Ezekiel · chapter 5 · verse 14
Ezekiel 5:14 in Kannada
ಇದಲ್ಲದೆ ನಾನು ಹಾದು ಹೋಗುವವರೆ ಲ್ಲರ ಕಣ್ಣುಗಳ ಮುಂದೆ ನಿನ್ನ ಸುತ್ತಲಿರುವ ಎಲ್ಲಾ ಜನಾಂಗಗಳ ನಿಂದೆಗೆ ಗುರಿಮಾಡಿ ನೀನು ಹಾಳಾಗುವ ಹಾಗೆ ಮಾಡುತ್ತೇನೆ.
Idallade naanu haadu hoguvavare llara kannugala munde ninna suttaliruva ellaa janaangagala nindege gurimaadi neenu haalaaguva haage maaduttene.
Ezekiel 5:14 in English
- King James Version (KJV)
- Moreover I will make thee waste, and a reproach among the nations that [are] round about thee, in the sight of all that pass by.
- World English Bible (WEB)
- “‘Moreover I will make you a desolation and a reproach among the nations that are around you, in the sight of all that pass by.
- American Standard Version (ASV)
- Moreover I will make thee a desolation and a reproach among the nations that are round about thee, in the sight of all that pass by.
- Bible in Basic English (BBE)
- And I will make you a waste and a name of shame among the nations round about you, in the eyes of everyone who goes by.
- Darby Translation (DBY)
- And I will make thee a waste and a reproach among the nations that are round about thee, in the sight of all that pass by.
- Webster's Bible (WBS)
- Moreover I will make thee waste, and a reproach among the nations that [are] around thee, in the sight of all that pass by.
- Young's Literal Translation (YLT)
- And I give thee for a waste, And for a reproach among nations that [are] round about thee, Before the eyes of every passer by.
Read in context
- 12ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
- 13ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ಉರಿಯನ್ನು ಅವರ ಮೇಲೆ ಶಾಂತಪಡಿಸಿ, ಸಮಾಧಾನ ಹೊಂದು ವೆನು; ಹೀಗೆ ನಾನು ನನ್ನ ಉರಿಯನ್ನು ಅವರ ಮೇಲೆ ತೀರಿಸಿದ ತರುವಾಯ ಕರ್ತನಾದ ನಾನು ನನ್ನ ಉದ್ದೇಶ ಪೂರ್ವಕವಾಗಿ ಮಾಡಿದ್ದೇನೆಂದು ಅವರಿಗೆ ಗೊತ್ತಾಗು ವದು.
- 14ಇದಲ್ಲದೆ ನಾನು ಹಾದು ಹೋಗುವವರೆ ಲ್ಲರ ಕಣ್ಣುಗಳ ಮುಂದೆ ನಿನ್ನ ಸುತ್ತಲಿರುವ ಎಲ್ಲಾ ಜನಾಂಗಗಳ ನಿಂದೆಗೆ ಗುರಿಮಾಡಿ ನೀನು ಹಾಳಾಗುವ ಹಾಗೆ ಮಾಡುತ್ತೇನೆ.
- 15ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.
- 16ನಾನು ನಾಶಕ್ಕಾಗಿ ಇರುವ ಬರಗಾಲದ ಕೆಟ್ಟ ಬಾಣಗಳನ್ನು ಅವರ ಮೇಲೆ ಕಳುಹಿಸುವಾಗ ನಿಮ್ಮನ್ನು ನಾ ಮಾಡುವದಕ್ಕಾಗಿಯೇ ಅವುಗಳನ್ನು ಕಳುಹಿಸುವೆನು; ನಿಮ್ಮ ಮೇಲೆ ಬರಗಾಲವನ್ನು ಹೆಚ್ಚಿಸಿ ನಿಮ್ಮ ಜೀವನಾಧಾರವಾದ ರೊಟ್ಟಿಯನ್ನು ಮುರಿದು ಹಾಕು ತ್ತೇನೆ.ಹೀಗೆ ನಾನು ಬರಗಾಲವನ್ನೂ ಮತ್ತು ಕೆಟ್ಟ ಮೃಗಗಳನ್ನೂ ನಿಮ್ಮ ಮೇಲೆ ಕಳುಹಿಸುತ್ತೇನೆ. ಅವು ನಿಮ್ಮನ್ನು ದಿಕ್ಕಿಲ್ಲದವರನ್ನಾಗಿ ಮಾಡುವವು. ವ್ಯಾಧಿಯೂ ರಕ್ತವೂ ನಿಮ್ಮಲ್ಲಿ ಹಾದು ಹೋಗುವದು; ನಿಮ್ಮ ಮೇಲೆ ಕತ್ತಿಯನ್ನು ಬೀಸುತ್ತೇನೆ. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
Cross references
- Nehemiah 2:17 ನೆಹೆಮೀಯ 2:17ಆಗ ನಾನು ಅವರಿಗೆ ಹೇಳಿದೆನು--ನಮಗೆ ಇರುವ ಕೇಡನ್ನು ನೀವು ನೋಡುತ್ತೀರಿ. ಯೆರೂಸಲೇಮು ಹಾಳಾಗಿ ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟವಲ್ಲಾ ನಾವು ಇನ್ನು ಮೇಲೆ ನಿಂದೆಗೊಳಗಾಗಿರದ ಹಾಗೆ ಯೆರೂಸಲೇಮಿನ ಗೋಡೆಯನ್ನು ಕಟ್ಟುವ ಬನ್ನಿರಿ.
