Genesis · chapter 31 · verse 21
Genesis 31:21 in Kannada
ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
Avanu tanagiddaddannellaa tegedu kondu odihodanu. Avanu eddu gilyaad parvatakke abhimukhanaagi nadiyannu daatidanu.
Genesis 31:21 in English
- King James Version (KJV)
- So he fled with all that he had; and he rose up, and passed over the river, and set his face [toward] the mount Gilead.
- World English Bible (WEB)
- So he fled with all that he had. He rose up, passed over the River, and set his face toward the mountain of Gilead.
- American Standard Version (ASV)
- So he fled with all that he had; and he rose up, and passed over the River, and set his face toward the mountain of Gilead.
- Bible in Basic English (BBE)
- So he went away with all he had, and went across the River in the direction of the hill-country of Gilead.
- Darby Translation (DBY)
- And he fled with all that he had; and he rose up and passed over the river, and set his face [toward] mount Gilead.
- Webster's Bible (WBS)
- So he fled with all that he had; and he arose, and passed over the river, and set his face [towards] the mount Gilead.
- Young's Literal Translation (YLT)
- and he fleeth, he and all that he hath, and riseth, and passeth over the River, and setteth his face [toward] the mount of Gilead.
Read in context
- 19ಆಗ ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವದಕೆ ಹೋಗಿದ್ದನು. ಆದದರಿಂದ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
- 20ಆದರೆ ಯಾಕೋಬನು ತಾನು ಓಡಿ ಹೋಗುವದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಕಳ್ಳತನದಿಂದ ಹೋದನು.
- 21ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
- 22ಯಾಕೋಬನು ಓಡಿಹೋದನೆಂದು ಮೂರ ನೆಯ ದಿವಸದಲ್ಲಿ ಲಾಬಾನನಿಗೆ ತಿಳಿಸಲ್ಪಟ್ಟಿತು.
- 23ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
Cross references
- 2 Kings 12:17 2 ಅರಸುಗಳು 12:17ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ ಅದನ್ನು ವಶಪಡಿಸಿಕೊಂಡನು. ಹಜಾಯೇಲನು ಯೆರೂಸಲೇ ಮಿಗೆ ಹೋಗಲು ತನ್ನ ಮುಖವನ್ನು ತಿರುಗಿಸಿದನು.
- Genesis 31:23 ಆದಿಕಾಂಡ 31:23ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
- Numbers 32:1 ಅರಣ್ಯಕಾಂಡ 32:1ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು.
- 1 Kings 17:1 1 ಅರಸುಗಳು 17:1ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.
- Jeremiah 50:5 ಯೆರೆಮೀಯ 50:5ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು.
- Joshua 24:2–3 ಯೆಹೋಶುವ 24:2–3ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು. ಆದರೆ ನಾನು ನದಿಯ ಆಚೆಯಲ್ಲಿದ್ದ ನಿಮ್ಮ ತಂದೆಯಾದ ಅಬ್ರಹಾಮನನ್ನು ತಕ್ಕೊಂಡು ಬಂದು ಅವನನ್ನು ಕಾನಾನ್ ದೇಶವನ್ನೆಲ್ಲಾ ಸಂಚಾರ ಮಾಡಿಸಿ ಅವನ ಸಂತಾನವನ್ನು ಅಭಿವೃದ್ಧಿ ಮಾಡಿದೆನು;
- Genesis 15:18 ಆದಿಕಾಂಡ 15:18ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್ ನದಿಯ ವರೆಗೆ ವಾಸಿಸುವ
- Numbers 24:1 ಅರಣ್ಯಕಾಂಡ 24:1ಆದರೆ ಇಸ್ರಾಯೇಲನ್ನು ಆಶೀರ್ವದಿಸು ವದಕ್ಕೆ ಕರ್ತನ ದೃಷ್ಟಿಗೆ ಒಳ್ಳೇದೆಂದು ಬಿಳಾಮನು ನೋಡಿದಾಗ ಅವನು ಮುಂಚಿನ ಹಾಗೆ ಶಕುನಗಳನ್ನು ಕಂಡುಕೊಳ್ಳುವದಕ್ಕೆ ಹೋಗದೆ ತನ್ನ ಮುಖವನ್ನು ಅರಣ್ಯದ ಕಡೆಗೆ ತಿರುಗಿಸಿಕೊಂಡನು.
- Judges 10:18 ನ್ಯಾಯಸ್ಥಾಪಕರು 10:18ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.
- Joshua 13:8–9 ಯೆಹೋಶುವ 13:8–9ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ: ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ
- Luke 9:51–53 ಲೂಕನು 9:51–53ಇದಾದಮೇಲೆ ಯೇಸು ತಾನು ಮೇಲಕ್ಕೆ ಅಂಗೀ ಕರಿಸಲ್ಪಡುವ ಸಮಯವು ಬಂದಾಗ ಯೆರೂಸಲೇಮಿಗೆ ಹೋಗುವದಕ್ಕಾಗಿ ಆತನು ತನ್ನ ಮುಖವನ್ನು ದೃಢಮಾಡಿಕೊಂಡು ತನಗೆ ಮುಂದಾಗಿ ದೂತರನ್ನು ಕಳುಹಿಸಿದನು. ಅವರು ಹೋಗಿ ಆತನಿಗಾಗಿ ಸಿದ್ಧ ಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು. ಆದರೆ ಅವರು ಆತನನ್ನು ಅಂಗೀಕರಿಸಲಿಲ್ಲ. ಯಾಕಂದರೆ ಆತನು ಯೆರೂಸಲೇ ಮಿಗೆ ಹೋಗುವಾತನೋ ಎಂಬಂತೆ ಆತನ ಮುಖ ವಿತ್ತು.
- Genesis 37:25 ಆದಿಕಾಂಡ 37:25ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು.