Ezekiel · chapter 35 · verse 3
Ezekiel 35:3 in Kannada
ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
Adakke helu--devaraada kartanu heege heluttaane--igo, seyaar parvatave, naanu ninage viruddhavaagi ddene. Naanu nanna kaiyannu ninage viruddhavaagi chaachuttene. Naanu ninnannu sampoornavaagi naashamaaduttene.
Ezekiel 35:3 in English
- King James Version (KJV)
- And say unto it, Thus saith the Lord GOD; Behold, O mount Seir, I [am] against thee, and I will stretch out mine hand against thee, and I will make thee most desolate.
- World English Bible (WEB)
- and tell it, ‘The Lord GOD says: “Behold, I am against you, Mount Seir, and I will stretch out my hand against you. I will make you a desolation and an astonishment.
- American Standard Version (ASV)
- and say unto it, Thus saith the Lord Jehovah: Behold, I am against thee, O mount Seir, and I will stretch out my hand against thee, and I will make thee a desolation and an astonishment.
- Bible in Basic English (BBE)
- And say to it, This is what the Lord has said: See, I am against you, O Mount Seir, and my hand will be stretched out against you, and I will make you a waste and a cause for wonder.
- Darby Translation (DBY)
- and say unto it, Thus saith the Lord Jehovah: Behold, I am against thee, mount Seir, and I will stretch out my hand upon thee, and I will make thee a desolation and an astonishment.
- Webster's Bible (WBS)
- And say to it, Thus saith the Lord GOD; Behold, O mount Seir, I [am] against thee, and I will stretch out my hand against thee, and I will make thee most desolate.
- Young's Literal Translation (YLT)
- and thou hast said to it: Thus said the Lord Jehovah: Lo, I [am] against thee, O mount Seir, And have stretched out My hand against thee, And made thee a desolation and an astonishment.
Read in context
- 1ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ,
- 2ಮನುಷ್ಯಪುತ್ರನೇ, ನೀನು ಸೇಯಾರ್ ಪರ್ವತಕ್ಕೆ ಅಭಿಮುಖವಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸು;
- 3ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
- 4ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
- 5ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
Cross references
- Jeremiah 6:12 ಯೆರೆಮೀಯ 6:12ಅವರ ಮನೆಗಳೂ ಹೊಲಗಳೂ ಹೆಂಡತಿಯರೂ ಸಹಿತವಾಗಿ ಬೇರೊಬ್ಬ ರಿಗೆ ಆಗುವವು; ದೇಶದ ನಿವಾಸಿಗಳ ಮೇಲೆ ನನ್ನ ಕೈ ಚಾಚುವೆನು ಎಂದು ಕರ್ತನು ಅನ್ನುತ್ತಾನೆ.
- Ezekiel 35:7 ಯೆಹೆಜ್ಕೇಲನು 35:7ಹೀಗೆ ನಾನು ಸೇಯಾರ್ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
- Jeremiah 15:6 ಯೆರೆಮೀಯ 15:6ನೀನು ನನ್ನನ್ನು ಬಿಟ್ಟು ಬಿಟ್ಟಿದ್ದೀ ಎಂದು ಕರ್ತನು ಅನ್ನುತ್ತಾನೆ; ನೀನು ಹಿಂಜರಿ ದಿದ್ದೀ, ಆದದರಿಂದ ನನ್ನ ಕೈಯನ್ನು ನಿನಗೆ ವಿರೋಧ ವಾಗಿ ಚಾಚಿ ನಿನ್ನನ್ನು ನಾಶಮಾಡುವೆನು. ಪಶ್ಚಾತ್ತಾಪ ಪಡುವದರಲ್ಲಿ ದಣಿದಿದ್ದೇನೆ.
- Ezekiel 6:14 ಯೆಹೆಜ್ಕೇಲನು 6:14ಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
- Ezekiel 21:3 ಯೆಹೆಜ್ಕೇಲನು 21:3ಇಸ್ರಾ ಯೇಲ್ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು.
- Nahum 3:5 ನಹೂಮ 3:5ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
- Jeremiah 21:13 ಯೆರೆಮೀಯ 21:13ಇಗೋ, ತಗ್ಗಿನಲ್ಲಿಯೂ ಬೈಲಿನ ಬಂಡೆಯಲ್ಲಿಯೂ ವಾಸಮಾಡುವವರೇ, ನಮ್ಮ ಮೇಲೆ ಯಾರು ಇಳಿದು ಬರುವರೆಂದು ನಮ್ಮ ನಿವಾಸಗಳಲ್ಲಿ ಯಾರು ಸೇರು ವರೆಂದು ಅನ್ನುವವರೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ.ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.
- Ezekiel 29:10 ಯೆಹೆಜ್ಕೇಲನು 29:10ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.
- Ezekiel 25:13 ಯೆಹೆಜ್ಕೇಲನು 25:13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
- Ezekiel 5:8 ಯೆಹೆಜ್ಕೇಲನು 5:8ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು, ನಾನೇ, ನಿನಗೆ ವಿರೋಧವಾಗಿದ್ದೇನೆ; ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮಧ್ಯದಲ್ಲಿ ನ್ಯಾಯತೀರ್ಪನ್ನು ಮಾಡುತ್ತೇನೆ.
- Jeremiah 51:25 ಯೆರೆಮೀಯ 51:25ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ.
- Ezekiel 5:15 ಯೆಹೆಜ್ಕೇಲನು 5:15ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.