Genesis · chapter 31 · verse 27
Genesis 31:27 in Kannada
ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.
Yaake neenu guptavaagi kallatanadinda odi bandi? Neenu nanage yaake tilisalilla? Tilisiddare santoshadinda haadu taala veenegala sangada ninnannu kaluhisuttiddenu.
Genesis 31:27 in English
- King James Version (KJV)
- Wherefore didst thou flee away secretly, and steal away from me; and didst not tell me, that I might have sent thee away with mirth, and with songs, with tabret, and with harp?
- World English Bible (WEB)
- Why did you flee secretly, and deceive me, and didn’t tell me, that I might have sent you away with mirth and with songs, with tambourine and with harp;
- American Standard Version (ASV)
- Wherefore didst thou flee secretly, and steal away from me, and didst not tell me, that I might have sent thee away with mirth and with songs, with tabret and with harp;
- Bible in Basic English (BBE)
- Why did you make a secret of your flight, not giving me word of it, so that I might have sent you away with joy and songs, with melody and music?
- Darby Translation (DBY)
- Why didst thou flee away covertly, and steal away from me, and didst not tell me, that I might have conducted thee with mirth and with songs, with tambour and with harp;
- Webster's Bible (WBS)
- Why didst thou flee away secretly, and steal away from me, and didst not tell me, that I might have sent thee away with mirth, and with songs, with tabret, and with harp?
- Young's Literal Translation (YLT)
- Why hast thou hidden thyself to flee, and deceivest me, and hast not declared to me, and I send thee away with joy and with songs, with tabret and with harp,
Read in context
- 25ತರುವಾಯ ಲಾಬಾ ನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹೋದರರ ಸಂಗಡ ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು.
- 26ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ.
- 27ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು.
- 28ಆದರೆ ನೀನು ನನ್ನ ಕುಮಾರರಿಗೂ ಕುಮಾರ್ತೆಯರಿಗೂ ಮುದ್ದು ಕೊಡ ಗೊಡಿಸಲಿಲ್ಲ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ.
- 29ನಿನಗೆ ಕೇಡುಮಾಡುವದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ--ನೀನು ಯಾಕೋಬನಿಗೆ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಹೇಳದ ಹಾಗೆ ಎಚ್ಚರಿಕೆಯಾಗಿರು ಎಂದು ಹೇಳಿದನು.
Cross references
- Exodus 15:20 ವಿಮೋಚನಕಾಂಡ 15:20ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.
- Proverbs 26:23–26 ಜ್ಞಾನೋಕ್ತಿಗಳು 26:23–26ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Genesis 4:21 ಆದಿಕಾಂಡ 4:21ಅವನ ಸಹೋದರನ ಹೆಸರು ಯೂಬಾಲನು; ಇವನು ಕಿನ್ನರಿಯನ್ನೂ ಕೊಳಲನ್ನೂ ಬಾರಿಸುವವರೆಲ್ಲರಿಗೆ ತಂದೆಯಾದನು.
- Genesis 31:20–21 ಆದಿಕಾಂಡ 31:20–21ಆದರೆ ಯಾಕೋಬನು ತಾನು ಓಡಿ ಹೋಗುವದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಕಳ್ಳತನದಿಂದ ಹೋದನು. ಅವನು ತನಗಿದ್ದದ್ದನ್ನೆಲ್ಲಾ ತೆಗೆದು ಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖನಾಗಿ ನದಿಯನ್ನು ದಾಟಿದನು.
- Job 21:11–14 ಯೋಬನು 21:11–14ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ. ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ. ಸಂಪತ್ತಿನಲ್ಲಿ ತಮ್ಮ ದಿವಸ ಗಳನ್ನು ಕಳೆಯುತ್ತಾರೆ; ಕ್ಷಣದಲ್ಲಿ ಪಾತಾಳಕ್ಕೆ ಇಳಿ ಯುತ್ತಾರೆ. ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ.
- Genesis 31:3–5 ಆದಿಕಾಂಡ 31:3–5ಆಗ ಕರ್ತನು ಯಾಕೋಬನಿಗೆ--ನಿನ್ನ ತಂದೆಗಳ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನ ಸಂಗಡ ಇರುವೆನು ಅಂದನು. ಯಾಕೋಬನು ರಾಹೇಲಳನ್ನೂ ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೇಕಳುಹಿಸಿ ಅವರಿಗೆ--ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದಹಾಗೆ ಈಗ ಇಲ್ಲದಿರುವದನ್ನು ನಾನು ನೋಡುತ್ತಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಸಂಗಡ ಇದ್ದನು.
- Genesis 24:59–60 ಆದಿಕಾಂಡ 24:59–60ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಕಳುಹಿಸಿದರು. ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.
- Genesis 31:31 ಆದಿಕಾಂಡ 31:31ಅದಕ್ಕೆ ಯಾಕೋಬನು ಪ್ರತ್ಯುತ್ತರವಾಗಿ ಲಾಬಾನ ನಿಗೆ--ನೀನು ಒಂದು ವೇಳೆ ನಿನ್ನ ಕುಮಾರ್ತೆಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತಕ್ಕೊಳ್ಳುವಿ ಎಂದು ನಾನು ಅಂದುಕೊಂಡು ಭಯಪಟ್ಟೆನು.
- Judges 6:27 ನ್ಯಾಯಸ್ಥಾಪಕರು 6:27ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ತೆಗೆದುಕೊಂಡು ಕರ್ತನು ತನಗೆ ಹೇಳಿದ ಹಾಗೆಯೇ ಮಾಡಿದನು. ಆದರೆ ಹಗಲಲ್ಲಿ ಮಾಡದ ಹಾಗೆ ಅವನು ತನ್ನ ತಂದೆಯ ಮನೆಯವರಿಗೂ ಆ ಊರಿನ ಮನುಷ್ಯರಿಗೂ ಭಯಪಟ್ಟಿದ್ದರಿಂದ ರಾತ್ರಿಯಲ್ಲಿ ಮಾಡಿ ದನು.