Ecclesiastes · chapter 8 · verse 3
Ecclesiastes 8:3 in Kannada
ಅವನ ದೃಷ್ಟಿಯಿಂದ ಹೊರಗೆ ಹೋಗುವದಕ್ಕೆ ಆತುರಪಡಬೇಡಿರಿ; ಕೆಟ್ಟ ಕಾರ್ಯದಲ್ಲಿ ನಿಲ್ಲಬೇಡಿರಿ; ಅವನು ತನಗೆ ಇಷ್ಟ ಬಂದದ್ದನ್ನೆಲ್ಲಾ ಮಾಡುತ್ತಾನೆ.
Avana drushtiyinda horage hoguvadakke aaturapadabediri; ketta kaaryadalli nillabediri; avanu tanage ishta bandaddannellaa maaduttaane.
Ecclesiastes 8:3 in English
- King James Version (KJV)
- Be not hasty to go out of his sight: stand not in an evil thing; for he doeth whatsoever pleaseth him.
- World English Bible (WEB)
- Don’t be hasty to go out of his presence. Don’t persist in an evil thing, for he does whatever pleases him,
- American Standard Version (ASV)
- Be not hasty to go out of his presence; persist not in an evil thing: for he doeth whatsoever pleaseth him.
- Bible in Basic English (BBE)
- Be not quick to go from before him. Be not fixed in an evil design, because he does whatever is pleasing to him.
- Darby Translation (DBY)
- Be not hasty to go out of his sight; persist not in an evil thing: for he doeth whatever pleaseth him,
- Webster's Bible (WBS)
- Be not hasty to go out of his sight: stand not in an evil thing; for he doeth whatever pleaseth him.
- Young's Literal Translation (YLT)
- Be not troubled at his presence, thou mayest go, stand not in an evil thing, for all that he pleaseth he doth.
Read in context
- 1ಜ್ಞಾನಿಯ ಹಾಗೆ ಇರುವವನು ಯಾರು? ಈ ಸಂಗತಿಯ ಅರ್ಥವನ್ನು ಬಲ್ಲವನು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖ ವನ್ನು ಬೆಳಗಿಸುತ್ತದೆ, ಅವನ ಧೈರ್ಯದ ಮುಖವು ಬದಲಾಗುವದು.
- 2ನಾನು ನಿಮಗೆ--ದೇವರ ಮೇಲೆ ಆಣೆಯಿಟ್ಟು ಅರಸನ ಆಜ್ಞೆಯನ್ನು ಕೈಕೊಳ್ಳಿರಿ ಎಂದು ಆಲೋಚನೆ ಹೇಳಿಕೊಡುತ್ತೇನೆ.
- 3ಅವನ ದೃಷ್ಟಿಯಿಂದ ಹೊರಗೆ ಹೋಗುವದಕ್ಕೆ ಆತುರಪಡಬೇಡಿರಿ; ಕೆಟ್ಟ ಕಾರ್ಯದಲ್ಲಿ ನಿಲ್ಲಬೇಡಿರಿ; ಅವನು ತನಗೆ ಇಷ್ಟ ಬಂದದ್ದನ್ನೆಲ್ಲಾ ಮಾಡುತ್ತಾನೆ.
- 4ಅರಸನ ಮಾತು ಎಲ್ಲಿ ದೆಯೋ ಅಲ್ಲಿ ಶಕ್ತಿ ಇದೆ; ನೀನು ಏನು ಮಾಡು ತ್ತಿರುವೆ ಎಂದು ಅವನಿಗೆ ಹೇಳುವವನಾರು?
- 5ಆಜ್ಞೆ ಯನ್ನು ಕೈಕೊಳ್ಳುವವನು ಯಾವನೂ ಕೆಟ್ಟದ್ದನ್ನು ಅನು ಭವಿಸನು: ಜ್ಞಾನಿಯ ಹೃದಯವು ಕಾಲ ನ್ಯಾಯ ಎರಡನ್ನೂ ತಿಳಿದುಕೊಳ್ಳುತ್ತದೆ.
Cross references
- Ecclesiastes 10:4 ಪ್ರಸಂಗಿ 10:4ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- Daniel 5:19 ದಾನಿಯೇಲನು 5:19ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು.
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- Acts 5:8–9 ಅಪೊಸ್ತಲರ ಕೃತ್ಯಗಳು 5:8–9ಆಗ ಪೇತ್ರನು ಆಕೆಗೆ--ನೀವು ಆ ಹೊಲವನ್ನು ಇಷ್ಟೇ ಹಣಕ್ಕೆ ಮಾರಿದಿರೋ? ನನಗೆ ಹೇಳು ಎಂದು ಕೇಳಿದನು. ಅದಕ್ಕೆ ಆಕೆಯು--ಹೌದು, ಅಷ್ಟಕ್ಕೇ ಅಂದಳು. ಆಗ ಪೇತ್ರನು ಆಕೆಗೆ--ಕರ್ತನ ಆತ್ಮನನ್ನು ಶೋಧಿಸುವದಕ್ಕಾಗಿ ನೀವು ಹೇಗೆ ಒಟ್ಟಾಗಿ ಸಮ್ಮತಿಸಿ ದ್ದೀರಿ? ಇಗೋ, ನಿನ್ನ ಗಂಡನನ್ನು ಹೂಣಿಟ್ಟವರ ಪಾದಗಳು ಬಾಗಿಲಲ್ಲಿ ಇವೆ, ಅವರು ನಿನ್ನನ್ನೂ ಹೊತ್ತು ಕೊಂಡು ಹೋಗುವರು ಅಂದನು.
- Proverbs 14:29 ಜ್ಞಾನೋಕ್ತಿಗಳು 14:29ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು.
- 1 Kings 2:21–24 1 ಅರಸುಗಳು 2:21–24ಅದಕ್ಕವಳು--ಶೂನೇಮ್ಯಳಾದ ಅಬೀಷ ಗೈಳನ್ನು ನಿನ್ನ ಸಹೋದರನಾದ ಅದೋನೀಯನಿಗೆ ಹೆಂಡತಿಯಾಗಿ ಕೊಡಲ್ಪಡಲಿ ಅಂದಳು. ಅರಸನಾದ ಸೊಲೊಮೋನನು ತನ್ನ ತಾಯಿಗೆ ಪ್ರತ್ಯುತ್ತರವಾಗಿಅದೋನೀಯನಿಗೋಸ್ಕರ ಶೂನೇಮ್ಯಳಾದ ಅಬೀಷ ಗೈಳನ್ನು ನೀನು ಕೇಳುವದೇನು? ಅವನಿಗೋಸ್ಕರ ರಾಜ್ಯ ವನ್ನು ಕೇಳು, ಅವನು ನನ್ನ ಅಣ್ಣ. ಅವನಿಗೋಸ್ಕರವೂ ಯಾಜಕನಾದ ಎಬ್ಯಾತಾರನಿಗೋಸ್ಕರವೂ ಚೆರೂ ಯಳ ಮಗನಾದ ಯೋವಾಬನಿಗೋಸ್ಕರವೂ ಕೇಳು ಅಂದನು. ಅರಸನಾದ ಸೊಲೊಮೋನನು--ಅದೋನೀಯನು ಈ ಮಾತನ್ನು ತನ್ನ ಪ್ರಾಣಕ್ಕೆ ವಿರೋಧವಾಗಿ ಹೇಳದೆ ಇದ್ದರೆ ದೇವರು ನನಗೆ ಹಾಗೆಯೂ ಅದಕ್ಕಿಂತ ಅಧಿಕವಾಗಿಯೂ ಮಾಡ ಲೆಂದು ಕರ್ತನ ಹೆಸರಿನಲ್ಲಿ ಆಣೆ ಇಟ್ಟನು. ಹಾಗಾ ದರೆ ನನ್ನನ್ನು ಸ್ಥಿರಪಡಿಸಿ ನನ್ನ ತಂದೆಯಾದ ದಾವೀದನ ಸಿಂಹಾಸನದ ಮೇಲೆ ನನ್ನನ್ನು ಕೂಡ್ರಿಸಿ ತಾನು ಮಾತು ಕೊಟ್ಟ ಪ್ರಕಾರ ನನಗೆ ಮನೆಯನ್ನು ಕಟ್ಟಿಸಿದ ಕರ್ತನ ಜೀವದಾಣೆ, ಈ ಹೊತ್ತು ಅದೋನೀಯನು ಸಾಯು ವನು ಅಂದನು.
- Jeremiah 44:16–17 ಯೆರೆಮೀಯ 44:16–17ನೀನು ಕರ್ತನ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ ಮಾತಿನ ವಿಷಯದಲ್ಲಿ ನಾವು ನಿನ್ನನ್ನು ಕೇಳುವದಿಲ್ಲ. ಆದರೆ ಸ್ವಂತ ಬಾಯಿಂದ ಹೊರಡು ವವೆಲ್ಲವನ್ನೂ ಖಂಡಿತವಾಗಿ ಮಾಡುತ್ತೇವೆ; ಗಗನದ ಒಡತಿಗೆ ಧೂಪ ಸುಡುತ್ತೇವೆ. ಪಾನದರ್ಪಣೆಗಳನ್ನು ಅವಳಿಗೆ ಹೊಯ್ಯುತ್ತೇವೆ, ನಮ್ಮ ತಂದೆಗಳೂ ನಮ್ಮ ಅರಸರೂ ನಮ್ಮ ಪ್ರಧಾನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಮಾಡಿದ ಪ್ರಕಾರವೇ ನಾವೂ ಮಾಡುವೆವು; ಆಗ ಆಹಾರದಿಂದ ಚೆನ್ನಾಗಿದ್ದೆವು, ಕೇಡು ನೋಡಲಿಲ್ಲ.
- 1 Kings 1:50–52 1 ಅರಸುಗಳು 1:50–52ಆದರೆ ಅದೋನೀಯನು ಸೊಲೊಮೋನನಿಗೆ ಭಯಪಟ್ಟದ್ದರಿಂದ ಎದ್ದು ಹೋಗಿ ಬಲಿಪೀಠದ ಕೊಂಬುಗಳನ್ನು ಹಿಡುಕೊಂಡನು. ಆಗ ಒಬ್ಬನು ಅರಸನಾದ ಸೊಲೊಮೋನನಿಗೆ--ಇಗೋ, ಅದೋ ನೀಯನು ನಿನಗೆ ಭಯಪಡುತ್ತಾನೆ; ಯಾಕಂದರೆ ಇಗೋ, ಅವನು ಬಲಿಪೀಠದ ಕೊಂಬುಗಳನ್ನು ಹಿಡಿದು --ಅರಸನಾದ ಸೊಲೊಮೋನನು ಕತ್ತಿಯಿಂದ ತನ್ನ ಸೇವಕನನ್ನು ಕೊಲ್ಲುವದಿಲ್ಲವೆಂದು ಈ ಹೊತ್ತು ನನಗೆ ಆಣೆ ಇಡಲಿ ಎಂದು ಹೇಳಿದನು. ಅದಕ್ಕೆ ಸೊಲೊ ಮೋನನು--ಅವನು ಉತ್ತಮನಾಗಿದ್ದರೆ ಅವನ ಕೂದಲಲ್ಲಿ ಒಂದಾದರೂ ನೆಲಕ್ಕೆ ಬೀಳದು; ಆದರೆ ಅವನಲ್ಲಿ ಕೆಟ್ಟತನವು ಸಿಕ್ಕಿದರೆ ಅವನು ಸಾಯುವನು ಅಂದನು.ಅರಸನಾದ ಸೊಲೊಮೋನನು ಅವ ನನ್ನು ಕರೆಸಿದಾಗ ಬಲಿಪೀಠದ ಬಳಿಯಿಂದ ಅವ ನನ್ನು ಕರಕೊಂಡು ಬಂದರು. ಆಗ ಅವನು ಬಂದು ಅರಸನಾದ ಸೊಲೊಮೋನನಿಗೆ ಅಡ್ಡ ಬಿದ್ದನು. ಸೊಲೊಮೋನನು ಅವನಿಗೆ--ನಿನ್ನ ಮನೆಗೆ ಹೋಗು ಅಂದನು.
- Proverbs 30:31 ಜ್ಞಾನೋಕ್ತಿಗಳು 30:31ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು.
- Proverbs 16:14–15 ಜ್ಞಾನೋಕ್ತಿಗಳು 16:14–15ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು. ಅರಸನ ಮುಖದ ಬೆಳಕಿನಲ್ಲಿ ಜೀವ; ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.
- Isaiah 48:4 ಯೆಶಾಯ 48:4ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ.