Jeremiah · chapter 5 · verse 8
Jeremiah 5:8 in Kannada
ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ.
Belagi nalli kobbida kuduregala haagiddaare; tamma tamma nereyavara hendatiyarigoskara hoonkari suttaare.
Jeremiah 5:8 in English
- King James Version (KJV)
- They were [as] fed horses in the morning: every one neighed after his neighbour’s wife.
- World English Bible (WEB)
- They were as fed horses roaming at large. Everyone neighed after his neighbor’s wife.
- American Standard Version (ASV)
- they were as fed horses roaming at large; every one neighed after his neighbor’s wife.
- Bible in Basic English (BBE)
- They were full of desire, like horses after a meal of grain: everyone went after his neighbour's wife.
- Darby Translation (DBY)
- [As] well fed horses, they roam about, every one neigheth after his neighbour's wife.
- Webster's Bible (WBS)
- They were [as] fed horses in the morning: every one neighed after his neighbor's wife.
- Young's Literal Translation (YLT)
- Fed horses — they have been early risers, Each to the wife of his neighbour they neigh.
Read in context
- 6ಹೀಗಿರುವದರಿಂದ ಅಡವಿಯ ಸಿಂಹವು ಅವರನ್ನು ಕೊಲ್ಲುವದು; ಸಂಜೆಯ ತೋಳವು ಅವರನ್ನು ಸೂರೆ ಮಾಡುವದು; ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವದು; ಅಲ್ಲಿಂದ ಹೊರಗೆ ಬರುವವ ರೆಲ್ಲರೂ ಸೀಳಲ್ಪಡುವರು; ಅವರ ದ್ರೋಹಗಳು ಬಹಳವಾಗಿವೆ; ಅವರ ಹಿಂತಿರುಗುವಿಕೆಯು ಹೆಚ್ಚಾಗಿದೆ.
- 7ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ; ನಾನು ಅವರನ್ನು ತೃಪ್ತಿಪಡಿ ಸಿದ ಮೇಲೆ ಅವರು ವ್ಯಭಿಚಾರಮಾಡಿ ಸೂಳೆಯರ ಮನೆಗಳಲ್ಲಿ ಗುಂಪಾಗಿ ಕೂಡಿಕೊಂಡರು.
- 8ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ.
- 9ಇವುಗಳ ನಿಮಿತ್ತ ನಾನು ವಿಚಾರಿಸುವ ದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ? ಎಂದು ಕರ್ತನು ಅನ್ನುತ್ತಾನೆ.
- 10ಅವಳ ಗೋಡೆಗಳನ್ನು ಏರಿರಿ, ಕೆಡಿಸಿರಿ; ಆದರೆ ಪೂರ್ಣವಾಗಿ ನಾಶಮಾಡಬೇಡಿರಿ. ಅವಳ ಕೋಟೆಯ ಉಪ್ಪರಿಗೆಗಳನ್ನು ತೆಗೆದುಬಿಡಿರಿ; ಅವು ಕರ್ತನವುಗಳಲ್ಲ.
Cross references
- Jeremiah 13:27 ಯೆರೆಮೀಯ 13:27ನಿನ್ನ ವ್ಯಭಿಚಾರಗಳನ್ನೂ ಬುಸುಗುಟ್ಟು ವಿಕೆಗಳನ್ನೂ ಸೂಳೆತನದ ದೋಷವನ್ನೂ ಹೊಲಗಳ ಲ್ಲಿರುವ ಗುಡ್ಡಗಳ ಮೇಲೆ ಆಗುವ ನಿನ್ನ ಅಸಹ್ಯಗಳನ್ನೂ ನೋಡಿದ್ದೇನೆ, ಓ ಯೆರೂಸಲೇಮೇ, ನಿನಗೆ ಅಯ್ಯೋ, ನೀನು ಶುದ್ಧವಾಗುವದಿಲ್ಲವೋ? ಒಂದು ಸಾರಿ ಇದು ಯಾವಾಗ ಆದೀತು?
- Ezekiel 22:11 ಯೆಹೆಜ್ಕೇಲನು 22:11ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ.
