Job · chapter 34 · verse 20
Job 34:20 in Kannada
ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.
Avaru kshanamaatradalli saayuttaare; madhya raatriyalli janaru kalavalagondu gatisi hoguttaare; paraakramigalu kai sokade tegeyalpaduttaare.
Job 34:20 in English
- King James Version (KJV)
- In a moment shall they die, and the people shall be troubled at midnight, and pass away: and the mighty shall be taken away without hand.
- World English Bible (WEB)
- In a moment they die, even at midnight. The people are shaken and pass away. The mighty are taken away without a hand.
- American Standard Version (ASV)
- In a moment they die, even at midnight; The people are shaken and pass away, And the mighty are taken away without hand.
- Bible in Basic English (BBE)
- Suddenly they come to an end, even in the middle of the night: the blow comes on the men of wealth, and they are gone, and the strong are taken away without the hand of man.
- Darby Translation (DBY)
- In a moment they die, even at midnight the people are convulsed and pass away; and the strong are taken away without hand.
- Webster's Bible (WBS)
- In a moment they shall die, and the people shall be troubled at midnight, and pass away: and the mighty shall be taken away without hand.
- Young's Literal Translation (YLT)
- [In] a moment they die, and at midnight Shake do people, and they pass away, And they remove the mighty without hand.
Read in context
- 18ಅರಸನಿಗೆ ದುಷ್ಟನೆಂದೂ ಪ್ರಧಾನರಿಗೆ ಬಲಹೀನರೆಂದೂ ಹೇಳುವದುಂಟೋ?
- 19ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.
- 20ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.
- 21ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.
- 22ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.
Cross references
- Psalm 73:19 ಕೀರ್ತನೆಗಳು 73:19ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ.
- 1 Samuel 26:10 1 ಸಮುವೇಲನು 26:10ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
- Job 12:19 ಯೋಬನು 12:19ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ.
- 1 Samuel 25:37–39 1 ಸಮುವೇಲನು 25:37–39ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು. ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು. ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು.
- 1 Thessalonians 5:2 1 ಥೆಸಲೊನೀಕದವರಿಗೆ 5:2ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.
- Daniel 5:30 ದಾನಿಯೇಲನು 5:30ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
- Acts 12:23 ಅಪೊಸ್ತಲರ ಕೃತ್ಯಗಳು 12:23ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- Daniel 2:34 ದಾನಿಯೇಲನು 2:34ನೀನು ನೋಡುತ್ತಿರಲಾಗಿ, ಒಂದು ಕಲ್ಲು ಕೈಗಳ ಸಹಾಯವಿಲ್ಲದೆ ಒಡೆಯಲ್ಪಟ್ಟು ಅರ್ಧ ಕಬ್ಬಿ ಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದ ಗಳನ್ನು ಬಡಿದು ಅವುಗಳನ್ನು ಚೂರುಚೂರು ಮಾಡಿತು.
- Luke 17:26–29 ಲೂಕನು 17:26–29ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.
- Job 36:20 ಯೋಬನು 36:20ಜನಗಳು ತಮ್ಮ ಸ್ಥಳದಲ್ಲಿ ಒಡೆಯಲ್ಪಡುವ ರಾತ್ರಿಯನ್ನು ಬಯಸಬೇಡ.
- Isaiah 30:13 ಯೆಶಾಯ 30:13ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲತ್ಕಾರ, ಕುಯುಕ್ತಿಗಳನ್ನು ನಂಬಿ ಅವುಗಳನ್ನೇ ಆಧಾರಮಾಡಿಕೊಂಡದ್ದರಿಂದ ಎತ್ತರ ವಾದ ಗೋಡೆಯ ಒಂದು ಭಾಗವು ಉಬ್ಬಿಕೊಂಡು ತಟ್ಟನೆ ಕ್ಷಣಮಾತ್ರದಲ್ಲಿ ಕಳಚಿಬೀಳುವ ಹಾಗೆ ನಿಮ್ಮ ಅಪರಾಧವು ನಿಮಗೆ ಅಪಾಯಕರವಾಗಿರುವದು.
- Isaiah 30:30–33 ಯೆಶಾಯ 30:30–33ಆಗ ಕರ್ತನು ತನ್ನ ಗಂಭೀರವಾದ ಸ್ವರವನ್ನು ಕೇಳಮಾಡಿ ತೀವ್ರ ಕೋಪ, ಕಬಳಿಸುವ ಅಗ್ನಿಜ್ವಾಲೆ, ಪ್ರಳಯ, ಬಿರುಗಾಳಿ, ಕಲ್ಮಳೆ ಇವುಗಳಿಂದ ತನ್ನ ಶಿಕ್ಷಾಹಸ್ತವನ್ನು ತೋರ್ಪಡಿ ಸುವನು. ಕರ್ತನು ದಂಡದಿಂದ ದಂಡಿಸುವಾಗ ಅಶ್ಶೂರ್ಯವು ಆತನ ಸ್ವರದಿಂದಲೇ ಮುರಿದುಹೋಗು ವದು. ಕರ್ತನು ಅದರ ಮೇಲೆ ತರುವದಕ್ಕೆ ನೇಮಿ ಸಿದ ದಂಡವು ಹಾದುಹೋಗುವಲ್ಲೆಲ್ಲಾ ಅದು ದಮ್ಮಡಿ ಕಿನ್ನರಿಗಳ ಸಂಗಡ ಇರುವದು; ಆತನು ಗದ್ದಲವುಳ್ಳ ಯುದ್ಧಗಳಲ್ಲಿ ಅದರ ಸಂಗಡ ಯುದ್ಧಮಾಡುವನು.ಪೂರ್ವದಿಂದ (ಪುರಾತನದಿಂದ) ತೋಫೆತ್ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು. ಪೂರ್ವದಿಂದ (ಪುರಾತನದಿಂದ) ತೋಫೆತ್ ಸಿದ್ಧ ವಾಗಿದೆ; ಹೌದು, ಯಾಕಂದರೆ ಅದು ಆಳವಾಗಿಯೂ ಅಗಲವಾಗಿಯೂ ಅರಸನಿಗೆ ಸಿದ್ಧವಾಗಿದೆ. ಅದರ ಅಗ್ನಿಕುಂಡವು ಬೆಂಕಿಯೂ ಬಹಳ ಕಟ್ಟಿಗೆಯೂ ಉಳ್ಳದ್ದು; ಕರ್ತನ ಶ್ವಾಸವು ಗಂಧಕದ ಪ್ರವಾಹದಂತೆ ಅದನ್ನು ಉರಿಸುವದು.