Exodus · chapter 22 · verse 29
Exodus 22:29 in Kannada
ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.
Ninna prathama phalagalannoo paanagalannoo nanage arpisalu tada maadabeda. Ninna makkalalli chochchalaadavarannu nanage kodabeku.
Exodus 22:29 in English
- King James Version (KJV)
- Thou shalt not delay [to offer] the first of thy ripe fruits, and of thy liquors: the firstborn of thy sons shalt thou give unto me.
- World English Bible (WEB)
- “You shall not delay to offer from your harvest and from the outflow of your presses. “You shall give the firstborn of your sons to me.
- American Standard Version (ASV)
- Thou shalt not delay to offer of thy harvest, and of the outflow of thy presses. The first-born of thy sons shalt thou give unto me.
- Bible in Basic English (BBE)
- Do not keep back your offerings from the wealth of your grain and your vines. The first of your sons you are to give to me.
- Darby Translation (DBY)
- — Thou shalt not delay the fulness of thy [threshing-floor] and the outflow of thy [winepress]. The firstborn of thy sons shalt thou give unto me.
- Webster's Bible (WBS)
- Thou shalt not delay [to offer] the first of thy ripe fruits, and of thy liquors: the first-born of thy sons shalt thou give to me.
- Young's Literal Translation (YLT)
- 'Thy fulness and thy liquids thou dost not delay; the first-born of thy sons thou dost give to Me;
Read in context
- 27ಅದು ಅವನಿಗೆ ಒಂದೇ ಹೊದಿಕೆಯಾಗಿದೆ. ಅದೇ ಅವನ ಮೈಗೆ ಉಡುಪು. ಅವನು ಯಾವದನ್ನು ಹೊದ್ದುಕೊಂಡು ಮಲಗಿ ಯಾನು? ಅವನು ನನಗೆ ಮೊರೆಯಿಟ್ಟರೆ ನಾನು ಕೇಳುವೆನು. ನಾನು ಕೃಪಾಳುವು.
- 28ದೇವರನ್ನು ನಿಂದಿಸಬೇಡ; ಇಲ್ಲವೆ ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.
- 29ನಿನ್ನ ಪ್ರಥಮ ಫಲಗಳನ್ನೂ ಪಾನಗಳನ್ನೂ ನನಗೆ ಅರ್ಪಿಸಲು ತಡ ಮಾಡಬೇಡ. ನಿನ್ನ ಮಕ್ಕಳಲ್ಲಿ ಚೊಚ್ಚಲಾದವರನ್ನು ನನಗೆ ಕೊಡಬೇಕು.
- 30ಅದರಂತೆಯೇ ನಿನ್ನ ಎತ್ತುಗಳ ಲ್ಲಿಯೂ ಕುರಿಗಳಲ್ಲಿಯೂ ಮಾಡಬೇಕು. ಅದು ಏಳು ದಿನ ತಾಯಿಯ ಬಳಿಯಲ್ಲಿರಲಿ, ಎಂಟನೆಯ ದಿನ ಅದನ್ನು ನನಗೆ ಕೊಡಬೇಕು.ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.
- 31ನೀವು ನನಗೆ ಪರಿಶುದ್ಧ ಜನರಾಗಿರಬೇಕು. ಹೊಲದಲ್ಲಿ (ಮೃಗದಿಂದ) ಕೊಲ್ಲಲ್ಪಟ್ಟದ್ದನ್ನು ನೀವು ತಿನ್ನದೆ ಅದನ್ನು ನಾಯಿಗಳಿಗೆ ಹಾಕಬೇಕು.
Cross references
- Exodus 13:2 ವಿಮೋಚನಕಾಂಡ 13:2ಇಸ್ರಾಯೇಲ್ ಮಕ್ಕಳಲ್ಲಿ ಗಂಡಸರಲ್ಲಿಯೂ ಪಶುಗಳಲ್ಲಿಯೂ ಗರ್ಭ ತೆರೆಯುವ ಚೊಚ್ಚಲಾದದ್ದನ್ನೆಲ್ಲಾ ನನಗಾಗಿ ಪರಿಶುದ್ಧ ಮಾಡು; ಅದು ನನ್ನದೇ ಅಂದನು.
- Exodus 23:16 ವಿಮೋಚನಕಾಂಡ 23:16ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು.
