Genesis · chapter 36 · verse 31
Genesis 36:31 in Kannada
ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
Israayel makkalannu yaava arasanoo aaluvadakkinta munche edom deshadalli aalida arasaru ivare.
Genesis 36:31 in English
- King James Version (KJV)
- And these [are] the kings that reigned in the land of Edom, before there reigned any king over the children of Israel.
- World English Bible (WEB)
- These are the kings who reigned in the land of Edom, before any king reigned over the children of Israel.
- American Standard Version (ASV)
- And these are the kings that reigned in the land of Edom, before there reigned any king over the children of Israel.
- Bible in Basic English (BBE)
- And these are the kings who were ruling in the land of Edom before there was any king over the children of Israel.
- Darby Translation (DBY)
- And these are the kings that reigned in the land of Edom before there reigned a king over the children of Israel.
- Webster's Bible (WBS)
- And these [are] the kings that reigned in the land of Edom, before there reigned any king over the children of Israel.
- Young's Literal Translation (YLT)
- And these [are] the kings who have reigned in the land of Edom before the reigning of a king over the sons of Israel.
Read in context
- 29ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ.
- 30ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.
- 31ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ.
- 32ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ.
- 33ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು.
Cross references
- Genesis 17:6 ಆದಿಕಾಂಡ 17:6ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
- Genesis 17:16 ಆದಿಕಾಂಡ 17:16ಆಕೆಯನ್ನು ನಾನು ಆಶೀರ್ವದಿ ಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಹೌದು, ಜನಾಂಗಗಳ ತಾಯಿಯಾ ಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ಜನರ ಅರಸರು ಹುಟ್ಟುವರು ಅಂದನು.
- 1 Chronicles 1:43–50 1 ಪೂರ್ವಕಾಲವೃತ್ತಾಂತ 1:43–50ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು. ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಳನು ಸತ್ತ ತರುವಾಯ ಅವನಿಗೆ ಬದಲಾಗಿ ಬೊಚ್ರ ದವನಾದಂಥ ಜೆರಹನ ಮಗನಾದ ಯೋಬಾಬನು ಆಳಿದನು. ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು. ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು. ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು. ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು. ಬಾಳ್ಹನಾನನು ಸತ್ತ ತರುವಾಯ ಅವನಿಗೆ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲಳು; ಅವಳು ಮಟ್ರೇದಳ ಮಗಳೂ ಮೆಜಾಹಾಬನ ಮೊಮ್ಮಗಳೂ ಆಗಿದ್ದಳು.
