Genesis · chapter 11 · verse 7
Genesis 11:7 in Kannada
ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.
Aadadarinda naavu ilidu hogi avaru obbara maatu obbaru tiliyada haage avara bhaasheyannu galibili maadona andanu.
Genesis 11:7 in English
- King James Version (KJV)
- Go to, let us go down, and there confound their language, that they may not understand one another’s speech.
- World English Bible (WEB)
- Come, let’s go down, and there confuse their language, that they may not understand one another’s speech.”
- American Standard Version (ASV)
- Come, let us go down, and there confound their language, that they may not understand one another’s speech.
- Bible in Basic English (BBE)
- Come, let us go down and take away the sense of their language, so that they will not be able to make themselves clear to one another.
- Darby Translation (DBY)
- Come, let us go down, and there confound their language, that they may not understand one another's speech.
- Webster's Bible (WBS)
- Come, let us go down, and there confound their language, that they may not understand one another's speech.
- Young's Literal Translation (YLT)
- Give help, let us go down, and mingle there their pronunciation, so that a man doth not understand the pronunciation of his companion.'
Read in context
- 5ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.
- 6ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.
- 7ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.
- 8ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
- 9ಆದದರಿಂದ ಅದಕ್ಕೆ ಬಾಬೆಲ್ ಎಂದು ಹೆಸರಾಯಿತು; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು.
Cross references
- Psalm 33:10 ಕೀರ್ತನೆಗಳು 33:10ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ.
- Genesis 1:26 ಆದಿಕಾಂಡ 1:26ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು.
- Job 5:12–13 ಯೋಬನು 5:12–13ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ. ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು.
- Psalm 55:9 ಕೀರ್ತನೆಗಳು 55:9ಓ ಕರ್ತನೇ, (ಅವರನ್ನು) ನಾಶಮಾಡು. ಅವರ ನಾಲಿಗೆಗಳನ್ನು ಭೇದಿಸು; ಯಾಕಂದರೆ ಬಲಾತ್ಕಾರ ವನ್ನೂ ವಿವಾದವನ್ನೂ ಪಟ್ಟಣದಲ್ಲಿ ನಾನು ನೋಡಿ ದ್ದೇನೆ;
- 1 Corinthians 14:2–11 1 ಕೊರಿಂಥದವರಿಗೆ 14:2–11ಭಾಷೆಯನ್ನಾಡುವವನು ದೇವರ ಸಂಗಡಲೇ ಹೊರತು ಮನುಷ್ಯರ ಸಂಗಡ ಮಾತನಾಡು ವದಿಲ್ಲ. ಅವನು ಆತ್ಮನಲ್ಲಿದ್ದು ರಹಸ್ಯಗಳನ್ನು ನುಡಿ ಯುತ್ತಿದ್ದರೂ ಯಾರೂ ಅವನನ್ನು ತಿಳುಕೊಳ್ಳುವದಿಲ್ಲ. ಪ್ರವಾದಿಸುವವನಾದರೋ ಮನುಷ್ಯರ ಸಂಗಡ ಮಾತನಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟು ಮಾಡುತ್ತಾನೆ. ಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುತ್ತಾನೆ. ಪ್ರವಾದಿಸು ವವನಾದರೋ ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡು ತ್ತಾನೆ. ನೀವೆಲ್ಲರೂ ಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸುತ್ತೇನೆ; ಆದರೆ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ಭಾಷೆಗಳನ್ನಾಡು ವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ಭಾಷೆಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ. ಹೀಗಿರುವದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟ ವಾದದ್ದರಿಂದಾಗಲಿ ಇಲ್ಲವೆ ಜ್ಞಾನದಿಂದಾಗಲಿ ಇಲ್ಲವೆ ಪ್ರವಾದನೆಯಿಂದಾಗಲಿ ಇಲ್ಲವೆ ಬೋಧನೆಯಿಂದಾ ಗಲಿ ಮಾತನಾಡದೆ ಭಾಷೆಗಳಿಂದ ಮಾತ್ರ ಮಾತನಾಡಿ ದರೆ ನನ್ನಿಂದ ನಿಮಗೇನು ಪ್ರಯೋಜನ? ಕೊಳಲು ವೀಣೆ ಮೊದಲಾದ ಅಚೇತನವಾದ್ಯಗಳು ಸ್ವರಗಳಲಿ ಯಾವ ಭೇದವನ್ನೂ ತೋರಿಸದಿದ್ದರೆ ಊದಿದ್ದು ಅಥವಾ ಬಾರಿಸಿದ್ದು ತಿಳಿಯುವದು ಹೇಗೆ? ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ತನ್ನನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವವನು ಯಾರು? ಹಾಗೆಯೇ ನೀವು ಸುಲಭವಾಗಿ ತಿಳಿಯಬಹುದಾದ ಮಾತುಗಳನ್ನಾಡದೆ ಹೋದರೆ ಮಾತನಾಡಿದ್ದು ಏನೆಂದು ಹೇಗೆ ತಿಳಿದೀತು? ನೀವು ಗಾಳಿಯಲ್ಲಿ ಮಾತನಾಡಿದ ಹಾಗಿರುವದಷ್ಟೆ. ಲೋಕದಲ್ಲಿ ಅನೇಕ ವಿಧವಾದ ಸ್ವರಗಳು ಇದ್ದರೂ ಇರಬಹುದು; ಆದರೆ ಅವುಗಳಲ್ಲಿ ಅರ್ಥವಿಲ್ಲದ್ದು ಒಂದಾದರೂ ಇಲ್ಲ. ಆದದರಿಂದ ಭಾಷೆಯ ಅರ್ಥವು ನನಗೆ ಗೊತ್ತಿಲ್ಲ ದಿದ್ದರೆ ಮಾತನಾಡುವವನಿಗೆ ನಾನು ಅನ್ಯದೇಶ ದವನಂತಿರುವೆನು; ಮಾತನಾಡುವವನು ನನಗೆ ಅನ್ಯ ದೇಶದವನಂತಿರುವನು.
