Genesis · chapter 11 · verse 6
Genesis 11:6 in Kannada
ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.
Kartanu--igo, janavu onde; avarellarige bhaasheyoo onde. Eega avaru idannu maadalaarambhisiddaare; innu munde avaru maaduvadakkoo oohisuvadakkoo addi yaagadu.
Genesis 11:6 in English
- King James Version (KJV)
- And the LORD said, Behold, the people [is] one, and they have all one language; and this they begin to do: and now nothing will be restrained from them, which they have imagined to do.
- World English Bible (WEB)
- The LORD said, “Behold, they are one people, and they all have one language, and this is what they begin to do. Now nothing will be withheld from them, which they intend to do.
- American Standard Version (ASV)
- And Jehovah said, Behold, they are one people, and they have all one language; and this is what they begin to do: and now nothing will be withholden from them, which they purpose to do.
- Bible in Basic English (BBE)
- And the Lord said, See, they are all one people and have all one language; and this is only the start of what they may do: and now it will not be possible to keep them from any purpose of theirs.
- Darby Translation (DBY)
- And Jehovah said, Behold, the people is one, and have all one language; and this have they begun to do. And now will they be hindered in nothing that they meditate doing.
- Webster's Bible (WBS)
- And the LORD said, Behold, the people [is] one, and they have all one language; and this they begin to do: and now nothing will be restrained from them, which they have imagined to do.
- Young's Literal Translation (YLT)
- and Jehovah saith, 'Lo, the people [is] one, and one pronunciation [is] to them all, and this it hath dreamed of doing; and now, nothing is restrained from them of that which they have purposed to do.
Read in context
- 4ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;
- 5ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.
- 6ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.
- 7ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.
- 8ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
Cross references
- Psalm 2:1–4 ಕೀರ್ತನೆಗಳು 2:1–4ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ. ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು! ಕರ್ತನು ಅವರನ್ನು ಪರಿಹಾಸ್ಯ ಮಾಡುವನು.
- Genesis 11:1 ಆದಿಕಾಂಡ 11:1ಆಗ ಭೂಮಿಯಲ್ಲೆಲ್ಲಾ ಒಂದೇ ಭಾಷೆ, ಒಂದೇ ಮಾತು ಇತ್ತು.
- Genesis 3:22 ಆದಿಕಾಂಡ 3:22ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.
- Luke 1:51 ಲೂಕನು 1:51ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ;
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Genesis 9:19 ಆದಿಕಾಂಡ 9:19ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
- Genesis 6:5 ಆದಿಕಾಂಡ 6:5ಮನುಷ್ಯನ ದುಷ್ಟತ್ವವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳ ಕಲ್ಪನೆಗಳೆಲ್ಲಾ ಯಾವಾಗಲೂ ಬರೀ ಕೆಟ್ಟವುಗಳೆಂದೂ ದೇವರು ನೋಡಿದನು.
- Genesis 8:21 ಆದಿಕಾಂಡ 8:21ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.
- Acts 17:26 ಅಪೊಸ್ತಲರ ಕೃತ್ಯಗಳು 17:26ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು.
- Judges 10:14 ನ್ಯಾಯಸ್ಥಾಪಕರು 10:14ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು.