Exodus · chapter 13 · verse 2
Exodus 13:2 in Kannada
ಇಸ್ರಾಯೇಲ್ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.
Israayel makkalalli gandasaralliyoo pashugalalliyoo garbha tereyuva chochchalaadaddannellaa nanagaagi parishuddha maadu; adu nannade andanu.
Exodus 13:2 in English
- King James Version (KJV)
- Sanctify unto me all the firstborn, whatsoever openeth the womb among the children of Israel, [both] of man and of beast: it [is] mine.
- World English Bible (WEB)
- “Sanctify to me all the firstborn, whatever opens the womb among the children of Israel, both of man and of animal. It is mine.”
- American Standard Version (ASV)
- Sanctify unto me all the first-born, whatsoever openeth the womb among the children of Israel, both of man and of beast: it is mine.
- Bible in Basic English (BBE)
- Let the first male child of every mother among the children of Israel be kept holy for me, even the first male birth among man or beast; for it is mine.
- Darby Translation (DBY)
- Hallow unto me every firstborn, whatever breaketh open the womb among the children of Israel, of man and of cattle: it is mine.
- Webster's Bible (WBS)
- Sanctify to me all the first-born, whatever openeth the womb among the children of Israel, [both] of man and of beast: it [is] mine.
- Young's Literal Translation (YLT)
- 'Sanctify to Me every first-born, opening any womb among the sons of Israel, among man and among beast; it [is] Mine.'
Read in context
- 1ಕರ್ತನು ಮೋಶೆಯ ಸಂಗಡ ಮಾತನಾಡಿಹೇಳಿದ್ದೇನಂದರೆ--
- 2ಇಸ್ರಾಯೇಲ್ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.
- 3ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.
- 4ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
Cross references
- Luke 2:23 ಲೂಕನು 2:23(ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು).
- Numbers 3:13 ಅರಣ್ಯಕಾಂಡ 3:13ಚೊಚ್ಚಲಾದವರೆಲ್ಲರೂ ನನ್ನವರೇ. ನಾನು ಐಗುಪ್ತ ದೇಶದಲ್ಲಿ ಚೊಚ್ಚಲಾದವುಗಳನ್ನೆಲ್ಲಾ ಹೊಡೆದ ದಿನ ದಲ್ಲಿ ನಾನು ಇಸ್ರಾಯೇಲಿನಲ್ಲಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದದ್ದನ್ನೆಲ್ಲಾ ಪರಿಶುದ್ಧ ಮಾಡಿಕೊಂಡಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಕರ್ತನು.
- Deuteronomy 15:19 ಧರ್ಮೋಪದೇಶಕಾಂಡ 15:19ನಿನ್ನ ಪಶು ಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಮಾಡಬೇಕು; ನಿನ್ನ ಹೋರಿಯ ಚೊಚ್ಚಲಿನಿಂದ ನೀನು ಕೆಲಸಮಾಡಿಸಬಾರದು.
- Exodus 22:29–30 ವಿಮೋಚನಕಾಂಡ 22:29–30ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು. ಅದರಂತೆಯೇ ನಿನ್ನ ಎತ್ತುಗಳ ಲ್ಲಿಯೂ ಕುರಿಗಳಲ್ಲಿಯೂ ಮಾಡಬೇಕು. ಅದು ಏಳು ದಿನ ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನ ಅದನ್ನು ನನಗೆ ಕೊಡಬೇಕು.ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.
- Numbers 8:16–17 ಅರಣ್ಯಕಾಂಡ 8:16–17ಅವರು ಇಸ್ರಾಯೇಲ್ ಮಕ್ಕಳೊ ಳಗಿಂದ ನನಗೆ ಸಂಪೂರ್ಣವಾಗಿ ಕೊಡಲ್ಪಟ್ಟವರು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಗರ್ಭಗಳನ್ನು ತೆರೆಯುವಂತದ್ದಕ್ಕೂ ಅಂದರೆ ಚೊಚ್ಚಲಾದವರೆಲ್ಲರಿಗೂ ಬದಲಾಗಿ ಅವರನ್ನು ನನಗೋಸ್ಕರ ತೆಗೆದುಕೊಂಡಿ ದ್ದೇನೆ. ಇಸ್ರಾಯೇಲ್ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು.
