Psalms · chapter 74 · verse 3
Psalm 74:3 in Kannada
ನಿನ್ನ ಪಾದಗಳನ್ನು ಸದಾಕಾಲದ ನಾಶನಗಳಿಗೆ, ಅಂದರೆ ಶತ್ರುವು ಪರಿಶುದ್ಧ ಸ್ಥಳದಲ್ಲಿ ಎಲ್ಲವನ್ನು ಕೆಟ್ಟತನದಿಂದ ಮಾಡಿದ್ದಕ್ಕೆ ತಿರುಗಿಸು.
Ninna paadagalannu sadaakaalada naashanagalige, andare shatruvu parishuddha sthaladalli ellavannu kettatanadinda maadiddakke tirugisu.
Psalm 74:3 in English
- King James Version (KJV)
- Lift up thy feet unto the perpetual desolations; [even] all [that] the enemy hath done wickedly in the sanctuary.
- World English Bible (WEB)
- Lift up your feet to the perpetual ruins, all the evil that the enemy has done in the sanctuary.
- American Standard Version (ASV)
- Lift up thy feet unto the perpetual ruins, All the evil that the enemy hath done in the sanctuary.
- Bible in Basic English (BBE)
- Go up and see the unending destruction; all the evil which your haters have done in the holy place;
- Darby Translation (DBY)
- Lift up thy steps unto the perpetual desolations: everything in the sanctuary hath the enemy destroyed.
- Webster's Bible (WBS)
- Lift up thy feet to the perpetual desolations; [even] all [that] the enemy hath done wickedly in the sanctuary.
- Young's Literal Translation (YLT)
- Lift up Thy steps to the perpetual desolations, Everything the enemy did wickedly in the sanctuary.
Read in context
- 1ಓ ದೇವರೇ, ಸದಾಕಾಲಕ್ಕೆ ತಳ್ಳಿಬಿಟ್ಟದ್ದೇಕೆ? ನಿನ್ನ ಮೇವಿನ ಕುರಿಮಂದೆಗೆ ವಿರೋಧವಾಗಿ ನಿನ್ನ ಕೋಪವು ಹೊಗೆಯಾಡುವದು ಯಾಕೆ?
- 2ಪೂರ್ವದಲ್ಲಿ ನೀನು ಕೊಂಡುಕೊಂಡ ಸಭೆಯನ್ನೂ ವಿಮೋಚಿಸಿದ ಬಾಧ್ಯತೆಯ ಕೋಲನ್ನೂ ನೀನು ವಾಸಮಾಡಿದ ಈ ಚೀಯೋನ್ ಪರ್ವತವನ್ನೂ ಜ್ಞಾಪಕಮಾಡಿಕೋ.
- 3ನಿನ್ನ ಪಾದಗಳನ್ನು ಸದಾಕಾಲದ ನಾಶನಗಳಿಗೆ, ಅಂದರೆ ಶತ್ರುವು ಪರಿಶುದ್ಧ ಸ್ಥಳದಲ್ಲಿ ಎಲ್ಲವನ್ನು ಕೆಟ್ಟತನದಿಂದ ಮಾಡಿದ್ದಕ್ಕೆ ತಿರುಗಿಸು.
- 4ನಿನ್ನ ವೈರಿಗಳು ನಿನ್ನ ಸಭೆಗಳ ಮಧ್ಯದಲ್ಲಿ ಗರ್ಜಿಸುತ್ತಾರೆ; ತಮ್ಮ ಧ್ವಜಗಳನ್ನು ಗುರುತುಗಳಾಗಿ ಇಟ್ಟಿದ್ದಾರೆ.
- 5ದಟ್ಟವಾದ ಮರಗಳಲ್ಲಿ ಕೊಡಲಿ ಎತ್ತುವವನ ಹಾಗೆ ಮನುಷ್ಯನು ಪ್ರಸಿದ್ಧನಾಗಿದ್ದಾನೆ;
Cross references
- Lamentations 1:10 ಪ್ರಲಾಪಗಳು 1:10ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
- Daniel 9:17 ದಾನಿಯೇಲನು 9:17ಆದದರಿಂದ ಈಗ, ಓ ನಮ್ಮ ದೇವರೇ, ಈ ನಿನ್ನ ಸೇವಕನ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆ ಯನ್ನೂ ಕೇಳಿ ಹಾಳಾದ ನಿನ್ನ ಪರಿಶುದ್ಧ ಸ್ಥಳದ ಮೇಲೆ ಕರ್ತನಿಗೋಸ್ಕರ ನಿನ್ನ ಮುಖವನ್ನು ಪ್ರಕಾಶಪಡಿಸು.
- Psalm 79:1 ಕೀರ್ತನೆಗಳು 79:1ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Mark 11:17 ಮಾರ್ಕನು 11:17ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
- Isaiah 64:10–11 ಯೆಶಾಯ 64:10–11ನಿನ್ನ ಪರಿಶುದ್ಧ ಪಟ್ಟಣಗಳು ಅಡವಿ ಯಾದವು; ಚೀಯೋನು ಅಡವಿಯಾಯಿತು; ಯೆರೂ ಸಲೇಮು ಹಾಳಾಯಿತು. ನಮ್ಮ ತಂದೆಗಳು ನಿನ್ನನ್ನು ಕೊಂಡಾಡಿದ ನಮ್ಮ ಪರಿಶುದ್ಧ ಮತ್ತು ಸುಂದರ ವಾದ ಮನೆ ಬೆಂಕಿಯಿಂದ ಸುಟ್ಟುಹೋಯಿತು; ನಮ್ಮ ಸೊಗಸಾದವುಗಳೆಲ್ಲಾ ನಾಶವಾದವು.ಇವು ಹೀಗಿರಲಾಗಿ ಕರ್ತನೇ, ನಿನ್ನನ್ನು ಬಿಗಿಹಿಡುಕೊಳ್ಳು ತ್ತೀಯೋ? ಮೌನವಾಗಿದ್ದು ನಮ್ಮನ್ನು ಅತ್ಯಧಿಕವಾಗಿ ಕುಗ್ಗಿಸುವಿಯೋ?
- Nehemiah 2:3 ನೆಹೆಮೀಯ 2:3ಆಗ ನಾನು ಬಹು ಭಯಪಟ್ಟು ಅರಸನಿಗೆ--ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿ ಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುವಾಗ ನನ್ನ ಮುಖವು ದುಃಖವಿಲ್ಲದೆ ಇರುವದು ಹೇಗೆ ಅಂದೆನು.
- Revelation 11:2 ಪ್ರಕಟನೆ 11:2ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
- Psalm 44:23 ಕೀರ್ತನೆಗಳು 44:23ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.
- Micah 1:3 ಮೀಕ 1:3ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
- Daniel 9:27 ದಾನಿಯೇಲನು 9:27ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
- Nehemiah 2:13 ನೆಹೆಮೀಯ 2:13ನಾನು ರಾತ್ರಿಯಲ್ಲಿ ತಗ್ಗಿನ ಬಾಗಲಿನಿಂದ ಹೊರಟು ಸರ್ಪದ ಬಾವಿಯನ್ನು ದಾಟಿ ತಿಪ್ಪೆದಿಬ್ಬೆಯ ಬಾಗಲಿಗೆ ಬಂದು ಕೆಡವಿ ಹಾಕಲ್ಪಟ್ಟ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಲುಗಳನ್ನು ಚೆನ್ನಾಗಿ ನೋಡಿದೆನು.