- Psalm 74:3–10 ಕೀರ್ತನೆಗಳು 74:3–10ನಿನ್ನ ಪಾದಗಳನ್ನು ಸದಾಕಾಲದ ನಾಶನಗಳಿಗೆ, ಅಂದರೆ ಶತ್ರುವು ಪರಿಶುದ್ಧ ಸ್ಥಳದಲ್ಲಿ ಎಲ್ಲವನ್ನು ಕೆಟ್ಟತನದಿಂದ ಮಾಡಿದ್ದಕ್ಕೆ ತಿರುಗಿಸು. ನಿನ್ನ ವೈರಿಗಳು ನಿನ್ನ ಸಭೆಗಳ ಮಧ್ಯದಲ್ಲಿ ಗರ್ಜಿಸುತ್ತಾರೆ; ತಮ್ಮ ಧ್ವಜಗಳನ್ನು ಗುರುತುಗಳಾಗಿ ಇಟ್ಟಿದ್ದಾರೆ. ದಟ್ಟವಾದ ಮರಗಳಲ್ಲಿ ಕೊಡಲಿ ಎತ್ತುವವನ ಹಾಗೆ ಮನುಷ್ಯನು ಪ್ರಸಿದ್ಧನಾಗಿದ್ದಾನೆ; ಆದರೆ ಈಗ ಕೆತ್ತನೆ ಕೆಲಸವನ್ನು ತಕ್ಷಣ ಕೊಡಲಿಯಿಂದಲೂ ಸುತ್ತಿಗೆ ಯಿಂದಲೂ ಅವರು ಹೊಡೆದು ಬಿಡುತ್ತಾರೆ. ನಿನ್ನ ಪರಿಶುದ್ಧ ಆಲಯದಲ್ಲಿ ಬೆಂಕಿ ಹಚ್ಚುತ್ತಾರೆ; ನಿನ್ನ ಹೆಸರಿನ ನಿವಾಸವನ್ನು ಭೂಮಿಗೆ ಕೆಡವಿ ಹೊಲೆ ಮಾಡುತ್ತಾರೆ. ಅವುಗಳನ್ನು ಒಟ್ಟಾಗಿ ಕೆಡವಿ ಬಿಡೋಣ ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ; ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಡು ತ್ತಾರೆ. ನಮ್ಮ ಗುರುತುಗಳನ್ನು ನೋಡದೆ ಇದ್ದೇವೆ; ಇನ್ನು ಮೇಲೆ ಯಾವ ಪ್ರವಾದಿಯೂ ಇರುವದಿಲ್ಲ ಇಲ್ಲವೆ ಇದು ಎಷ್ಟರವರೆಗೆ ಎಂದು ತಿಳಿದವನು ನಮ್ಮಲ್ಲಿ ಯಾರೂ ಇಲ್ಲ. ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?
- Psalm 79:1–4 ಕೀರ್ತನೆಗಳು 79:1–4ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ. ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ. ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ. ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
- Ezekiel 22:4 ಯೆಹೆಜ್ಕೇಲನು 22:4ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ.
- Jeremiah 24:9–10 ಯೆರೆಮೀಯ 24:9–10ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು. ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು.
