Genesis · chapter 32 · verse 29
Genesis 32:29 in Kannada
ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.
Yaakobanu--ninna hesarannu nanage tilisu endu aatanannu kelikondaaga aatanu--nanna hesarannu yaake keluttee endu heli avanannu alli aasheervadisidanu.
Genesis 32:29 in English
- King James Version (KJV)
- And Jacob asked [him], and said, Tell [me], I pray thee, thy name. And he said, Wherefore [is] it [that] thou dost ask after my name? And he blessed him there.
- World English Bible (WEB)
- Jacob asked him, “Please tell me your name.” He said, “Why is it that you ask what my name is?” So he blessed him there.
- American Standard Version (ASV)
- And Jacob asked him, and said, Tell me, I pray thee, thy name. And he said, Wherefore is it that thou dost ask after my name? And he blessed him there.
- Bible in Basic English (BBE)
- Then Jacob said, What is your name? And he said, What is my name to you? Then he gave him a blessing.
- Darby Translation (DBY)
- And Jacob asked and said, Tell [me], I pray thee, thy name. And he said, How is it that thou askest after my name? And he blessed him there.
- Webster's Bible (WBS)
- And Jacob asked [him], and said, Tell [me], I pray thee, thy name: And he said, why [is] it [that] thou dost ask after my name? and he blessed him there.
- Young's Literal Translation (YLT)
- And Jacob asketh, and saith, 'Declare, I pray thee, thy name;' and he saith, 'Why [is] this, thou askest for My name?' and He blesseth him there.
Read in context
- 27ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.
- 28ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- 29ಯಾಕೋಬನು--ನಿನ್ನ ಹೆಸರನ್ನು ನನಗೆ ತಿಳಿಸು ಎಂದು ಆತನನ್ನು ಕೇಳಿಕೊಂಡಾಗ ಆತನು--ನನ್ನ ಹೆಸರನ್ನು ಯಾಕೆ ಕೇಳುತ್ತೀ ಎಂದು ಹೇಳಿ ಅವನನ್ನು ಅಲ್ಲಿ ಆಶೀರ್ವದಿಸಿದನು.
- 30ಆಗ ಯಾಕೋಬನು--ನಾನು ದೇವರನ್ನು ಮುಖಾಮುಖಿ ಯಾಗಿ ನೋಡಿದರೂ ನನ್ನ ಪ್ರಾಣವು ಕಾಪಾಡಲ್ಪಟ್ಟಿತು ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.
- 31ಅವನು ಪೆನೂವೇಲನ್ನು ದಾಟಿ ಹೋದಾಗ ಅವನಿಗೆ ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನಿಮಿತ್ತ ಕುಂಟಿಕೊಂಡು ನಡೆದನು.ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲ್ ಮಕ್ಕಳು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದ ವರೆಗೂ ತಿನ್ನುವದಿಲ್ಲ.
Cross references
- Job 11:7 ಯೋಬನು 11:7ದೇವರನ್ನು ಶೋಧಿಸಿ ಕಂಡುಕೊಳ್ಳುವಿಯೋ? ಸರ್ವಶಕ್ತನ ಸಂಪೂರ್ಣತ್ವವನ್ನು ನಿನ್ನಿಂದ ಕಂಡು ಹಿಡಿಯ ಲಾದೀತೆ?
- Isaiah 9:6 ಯೆಶಾಯ 9:6ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
- Judges 13:16–18 ನ್ಯಾಯಸ್ಥಾಪಕರು 13:16–18ಕರ್ತನ ದೂತನು ಮಾನೋಹನಿಗೆ--ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ರೊಟ್ಟಿಯನ್ನು ತಿನ್ನುವ ದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ ಅದನ್ನು ಕರ್ತನಿಗೆ ಅರ್ಪಿಸಬೇಕು ಅಂದನು. ಅವನು ಕರ್ತನ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಕರ್ತನ ದೂತನಿಗೆ--ನೀನು ಹೇಳಿದ ಮಾತುಗಳು ನೆರವೇರುವಾಗ ನಾವು ನಿನ್ನನ್ನು ಘನ ಪಡಿಸುವ ಹಾಗೆ ನಿನ್ನ ಹೆಸರೇನು ಅಂದನು. ಆದರೆ ಕರ್ತನ ದೂತನು ಅವನಿಗೆ--ನನ್ನ ಹೆಸರು ಏನೆಂದು ನೀನು ಕೇಳುವದೇನು? ಆ ಹೆಸರು ರಹಸ್ಯವಾದದ್ದು ಅಂದನು.
- Genesis 28:13–14 ಆದಿಕಾಂಡ 28:13–14ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು. ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.
- Luke 1:19 ಲೂಕನು 1:19ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ--ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.
- Proverbs 30:4 ಜ್ಞಾನೋಕ್ತಿಗಳು 30:4ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?
- Hosea 6:1 ಹೋಶೇಯ 6:1ಬನ್ನಿರಿ ನಾವು ಕರ್ತನ ಕಡೆಗೆ ತಿರುಗಿ ಕೊಳ್ಳೋಣ ಯಾಕಂದರೆ ಆತನು ಸೀಳಿ ಬಿಟ್ಟಿದ್ದಾನೆ, ನಮ್ಮನ್ನು ಸ್ವಸ್ಥ ಮಾಡುತ್ತಾನೆ; ಆತನು ಹೊಡೆದಿದ್ದಾನೆ; ಆತನು ನಮ್ಮನ್ನು ಕಟ್ಟುತ್ತಾನೆ.
- Genesis 27:28–29 ಆದಿಕಾಂಡ 27:28–29ಆದದರಿಂದ ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯ ದ್ರಾಕ್ಷಾರಸವನ್ನೂ ಕೊಡಲಿ. ಜನಗಳು ನಿನ್ನನ್ನು ಸೇವಿಸಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆ ಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ, ನಿನ್ನನ್ನು ಶಪಿಸುವವರಿಗೆ ಶಾಪವೂ ಆಶೀರ್ವದಿಸುವ ವರಿಗೆ ಆಶೀರ್ವಾದವೂ ಆಗಲಿ ಅಂದನು.
- Genesis 32:26–27 ಆದಿಕಾಂಡ 32:26–27ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು. ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.
- Genesis 28:3–4 ಆದಿಕಾಂಡ 28:3–4ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನೀನು ಜನಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ, ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.
- Deuteronomy 29:29 ಧರ್ಮೋಪದೇಶಕಾಂಡ 29:29ರಹಸ್ಯಗಳು ನಮ್ಮ ದೇವರಾದ ಕರ್ತನಿಗೆ ಸೇರಿದ್ದು; ಆದರೆ ಪ್ರಕಟವಾದ ಈ ನ್ಯಾಯಪ್ರಮಾಣದ ಮಾತು ಗಳನ್ನೆಲ್ಲಾ ನಾವು ಮಾಡುವಹಾಗೆ ನಮಗೂ ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.