Genesis · chapter 32 · verse 28
Genesis 32:28 in Kannada
ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
Adakke aatanuninna hesaru innu mele yaakobanendu kareyalpadade israayela endu kareyalpadu vadu. Yaakandare neenu devara sangadaloo manushyara sangadaloo horaadi jayisiddee andanu.
Genesis 32:28 in English
- King James Version (KJV)
- And he said, Thy name shall be called no more Jacob, but Israel: for as a prince hast thou power with God and with men, and hast prevailed.
- World English Bible (WEB)
- He said, “Your name will no longer be called Jacob, but Israel; for you have fought with God and with men, and have prevailed.”
- American Standard Version (ASV)
- And he said, Thy name shall be called no more Jacob, but Israel: for thou hast striven with God and with men, and hast prevailed.
- Bible in Basic English (BBE)
- And he said, Your name will no longer be Jacob, but Israel: for in your fight with God and with men you have overcome.
- Darby Translation (DBY)
- And he said, Thy name shall not henceforth be called Jacob, but Israel; for thou hast wrestled with God, and with men, and hast prevailed.
- Webster's Bible (WBS)
- And he said, Thy name shall be called no more Jacob, but Israel: for as a prince hast thou power with God, and with men, and hast prevailed.
- Young's Literal Translation (YLT)
- And he saith, 'Thy name is no more called Jacob, but Israel; for thou hast been a prince with God and with men, and dost prevail.'
Read in context
- 26ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು.
- 27ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.
- 28ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- 29ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.
- 30ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.
Cross references
- Revelation 2:17 ಪ್ರಕಟನೆ 2:17ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನೂ ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವನ್ನು ತಿನ್ನುವದಕ್ಕೆ ನಾನು ಕೊಡು ವೆನು; ಇದಲ್ಲದೆ ಅವನಿಗೆ ಹೊಸ ಹೆಸರು ಬರೆದಿರುವ ಬಿಳೀ ಕಲ್ಲನ್ನು ಕೊಡುವೆನು ಅದನ್ನು ಹೊಂದಿದವನಿಗೇ ಹೊರತು ಅದು ಇನ್ನಾರಿಗೂ ತಿ
- Genesis 35:10 ಆದಿಕಾಂಡ 35:10ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.