- Deuteronomy 26:2–10 ಧರ್ಮೋಪದೇಶಕಾಂಡ 26:2–10ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು. ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ--ಕರ್ತನು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ನಾನು ಸೇರಿದ್ದೇನೆಂದು ಈಹೊತ್ತು ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡುತ್ತೇನೆ ಎಂದು ಹೇಳಬೇಕು. ಆಗ ಯಾಜಕನು ಪುಟ್ಟಿಯನ್ನು ನಿನ್ನ ಕೈಯಿಂದ ತೆಗೆದು ನಿನ್ನ ದೇವರಾದ ಕರ್ತನ ಬಲಿಪೀಠದ ಮುಂದೆ ಇಡಬೇಕು. ಆ ಮೇಲೆ ನೀನು ಉತ್ತರಕೊಟ್ಟು ನಿನ್ನ ದೇವರಾದ ಕರ್ತನ ಮುಂದೆ--ನನ್ನ ತಂದೆ ನಾಶ ವಾಗುವ ಅರಾಮ್ಯನಾಗಿ ಐಗುಪ್ತಕ್ಕೆ ಇಳಿದು ಹೋಗಿ ಅಲ್ಲಿ ಸ್ವಲ್ಪ ಮಂದಿಯ ಸಂಗಡ ಪರವಾಸವಾಗಿದ್ದು ಅಲ್ಲಿ ದೊಡ್ಡದಾದ, ಬಲಿಷ್ಠವಾದ, ಅಧಿಕವಾದ ಜನಾಂಗವಾದನು. ಆದರೆ ಐಗುಪ್ತ್ಯರು ನಮಗೆ ಕೇಡನ್ನುಮಾಡಿ ನಮ್ಮನ್ನು ಕುಂದಿಸಿ ಕಠಿಣವಾದ ಸೇವೆಯನ್ನು ನಮ್ಮ ಮೇಲೆ ಹೊರಿಸಿದರು. ಆಗ ನಾವು ನಮ್ಮ ಪಿತೃಗಳ ದೇವರಾದ ಕರ್ತನಿಗೆ ಮೊರೆ ಯಿಡಲಾಗಿ ಆತನು ನಮ್ಮ ಸ್ವರವನ್ನು ಕೇಳಿ ನಮ್ಮ ಸಂಕಟವನ್ನೂ ಕಷ್ಟವನ್ನೂ ಬಾಧೆಯನ್ನೂ ನೋಡಿದನು. ಆದದರಿಂದ ಕರ್ತನು ನಮ್ಮನ್ನು ತನ್ನ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾ ಭಯದಿಂದಲೂ ಗುರುತುಗಳಿಂದಲೂ ಅದ್ಭುತ ಗಳಿಂದಲೂ ಐಗುಪ್ತದಿಂದ ಹೊರಗೆ ಬರಮಾಡಿ ನಮ್ಮನ್ನು ಈ ಸ್ಥಳಕ್ಕೆ ಕರಕೊಂಡು ಬಂದು ಹಾಲೂ ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿ ದ್ದಾನೆ. ಹೀಗಿರುವದರಿಂದ ಇಗೋ ಕರ್ತನೇ, ನೀನು ನನಗೆ ಕೊಟ್ಟ ಭೂಮಿಯ ಪ್ರಥಮ ಫಲವನ್ನು ತಂದಿ ದ್ದೇನೆ ಎಂದು ಹೇಳಬೇಕು. ಆಗ ಅದನ್ನು ನಿನ್ನ ದೇವ ರಾದ ಕರ್ತನ ಮುಂದೆ ನೀನು ಇಟ್ಟು ನಿನ್ನ ದೇವರಾದ ಕರ್ತನನ್ನು ಆರಾಧಿಸಬೇಕು.
- James 1:18 ಯಾಕೋಬನು 1:18ಆತನು ತನ್ನ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಿರಲಾಗಿ ನಾವು ಆತನ ಸೃಷ್ಟಿಗಳಲ್ಲಿ ಒಂದು ತರಹದ ಪ್ರಥಮ ಫಲ ಗಳಂತಾದೆವು.
- Exodus 23:19 ವಿಮೋಚನಕಾಂಡ 23:19ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.
- Romans 8:23 ರೋಮಾಪುರದವರಿಗೆ 8:23ಇದು ಮಾತ್ರವಲ್ಲದೆ ಆತ್ಮನ ಪ್ರಥಮ ಫಲವನ್ನು ಹೊಂದಿದ ನಾವು ಸಹ ದತ್ತುಪುತ್ರ ಸ್ವೀಕಾರವನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೊಡುತ್ತಾ ನಮ್ಮೊಳಗೆ ನಾವೇ ಮೂಲ್ಗುತ್ತೇವೆ.
- Proverbs 3:9–10 ಜ್ಞಾನೋಕ್ತಿಗಳು 3:9–10ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು. ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು.
- Micah 7:1 ಮೀಕ 7:1ನನಗೆ ಅಯ್ಯೋ, ಯಾಕಂದರೆ ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವ ವರ ಹಾಗೆಯೂ ದ್ರಾಕ್ಷೇ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ; ತಿನ್ನುವದಕ್ಕೆ ಗೊನೆ ಇಲ್ಲ. ನನ್ನ ಪ್ರಾಣವು ಮೊದಲು ಹಣ್ಣಾದ ಅಂಜೂರ ವನ್ನು ಅಪೇಕ್ಷಿಸಿಯದೆ.
- Exodus 13:12 ವಿಮೋಚನಕಾಂಡ 13:12ಗರ್ಭ ತೆರೆಯುವದೆಲ್ಲಾ ಅಂದರೆ ನಿನಗಿರುವ ಪಶುಗಳಲ್ಲಿ ಮೊದಲು ಹುಟ್ಟಿದ್ದನ್ನೆಲ್ಲಾ ಪ್ರತ್ಯೇಕಿಸಬೇಕು. ಗಂಡಾದವುಗಳು ಕರ್ತನವುಗಳೇ.
- Matthew 6:33 ಮತ್ತಾಯನು 6:33ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Exodus 34:19 ವಿಮೋಚನಕಾಂಡ 34:19ಪ್ರಥಮ ಗರ್ಭ ತೆರೆಯುವದೆಲ್ಲಾ ನನ್ನದೇ. ನಿಮ್ಮ ಪಶುಗಳಾಗಲಿ ಎತ್ತುಗಳಾಗಲಿ ಟಗರುಗಳಾಗಲಿ ಮೊದಲು ಹುಟ್ಟುವ ಗಂಡಾದವುಗಳೆಲ್ಲಾ ನನ್ನವೇ.
- 2 Kings 4:42 2 ಅರಸುಗಳು 4:42ಇದಲ್ಲದೆ ಬಾಳ್ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.