Genesis · chapter 17 · verse 6
Genesis 17:6 in Kannada
ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
Naanu ninnannu atyadhikavaagi vruddhi yaagamaadi ninninda janaangagalaaga maaduvenu; ninninda arasaru huttuvaru.
Genesis 17:6 in English
- King James Version (KJV)
- And I will make thee exceeding fruitful, and I will make nations of thee, and kings shall come out of thee.
- World English Bible (WEB)
- I will make you exceedingly fruitful, and I will make nations of you. Kings will come out of you.
- American Standard Version (ASV)
- And I will make thee exceeding fruitful, and I will make nations of thee, and kings shall come out of thee.
- Bible in Basic English (BBE)
- I will make you very fertile, so that nations will come from you and kings will be your offspring.
- Darby Translation (DBY)
- And I will make thee exceedingly fruitful, and I will make nations of thee, and kings shall come out of thee.
- Webster's Bible (WBS)
- And I will make thee exceedingly fruitful, and I will make nations of thee; and kings shall proceed from thee.
- Young's Literal Translation (YLT)
- and I have made thee exceeding fruitful, and made thee become nations, and kings go out from thee.
Read in context
- 4ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.
- 5ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
- 6ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
- 7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- 8ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
Cross references
- Genesis 17:4 ಆದಿಕಾಂಡ 17:4ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.
- Matthew 1:6–17 ಮತ್ತಾಯನು 1:6–17ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು; ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು; ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು; ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು; ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು; ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು. ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು; ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು; ಅಜೋರ ನಿಂದ ಸದೋಕನು ಹುಟ್ಟಿದನು; ಸದೋಕನಿಂದ ಅಖೀಮನು ಹುಟ್ಟಿದನು; ಅಖೀಮನಿಂದ ಎಲಿ ಹೂದನು ಹುಟ್ಟಿದನು; ಎಲಿಹೂದನಿಂದ ಎಲಿ ಯಾಜರನು ಹುಟ್ಟಿದನು; ಎಲಿಯಾಜರನಿಂದ ಮತ್ತಾನ ನು ಹುಟ್ಟಿದನು; ಮತ್ತಾನನಿಂದ ಯಾಕೋಬನು ಹುಟ್ಟಿದನು; ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು. ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಒಟ್ಟು ಹದಿನಾಲ್ಕು ತಲೆಗಳು; ದಾವೀದನು ಮೊದಲು ಗೊಂಡು ಬಾಬೆಲಿಗೆ ಸೆರೆಹೋಗುವ ವರೆಗೆ ಹದಿ ನಾಲ್ಕು ತಲೆಗಳು; ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ತಲೆಗಳು.
- Genesis 35:11 ಆದಿಕಾಂಡ 35:11ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
- Genesis 17:16 ಆದಿಕಾಂಡ 17:16ಆಕೆಯನ್ನು ನಾನು ಆಶೀರ್ವದಿ ಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಹೌದು, ಜನಾಂಗಗಳ ತಾಯಿಯಾ ಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ಜನರ ಅರಸರು ಹುಟ್ಟುವರು ಅಂದನು.
- Genesis 17:20 ಆದಿಕಾಂಡ 17:20ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ಇಗೋ, ನಾನು ಅವನನ್ನು ಆಶೀರ್ವದಿ ಸಿದೆನು. ಅವನನ್ನು ಅಭಿವೃದ್ಧಿಮಾಡಿ ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು.
- Ezra 4:20 ಎಜ್ರನು 4:20ನದಿಯ ಆಚೆಯಲ್ಲಿರುವ ಎಲ್ಲಾ ಸ್ಥಳಗಳ ಮೇಲೆ ಆಳುತ್ತಾ ಇದ್ದ ಯೆರೂಸಲೇಮಿನ ಪರಾಕ್ರಮಶಾಲಿಗಳಾದ ಅರಸು ಗಳು ಇದ್ದರು; ಸುಂಕವೂ ಕಪ್ಪವೂ ತೆರಿಗೆಯೂ ಅವ ರಿಗೆ ಕೊಡಲ್ಪಟ್ಟವು ಎಂದು ಕಾಣಿಸಿತು.
- Genesis 36:31–43 ಆದಿಕಾಂಡ 36:31–43ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ. ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು. ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು. ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್. ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು. ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು. ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ. ಒಹೋಲೀಬಾಮ ಏಲಾ ಪೀನೋನ್. ಕೆನಜ್ ತೇಮಾನ್ ಮಿಪ್ಚಾರಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ. ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.