Genesis · chapter 31 · verse 44
Genesis 31:44 in Kannada
ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.
Aadadarinda neenu eega baa, naanoo neenoo odambadikeyannu maadona; adu nanagoo ninagoo madhyadalli saakshiyaagirali andanu.
Genesis 31:44 in English
- King James Version (KJV)
- Now therefore come thou, let us make a covenant, I and thou; and let it be for a witness between me and thee.
- World English Bible (WEB)
- Now come, let’s make a covenant, you and I. Let it be for a witness between me and you.”
- American Standard Version (ASV)
- And now come, let us make a covenant, I and thou; and let it be for a witness between me and thee.
- Bible in Basic English (BBE)
- Come, let us make an agreement, you and I; and let it be for a witness between us.
- Darby Translation (DBY)
- And now, come, let us make a covenant, I and thou; and let it be a witness between me and thee.
- Webster's Bible (WBS)
- Now therefore come thou, let us make a covenant, I and thou; and let it be for a witness between me and thee.
- Young's Literal Translation (YLT)
- and now, come, let us make a covenant, I and thou, and it hath been for a witness between me and thee.'
Read in context
- 42ಅಬ್ರಹಾಮನ ದೇವರೂ ನನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ ನಿಜವಾಗಿಯೂ ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದಿ; ನನ್ನ ಬಾಧೆ ಯನ್ನೂ ನನ್ನ ಕೈ ಕಷ್ಟವನ್ನೂ ದೇವರು ನೋಡಿ ನಿನ್ನೆ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
- 43ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ --ಈ ಕುಮಾರ್ತೆಯರು ನನ್ನ ಕುಮಾರ್ತೆಯರೇ; ಈ ಮಕ್ಕಳೂ ನನ್ನ ಮಕ್ಕಳೇ; ಈ ಮಂದೆಯೂ ನನ್ನ ಮಂದೆಯೇ; ಅಂತೂ ನೀನು ನೋಡುವದೆಲ್ಲಾ ನನ್ನದೇ. ಹಾಗಾದರೆ ನನ್ನ ಕುಮಾರ್ತೆಯರಿಗಾಗಲಿ ಅವರು ಹೆತ್ತ ಮಕ್ಕಳಿಗಾಗಲಿ ನಾನು ಈಹೊತ್ತು ಏನು ಮಾಡಲಿ?
- 44ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.
- 45ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು;
- 46ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು.
Cross references
- Joshua 24:25–27 ಯೆಹೋಶುವ 24:25–27ಯೆಹೋಶುವನು ಆ ಹೊತ್ತು ಶೆಕೆಮಿನಲ್ಲಿ ಜನರ ಸಂಗಡ ಒಡಂಬಡಿಕೆ ಯನ್ನು ಮಾಡಿ ಅದನ್ನು ಅವರಿಗೆ ನಿಯಮವಾಗಿಯೂ ಕಟ್ಟಳೆಯಾಗಿಯೂ ಇಟ್ಟನು. ಈ ಮಾತುಗಳನ್ನು ಯೆಹೋಶುವನು ದೇವರ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದು ಒಂದು ದೊಡ್ಡ ಕಲ್ಲನ್ನು ಎತ್ತಿ ಅದನ್ನು ಅಲ್ಲಿ ಕರ್ತನ ಪರಿಶುದ್ಧ ಸ್ಥಳದ ಬಳಿಯಲ್ಲಿ ಏಲಾಮರದ ಕೆಳಗೆ ನೆಟ್ಟನು. ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು.
- 1 Samuel 20:14–17 1 ಸಮುವೇಲನು 20:14–17ಕರ್ತನು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ. ಆದರೆ ನಾನು ಇನ್ನೂ ಬದುಕು ತ್ತಿರುವಾಗ ನಾನು ಸಾಯದ ಹಾಗೆ ನೀನು ಕರ್ತನ ದಯೆಯನ್ನು ನನ್ನ ಮೇಲೆ ತೋರಿಸಬೇಕಾದದ್ದಲ್ಲದೆ ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು. ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು. ಯೋನಾತಾನನು ದಾವೀದನನ್ನು ಪ್ರೀತಿ ಮಾಡಿದ್ದರಿಂದ ತಿರಿಗಿ ಅವನಿಂದ ಪ್ರಮಾಣ ತೆಗೆದುಕೊಂಡನು; ಅವನು ತನ್ನ ಪ್ರಾಣವನ್ನು ಪ್ರೀತಿ ಮಾಡಿದ ಹಾಗೆಯೇ ಅವನನ್ನು ಪ್ರೀತಿ ಮಾಡಿದನು.
- Deuteronomy 31:21 ಧರ್ಮೋಪದೇಶಕಾಂಡ 31:21ಅನಂತರ ಬಹಳ ಕೇಡುಗಳೂ ಇಕ್ಕಟ್ಟುಗಳೂ ಅವರಿಗೆ ಸಂಭವಿಸು ವಾಗ ಈ ಹಾಡು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿ ಉತ್ತರ ಕೊಡುವದು; ಯಾಕಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತುಹೋಗುವದಿಲ್ಲ; ನಾನು ಪ್ರಮಾಣಮಾಡಿದ ದೇಶದಲ್ಲಿ ಅವರನ್ನು ತರುವದಕ್ಕಿಂತ ಮುಂಚೆ ಅವರು ಈಹೊತ್ತು ಮಾಡುವ ಕಲ್ಪನೆಗಳನ್ನು ನಾನು ಬಲ್ಲೆನು.
- Genesis 26:28–31 ಆದಿಕಾಂಡ 26:28–31ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು; ಅದೇನಂದರೆ--ನಾವು ನಿನ್ನನ್ನು ಮುಟ್ಟದೆ ನಿನಗೆ ಒಳ್ಳೇದನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು; ನೀನು ಈಗ ಕರ್ತನಿಂದ ಆಶೀರ್ವದಿ ಸಲ್ಪಟ್ಟವನಾಗಿದ್ದೀ ಅಂದರು. ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು; ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಆಗ ಇಸಾಕನು ಅವರನ್ನು ಕಳುಹಿಸಿಕೊಟ್ಟನು. ಅವರು ಸಮಾಧಾನದೊಡನೆ ಅವನ ಬಳಿಯಿಂದ ಹೊರಟುಹೋದರು.
- Joshua 22:27 ಯೆಹೋಶುವ 22:27ನಾವು ಕರ್ತನ ಸನ್ನಿಧಿಯಲ್ಲಿ ದಹನ ಬಲಿಗಳಿಂದಲೂ ಯಜ್ಞಗಳಿಂದಲೂ ಸಮಾಧಾನದ ಬಲಿಗಳಿಂದಲೂ ಆತನನ್ನು ಸೇವಿಸುವ ಹಾಗೆಯೂ ನಮಗೂ ನಿಮಗೂ ನಮ್ಮ ತರುವಾಯ ನಮ್ಮ ಸಂತತಿ ಯವರಿಗೂ ಮಧ್ಯದಲ್ಲಿ ಸಾಕ್ಷಿ ಉಂಟಾಗುವ ಹಾಗೆ ಯಜ್ಞವೇದಿಯನ್ನು ಕಟ್ಟಿಕೊಳ್ಳುವದಕ್ಕೆ ಮಾಡಿದೆವು.
- Genesis 31:48 ಆದಿಕಾಂಡ 31:48ಆಗ ಲಾಬಾನನು--ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ ಅಂದನು. ಆದದರಿಂದ ಅದಕ್ಕೆ ಗಲೇದ್ ಎಂದೂ
- Deuteronomy 31:19 ಧರ್ಮೋಪದೇಶಕಾಂಡ 31:19ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು.
- Deuteronomy 31:26 ಧರ್ಮೋಪದೇಶಕಾಂಡ 31:26ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ.
- Genesis 21:22–32 ಆದಿಕಾಂಡ 21:22–32ಆ ಕಾಲದಲ್ಲಿ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮ ನಿಗೆ--ನೀನು ಮಾಡುವದೆಲ್ಲದರಲ್ಲಿ ದೇವರು ನಿನ್ನ ಸಂಗಡ ಇದ್ದಾನೆ. ಆದದರಿಂದ ನನಗೂ ನನ್ನ ಮಗನಿಗೂ ನನ್ನ ಮೊಮ್ಮಗನಿಗೂ ವಂಚನೆಮಾಡುವ ದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣ ಮಾಡು. ನಾನು ನಿನಗೆ ಮಾಡಿದ ಪ್ರಕಾರ ನೀನು ನನಗೂ ನೀನು ಪ್ರವಾಸವಾಗಿರುವ ದೇಶಕ್ಕೂ ಮಾಡ ಬೇಕು ಅಂದನು. ಅದಕ್ಕೆ ಅಬ್ರಹಾಮನು-- ನಾನು ಪ್ರಮಾಣಮಾಡುತ್ತೇನೆ ಅಂದನು. ಅಬೀ ಮೆಲೆಕನ ಸೇವಕರು ಬಲಾತ್ಕಾರದಿಂದ ತಕ್ಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನನ್ನು ಗದರಿಸಿದಾಗ ಅಬೀಮೆಲೆಕನು--ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆನು; ನೀನೂ ನನಗೆ ತಿಳಿಸಲಿಲ್ಲ; ನಾನು ಇಂದಿನ ವರೆಗೆ ಅದನ್ನು ಕೇಳಲೂ ಇಲ್ಲ ಅಂದನು. ಆಗ ಅಬ್ರಹಾಮನು ಕುರಿಎತ್ತುಗಳನ್ನು ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು; ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು. ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಬೇರೆಮಾಡಿ ನಿಲ್ಲಿಸಿದನು. ಅಬೀಮೆಲೆಕನು ಅಬ್ರಹಾಮನಿಗೆ--ನೀನು ಯಾಕೆ ಈ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ನಿಲ್ಲಿಸಿದ್ದೀ ಅಂದನು. ಅದಕ್ಕೆ ಅಬ್ರಹಾಮನುನಾನೇ ಈ ಬಾವಿಯನ್ನು ತೊಡಿಸಿದ್ದೇನೆಂಬದಕ್ಕೆ ಸಾಕ್ಷಿಗಾಗಿ ಈ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು ಅಂದನು. ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅವನು ಹೆಸರಿಟ್ಟನು. ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ ಅವನ ಮುಖ್ಯ ಸೈನ್ಯಾಧಿ ಪತಿಯಾದ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿದರು.
- Genesis 31:52 ಆದಿಕಾಂಡ 31:52ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವದಿಲ್ಲವೆಂಬದಕ್ಕೆ ಈ ಕುಪ್ಪೆಯೂ ಸ್ತಂಭವೂ ಸಾಕ್ಷಿಯಾಗಿವೆ.
- Genesis 15:18 ಆದಿಕಾಂಡ 15:18ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್ ನದಿಯ ವರೆಗೆ ವಾಸಿಸುವ