Genesis · chapter 11 · verse 8
Genesis 11:8 in Kannada
ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
Heege kartanu avarannu allinda bhoomiya melellaa chadarisibittanu. Aaga avaru pattana kattuvadannu nillisi bittaru.
Genesis 11:8 in English
- King James Version (KJV)
- So the LORD scattered them abroad from thence upon the face of all the earth: and they left off to build the city.
- World English Bible (WEB)
- So the LORD scattered them abroad from there on the surface of all the earth. They stopped building the city.
- American Standard Version (ASV)
- So Jehovah scattered them abroad from thence upon the face of all the earth: and they left off building the city.
- Bible in Basic English (BBE)
- So the Lord God sent them away into every part of the earth: and they gave up building their town.
- Darby Translation (DBY)
- And Jehovah scattered them thence over the face of the whole earth. And they left off building the city.
- Webster's Bible (WBS)
- So the LORD scattered them abroad from thence upon the face of all the earth: and they left off to build the city.
- Young's Literal Translation (YLT)
- And Jehovah doth scatter them from thence over the face of all the earth, and they cease to build the city;
Read in context
- 6ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.
- 7ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.
- 8ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು. ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು.
- 9ಆದದರಿಂದ ಅದಕ್ಕೆ ಬಾಬೆಲ್ ಎಂದು ಹೆಸರಾಯಿತು; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು.
- 10ಶೇಮನ ವಂಶಾವಳಿಗಳು ಇವೇ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು.
Cross references
- Luke 1:51 ಲೂಕನು 1:51ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ;
- Genesis 10:32 ಆದಿಕಾಂಡ 10:32ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
- Genesis 10:25 ಆದಿಕಾಂಡ 10:25ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್.
- Deuteronomy 32:8 ಧರ್ಮೋಪದೇಶಕಾಂಡ 32:8ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.
- Genesis 11:4 ಆದಿಕಾಂಡ 11:4ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;
- Genesis 11:9 ಆದಿಕಾಂಡ 11:9ಆದದರಿಂದ ಅದಕ್ಕೆ ಬಾಬೆಲ್ ಎಂದು ಹೆಸರಾಯಿತು; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು.
- Genesis 49:7 ಆದಿಕಾಂಡ 49:7ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು.