Ezekiel · chapter 18 · verse 3
Ezekiel 18:3 in Kannada
ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವದಿಲ್ಲ.
Devaraada kartanu heege helu ttaane--nanna jeevadaane, neevu ee gaadeyannu israayelinalli innu heluva sandarbhavu iruvadilla.
Ezekiel 18:3 in English
- King James Version (KJV)
- [As] I live, saith the Lord GOD, ye shall not have [occasion] any more to use this proverb in Israel.
- World English Bible (WEB)
- “As I live,” says the Lord GOD, “you shall not use this proverb any more in Israel.
- American Standard Version (ASV)
- As I live, saith the Lord Jehovah, ye shall not have [occasion] any more to use this proverb in Israel.
- Bible in Basic English (BBE)
- By my life, says the Lord, you will no longer have this saying in Israel.
- Darby Translation (DBY)
- [As] I live, saith the Lord Jehovah, ye shall not have any more to use this proverb in Israel.
- Webster's Bible (WBS)
- [As] I live, saith the Lord GOD, ye shall not have [occasion] any more to use this proverb in Israel.
- Young's Literal Translation (YLT)
- I live — an affirmation of the Lord Jehovah, Ye have no more the use of this simile in Israel.
Read in context
- 1ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 2ತಂದೆಗಳು ಹುಳಿ ದ್ರಾಕ್ಷೆಗಳನ್ನು ತಿಂದರು ಮಕ್ಕಳ ಹಲ್ಲು ಉಳಿತು ಹೋಯಿತು ಎಂಬ ಗಾದೆಯನ್ನು ಇಸ್ರಾಯೇಲ್ ದೇಶದ ವಿಷಯವಾಗಿ ನೀವು ಉಪಯೋಗಿಸುವ ಇದರ ಅರ್ಥವೇನು?
- 3ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವದಿಲ್ಲ.
- 4ಇಗೋ, ಎಲ್ಲಾ ಪ್ರಾಣಗಳು ನನ್ನವೇ; ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ; ಪಾಪ ಮಾಡುವವನೇ ತಾನಾ ಗಿಯೇ ಸಾಯುವನು.
- 5ಒಬ್ಬ ಮನುಷ್ಯನು ನೀತಿವಂತ ನಾಗಿದ್ದು, ನೀತಿಯನ್ನೂ ನ್ಯಾಯವನ್ನೂ ನಡಿಸಿ,
Cross references
- Ezekiel 18:19–20 ಯೆಹೆಜ್ಕೇಲನು 18:19–20ಆದಾಗ್ಯೂ ಇನ್ನೂ ನೀವು--ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲವೇ ಎಂದು ಹೇಳುವಿರಿ; ನಿಶ್ಚಯವಾಗಿ ಮಗನು ನ್ಯಾಯವನ್ನೂ ನೀತಿಯನ್ನೂ ಮಾಡಿ ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು. ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು.
- Ezekiel 33:11–20 ಯೆಹೆಜ್ಕೇಲನು 33:11–20ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ? ಮನುಷ್ಯ ಪುತ್ರನೇ. ನೀನು ನಿನ್ನ ಜನರ ಮಕ್ಕಳಿಗೆ ಹೇಳು--ನೀತಿವಂತನ ನೀತಿಯು ಅವನ ಅಪರಾಧದ ದಿನದಲ್ಲಿ ಅವನನ್ನು ತಪ್ಪಿಸುವದಿಲ್ಲ; ಹಾಗೆಯೇ ದುಷ್ಟನ ದುಷ್ಟತ್ವವು ಅವನು ತನ್ನ ದುಷ್ಟತ್ವವನ್ನು ಬಿಟ್ಟು ತಿರುಗುವ ದಿನದಲ್ಲಿ ಅದರಿಂದ ಬೀಳುವದಿಲ್ಲ; ನೀತಿವಂತನು ಪಾಪಮಾಡುವ ದಿನದಲ್ಲಿ ನೀತಿಯಿಂದ ಬದುಕ ಲಾರನು. ನಾನು ನೀತಿವಂತನಿಗೆ--ನೀನು ನಿಶ್ಚಯವಾಗಿ ಬದುಕುವಿ ಎಂದು ಹೇಳುವಾಗ--ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನ ಎಲ್ಲಾ ನೀತಿಯು ಜ್ಞಾಪಕಮಾಡಿ ಕೊಳ್ಳಲ್ಪಡುವದಿಲ್ಲ; ಆದರೆ ಅವನು ಮಾಡಿದ ಅವನ ಅಕ್ರಮಗಳಿಗಾಗಿಯೇ ಅವನು ಸಾಯುತ್ತಾನೆ. ನಾನು ದುಷ್ಟನಿಗೆ--ನೀನು ನಿಶ್ಚಯ ವಾಗಿ ಸಾಯುವಿ ಎಂದು ಹೇಳುವಾಗ ಅವನು ಪಾಪ ದಿಂದ ತಿರುಗಿಕೊಂಡರೆ ಮತ್ತು ನ್ಯಾಯವನ್ನೂ ನೀತಿ ಯನ್ನೂ ಮಾಡಿದರೆ ದುಷ್ಟನು ತನ್ನ ಒತ್ತೆಯನ್ನು ಹಿಂದಕ್ಕೆ ಕೊಟ್ಟರೆ ಮತ್ತು ದೋಚಿಕೊಂಡದ್ದನ್ನು ತಿರುಗಿ ಕೊಟ್ಟು ಅನ್ಯಾಯವನ್ನು ಮಾಡದೆ ಜೀವದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತ ವಾಗಿ ಬದುಕುವನು. ಅವನು ಮಾಡಿರುವ ಪಾಪ ಗಳಲ್ಲಿ ಒಂದಾದರೂ ಅವನಿಗೆ ವಿರೋಧವಾಗಿ ಜ್ಞಾಪ ಕಕ್ಕೆ ಬರುವದಿಲ್ಲ; ಅವನು ನ್ಯಾಯವನ್ನೂ ನೀತಿ ಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು. ಆದರೂ ನಿನ್ನ ಜನರ ಮಕ್ಕಳು--ಕರ್ತನ ಮಾರ್ಗವು ಸಮವಿಲ್ಲ ಅನ್ನುತ್ತಾರೆ. ಅವರಿಗಾದರೋ ಅವರ ಮಾರ್ಗವೇ ಸಮವಾಗಿಲ್ಲ. ಯಾವಾಗ ನೀತಿ ವಂತನು ತನ್ನ ನೀತಿಯಿಂದ ತಿರುಗಿಕೊಳ್ಳುವನೋ ಮತ್ತು ಅಕ್ರಮವನ್ನು ಮಾಡುವನೋ ಅವನು ಖಂಡಿತ ವಾಗಿಯೂ ಅದರಲ್ಲಿಯೇ ಸಾಯುವನು. ಆದರೆ ದುಷ್ಟನು ದುಷ್ಟತ್ವವನ್ನು ಬಿಟ್ಟು ತಿರುಗಿಕೊಂಡು ನ್ಯಾಯ ವನ್ನೂ ನೀತಿಯನ್ನೂ ನಡೆಸಿದರೆ ಅವನು ಅದರಲ್ಲಿಯೇ ಬದುಕುವನು. ಆದರೂ ನೀವು ಕರ್ತನ ಮಾರ್ಗ ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾಯೇಲಿನ ಮನೆತನ ದವರೇ, ನಿಮ್ಮಲ್ಲಿ ಪ್ರತಿಯೊಬ್ಬರಿಗೆ ನಿಮ್ಮ ಮಾರ್ಗಗಳ ಪ್ರಕಾರ ನಾನು ನ್ಯಾಯ ತೀರಿಸುವೆನು.
- Ezekiel 18:30 ಯೆಹೆಜ್ಕೇಲನು 18:30ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.
- Romans 3:19 ರೋಮಾಪುರದವರಿಗೆ 3:19ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು.
- Ezekiel 36:31–32 ಯೆಹೆಜ್ಕೇಲನು 36:31–32ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ. ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ದೇವರಾದ ಕರ್ತನು ಹೇಳುತ್ತಾನೆ; ಓ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾ ರ್ಗಗಳಿಗೆ ನಾಚಿಕೆ ಪಟ್ಟು ಲಜ್ಜೆಹೊಂದಿರಿ.