- Numbers 18:15 ಅರಣ್ಯಕಾಂಡ 18:15ಮನುಷ್ಯರಲ್ಲಾಗಲಿ ಪಶುಗಳ ಲ್ಲಾಗಲಿ ಕರ್ತನಿಗೆ ತರುವ ಎಲ್ಲಾ ಶರೀರಗಳಲ್ಲಿ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು; ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಪವಿತ್ರವಾದ ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.
- Exodus 13:12–15 ವಿಮೋಚನಕಾಂಡ 13:12–15ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ. ಮೊದಲು ಹುಟ್ಟಿದ ಕತ್ತೆಗಳನ್ನೆಲ್ಲಾ ಕುರಿಮರಿ ಯಿಂದ ವಿಮೋಚಿಸಬೇಕು. ಹಾಗೆ ವಿಮೋಚನೆ ಮಾಡದೆಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರ ಚೊಚ್ಚಲ ಗಂಡುಮಕ್ಕಳನ್ನು ನೀನು ವಿಮೋಚಿಸಬೇಕು. ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ. ಫರೋಹನು ನಮ್ಮನ್ನು ಕಳುಹಿಸದೆ ಕಠಿಣವಾಗಿದ್ದದರಿಂದ ಕರ್ತನು ಐಗುಪ್ತದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಅಂದರೆ ಮನುಷ್ಯರಲ್ಲಿ ಚೊಚ್ಚಲಾ ದದ್ದು ಮೊದಲುಗೊಂಡು ಪಶುಗಳ ಚೊಚ್ಚಲಾದ ವುಗಳ ವರೆಗೆ ಕೊಂದುಹಾಕಿದನು. ಆದ್ದರಿಂದ ನಾನು ಚೊಚ್ಚಲಾದ ಗಂಡಾದವುಗಳನ್ನೆಲ್ಲಾ ಕರ್ತನಿಗೆ ಅರ್ಪಿ ಸುತ್ತೇನೆ. ನನ್ನ ಮಕ್ಕಳಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇನೆ ಎಂದು ಹೇಳಬೇಕು ಅಂದನು.
- Exodus 34:19–20 ವಿಮೋಚನಕಾಂಡ 34:19–20ಪ್ರಥಮ ಗರ್ಭ ತೆರೆಯುವದೆಲ್ಲಾ ನನ್ನದೇ. ನಿಮ್ಮ ಪಶುಗಳಾಗಲಿ ಎತ್ತುಗಳಾಗಲಿ ಟಗರುಗಳಾಗಲಿ ಮೊದಲು ಹುಟ್ಟುವ ಗಂಡಾದವುಗಳೆಲ್ಲಾ ನನ್ನವೇ. ಕತ್ತೆಗಳಲ್ಲಿ ಗರ್ಭ ತೆರೆಯುವಂಥದ್ದನ್ನು ಕುರಿಮರಿ ಯಿಂದ ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ ಅದರ ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಕುಮಾರರ ಚೊಚ್ಚಲಾದವರನ್ನೆಲ್ಲಾ ವಿಮೋಚಿಸ ಬೇಕು. ನನ್ನ ಮುಂದೆ ಯಾರೂ ಬರೀಗೈಯಿಂದ ಕಾಣಿಸಿ ಕೊಳ್ಳಬಾರದು.
- Leviticus 27:26 ಯಾಜಕಕಾಂಡ 27:26ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ.
- Exodus 4:22 ವಿಮೋಚನಕಾಂಡ 4:22ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು.
- Hebrews 12:23 ಇಬ್ರಿಯರಿಗೆ 12:23ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ
- Exodus 23:19 ವಿಮೋಚನಕಾಂಡ 23:19ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.