- Numbers 20:14 ಅರಣ್ಯಕಾಂಡ 20:14ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
- Numbers 24:17–18 ಅರಣ್ಯಕಾಂಡ 24:17–18ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು. ಎದೋಮು ಸ್ವಾಸ್ತ್ಯವಾಗುವದು; ಸೇಯಾರು ತನ್ನ ಶತ್ರುಗಳಿಗೆ ಸ್ವಾಸ್ತ್ಯವಾಗುವದು; ಮತ್ತು ಇಸ್ರಾಯೇಲು ಪರಾಕ್ರಮ ಕಾರ್ಯ ಮಾಡುವದು,
- Deuteronomy 17:14–20 ಧರ್ಮೋಪದೇಶಕಾಂಡ 17:14–20ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಪಡಿಸಿ ಕೊಂಡು ಅದರಲ್ಲಿ ವಾಸವಾಗಿರುವಾಗ--ನನ್ನ ಸುತ್ತ ಲಿರುವ ಎಲ್ಲಾ ಜನಾಂಗಗಳ ಹಾಗೆ ನನಗೆ ಅರಸ ನನ್ನು ಇಟ್ಟುಕೊಳ್ಳುತ್ತೇನೆಂದು ಹೇಳಿದರೆ ಹೇಗಾ ದರೂ ನಿನ್ನ ದೇವರಾದ ಕರ್ತನು ಆದುಕೊಳ್ಳು ವವನನ್ನು ನಿನಗೆ ಅರಸನನ್ನಾಗಿ ಇಟ್ಟು ಕೊಳ್ಳಬೇಕು; ನಿನ್ನ ಸಹೋದರರಲ್ಲಿಂದ ಒಬ್ಬನನ್ನು ನಿನಗೆ ಅರಸನ ನ್ನಾಗಿ ಇಟ್ಟುಕೊಳ್ಳಬೇಕು; ನಿನ್ನ ಸಹೋದರನಲ್ಲದ ಅನ್ಯನಾದ ಮನುಷ್ಯನನ್ನು ನಿನ್ನ ಮೇಲೆ ಇಟ್ಟು ಕೊಳ್ಳಬಾರದು. ಆದರೆ ಅವನು ತನಗೆ ಕುದುರೆಗಳನ್ನು ಹೆಚ್ಚಿಸಿ ಕೊಳ್ಳಬಾರದು; ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನಗಳನ್ನು ಐಗುಪ್ತ ದೇಶಕ್ಕೆ ತಿರುಗಿಸಬಾರದು; ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗ ಬಾರದೆಂದು ಕರ್ತನು ನಿಮಗೆ ಹೇಳಿದನಲ್ಲಾ. ಅವನ ಹೃದಯವು ತೊಲಗದ ಹಾಗೆ ಅವನು ತನಗೆ ಅನೇಕ ಪತ್ನಿಯರನ್ನು ಮಾಡಿಕೊಳ್ಳಬಾರದು; ಅವನು ತನಗೆ ಬೆಳ್ಳಿ ಬಂಗಾರವನ್ನು ಬಹಳವಾಗಿ ಹೆಚ್ಚಿಸಿಕೊಳ್ಳಬಾರದು. ಅವನು ತನ್ನ ರಾಜ್ಯದ ಸಿಂಹಾಸನದಲ್ಲಿ ಕೂತು ಕೊಳ್ಳುವಾಗ ಲೇವಿಯರಾದ ಯಾಜಕರ ಮುಂದಿರುವ ಪುಸ್ತಕದಿಂದ ತನಗೆ ಈ ನ್ಯಾಯಪ್ರಮಾಣದ ಪ್ರತಿ ಯನ್ನು ಬರೆಯಿಸಿಕೊಳ್ಳಬೇಕು. ಅದು ಅವನ ಸಂಗಡ ಇರಬೇಕು; ಅವನು ತನ್ನ ದೇವರಾದ ಕರ್ತನಿಗೆ ಭಯಪಟ್ಟು ಈ ನ್ಯಾಯಪ್ರಮಾಣದ ಎಲ್ಲಾ ಮಾತು ಗಳನ್ನೂ ಈ ನಿಯಮಗಳನ್ನೂ ಕಾಪಾಡಿ ಅನುಸರಿಸು ವದಕ್ಕೆ ಕಲಿಯುವ ಹಾಗೆಯೂಅವನ ಹೃದಯವು ಅವನ ಸಹೋದರರ ಮೇಲೆ ಹೆಚ್ಚಿಸಿಕೊಳ್ಳದ ಹಾಗೆಯೂ ಅವನು ಆಜ್ಞೆಯನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗದ ಹಾಗೆಯೂ ಅವನಿಗೂ ಅವನ ಮಕ್ಕಳಿಗೂ ಇಸ್ರಾಯೇಲಿನ ಮಧ್ಯದಲ್ಲಿ ಅವನ ರಾಜ್ಯದಲ್ಲಿ ದಿನಗಳು ಹೆಚ್ಚುವ ಹಾಗೆಯೂ ಅದನ್ನು ತನ್ನ ಜೀವಿತದ ದಿನಗಳಲ್ಲೆಲ್ಲಾ ಓದಬೇಕು. ಅವನ ಹೃದಯವು ಅವನ ಸಹೋದರರ ಮೇಲೆ ಹೆಚ್ಚಿಸಿಕೊಳ್ಳದ ಹಾಗೆಯೂ ಅವನು ಆಜ್ಞೆಯನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗದ ಹಾಗೆಯೂ ಅವನಿಗೂ ಅವನ ಮಕ್ಕಳಿಗೂ ಇಸ್ರಾಯೇಲಿನ ಮಧ್ಯದಲ್ಲಿ ಅವನ ರಾಜ್ಯದಲ್ಲಿ ದಿನಗಳು ಹೆಚ್ಚುವ ಹಾಗೆಯೂ ಅದನ್ನು ತನ್ನ ಜೀವಿತದ ದಿನಗಳಲ್ಲೆಲ್ಲಾ ಓದಬೇಕು.
- Deuteronomy 33:5 ಧರ್ಮೋಪದೇಶಕಾಂಡ 33:5ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು.
- Genesis 25:23 ಆದಿಕಾಂಡ 25:23ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
- Deuteronomy 33:29 ಧರ್ಮೋಪದೇಶಕಾಂಡ 33:29ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.