Exodus · chapter 11 · verse 4
Exodus 11:4 in Kannada
ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು.
Aaga mosheyu pharohanige--kartanu heege heluttaane--sumaaru madhyaraatriyalli naanu aiguptada madhyadalli haadu hoguvenu.
Exodus 11:4 in English
- King James Version (KJV)
- And Moses said, Thus saith the LORD, About midnight will I go out into the midst of Egypt:
- World English Bible (WEB)
- Moses said, “This is what the LORD says: ‘About midnight I will go out into the middle of Egypt,
- American Standard Version (ASV)
- And Moses said, Thus saith Jehovah, About midnight will I go out into the midst of Egypt:
- Bible in Basic English (BBE)
- And Moses said, This is what the Lord says: About the middle of the night I will go out through Egypt:
- Darby Translation (DBY)
- And Moses said, Thus saith Jehovah: About midnight I will go out into the midst of Egypt.
- Webster's Bible (WBS)
- And Moses said, Thus saith the LORD, About midnight will I go out into the midst of Egypt:
- Young's Literal Translation (YLT)
- And Moses saith, 'Thus said Jehovah, About midnight I am going out into the midst of Egypt,
Read in context
- 2ಪ್ರತಿಯೊಬ್ಬನು ತನ್ನ ನೆರೆಯವ ನಿಂದಲೂ ಪ್ರತಿ ಸ್ತ್ರೀಯು ತನ್ನ ನೆರೆಯವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನು ಕೊಡುವ ಹಾಗೆ ಕೇಳಿಕೊಳ್ಳಬೇಕು.
- 3ಇದಲ್ಲದೆ ಕರ್ತನು ಐಗುಪ್ತ್ಯರ ದೃಷ್ಟಿಯಲ್ಲಿ ಜನರಿಗೆ ದಯೆದೊರಕುವಂತೆ ಮಾಡಿದನು. ಆ ಮನುಷ್ಯನಾದ ಮೋಶೆಯು ಐಗುಪ್ತದೇಶದಲ್ಲಿಯೂ ಫರೋಹನ ಸೇವಕರ ದೃಷ್ಟಿಯಲ್ಲಿಯೂ ಜನರ ದೃಷ್ಟಿಯಲ್ಲಿಯೂ ಬಹು ದೊಡ್ಡವನಾಗಿದ್ದನು.
- 4ಆಗ ಮೋಶೆಯು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ--ಸುಮಾರು ಮಧ್ಯರಾತ್ರಿಯಲ್ಲಿ ನಾನು ಐಗುಪ್ತದ ಮಧ್ಯದಲ್ಲಿ ಹಾದು ಹೋಗುವೆನು.
- 5ಆಗ ಐಗುಪ್ತದೇಶದ ಚೊಚ್ಚಲ ಮಕ್ಕಳು ಅಂದರೆ ಸಿಂಹಾ ಸನದ ಮೇಲೆ ಕೂತಿರುವ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುವ ಕಲ್ಲಿನ ಹಿಂದೆ ಇರುವ ದಾಸಿಯ ಚೊಚ್ಚಲ ಮಗನ ವರೆಗೆ ಮತ್ತು ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವು ಸಾಯುವವು.
- 6ಐಗುಪ್ತದೇಶದಲ್ಲೆಲ್ಲಾ ದೊಡ್ಡ ಗೋಳಾಟವಿರುವದು. ಇಂಥದ್ದು ಹಿಂದೆಯೂ ಇರಲಿಲ್ಲ, ಇನ್ನು ಮುಂದೆಯೂ ಇರುವದಿಲ್ಲ.
Cross references
- Exodus 12:29 ವಿಮೋಚನಕಾಂಡ 12:29ಮಧ್ಯರಾತ್ರಿಯಲ್ಲಿ ನಡೆದದ್ದೇನಂದರೆ, ಸಿಂಹಾ ಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನ ವರೆಗೂ ಅಂದರೆ ಐಗುಪ್ತದೇಶ ದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಕರ್ತನು ಸಂಹರಿಸಿದನು.
- Exodus 12:12 ವಿಮೋಚನಕಾಂಡ 12:12ನಾನು ಈ ರಾತ್ರಿ ಐಗುಪ್ತದೇಶದಲ್ಲಿ ಹಾದುಹೋಗುತ್ತೇನೆ. ಐಗುಪ್ತದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಇರುವ ಚೊಚ್ಚ ಲಾದವುಗಳನ್ನು ಸಂಹರಿಸುವೆನು. ಐಗುಪ್ತದ ದೇವರುಗ ಳಿಗೆಲ್ಲಾ ನಾನು ನ್ಯಾಯತೀರಿಸುವೆನು; ನಾನೇ ಕರ್ತನು.
- Job 34:20 ಯೋಬನು 34:20ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.
- Psalm 60:10 ಕೀರ್ತನೆಗಳು 60:10ಓ ದೇವರೇ, ನಮ್ಮನ್ನು ತಳ್ಳಿಬಿಟ್ಟು ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನ ಲ್ಲವೋ?
- Amos 4:10 ಆಮೋಸ 4:10ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 2 Samuel 5:24 2 ಸಮುವೇಲನು 5:24ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
- Exodus 12:23 ವಿಮೋಚನಕಾಂಡ 12:23ಕರ್ತನು ಐಗುಪ್ತ್ಯರನ್ನು ಸಂಹರಿ ಸುವದಕ್ಕಾಗಿ ಹಾದುಹೋಗುವನು; ಆತನು ಮೇಲಿನ ಅಡ್ಡಗಂಬದ ಮೇಲೂ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡ ದಂತೆ ನಿಮ್ಮ ಬಾಗಿಲುಗಳನ್ನು ದಾಟಿ ಹೋಗುವನು.
- Amos 5:17 ಆಮೋಸ 5:17ಎಲ್ಲಾ ದ್ರಾಕ್ಷೇತೋಟಗಳಲ್ಲೂ ಗೋಳಾಟವಿರು ವದು; ಯಾಕಂದರೆ ನಾನು ನಿನ್ನ ಮಧ್ಯೆ ಹಾದುಹೋಗು ವೆನೆಂದು ಕರ್ತನು ಹೇಳುತ್ತಾನೆ.
- Matthew 25:6 ಮತ್ತಾಯನು 25:6ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು.
- Isaiah 42:13 ಯೆಶಾಯ 42:13ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು.
- Micah 2:13 ಮೀಕ 2:13ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.