- 1 Corinthians 14:23 1 ಕೊರಿಂಥದವರಿಗೆ 14:23ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ?
- Acts 2:4–11 ಅಪೊಸ್ತಲರ ಕೃತ್ಯಗಳು 2:4–11ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು. ಆಕಾಶದ ಕೆಳಗಿರುವ ಪ್ರತಿಯೊಂದು ಜನಾಂಗದವರೊಳಗಿಂದ (ಬಂದಿದ್ದ) ಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸ ಮಾಡುತ್ತಿದ್ದರು ಆಗ ಈ ಶಬ್ದವು ಬಹು ದೂರದವರೆಗೆ ಕೇಳಿಸಿದ್ದರಿಂದ ಜನಸಮೂಹವು ಕೂಡಿ ಬಂದು ಪ್ರತಿಯೊಬ್ಬನು ತನ್ನ ತನ್ನ ಸ್ವಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಕೇಳಿ ಭ್ರಮೆಗೊಂಡರು. ಅವರು ಆಶ್ಚರ್ಯಪಟ್ಟು ಬೆರ ಗಾಗಿ--ಇಗೋ, ಮಾತನಾಡುತ್ತಿರುವ ಇವರೆಲ್ಲರೂ ಗಲಿಲಾಯದವರಲ್ಲವೇ? ಹಾಗಾದರೆ ಪ್ರತಿಯೊ ಬ್ಬನು ನಮ್ಮ ಸ್ವಂತ ಹುಟ್ಟುಭಾಷೆಯಲ್ಲಿ ಮಾತನಾಡು ವದನ್ನು ನಾವು ಕೇಳುವದು ಹೇಗೆ? ಪಾರ್ಥ್ಯರೂ ಮೇದ್ಯರೂ ಎಲಾಮ್ಯರೂ ಮೆಸೊಪೊತಾಮ್ಯ, ಯೂದಾಯ, ಕಪ್ಪದೋಕ್ಯ, ಪೊಂತ, ಆಸ್ಯ, ಫ್ರುಗ್ಯ, ಪಂಫುಲ್ಯ, ಐಗುಪ್ತದಲ್ಲಿದ್ದವರು, ಕುರೇನದ ಮಗ್ಗುಲಲ್ಲಿ ರುವ ಲಿಬ್ಯದ ಪ್ರಾಂತ್ಯದವರು, ರೋಮದ ಪ್ರವಾಸಿ ಗಳು, ಯೆಹೂದ್ಯರು, ಯೆಹೂದ್ಯ ಮತಾವಲಂಬಿಗಳು, ಕ್ರೇತ್ಯರು ಮತ್ತು ಅರಬಿಯರು ಆಗಿರುವ ನಾವು ನಮ್ಮ ಭಾಷೆಗಳಲ್ಲಿ ದೇವರ ಮಹತ್ಕಾರ್ಯಗಳನ್ನು ಇವರು ಹೇಳುವದನ್ನು ಕೇಳುತ್ತೇವೆ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
- Genesis 42:23 ಆದಿಕಾಂಡ 42:23ಆದರೆ ಅವನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಾನೆಂದು ಅವರಿಗೆ ಗೊತ್ತಾಗಲಿಲ್ಲ; ದ್ವಿಭಾಷೆಯಿಂದ ಅವರ ಸಂಗಡ ಮಾತನಾಡಿದನು.
- Psalm 2:4 ಕೀರ್ತನೆಗಳು 2:4ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು! ಕರ್ತನು ಅವರನ್ನು ಪರಿಹಾಸ್ಯ ಮಾಡುವನು.
- Jeremiah 5:15 ಯೆರೆಮೀಯ 5:15ಇಗೋ, ಇಸ್ರಾಯೇಲ್ಯನ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆಂದು ಕರ್ತನು ಅನ್ನುತ್ತಾನೆ. ಅದು ಬಲವಾದ ಜನಾಂಗವು ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು.
- Genesis 3:22 ಆದಿಕಾಂಡ 3:22ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.
- Job 12:20 ಯೋಬನು 12:20ನಂಬಿಕೆಯು ಳ್ಳವರ ಮಾತನ್ನು ತೆಗೆದುಹಾಕುತ್ತಾನೆ; ವೃದ್ಧರ ವಿವೇಕ ವನ್ನು ಇಲ್ಲದಾಗಿ ಮಾಡುತ್ತಾನೆ.