- 2 Samuel 11:2–4 2 ಸಮುವೇಲನು 11:2–4ಆಗ ಆದದ್ದೇನಂದರೆ, ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇರುವಾಗ ಸ್ನಾನಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಉಪ್ಪರಿಗೆಯ ಮೇಲಿನಿಂದ ನೋಡಿದನು. ಆ ಸ್ತ್ರೀಯು ಮಹಾಸೌಂದರ್ಯ ರೂಪವುಳ್ಳವಳಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವದಕ್ಕೆ--ಕಳುಹಿಸಿದಾಗ ಒಬ್ಬನು--ಅವಳು ಹಿತ್ತಿಯನಾದ ಊರೀಯನ ಹೆಂಡತಿಯಾಗಿರುವ ಎಲೀಯಾಮನ ಮಗಳಾದ ಬತ್ಷೆಬೆಯಲ್ಲವೋ ಅಂದನು. ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು.
- Deuteronomy 5:18 ಧರ್ಮೋಪದೇಶಕಾಂಡ 5:18ವ್ಯಭಿಚಾರ ಮಾಡಬೇಡ.
- Job 31:9 ಯೋಬನು 31:9ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ,
- Deuteronomy 5:21 ಧರ್ಮೋಪದೇಶಕಾಂಡ 5:21ನಿನ್ನ ನೆರೆಯವನ ಹೆಂಡತಿಯನ್ನು ಆಶಿಸಬೇಡ; ನೆರೆಯವನ ಮನೆಯನ್ನೂ ಅವನ ಹೊಲವನ್ನೂ ದಾಸ ದಾಸಿಯರನ್ನೂ ಪಶು ಕತ್ತೆಗಳನ್ನೂ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬೇಡ ಎಂದು ಹೇಳಿದನು.
- Matthew 5:27–28 ಮತ್ತಾಯನು 5:27–28ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ; ಆದರೆ ನಾನು ನಿಮಗೆ ಹೇಳುವದೇನಂದರೆ--ಒಬ್ಬ ಸ್ತ್ರೀಯನ್ನು ಮೋಹಿಸುವದಕ್ಕೆ ನೋಡುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದ್ದಾನೆ.
- Exodus 20:17 ವಿಮೋಚನಕಾಂಡ 20:17ನೀನು ನಿನ್ನ ನೆರೆಯವನ ಮನೆಯನ್ನು ಆಶಿಸ ಬಾರದು, ನಿನ್ನ ನೆರೆಯವನ ಹೆಂಡತಿಯನ್ನೂ ಆಶಿಸ ಬಾರದು; ಅವನ ದಾಸನನ್ನಾಗಲಿ ದಾಸಿಯನ್ನಾಗಲಿ ಎತ್ತನ್ನಾಗಲಿ ಕತ್ತೆಯನ್ನಾಗಲಿ ನಿನ್ನ ನೆರೆಯವನಿಗೆ ಇರುವ ಯಾವದನ್ನೂ ಆಶಿಸಬಾರದು ಎಂದು ಹೇಳಿದನು.
- Jeremiah 29:23 ಯೆರೆಮೀಯ 29:23ಅವರು ತಮ್ಮ ನೆರೆಯವರ ಹೆಂಡತಿಯರ ಸಂಗಡ ವ್ಯಭಿಚಾರ ಮಾಡಿ ನನ್ನ ಹೆಸರಿನಲ್ಲಿ ಸುಳ್ಳಾಗಿ ನಾನು ಅವರಿಗೆ ಆಜ್ಞಾಪಿಸದೆ ಇದ್ದ ಮಾತುಗಳನ್ನಾಡಿ ಇಸ್ರಾಯೇಲಿನಲ್ಲಿ ನೀಚತನವನ್ನು ನಡಿಸಿದರು; ನಾನೇ ಅದನ್ನು ತಿಳಿದು ಸಾಕ್ಷಿಯಾಗಿದ್ದೇನೆಂದು ಕರ್ತನು ಅನ್ನುತ್ತಾನೆ.
- Genesis 39:9 ಆದಿಕಾಂಡ 39:9ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು.
- Exodus 20:14 ವಿಮೋಚನಕಾಂಡ 20:14ವ್ಯಭಿಚಾರ ಮಾಡಬಾರದು.