Genesis · chapter 21 · verse 25
Genesis 21:25 in Kannada
ಅಬೀ ಮೆಲೆಕನ ಸೇವಕರು ಬಲಾತ್ಕಾರದಿಂದ ತಕ್ಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನನ್ನು ಗದರಿಸಿದಾಗ
Abee melekana sevakaru balaatkaaradinda takkonda neerina baavigaagi abrahaamanu abeemelekanannu gadarisidaaga
Genesis 21:25 in English
- King James Version (KJV)
- And Abraham reproved Abimelech because of a well of water, which Abimelech’s servants had violently taken away.
- World English Bible (WEB)
- Abraham complained to Abimelech because of a water well, which Abimelech’s servants had violently taken away.
- American Standard Version (ASV)
- And Abraham reproved Abimelech because of the well of water, which Abimelech’s servants had violently taken away.
- Bible in Basic English (BBE)
- But Abraham made a protest to Abimelech because of a water-hole which Abimelech's servants had taken by force.
- Darby Translation (DBY)
- And Abraham reproved Abimelech because of a well of water that Abimelech's servants had violently taken away.
- Webster's Bible (WBS)
- And Abraham reproved Abimelech, because of a well of water, which Abimelech's servants had violently taken away.
- Young's Literal Translation (YLT)
- And Abraham reasoned with Abimelech concerning the matter of a well of water which Abimelech's servants have taken violently away,
Read in context
- 23ಆದದರಿಂದ ನನಗೂ ನನ್ನ ಮಗನಿಗೂ ನನ್ನ ಮೊಮ್ಮಗನಿಗೂ ವಂಚನೆಮಾಡುವ ದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣ ಮಾಡು. ನಾನು ನಿನಗೆ ಮಾಡಿದ ಪ್ರಕಾರ ನೀನು ನನಗೂ ನೀನು ಪ್ರವಾಸವಾಗಿರುವ ದೇಶಕ್ಕೂ ಮಾಡ ಬೇಕು ಅಂದನು.
- 24ಅದಕ್ಕೆ ಅಬ್ರಹಾಮನು-- ನಾನು ಪ್ರಮಾಣಮಾಡುತ್ತೇನೆ ಅಂದನು.
- 25ಅಬೀ ಮೆಲೆಕನ ಸೇವಕರು ಬಲಾತ್ಕಾರದಿಂದ ತಕ್ಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನನ್ನು ಗದರಿಸಿದಾಗ
- 26ಅಬೀಮೆಲೆಕನು--ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆನು; ನೀನೂ ನನಗೆ ತಿಳಿಸಲಿಲ್ಲ; ನಾನು ಇಂದಿನ ವರೆಗೆ ಅದನ್ನು ಕೇಳಲೂ ಇಲ್ಲ ಅಂದನು.
- 27ಆಗ ಅಬ್ರಹಾಮನು ಕುರಿಎತ್ತುಗಳನ್ನು ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು; ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.
Cross references
- Genesis 26:15–22 ಆದಿಕಾಂಡ 26:15–22ಅವನ ತಂದೆಯಾದ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗಿದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣಿನಿಂದ ಮುಚ್ಚಿದರು. ಆಗ ಅಬೀಮೆಲೆಕನು ಇಸಾಕನಿಗೆ--ನೀನು ನಮಗಿಂತ ಬಲಿಷ್ಟನಾದಿ ಆದುದ ರಿಂದ ನಮ್ಮ ಬಳಿಯಿಂದ ಹೋಗು, ಅಂದನು. ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ ಅಲ್ಲಿ ವಾಸಮಾಡಿದನು. ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು. ಇಸಾಕನ ಸೇವಕರು ತಗ್ಗಿನಲ್ಲಿ ಅಗಿದಾಗ ಅಲ್ಲಿ ಅವರಿಗೆ ಒಂದು ಉಕ್ಕುವ ಒರತೆಯ ಬಾವಿಯು ಸಿಕ್ಕಿತು. ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್ ಎಂದು ಹೆಸರಿಟ್ಟನು. ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು. ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು.
- Proverbs 17:10 ಜ್ಞಾನೋಕ್ತಿಗಳು 17:10ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.
- Genesis 29:8 ಆದಿಕಾಂಡ 29:8ಅದಕ್ಕೆ ಅವರು--ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಮುಚ್ಚುತ್ತಾರೆ; ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ ಅಂದರು.
- Exodus 2:15–17 ವಿಮೋಚನಕಾಂಡ 2:15–17ಫರೋಹನು ಈ ಮಾತುಗಳನ್ನು ಕೇಳಿ ಮೋಶೆ ಯನ್ನು ಕೊಲ್ಲಲು ಹುಡುಕಿದನು. ಆದರೆ ಮೋಶೆಯು ಫರೋಹನ ಎದುರಿನಿಂದ ಓಡಿಹೋಗಿ ಮಿದ್ಯಾನ್ ದೇಶದಲ್ಲಿದ್ದು ಒಂದು ಬಾವಿಯ ಬಳಿಯಲ್ಲಿ ಕೂತು ಕೊಂಡನು. ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು. ಕುರುಬರು ಬಂದು ಅವರನ್ನು ಓಡಿಸುತ್ತಿ ದ್ದಾಗ ಮೋಶೆಯು ಎದ್ದು ಅವರಿಗೆ ಸಹಾಯ ಮಾಡಿ ಅವರ ಕುರಿಗಳಿಗೆ ನೀರು ಕುಡಿಸಿದನು.
- Genesis 13:7 ಆದಿಕಾಂಡ 13:7ಆಗ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.
- Proverbs 25:9 ಜ್ಞಾನೋಕ್ತಿಗಳು 25:9ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ;
- Proverbs 27:5 ಜ್ಞಾನೋಕ್ತಿಗಳು 27:5ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.
- Matthew 18:15 ಮತ್ತಾಯನು 18:15ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.
- Judges 1:15 ನ್ಯಾಯಸ್ಥಾಪಕರು 1:15ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.