Genesis · chapter 31 · verse 46
Genesis 31:46 in Kannada
ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು.
Yaakobanu tanna sahodararige (kadeyavarige)--kallugalannu koodisiri andanu. Avaru kallugalannu takkondu ondu kuppe maadi aa kuppeya mele avaru ootamaadidaru.
Genesis 31:46 in English
- King James Version (KJV)
- And Jacob said unto his brethren, Gather stones; and they took stones, and made an heap: and they did eat there upon the heap.
- World English Bible (WEB)
- Jacob said to his relatives, “Gather stones.” They took stones, and made a heap. They ate there by the heap.
- American Standard Version (ASV)
- And Jacob said unto his brethren, Gather stones; and they took stones, and made a heap: and they did eat there by the heap.
- Bible in Basic English (BBE)
- And Jacob said to his people, Get stones together; and they did so; and they had a meal there by the stones.
- Darby Translation (DBY)
- And Jacob said to his brethren, Gather stones. And they took stones, and made a heap, and ate there upon the heap.
- Webster's Bible (WBS)
- And Jacob said to his brethren, Gather stones; and they took stones, and made a heap: and they ate there upon the heap.
- Young's Literal Translation (YLT)
- and Jacob saith to his brethren, 'Gather stones,' and they take stones, and make a heap; and they eat there on the heap;
Read in context
- 44ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.
- 45ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು;
- 46ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು.
- 47ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್ ಎಂದೂ ಹೆಸರಿಟ್ಟನು;
- 48ಆಗ ಲಾಬಾನನು--ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ ಅಂದನು. ಆದದರಿಂದ ಅದಕ್ಕೆ ಗಲೇದ್ ಎಂದೂ
Cross references
- Ecclesiastes 3:5 ಪ್ರಸಂಗಿ 3:5ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ;
- Joshua 4:20–24 ಯೆಹೋಶುವ 4:20–24ಅಲ್ಲಿ ಅವರು ಯೊರ್ದನಿನಿಂದ ತೆಗೆದು ಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. ಅವನು ಇಸ್ರಾಯೇಲ್ ಮಕ್ಕಳಿಗೆ--ನಿಮ್ಮ ಮಕ್ಕಳು ಈ ಕಲ್ಲುಗಳು ಏನೆಂದು ಬರುವ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳಿದಾಗ ನೀವು ಅವರಿಗೆ ತಿಳಿಸಬೇಕಾದದ್ದೇನಂದರೆ--ಇಸ್ರಾ ಯೇಲ್ಯರು ಒಣಗಿದ ಭೂಮಿಯಲ್ಲಿ ಈ ಯೊರ್ದನನ್ನು ದಾಟಿ ಬಂದರು. ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು. ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.
- Genesis 31:32 ಆದಿಕಾಂಡ 31:32ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳನ್ನು ಕಂಡುಕೊಳ್ಳುವಿಯೋ ಅವರು ಬದುಕದೆ ಇರಲಿ; ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ ನಮ್ಮ ಸಹೋದರರ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ ಅಂದನು. ಆದರೆ ರಾಹೇಲಳು ಅವುಗಳನ್ನು ಕದ್ದು ಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
- Genesis 31:37 ಆದಿಕಾಂಡ 31:37ನೀನು ನನ್ನ ಸಾಮಾನುಗಳನ್ನೆಲ್ಲಾ ಹುಡಿಕಿದ ಮೇಲೆ ನಿನ್ನ ಮನೆಯ ಸಾಮಾನುಗಳಲ್ಲಿ ಏನು ಕಂಡುಕೊಂಡಿ? ನನಗೂ ನಿನಗೂ ಸಹೋದರರಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
- Genesis 31:54 ಆದಿಕಾಂಡ 31:54ಯಾಕೋ ಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ ರೊಟ್ಟಿ ಯನ್ನು ತಿನ್ನುವದಕ್ಕೆ ತನ್ನ ಸಹೋದರರನ್ನು ಕರೇ ಕಳುಹಿಸಿದನು. ಅವರು ರೊಟ್ಟಿಯನ್ನು ತಿಂದು ಬೆಟ್ಟದಲ್ಲಿಯೇ ರಾತ್ರಿ ಇಳುಕೊಂಡರು.ಹೊತ್ತಾರೆ ಲಾಬಾನನು ಎದ್ದು ತನ್ನ ಕುಮಾರರಿಗೂ ಕುಮಾರ್ತೆ ಯರಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂತಿರುಗಿ ಹೋದನು.
- Genesis 31:23 ಆದಿಕಾಂಡ 31:23ಆಗ ಅವನು ತನ್ನ ಸಹೋದರರನ್ನು ಕರಕೊಂಡು ಅವನನ್ನು ಬೆನ್ನಟ್ಟಿ ಏಳು ದಿನ ಪ್ರಯಾಣಮಾಡಿ ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು.
- Joshua 7:26 ಯೆಹೋಶುವ 7:26ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Joshua 4:5–9 ಯೆಹೋಶುವ 4:5–9ಯೆಹೋಶುವನು ಅವರಿಗೆ--ನೀವು ಯೊರ್ದನಿನ ಮಧ್ಯದಲ್ಲಿ ನಿಮ್ಮ ದೇವರಾದ ಕರ್ತನ ಮಂಜೂಷದ ಮುಂದೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರಿ. ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು; ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಈ ಕಲ್ಲುಗಳೇನೆಂದು ಕೇಳಿದಾಗ ನೀವು ಅವರಿಗೆ--ಯೊರ್ದನಿನ ನೀರು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ವಿಭಾಗಿಸಲ್ಪಟ್ಟಿತು; ಅದು ಯೊರ್ದನನ್ನು ದಾಟುವಾಗ ಯೊರ್ದನಿನ ನೀರು ಭೇದಿಸಲ್ಪಟ್ಟಿತ್ತು. ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳಿಗೆ ಎಂದೆಂದಿಗೂ ಜ್ಞಾಪಕಾರ್ಥ ವಾದ ಗುರುತಾಗಿರುವವು ಎಂದು ಉತ್ತರ ಕೊಡಬೇಕು ಅಂದನು. ಆಗ ಇಸ್ರಾಯೇಲ್ ಮಕ್ಕಳು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು; ಕರ್ತನು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾ ಯೇಲ್ ಮಕ್ಕಳ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನಿನ ಮಧ್ಯದಿಂದ ತೆಗೆದುಕೊಂಡು ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ನಿಲ್ಲಿಸಿ ದರು. ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.
- 2 Samuel 18:17 2 ಸಮುವೇಲನು 18:17ಯೋವಾಬನು ಜನರನ್ನು ತಡೆ ದನು. ಅವರು ಅಬ್ಷಾಲೋಮನನ್ನು ತಕ್ಕೊಂಡು ಅಡವಿ ಯಲ್ಲಿರುವ ಒಂದು ದೊಡ್ಡ ಕುಣಿಯಲ್ಲಿ ಹಾಕಿ ಅವನ ಮೇಲೆ ದೊಡ್ಡ ಕಲ್ಲಿನ ಕುಪ್ಪೆಯನ್ನು ಹಾಕಿದರು. ಆಗ ಇಸ್ರಾಯೇಲ್ಯರೆಲ್ಲರೂ ತಮ್ಮ ಗುಡಾರಗಳಿಗೆ ಓಡಿ ಹೋದರು.