ ಲ್ಯರು ಆ ಪಟ್ಟಣದ ಪಶುಗಳನ್ನೂ ಕೊಳ್ಳೆಯನ್ನೂ ತಮಗೋಸ್ಕರ ಸುಲುಕೊಂಡರು. ಯೆಹೋಶುವನು ಆಯಿಯನ್ನು ಸುಟ್ಟುಬಿಟ್ಟು ಅದನ್ನು ಈ ವರೆಗೆ ಇರುವ ಹಾಗೆ ಎಂದಿಗೂ ಹಾಳಾಗಿ ಬಿದ್ದಿರುವ ಮಣ್ಣುದಿನ್ನೆ ಯನ್ನಾಗಿ ಮಾಡಿದನು. ಆಯಿಯ ಅರಸನನ್ನು ಸಾಯಂಕಾಲದ ವರೆಗೂ ಒಂದು ಮರದಲ್ಲಿ ತೂಗ ಹಾಕಿಸಿದನು. ಸೂರ್ಯ ಅಸ್ತಮಿಸುವಾಗ ಯೆಹೋಶು ವನು ಅವನ ಹೆಣವನ್ನು ಮರದಿಂದ ಇಳಿಸಿ ಅದನ್ನು ಆ ಪಟ್ಟಣದ ಬಾಗಲಿನ ದ್ವಾರದಲ್ಲಿ ಹಾಕಲು ಆಜ್ಞಾಪಿಸಿದನು. ಆಗ ಅವರು ಹಾಗೆಯೇ ಮಾಡಿ ಈ ವರೆಗೆ ಇರುವ ದೊಡ್ಡ ಕಲ್ಲು ಕುಪ್ಪೆಯನ್ನು ಅದರ ಮೇಲೆ ಹಾಕಿದರು.
- 2 Samuel 10:6–19 2 ಸಮುವೇಲನು 10:6–19ಅಮ್ಮೋನನ ಮಕ್ಕಳು ತಾವು ದಾವೀದನಿಗೆ ಅಸಹ್ಯ ವಾದೆವೆಂದು ತಿಳುಕೊಂಡಾಗ ಅವರು (ದೂತರನ್ನು) ಕಳುಹಿಸಿ ಬೇತ್ರೆಹೋಬ್ನಲ್ಲಿಯೂ ಚೋಬಾದ ಲ್ಲಿಯೂ ಇರುವ ಇಪ್ತತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ ಅರಸನಾದ ಮಾಕನ ಬಳಿಯಿಂದ ಸಾವಿರ ಜನರನ್ನೂ ಇಷ್ಟೋಬ್ನಿಂದ ಹನ್ನೆರಡು ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು. ದಾವೀದನು ಅದನ್ನು ಕೇಳಿದಾಗ ಅವನು ಯೋವಾಬನನ್ನೂ ಪರಾ ಕ್ರಮಶಾಲಿಗಳಾದ ಸಕಲ ಶೂರಸೈನಿಕರನ್ನು ಕಳುಹಿ ಸಿದನು. ಆಗ ಅಮ್ಮೋನನ ಮಕ್ಕಳು ಹೊರಟು ಪಟ್ಟಣದ ಬಾಗಲ ಮುಂದೆ ವ್ಯೂಹಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬ್ನಿಂದಲೂ ಇಷ್ಟೋಬ್ ನಿಂದಲೂ ಮಾಕನಿಂದಲೂ ಬಂದ ಅರಾಮ್ಯರು ಹೊರಗೆ ಬೈಲಿನಲ್ಲಿ ಬೇರೆ ಇಳಿದಿದ್ದರು. ಯೋವಾಬನು ಯುದ್ಧದ ಮುಖವು ಹಿಂದೆ ಮುಂದೆ ತನಗೆ ಎದುರಾ ಗಿರುವದನ್ನು ನೋಡಿದಾಗ ಅವನು ಇಸ್ರಾಯೇಲಿನ ಆಯಲ್ಪಟ್ಟ ಎಲ್ಲಾ ಜನರನ್ನು ಆದುಕೊಂಡು ಅರಾಮ್ಯ ರಿಗೆ ಎದುರಾಗಿ ವ್ಯೂಹಕಟ್ಟಿದನು. ಆದರೆ ಮಿಕ್ಕಾದ ವರು ಅಮ್ಮೋನನ ಮಕ್ಕಳಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬೀಷೈಯ ಕೈಯಲ್ಲಿ ಒಪ್ಪಿಸಿಕೊಟ್ಟು-- ಅರಾಮ್ಯರು ನನಗಿಂತ ಬಲವುಳ್ಳವರಾದರೆ ನೀನು ನನಗೆ ಸಹಾಯ ಕೊಡ ಬೇಕು; ಅಮ್ಮೋನನ ಮಕ್ಕಳು ನಿನಗಿಂತ ಬಲವುಳ್ಳವ ರಾದರೆ ನಾನು ಬಂದು ನಿನಗೆ ಸಹಾಯ ಮಾಡುವೆನು. ಬಲವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲಗೊ ಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು. ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡುವದಕ್ಕೆ ಸವಿಾಪಕ್ಕೆ ಬಂದರು. ಅವರು ಅವನ ಎದುರಿನಿಂದ ಓಡಿಹೋದರು. ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನನ ಮಕ್ಕಳು ನೋಡಿದಾಗ ಅವರು ಅಬೀಷೈಯ ಎದುರಿನಿಂದ ಓಡಿ ಪಟ್ಟಣ ದೊಳಗೆ ಹೊಕ್ಕರು. ಆಗ ಯೋವಾಬನು ಅಮ್ಮೊನನ ಮಕ್ಕಳನ್ನು ಬಿಟ್ಟು ತಿರುಗಿ ಯೆರೂಸಲೇಮಿಗೆ ಬಂದನು. ಅರಾಮ್ಯರು ತಾವು ಇಸ್ರಾಯೇಲ್ಯರ ಮುಂದೆ ಹೊಡೆಯಲ್ಪಟ್ಟದ್ದನ್ನು ಕಂಡಾಗ ಅವರು ಒಟ್ಟಾಗಿ ಕೂಡಿದರು. ಇದಲ್ಲದೆ ಹದದೆಜೆರನು ನದಿಗೆ ಆಚೆ ಇದ್ದ ಅರಾಮ್ಯರನ್ನು ಕರೇಕಳುಹಿಸಿದ್ದರಿಂದ ಅವರು ಹೇಲಾಮಿಗೆ ಬಂದರು; ಹದದೆಜೆರನ ಸೈನ್ಯಕ್ಕೆ ಅಧಿ ಪತಿಯಾದ ಶೋಬಕನು ಅವರ ಮುಂದೆ ನಡೆದನು. ಅದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಇಸ್ರಾ ಯೇಲ್ಯರೆಲ್ಲರನ್ನು ಕೂಡಿಸಿಕೊಂಡು ಯೊರ್ದನನ್ನು ದಾಟಿ ಹೇಲಾಮಿಗೆ ಬಂದನು. ಅರಾಮ್ಯರು ದಾವೀದ ನಿಗೆದುರಾಗಿ ವ್ಯೂಹಕಟ್ಟಿ ಯುದ್ಧಮಾಡಿದರು. ಆಗ ಅರಾಮ್ಯರು ಇಸ್ರಾಯೇಲ್ಯರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ಮಂದಿ ಸಾರಥಿಗಳನ್ನೂ ನಾಲ್ವತ್ತು ಸಾವಿರ ಕುದುರೆ ರಾಹುತ ರನ್ನೂ ಕೊಂದು ಅವರ ಸೈನ್ಯದ ಯಜಮಾನನಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಸತ್ತನು.ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು. ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.