Ezekiel · chapter 19 · verse 13
Ezekiel 19:13 in Kannada
ಈಗ ಅದು ಅರಣ್ಯದಲ್ಲಿ ಒಣಗಿ ನೀರಿಲ್ಲದಂಥ ಪ್ರದೇಶದಲ್ಲಿ ನೆಡಲ್ಪಟ್ಟಿದೆ.ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
Eega adu aranyadalli onagi neerilladantha pradeshadalli nedalpattide.adara kombegala balligalolaginda benkiyu horatu adaralli phalavannu tindu bittide; adaralli aaluvadakke raajadandakkaagi takkadaada balavulla balliyu eega illa; idu pralaapavaagide; pralaapakkaagiye ide.
Ezekiel 19:13 in English
- King James Version (KJV)
- And now she [is] planted in the wilderness, in a dry and thirsty ground.
- World English Bible (WEB)
- Now it is planted in the wilderness, in a dry and thirsty land.
- American Standard Version (ASV)
- And now it is planted in the wilderness, in a dry and thirsty land.
- Bible in Basic English (BBE)
- And now she is planted in the waste land, in a dry and unwatered country.
- Darby Translation (DBY)
- And now it is planted in the wilderness, in a dry and thirsty ground:
- Webster's Bible (WBS)
- And now she [is] planted in the wilderness, in a dry and thirsty ground.
- Young's Literal Translation (YLT)
- And now — it is planted in a wilderness, In a land dry and thirsty.
Read in context
- 11ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ.
- 12ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
- 13ಈಗ ಅದು ಅರಣ್ಯದಲ್ಲಿ ಒಣಗಿ ನೀರಿಲ್ಲದಂಥ ಪ್ರದೇಶದಲ್ಲಿ ನೆಡಲ್ಪಟ್ಟಿದೆ.ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
- 14ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
Cross references
- Hosea 2:3 ಹೋಶೇಯ 2:3ಇಲ್ಲದಿದ್ದರೆ ನಾನು ಅವಳನ್ನು ಬೆತ್ತಲೆಯಾಗಿ ಮಾಡಿ ಅವಳು ಹುಟ್ಟಿದ ದಿನದಲ್ಲಾದ ಹಾಗೆ ನಿಲ್ಲಿಸಿ ಅವಳನ್ನು ಅರಣ್ಯ ದಂತೆ ಮಾಡುವೆನು. ಅವಳನ್ನು ಒಣಗಿದ ಭೂಮಿ ಯಂತೆ ಇಟ್ಟು ದಾಹದಿಂದ ಅವಳನ್ನು ಕೊಲ್ಲುತ್ತೇನೆ.
- Ezekiel 19:10 ಯೆಹೆಜ್ಕೇಲನು 19:10ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ.
- Psalm 63:1 ಕೀರ್ತನೆಗಳು 63:1ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.
- Ezekiel 20:35 ಯೆಹೆಜ್ಕೇಲನು 20:35ನಿಮ್ಮನ್ನು ಜನಗಳಿರುವ ಅರಣ್ಯದೊಳಗೆ ತಂದು ನಾನು ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ವಾದಿಸುವೆನು.
- Psalm 68:6 ಕೀರ್ತನೆಗಳು 68:6ದೇವರು ಒಬ್ಬೊಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾನೆ; ಸರಪಣಿಗಳಿಂದ ಬಂಧಿಸಲ್ಪಟ್ಟವರನ್ನು ಹೊರಗೆ ಬರಮಾಡುತ್ತಾನೆ; ಆದರೆ ಎದುರು ಬೀಳು ವವರು ಒಣಭೂಮಿಯಲ್ಲಿ ವಾಸಮಾಡುತ್ತಾರೆ.
- 2 Kings 24:12–16 2 ಅರಸುಗಳು 24:12–16ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು. ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು. ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು. ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು.
- Jeremiah 52:27–31 ಯೆರೆಮೀಯ 52:27–31ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು. ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ--ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು. ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು. ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು. ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೇ ವರುಷದಲ್ಲಿ, ಹನ್ನೆರಡನೇ ತಿಂಗಳಿನ ಇಪ್ಪತ್ತೈದನೇ ದಿವಸದಲ್ಲಿ ಆದದ್ದೇನಂ ದರೆ--ಬಾಬೆಲಿನ ಅರಸನಾದ ಎವೀಲ್ಮೆರೋದಕನು ತನ್ನ ಆಳಿಕೆಯ ಮೊದಲನೇ ವರುಷದಲ್ಲಿ ಯೆಹೂದದ ಅರಸನಾದ ಯೆಹೋಯಾಖೀನನ ತಲೆಯನ್ನು ಎತ್ತಿ ಅವನನ್ನು ಸೆರೆಮನೆಯೊಳಗಿಂದ ಹೊರಗೆ ತರಿಸಿ ಅವನ ಸಂಗಡ ಕರುಣೆಯಿಂದ ಮಾತನಾಡಿ
- Deuteronomy 28:47–48 ಧರ್ಮೋಪದೇಶಕಾಂಡ 28:47–48ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.