- Isaiah 62:2–4 ಯೆಶಾಯ 62:2–4ಆಗ ಅನ್ಯ ಜನಾಂಗಗಳು ನಿನ್ನ ನೀತಿಯನ್ನು ಅರಸರೆಲ್ಲರು ನಿನ್ನ ಮಹಿಮೆಯನ್ನು ನೋಡುವರು; ಕರ್ತನ ಬಾಯಿ ಉಚ್ಚರಿಸುವ ಹೊಸ ಹೆಸರಿನಿಂದ ನೀನು ಕರೆಯ ಲ್ಪಡುವಿ. ಕರ್ತನ ಕೈಯಲ್ಲಿ ಮಹಿಮೆಯ ಕಿರೀಟ ವಾಗಿಯೂ ನಿನ್ನ ದೇವರ ಅಂಗೈಯಲ್ಲಿ ರಾಜತ್ವದ ಕಿರೀಟವಾಗಿಯೂ ಇರುವಿ. ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.
- Hosea 12:3–5 ಹೋಶೇಯ 12:3–5ಗರ್ಭದಲ್ಲಿ ಅವನು ತನ್ನ ಸಹೋದರ ನನ್ನು ಹಿಮ್ಮಡಿಯಿಂದ ಹಿಡಿದು ತನ್ನ ಶಕ್ತಿಯಿಂದ ದೇವರೊಂದಿಗೆ ಬಲಹೊಂದಿದನು. ಹೌದು, ದೂತನ ಮೇಲೆ ಅವನು ಬಲಹೊಂದಿ ಜಯಿಸಿದನು; ಅವನು ಅತ್ತು ಆತನಿಗೆ ವಿಜ್ಞಾಪನೆಯನ್ನು ಸಲ್ಲಿಸಿದನು; ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು; ಅಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. ಆತನು ಸೈನ್ಯಗಳ ಕರ್ತನಾದ ದೇವರೇ; ಆತನ ಜ್ಞಾಪಕಾ ರ್ಥವು ಕರ್ತನೇ,
- Genesis 27:33–36 ಆದಿಕಾಂಡ 27:33–36ಆಗ ಇಸಾಕನು ಬಹಳವಾಗಿ ನಡುಗುತ್ತಾ ಹೇಳಿದ್ದೇನಂದರೆ--ನೀನು ಬರುವದಕ್ಕಿಂತ ಮೊದಲು ಬೇಟೆಯಾಡಿ ನನಗೆ ತಂದವನು ಯಾರು? ಅವನು ಎಲ್ಲಿದ್ದಾನೆ? ನೀನು ಬರುವದರೊಳಗಾಗಿ ನಾನು ಎಲ್ಲವನ್ನೂ ಊಟಮಾಡಿ ಅವನನ್ನು ಆಶೀರ್ವ ದಿಸಿದೆನು. ಹೌದು, ಅವನು ಆಶೀರ್ವದಿಸಲ್ಪಟ್ಟಿರಲಿ ಅಂದನು. ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ ಅವನು ಅತಿ ವ್ಯಥೆಪಟ್ಟು ಗಟ್ಟಿಯಾದ ಸ್ವರದಿಂದ ಅತ್ತನು. ತನ್ನ ತಂದೆಗೆ--ತಂದೆಯೇ, ನನ್ನನ್ನು ಕೂಡಾ ಆಶೀರ್ವದಿಸು ಅಂದನು. ಅವನು --ನಿನ್ನ ಸಹೋದರನು ಮೋಸದಿಂದ ಬಂದು ನಿನ್ನ ಆಶೀರ್ವಾದವನ್ನು ತಕ್ಕೊಂಡಿದ್ದಾನೆ ಅಂದನು. ಅದಕ್ಕೆ ಅವನು--ಅವನಿಗೆ ಯಾಕೋಬನೆಂಬ ಹೆಸರು ಸರಿಯಲ್ಲವೋ. ಈ ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ; ಅವನು ನನ್ನ ಚೊಚ್ಚಲತನ ವನ್ನು ತಕ್ಕೊಂಡಿದ್ದಾನೆ; ಇಗೋ, ಈಗ ನನ್ನ ಆಶೀರ್ವಾದವನ್ನೂ ತಕ್ಕೊಂಡಿದ್ದಾನೆ. ನೀನು ನನಗೋಸ್ಕರ ಒಂದಾದರೂ ಆಶೀರ್ವಾದವನ್ನು ಉಳಿಸ ಲಿಲ್ಲವೋ ಅಂದನು.
- Genesis 17:5 ಆದಿಕಾಂಡ 17:5ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
- Genesis 17:15 ಆದಿಕಾಂಡ 17:15ಇದಲ್ಲದೆ ದೇವರು ಅಬ್ರಹಾಮನಿಗೆ--ನಿನ್ನ ಹೆಂಡತಿಯಾದ ಸಾರಯಳ ವಿಷಯದಲ್ಲಾದರೋ ಆಕೆಯನ್ನು ಸಾರಯಳೆಂದು ಕರೆಯಬೇಡ; ಅವಳ ಹೆಸರು ಸಾರಾ.
- Proverbs 16:7 ಜ್ಞಾನೋಕ್ತಿಗಳು 16:7ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನ ದಲ್ಲಿರುವಂತೆ ಆತನು ಮಾಡುತ್ತಾನೆ.
- Genesis 33:4 ಆದಿಕಾಂಡ 33:4ಆಗ ಏಸಾವನು ಅವನನ್ನು ಎದುರುಗೊಳ್ಳುವದಕ್ಕೆ ಓಡಿ ಬಂದು ಅವನನ್ನು ಅಪ್ಪಿಕೊಂಡು ಅವನ ಕೊರಳಿನ ಮೇಲೆ ಬಿದ್ದು ಅವನಿಗೆ ಮುದ್ದಿಟ್ಟನು. ಅವರು ಅತ್ತರು.
- Isaiah 65:15 ಯೆಶಾಯ 65:15ನಾನು ಆದುಕೊಂಡವರಿಗೆ ನಿಮ್ಮ ಹೆಸರನ್ನು ಶಾಪವಾಗಿ ಉಳಿ ಸುವಿರಿ; ಕರ್ತನಾದ ಯೆಹೋವನು ನಿಮ್ಮನ್ನು ಕೊಂದು ಹಾಕಿ, ತನ್ನ ಸೇವಕರಿಗೆ ಬೇರೆ ಹೆಸರನ್ನು ಇಡುವನು.
- Genesis 25:31 ಆದಿಕಾಂಡ 25:31ಆಗ ಯಾಕೋಬನು--ಈ ಹೊತ್ತು ನಿನ್ನ ಚೊಚ್ಚಲತನವನ್ನು ನನಗೆ ಮಾರು ಅಂದನು.
- John 1:42 ಯೋಹಾನನು 1:4242ಆಗ ಅಂದ್ರೆಯನು ಸೀಮೋನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. ಯೇಸು ಅವನನ್ನು ನೋಡಿ--ನೀನು ಯೋನನ ಮಗನಾದ ಸೀಮೋನನು, ನೀನು ಕೇಫನೆಂದು ಕರೆಯಲ್ಪಡುವಿ ಅಂದನು. (ಕೇಫ ಅಂದರೆ ಕಲ್ಲು ಎಂದರ್ಥ).