Exodus · chapter 16 · verse 35
Exodus 16:35 in Kannada
ಇಸ್ರಾಯೇಲ್ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
Israayel makkalu vaasavaagiratakka deshakke baruva varege naalvattu varusha mannavannu tindaru. Kaanaan deshada meregalige baruva varegoo avaru mannavannu tindaru.omer andare ephadalli hattaneya ondu paalu.
Exodus 16:35 in English
- King James Version (KJV)
- And the children of Israel did eat manna forty years, until they came to a land inhabited; they did eat manna, until they came unto the borders of the land of Canaan.
- World English Bible (WEB)
- The children of Israel ate the manna forty years, until they came to an inhabited land. They ate the manna until they came to the borders of the land of Canaan.
- American Standard Version (ASV)
- And the children of Israel did eat the manna forty years, until they came to a land inhabited; they did eat the manna, until they came unto the borders of the land of Canaan.
- Bible in Basic English (BBE)
- And the children of Israel had manna for their food for forty years, till they came to a land with people in it, till they came to the edge of the land of Canaan.
- Darby Translation (DBY)
- And the children of Israel ate the manna forty years, until they came into an inhabited land: they ate the manna until they came to the borders of the land of Canaan.
- Webster's Bible (WBS)
- And the children of Israel ate manna forty years, until they came to a land inhabited: they ate manna, until they came to the borders of the land of Canaan.
- Young's Literal Translation (YLT)
- And the sons of Israel have eaten the manna forty years, until their coming in unto the land to be inhabited; the manna they have eaten till their coming in unto the extremity of the land of Canaan.
Read in context
- 33ಮೋಶೆಯು ಆರೋನನಿಗೆ--ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಗಳಿಗೋಸ್ಕರ ಇಟ್ಟು ಕೊಳ್ಳುವದಕ್ಕಾಗಿ ಕರ್ತನ ಮುಂದೆ ಇಡು ಅಂದನು.
- 34ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು.
- 35ಇಸ್ರಾಯೇಲ್ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
- 36ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
Cross references
- Joshua 5:12 ಯೆಹೋಶುವ 5:12ಅವರು ಆ ದೇಶದ ಹಳೆಯ ಧಾನ್ಯವನ್ನು ತಿಂದ ಮರು ದಿನದಲ್ಲೇ ಮನ್ನವು ನಿಂತುಹೋಯಿತು; ಇಸ್ರಾಯೇಲ್ ಮಕ್ಕಳಿಗೆ ಮನ್ನ ತಿರಿಗಿ ಸಿಕ್ಕಲಿಲ್ಲ; ಆ ವರುಷದಲ್ಲೆಲ್ಲಾ ಕಾನಾನ್ ದೇಶದ ಫಲವನ್ನು ತಿಂದರು.
- Nehemiah 9:20–21 ನೆಹೆಮೀಯ 9:20–21ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ. ಹೀಗೆಯೇ ಅರಣ್ಯದಲ್ಲಿ ನಾಲ್ವತ್ತುವರುಷ ಅವರನ್ನು ಪೋಷಿಸುತ್ತಿದ್ದಿ; ಅವರು ಕೊರತೆಪಡಲಿಲ್ಲ; ಅವರ ವಸ್ತ್ರಗಳು ಹಳೇವಾಗಲಿಲ್ಲ; ಅವರ ಕಾಲುಗಳು ಬಾತು ಹೋಗಲಿಲ್ಲ.
- John 6:30–58 ಯೋಹಾನನು 6:30–58ಅದಕ್ಕೆ ಅವರು ಆತನಿಗೆ--ಹಾಗಾದರೆ ನಾವು ನೋಡಿ ನಿನ್ನನ್ನು ನಂಬುವಂತೆ ಯಾವ ಸೂಚಕ ಕಾರ್ಯವನ್ನು ನಮಗೆ ತೋರಿಸುತ್ತೀ? ನೀನು ಯಾವ ಕ್ರಿಯೆಯನ್ನು ಮಾಡುತ್ತೀ? ತಿನ್ನುವದಕ್ಕಾಗಿ ಆತನು ಅವರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅಡವಿ ಯಲ್ಲಿ ಮನ್ನಾ ತಿಂದರು ಎಂದು ಹೇಳಿದರು. ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ. ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು. ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು. ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ. ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು. ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ-- ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು. ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ. ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ. ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.
- Deuteronomy 8:2–3 ಧರ್ಮೋಪದೇಶಕಾಂಡ 8:2–3ನೀನು ತಗ್ಗಿಸಿಕೊಳ್ಳುವ ನಿಮಿತ್ತವೂ ಹೃದಯದಲ್ಲಿ ಇರುವದನ್ನು ಅಂದರೆ ನೀನು ಆತನ ಆಜ್ಞೆಗಳನ್ನು ಕಾಪಾಡುವಿಯೋ ಇಲ್ಲವೋ ಎಂದು ತಿಳುಕೊಳ್ಳುವ ದಕ್ಕೂ ನಿನ್ನ ದೇವರಾದ ಕರ್ತನು ನಿನ್ನನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು. ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.
- Deuteronomy 1:8 ಧರ್ಮೋಪದೇಶಕಾಂಡ 1:8ಇಗೋ, ಆ ದೇಶವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ; ಹೋಗಿ ಕರ್ತನು ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರಿಗೂ ಅವರ ತರುವಾಯ ಹುಟ್ಟುವ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶವನ್ನು ಸ್ವತಂತ್ರಿಸಿಕೊಳ್ಳಿರಿ ಎಂದು ಹೇಳಿದನು.
- Numbers 33:38 ಅರಣ್ಯಕಾಂಡ 33:38ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.
- Psalm 78:24–25 ಕೀರ್ತನೆಗಳು 78:24–25ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
- Deuteronomy 34:1–4 ಧರ್ಮೋಪದೇಶಕಾಂಡ 34:1–4ಆಗ ಮೋಶೆ ಮೋವಾಬಿನ ಬೈಲಿನಿಂದ ನೆಬೋ ಪರ್ವತಕ್ಕೆ ಯೆರಿಕೋವಿಗೆ ಎದುರಾಗಿರುವ ಪಿಸ್ಗಾದ ಶಿಖರಕ್ಕೆ ಏರಿ ಹೋದನು. ಅಲ್ಲಿ ಕರ್ತನು ಅವನಿಗೆ ದೇಶವನ್ನೆಲ್ಲಾ ದಾನಿನ ವರೆಗಿರುವ ಗಿಲ್ಯಾದನ್ನೂ ಎಲ್ಲಾ ನಫ್ತಾಲಿಯನ್ನೂ ಸಮಸ್ತ ಎಫ್ರಾಯಾಮನ, ಮನಸ್ಸೆಯ ದೇಶವನ್ನೂ ಸಮುದ್ರದ ಕಟ್ಟಕಡೆಯ ವರೆಗಿರುವ ಸಮಸ್ತ ಯೆಹೂದ ದೇಶವನ್ನೂ ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು. ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.
- Numbers 33:48–50 ಅರಣ್ಯಕಾಂಡ 33:48–50ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು. ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು. ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
- Nehemiah 9:15 ನೆಹೆಮೀಯ 9:15ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ.
Original words (Hebrew)
- children · H1121בֵּן bên
- Israel · H3478יִשְׂרָאֵל Yisrâʼêl
- eat · H398אָכַל ʼâkal
- manna · H4478מָן mân
- forty · H705אַרְבָּעִים ʼarbâʻîym
- years · H8141שָׁנֶה shâneh
- came · H935בּוֹא bôwʼ
- land · H776אֶרֶץ ʼerets
- inhabited · H3427יָשַׁב yâshab
- eat · H398אָכַל ʼâkal
- manna · H4478מָן mân
- came · H935בּוֹא bôwʼ
- borders · H7097קָצֶה qâtseh
- land · H776אֶרֶץ ʼerets
- Canaan · H3667כְּנַעַן Kᵉnaʻan