- 2 Chronicles 7:20–21 2 ಪೂರ್ವಕಾಲವೃತ್ತಾಂತ 7:20–21ನಾನು ಅವರಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ನಿರ್ಮೂಲ ಮಾಡುವೆನು. ಇದಲ್ಲದೆ ನನ್ನ ಹೆಸರಿಗೋಸ್ಕರ ನಾನು ಪರಿಶುದ್ಧ ಮಾಡಿದ ಈ ಆಲ ಯವನ್ನು ನನ್ನ ಸಮ್ಮುಖದಿಂದ ತಳ್ಳಿ ಅದನ್ನು ಸಮಸ್ತ ಜನಗಳಲ್ಲಿ ಗಾದೆಯಾಗಿಯೂ ಹಾಸ್ಯವಾಗಿಯೂ ಮಾಡುವೆನು. ಎತ್ತರವಾಗಿರುವ ಈ ಮನೆಯು ಹಾದು ಹೋಗುವ ಪ್ರತಿ ಮನುಷ್ಯನಿಗೆ ಆಶ್ಚರ್ಯ ವಾಗಿರುವದು; ಅವನು ಈ ದೇಶಕ್ಕೂ ಈ ಮನೆಗೂ ಕರ್ತನು ಹೀಗೆ ಯಾಕೆ ಮಾಡಿದನು ಅನ್ನುವನು.ಅದಕ್ಕೆ ಅವರು ತಂದೆಗಳನ್ನು ಐಗುಪ್ತದೇಶ ದೊಳಗಿಂದ ಬರಮಾಡಿದ ತಮ್ಮ ದೇವರಾದ ಕರ್ತ ನನ್ನು ತೊರೆದು ಅನ್ಯದೇವರುಗಳನ್ನು ಹಿಂಬಾಲಿಸಿ ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಆತನು ಈ ಕೇಡೆಲ್ಲಾ ಅವರ ಮೇಲೆ ಬರಮಾಡಿದನು ಎಂದು ಹೇಳುವರು.
- Deuteronomy 28:37 ಧರ್ಮೋಪದೇಶಕಾಂಡ 28:37ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ.
- Micah 3:12 ಮೀಕ 3:12ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Lamentations 1:4 ಪ್ರಲಾಪಗಳು 1:4ಚೀಯೋನಿನ ಮಾರ್ಗಗಳು ದುಃಖಿಸುತ್ತವೆ, ಯಾಕಂದರೆ ಪವಿತ್ರ ಹಬ್ಬಗಳಿಗೆ ಯಾರೂ ಬರಲಿಲ್ಲ; ಆಕೆಯ ಎಲ್ಲಾ ಬಾಗಿಲುಗಳು ಹಾಳುಬಿದ್ದಿವೆ. ಯಾಜಕರು ನಿಟ್ಟುಸಿರಿಡುತ್ತಾರೆ, ಕನ್ಯೆಯರು ಸಂಕಟಪಡುತ್ತಾರೆ. ಆಕೆಯು ವ್ಯಥೆಯಲ್ಲಿದ್ದಾಳೆ.
- Lamentations 2:15–17 ಪ್ರಲಾಪಗಳು 2:15–17ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ? ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿ ತೆರೆದಿದ್ದಾರೆ; ಅವರು ಸಿಳ್ಳು ಹಾಕಿ ಹಲ್ಲು ಕಡಿಯುತ್ತಾ--ನಾವು ಅವಳನ್ನು ನುಂಗಿ ಬಿಟ್ಟಿದ್ದೇವೆ; ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ; ಅದನ್ನು ನಾವು ಕಂಡಿದ್ದೇವೆ; ನೋಡಿ ದ್ದೇವೆ ಎಂದು ಅವರು ಹೇಳುತ್ತಾರೆ. ಕರ್ತನು ತಾನು ಸಂಕಲ್ಪಿಸಿದ್ದನ್ನು ಮಾಡಿದ್ದಾನೆ; ಆತನು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತನ್ನ ವಾಕ್ಯವನ್ನು ಪೂರೈಸಿದ್ದಾನೆ. ಆತನು ಕೆಡವಿ ಕನಿಕರಿಸಲಿಲ್ಲ; ಆತನು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿ ಅವನ ಕೊಂಬನ್ನು ಎತ್ತಿದ್ದಾನೆ.
- Jeremiah 19:8 ಯೆರೆಮೀಯ 19:8ಈ ಪಟ್ಟಣಗಳನ್ನು ಹಾಳಾಗಿಯೂ ತಿರಸ್ಕರಿಸಲ್ಪಡುವಂತೆಯೂ ಮಾಡುವೆನು; ಅದನ್ನು ಹಾದುಹೋಗುವವರೆಲ್ಲರು ಅದರ ಎಲ್ಲಾ ಬಾಧೆಗಳ ನಿಮಿತ್ತ ವಿಸ್ಮಯಹೊಂದಿ ಸಿಳ್ಳು ಹಾಕುವರು.
- Leviticus 26:31–32 ಯಾಜಕಕಾಂಡ 26:31–32ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು. ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು.