Ezekiel · chapter 6 · verse 4
Ezekiel 6:4 in Kannada
ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು.
Nimma yajnyavedigalu haalaaguvavu; nimma pratimegalu muriyalpadu vavu; nimmalli hataraada manushyarannu nimma vigra hagala munde naanu bisaaduvenu.
Ezekiel 6:4 in English
- King James Version (KJV)
- And your altars shall be desolate, and your images shall be broken: and I will cast down your slain [men] before your idols.
- World English Bible (WEB)
- Your altars will become desolate, and your incense altars will be broken. I will cast down your slain men before your idols.
- American Standard Version (ASV)
- And your altars shall become desolate, and your sun-images shall be broken; and I will cast down your slain men before your idols.
- Bible in Basic English (BBE)
- And your altars will be made waste, and your sun-images will be broken: and I will have your dead men placed before your images.
- Darby Translation (DBY)
- And your altars shall be desolate, and your sun-images shall be broken; and I will cast down your slain [men] before your idols;
- Webster's Bible (WBS)
- And your altars shall be desolate, and your images shall be broken: and I will cast down your slain [men] before your idols.
- Young's Literal Translation (YLT)
- And desolated have been your altars, And broken your images, And I have caused your wounded to fall before your idols,
Read in context
- 2ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು ಅವುಗಳಿಗೆ ವಿರೋಧವಾಗಿ ಪ್ರವಾದಿಸಿ
- 3ಇಸ್ರಾಯೇ ಲಿನ ಪರ್ವತಗಳೇ, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಪರ್ವತಗಳಿಗೂ ಗುಡ್ಡ ಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳು ತ್ತಾನೆ--ಇಗೋ, ನಾನು, ನಾನೇ ನಿಮ್ಮ ಮೇಲೆ ಕತ್ತಿ ಯನ್ನು ತಂದು ನಿಮ್ಮ ಎತ್ತರ ಸ್ಥಳಗಳನ್ನು (ಮೇಡುಗ ಳನ್ನು) ನಾಶಮಾಡುತ್ತೇನೆ.
- 4ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು.
- 5ಇಸ್ರಾ ಯೇಲನ ಮಕ್ಕಳ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಯಜ್ಞವೇದಿಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿಬಿಡುವೆನು.
- 6ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು.
Cross references
- 2 Chronicles 14:5 2 ಪೂರ್ವಕಾಲವೃತ್ತಾಂತ 14:5ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು.
- Leviticus 26:30 ಯಾಜಕಕಾಂಡ 26:30ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
- 2 Kings 23:14 2 ಅರಸುಗಳು 23:14ವಿಗ್ರಹಗಳನ್ನು ಮುರಿದು ವಿಗ್ರಹದ ತೋಪುಗಳನ್ನು ಕಡಿದುಬಿಟ್ಟು ಅವುಗಳ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.
- 2 Kings 23:16–20 2 ಅರಸುಗಳು 23:16–20ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಕಳುಹಿಸಿ, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು ಈ ಮಾತುಗಳನ್ನು ಪ್ರಕಟಿಸಿದ ದೇವರ ಮನುಷ್ಯನು ಸಾರಿದ ಕರ್ತನ ವಾಕ್ಯದ ಪ್ರಕಾರ ಬಲಿಪೀಠದ ಮೇಲೆ ಅವುಗಳನ್ನು ಸುಟ್ಟುಬಿಟ್ಟು ಅದನ್ನು ಹೊಲೆಮಾಡಿದನು. ಆಗ ಅವನು--ನಾನು ನೋಡಿದ ಆ ಶಿರೋನಾಮವೇನು ಅಂದನು. ಅದಕ್ಕೆ ಆ ಪಟ್ಟಣದ ಜನರು ಅವನಿಗೆಯೆಹೂದದಿಂದ ಬಂದು ಬೇತೇಲಿನ ಬಲಿಪೀಠಕ್ಕೆ ವಿರೋಧವಾಗಿ ನೀನು ಮಾಡಿದ ಈ ಕಾರ್ಯಗಳನ್ನು ಸಾರಿ ಹೇಳಿದ ದೇವರ ಮನುಷ್ಯನ ಸಮಾಧಿ ಅಂದರು. ಆಗ ಅವನು--ಅವನನ್ನು ಬಿಟ್ಟುಬಿಡಿರಿ; ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ ಅಂದನು. ಹಾಗೆಯೇ ಅವರು ಅವನ ಎಲುಬುಗಳನ್ನು ಸಮಾರ್ಯ ದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಸುಮ್ಮನೆ ಬಿಟ್ಟರು. ಕೋಪವನ್ನೆಬ್ಬಿಸುವದಕ್ಕೆ ಇಸ್ರಾ ಯೇಲಿನ ಅರಸುಗಳು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ, ಕರ್ತನ ಕೋಪವನ್ನೆಬ್ಬಿಸಿದ ಉನ್ನತ ಸ್ಥಳಗಳ ಮನೆಗಳನ್ನೆಲ್ಲಾ ಯೋಷೀಯನು ಕೆಡವಿಹಾಕಿ ಬೇತೇಲಿ ನಲ್ಲಿ ತಾನು ಮಾಡಿದ ಎಲ್ಲಾ ಕ್ರಿಯೆಗಳ ಪ್ರಕಾರ ಅವುಗಳಿಗೆ ಮಾಡಿ, ಆ ಸ್ಥಳಗಳಲ್ಲಿದ್ದ ಉನ್ನತ ಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ತಿರಿಗಿ ಬಂದನು.
- Jeremiah 8:1–2 ಯೆರೆಮೀಯ 8:1–2ಕರ್ತನು ಹೇಳುವದೇನಂದರೆ--ಆ ಕಾಲದಲ್ಲಿ ಯೆಹೂದದ ಅರಸರು ಅವರ ಪ್ರಧಾನರು ಯಾಜಕರು ಪ್ರವಾದಿಗಳು ಯೆರೂಸಲೇಮಿನ ನಿವಾಸಿಗಳು ಇವರೆಲ್ಲರ ಎಲುಬುಗಳನ್ನು ಅವರ ಸಮಾಧಿಗಳೊಳಗಿಂದ ಹೊರಗೆ ಅವರು ತರುವರು. ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.
- Jeremiah 43:13 ಯೆರೆಮೀಯ 43:13ಇದ ಲ್ಲದೆ ಐಗುಪ್ತದೇಶದಲ್ಲಿರುವ ಬೇತ್ಷೆಮೇಷಿನ ವಿಗ್ರಹ ಗಳನ್ನು ಮುರಿದುಹಾಕಿ ಐಗುಪ್ತದ ದೇವರುಗಳ ಮನೆ ಗಳನ್ನು ಬೆಂಕಿಯಿಂದ ಸುಡುವನು ಎಂಬದು.
- 2 Chronicles 34:4–5 2 ಪೂರ್ವಕಾಲವೃತ್ತಾಂತ 34:4–5ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು.
- 1 Kings 13:2 1 ಅರಸುಗಳು 13:2ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
- Ezekiel 6:13 ಯೆಹೆಜ್ಕೇಲನು 6:13ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
- Ezekiel 6:5–6 ಯೆಹೆಜ್ಕೇಲನು 6:5–6ಇಸ್ರಾ ಯೇಲನ ಮಕ್ಕಳ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಯಜ್ಞವೇದಿಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿಬಿಡುವೆನು. ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು.