Genesis · chapter 35 · verse 22
Genesis 35:22 in Kannada
ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
Israayelanu aa deshadalli vaasavaagiddaaga roobenanu hogi tanna tandeya upapatniyaada bilhala sangada malagidanu. Adannu israayelanu kelidanu. Yaakobanige hanneradu mandi kumaararu iddaru.
Genesis 35:22 in English
- King James Version (KJV)
- And it came to pass, when Israel dwelt in that land, that Reuben went and lay with Bilhah his father’s concubine: and Israel heard [it]. Now the sons of Jacob were twelve:
- World English Bible (WEB)
- While Israel lived in that land, Reuben went and lay with Bilhah, his father’s concubine, and Israel heard of it. Now the sons of Jacob were twelve.
- American Standard Version (ASV)
- And it came to pass, while Israel dwelt in that land, that Reuben went and lay with Bilhah his father’s concubine: and Israel heard of it. Now the sons of Jacob were twelve:
- Bible in Basic English (BBE)
- Now while they were living in that country, Reuben had connection with Bilhah, his father's servant-woman: and Israel had news of it.
- Darby Translation (DBY)
- And it came to pass when Israel dwelt in that land, that Reuben went and lay with Bilhah, his father's concubine; and Israel heard of it. And the sons of Jacob were twelve.
- Webster's Bible (WBS)
- And it came to pass, when Israel dwelt in that land, that Reuben went and lay with Bilhah his father's concubine: and Israel heard [it]. Now the sons of Jacob were twelve:
- Young's Literal Translation (YLT)
- and it cometh to pass in Israel's dwelling in that land, that Reuben goeth, and lieth with Bilhah his father's concubine; and Israel heareth.
Read in context
- 20ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
- 21ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು.
- 22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.
- 23ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು.
- 24ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು.
Cross references
- 1 Chronicles 5:1 1 ಪೂರ್ವಕಾಲವೃತ್ತಾಂತ 5:1ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ಕುಮಾರರು (ರೂಬೇನನು ಚೊಚ್ಚಲ ಮಗನಾಗಿದ್ದನು; ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರಮಾಡಿದ್ದರಿಂದ ಅವನ ಚೊಚ್ಚಲತನದ ಹಕ್ಕು ಇಸ್ರಾಯೇಲನ ಮಗ ನಾದ ಯೋಸೇಫನ ಕುಮಾರರಿಗೆ ಕೊಡಲ್ಪಟ್ಟಿತು. ಆದದರಿಂದ ಈ ವಂಶಾವಳಿಯು ಚೊಚ್ಚಲತನದ ಪ್ರಕಾರ ಬರೆಯಲ್ಪಟ್ಟದ್ದಲ್ಲ.
- Leviticus 18:8 ಯಾಜಕಕಾಂಡ 18:8ನಿನ್ನ ತಂದೆಯ ಹೆಂಡತಿಯ ಬೆತ್ತಲೆ ತನವನ್ನು ನೀನು ಕಾಣುವಂತೆ ಮಾಡಬಾರದು; ಅದು ನಿನ್ನ ತಂದೆಯ ಬೆತ್ತಲೆತನ.
- 1 Corinthians 5:1 1 ಕೊರಿಂಥದವರಿಗೆ 5:1ನಿಮ್ಮಲ್ಲಿ ಜಾರತ್ವವಿದೆಯೆಂದು ಸಾಧಾರಣ ವಾಗಿ ಹೇಳಲ್ಪಟ್ಟಿದೆ; ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.
- 2 Samuel 20:3 2 ಸಮುವೇಲನು 20:3ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು; ಅರಸನು ಮನೆಯಲ್ಲಿ ಕಾಯಲಿಟ್ಟ ಉಪಪತ್ನಿಗಳಾದ ಹತ್ತುಮಂದಿ ಸ್ತ್ರೀಯರನ್ನು ತೆಗೆದು ಕೊಂಡು ಅವರನ್ನು ಒಂದು ಕಾವಲಿನಲ್ಲಿ ಇರಿಸಿ ಸಾಕುತ್ತಿದ್ದನು. ಆದರೆ ಅವರನ್ನು ತಿರುಗಿ ಕೂಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದ ವರೆಗೂ ಕಾವಲಲ್ಲಿ ಇರಿಸಲ್ಪಟ್ಟು ವಿಧವೆಯರ ಹಾಗೆಯೇ ಬದುಕಿದರು.
- Genesis 49:1–28 ಆದಿಕಾಂಡ 49:1–28ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ. ಯಾಕೋಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾ ಯೇಲನಿಗೆ ಕಿವಿಗೊಡಿರಿ. ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ. ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ; ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ. ನನ್ನ ಪ್ರಾಣವೇ, ಅವರ ರಹಸ್ಯವಾದ ಸಭೆಯಲ್ಲಿ ಸೇರಬೇಡ.ನನ್ನ ಘನವೇ, ಅವರೊಂದಿಗೆ ಬೆರಿಕೆಯಾಗಬೇಡ; ಅವರು ತಮ್ಮ ಕೋಪದಲ್ಲಿ ಮನುಷ್ಯನನ್ನು ಕೊಂದರು. ಅವರು ಸ್ವಇಚ್ಛೆಯಿಂದ ಗೋಡೆಯನ್ನು ಕೆಡವಿಹಾಕಿ ದರು. ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು. ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು? ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು. ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಯನ್ನೂ ಶ್ರೇಷ್ಠ ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಮರಿಯನ್ನೂ ಕಟ್ಟುತ್ತಾನೆ. ದ್ರಾಕ್ಷಾರಸದಲ್ಲಿ ತನ್ನ ವಸ್ತ್ರಗಳನ್ನೂ ದ್ರಾಕ್ಷೇ ಹಣ್ಣುಗಳ ರಕ್ತದಲ್ಲಿ ತನ್ನ ಬಟ್ಟೆಗಳನ್ನೂ ತೊಳೆಯುತ್ತಾನೆ. ದ್ರಾಕ್ಷಾರಸ ದಿಂದ ಅವನ ಕಣ್ಣುಗಳು ಕೆಂಪಾಗಿರುವವವು; ಹಾಲಿ ನಿಂದ ಅವನ ಹಲ್ಲುಗಳು ಬಿಳುಪಾಗಿರುವವು. ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು. ಇಸ್ಸಾಕಾರನು ಎರಡು ಭಾರಗಳ ನಡುವೆ ಮಲಗಿ ಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು. ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು. ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು. ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ. ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು. ಆಶೇರನಿಂದ ಕೊಬ್ಬಿದ ಆಹಾರವು ಬರುವದು. ಅವನು ಅರಸರ ಸವಿಯೂಟ ವನ್ನು ಕೊಡುವನು. ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ. ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ. ಬಿಲ್ಲುಗಾರರು ಅವನನ್ನು ಬಹಳವಾಗಿ ದುಃಖ ಪಡಿಸಿ ಬಾಣಗಳನ್ನು ಎಸೆದು ಅವನನ್ನು ಹಗೆ ಮಾಡುವರು. ಆದರೆ ಅವನ ಬಿಲ್ಲು ಬಲವಾಗಿ ನೆಲೆಸಿತ್ತು. ಅವನ ಕೈತೋಳುಗಳು ಯಾಕೋಬನ ಪರಾಕ್ರಮಿಯಾದ ದೇವರ ಕೈಗಳಿಂದ, ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.) ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ. ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು. ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
- 2 Samuel 16:21–22 2 ಸಮುವೇಲನು 16:21–22ಅಹೀತೋಫೆಲನು ಅಬ್ಷಾಲೋಮನಿಗೆ--ನಿನ್ನ ತಂದೆಯು ಮನೆಗೆ ಕಾವಲಿಟ್ಟ ಉಪಪತ್ನಿಗಳೊಡನೆ ಸಂಗಮಿಸು; ಆಗ ನಿನ್ನ ತಂದೆ ಯಿಂದ ನೀನು ಹಗೆಮಾಡಲ್ಪಟ್ಟವನೆಂದು ಎಲ್ಲಾ ಇಸ್ರಾ ಯೇಲ್ಯರು ಕೇಳಿ ನಿನ್ನ ಸಂಗಡ ಇರುವ ಎಲ್ಲಾ ಜನರ ಕೈಗಳೂ ಬಲವಾಗಿರುವವು ಅಂದನು. ಹಾಗೆಯೇ ಅವರು ಅಬ್ಷಾಲೋಮನಿಗೋಸ್ಕರ ಮನೆಯ ಮೇಲೆ ಡೇರೆ ಹಾಕಿದರು; ಅಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.
- Genesis 35:18 ಆದಿಕಾಂಡ 35:18(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
- Acts 7:8 ಅಪೊಸ್ತಲರ ಕೃತ್ಯಗಳು 7:8ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
- Numbers 1:20–46 ಅರಣ್ಯಕಾಂಡ 1:20–46ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು. ಸಿಮೆಯೋನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದ ಗಂಡಸರೆಲ್ಲರು ಸಿಮೆಯೋನನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೊಂಭತ್ತು ಸಾವಿರದ ಮುನ್ನೂರು. ಗಾದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಗಾದನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೈದು ಸಾವಿರದ ಆರುನೂರ ಐವತ್ತು. ಯೂದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಯೆಹೂ ದನ ಗೋತ್ರದಲ್ಲಿ ಎಣಿಸಲ್ಪಟ್ಟವರು ಎಪ್ಪತ್ತನಾಲ್ಕು ಸಾವಿರದ ಆರುನೂರು. ಇಸ್ಸಾಕಾರನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಇಸ್ಸಾಕಾರನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತ ನಾಲ್ಕು ಸಾವಿರದ ನಾಲ್ಕುನೂರು. ಜೆಬುಲೂನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ದಕ್ಕೆ ಹೊರಡಲು ಶಕ್ತರಾದವರೆಲ್ಲರು ಜೆಬುಲೂನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೇಳು ಸಾವಿರದ ನಾಲ್ಕುನೂರು. ಯೋಸೇಫನ ಮಕ್ಕಳಾದ ಎಫ್ರಾಯಾಮ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಎಫ್ರಾಯಾಮ್ನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತು ಸಾವಿರದ ಐದುನೂರು. ಮನಸ್ಸೆಯ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ಕರಾದವರೆಲ್ಲರೂ ಮನ ಸ್ಸೆಯ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಇನ್ನೂರು. ಬೆನ್ಯಾವಿಾನ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಬೆನ್ಯಾವಿಾನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೈದು ಸಾವಿರದ ನಾಲ್ಕುನೂರು. ದಾನನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ದಾನನ ಗೋತ್ರದಲ್ಲಿ ಎಣಿಸಲ್ಪ ಟ್ಟವರು ಅರವತ್ತೆರಡು ಸಾವಿರದ ಏಳುನೂರು. ಆಶೇರನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಆಶೇರನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೊಂದು ಸಾವಿರದ ಐದುನೂರು. ನಫ್ತಾಲಿನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ನಫ್ತಾಲಿನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತಮೂರು ಸಾವಿರದ ನಾಲ್ಕುನೂರು. ಮೋಶೆ ಆರೋನರೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದವರು ಇವರೇ. ಇವರು ತಮ್ಮ ತಮ್ಮ ತಂದೆಗಳ ಮನೆಗಳಿಗೆ ಒಬ್ಬೊಬ್ಬನಂತೆ ಹನ್ನೆರಡು ಮಂದಿಯಾಗಿದ್ದರು. ಹೀಗೆ ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವ ರೆಲ್ಲರು ಅವರ ತಂದೆಗಳ ಮನೆಗಳ ಪ್ರಕಾರ ಇಪ್ಪತ್ತು ವರುಷದವರೂ ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳ ವರೂ ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡಲು ಶಕ್ತರಾದವರೂ ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು.
- Revelation 21:14 ಪ್ರಕಟನೆ 21:14ಪಟ್ಟಣದ ಗೋಡೆಗೆ ಹನ್ನೆರಡು ಅಸ್ತಿವಾರಗಳಿದ್ದವು; ಅವುಗಳ ಮೇಲೆ ಕುರಿಮರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು.
- 1 Chronicles 2:1–2 1 ಪೂರ್ವಕಾಲವೃತ್ತಾಂತ 2:1–2ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು, ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು.
- Ezekiel 48:1–35 ಯೆಹೆಜ್ಕೇಲನು 48:1–35ಈಗ ಆ ಗೋತ್ರಗಳ ಹೆಸರುಗಳು ಯಾವವಂದರೆ: ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಗೂ ಹಮಾತಿಗೆ ಹೋಗುವ ಮಾರ್ಗವಾಗಿ ಹಚರ್ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿ ಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಮೇರೆಗಳು, ದಾನ್ನ ಒಂದು ಭಾಗವಾಗಿದೆ. ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿ ಮದ ವರೆಗೂ ಆಶೇರನಿಗೆ ಒಂದು ಭಾಗವಾಗಿದೆ. ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ನಫ್ತಾಲಿಗೆ ಒಂದು ಭಾಗವಾಗಿದೆ. ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೆ ಮನಸ್ಸೆಗೆ ಒಂದು ಭಾಗ. ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಎಫ್ರಾಯಾಮ್ಗೆ ಒಂದು ಭಾಗ. ಎಫ್ರಾ ಯಾಮ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೆ ರೂಬೇನ್ಗೆ ಒಂದು ಭಾಗ. ರೂಬೇನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಯೆಹೂದಕ್ಕೆ ಒಂದು ಭಾಗ. ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ಆ ಬೇರೆ ಪಾಲುಗಳಲ್ಲಿ ಒಂದರ ಹಾಗೆ ಉದ್ದವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯ ವರೆಗೂ ಇರಬೇಕು. ಅದರ ಮಧ್ಯದಲ್ಲಿ ಪರಿಶುದ್ಧ ಸ್ಥಳವೂ ಇರಬೇಕು. ನೀವು ಕರ್ತನಿಗೆ ಅರ್ಪಿಸುವಂತ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು; ಅವರಿಗಾಗಿ ಅಂದರೆ ಯಾಜಕರಿಗಾಗಿ ಪರಿಶುದ್ಧ ಕಾಣಿಕೆ ಇರಬೇಕು, ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು; ಅದರ ಮಧ್ಯದಲ್ಲಿ ಕರ್ತನ ಪರಿಶುದ್ಧ ಸ್ಥಳವೂ ಇರಬೇಕು. ಇದು ನನ್ನ ಆಜ್ಞೆಯಂತೆ ನಡಕೊಂಡ ಇಸ್ರಾಯೇಲಿನ ಮಕ್ಕಳು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ತಪ್ಪಿಹೋಗದೆ ಇದ್ದಂತ ಚಾದೋ ಕನ ಕುಮಾರರಲ್ಲಿ ಪರಿಶುದ್ಧ ಮಾಡಲ್ಪಟ್ಟ ಯಾಜಕರ ದಾಗಿರಬೇಕು; ಅರ್ಪಿಸಲ್ಪಟ್ಟ ಈ ದೇಶದ ಕಾಣಿಕೆ ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧ ವಾದದ್ದಾಗಿರಬೇಕು. ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಎಲ್ಲಾ ಉದ್ದವೂ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ. ಅವರು ಅದರಲ್ಲಿ ಏನನ್ನೂ ಮಾರಬಾರದು, ಬದಲಾ ಯಿಸಬಾರದು, ದೇಶದ ಪ್ರಥಮ ಫಲವನ್ನು ಯಾರಿ ಗೂ ಕೊಡಬಾರದು; ಅದು ಕರ್ತನಿಗೆ ಪರಿಶುದ್ಧವಾ ಗಿದೆ. ಅಗಲದಲ್ಲಿ ಮಿಕ್ಕ ಐದು ಸಾವಿರವೂ ಇಪ್ಪತ್ತೈದು ಸಾವಿರಕ್ಕೆ ಎದುರಾಗಿಯೂ ಪಟ್ಟಣಕ್ಕೆ ಸಾಧಾರಣವಾದ ಸ್ಥಳವು ನಿವಾಸಗಳಿಗಾಗಿಯೂ ಉಪ ನಗರಗಳಾಗಿಯೂ ಸಾಧಾರಣವಾದ ಸ್ಥಳವಾಗಿರಬೇಕು; ಪಟ್ಟಣವು ಅದರ ಮಧ್ಯದಲ್ಲಿರಬೇಕು; ಅದರ ಅಳತೆಗಳು ಹೀಗಿರ ಬೇಕು; ಉತ್ತರದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ದಕ್ಷಿಣದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪೂರ್ವದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪಶ್ಚಿಮದ ಕಡೆಗೆ ನಾಲ್ಕು ಸಾವಿರದ ಐನೂರ ಮೊಳ; ಪಟ್ಟಣದ ಪ್ರಾಂತ್ಯಗಳು ಹೀಗಿರಬೇಕು: ಉತ್ತರದಲ್ಲಿ ಇನ್ನೂರಾ ಐವತ್ತು ಮೊಳ; ದಕ್ಷಿಣದಲ್ಲಿ ಇನ್ನೂರಾ ಐವತ್ತು ಮೊಳ; ಪೂರ್ವದಲ್ಲಿ ಇನ್ನೂರಾ ಐವತ್ತು ಮೊಳ; ಪಶ್ಚಿಮದಲ್ಲಿ ಇನ್ನೂರಾ ಐವತ್ತು ಮೊಳ. ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದು ರಾಗಿರುವಂತದ್ದೂ ಉದ್ದದಲ್ಲಿ ಮಿಕ್ಕಾದದ್ದೂ ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧ ಭಾಗಕ್ಕೆ ಎದುರಾಗಿರಬೇಕು. ಅದರ ಆದಾ ಯವು ಪಟ್ಟಣದಲ್ಲಿ ಸೇವೆ ಮಾಡುವವರ ಆಹಾರಕ್ಕಾಗು ವಷ್ಟು ಇರಬೇಕು. ಪಟ್ಟಣದಲ್ಲಿ ಸೇವೆ ಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ಅದರಲ್ಲಿಯೇ ಸೇವೆಮಾಡಬೇಕು. ಕಾಣಿಕೆಯ ಎಲ್ಲಾ ಸ್ಥಳವು ಇಪ್ಪ ತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು; ನೀವು ಪರಿಶುದ್ಧ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸ್ವಾಸ್ತ್ಯದ ಸಂಗಡ ಅರ್ಪಿಸಬೇಕು. ಪರಿಶುದ್ಧ ಕಾಣಿಕೆಗೂ ಪಟ್ಟಣದ ಸ್ವಾಸ್ತ್ಯಕ್ಕೂ ಈ ಕಡೆಗೂ ಆ ಕಡೆಗೂ ಮಿಕ್ಕಾದದ್ದು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರು ವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂತದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಅದು ಪರಿಶುದ್ಧ ಕಾಣಿಕೆಯೇ; ಆಲಯದ ಪರಿಶುದ್ಧ ಸ್ಥಳವೂ ಅದರ ಮಧ್ಯದಲ್ಲಿ ಇರಬೇಕು. ಇದಲ್ಲದೆ ಲೇವಿಯರ ಸ್ವಾಸ್ತ್ಯದಿಂದ ಮೊದಲುಗೊಂಡು ಮತ್ತು ಪಟ್ಟಣದ ಸ್ವಾಸ್ತ್ಯದಿಂದ ಪ್ರಧಾನನ ನಡುವೆ ಇರುವಂಥ ದ್ದು ಯೆಹೂದದ ಮೇರೆಗೂ ಬೆನ್ಯಾವಿಾನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಆಗಬೇಕು. ಮಿಕ್ಕ ಗೋತ್ರಗಳ ವಿಷಯವೇನಂದರೆ, ಪೂರ್ವ ದ ಕಡೆಯಿಂದ ಪಶ್ಚಿಮದ ವರೆಗೂ ಬೆನ್ಯಾವಿಾನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೂ ಸಿಮೆಯೋನ್ನ ಒಂದು ಭಾಗ ವಾಗಿದೆ. ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಸ್ಸಾಕಾರನ ಒಂದು ಭಾಗವಾಗಿದೆ; ಇಸ್ಸಾಕಾರ ಮೇರೆಯ ಬಳಿ ಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಜೆಬುಲೋನನ ಒಂದು ಭಾಗವದೆ; ಜೆಬು ಲೋನ್ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಗಾದನ ಒಂದು ಭಾಗವಾಗಿದೆ. ಗಾದನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರುಗಳ ವರೆಗೂ ಮಹಾ ಸಮುದ್ರಕ್ಕೆ ಹೋಗುವ ನದಿಯ ವರೆಗೂ ಇರಬೇಕು. ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ. ಪಟ್ಟಣದ ಹೊರಗೆ ಹೋಗುವಿಕೆಯು ಹೀಗಿರ ಬೇಕು--ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು. ಪಟ್ಟಣದ ಬಾಗಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು; ಉತ್ತರಕ್ಕೆ ಮೂರು ಬಾಗಲುಗಳು; ರೂಬೇ ನನ ಬಾಗಲು ಒಂದು, ಯೆಹೂದನ ಬಾಗಲು ಒಂದು; ಲೇವಿಯ ಬಾಗಲು ಒಂದು. ಪೂರ್ವದ ಗಡಿಯಲ್ಲಿ ನಾಲ್ಕು ಸಾವಿರದ ಐನೂರು, ಮತ್ತು ಮೂರು ಬಾಗ ಲುಗಳು; ಯೋಸೇಫನ ಬಾಗಲು ಒಂದು, ಬೆನ್ಯಾ ವಿಾನನ ಬಾಗಲು ಒಂದು; ದಾನನ ಬಾಗಲು ಒಂದು ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು; ಮೂರು ಬಾಗಲುಗಳು; ಸಿಮೆಯೋನನ ಬಾಗಲು ಒಂದು, ಇಸ್ಸಾಕಾರನ ಬಾಗಲು ಒಂದು; ಜೆಬುಲೋನನ ಬಾಗಲು ಒಂದು. ಪಶ್ಚಿಮದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು, ಅದರ ಬಾಗಲುಗಳು ಮೂರು; ಗಾದ ಬಾಗಲು ಒಂದು, ಆಶೇರ ಬಾಗಲು ಒಂದು, ನಫ್ತಾಲಿ ಬಾಗಲು ಒಂದು.ಸುತ್ತಲೂ ಹದಿನೆಂಟು ಸಾವಿರ ಅಳತೆಗಳು; ಆ ದಿನದಿಂದ ಆ ಪಟ್ಟಣದ ಹೆಸರು ಕರ್ತನು ನೆಲೆ ಯಾಗಿರುವನು ಎಂಬದೇ ಆಗಿರುವದು. ಸುತ್ತಲೂ ಹದಿನೆಂಟು ಸಾವಿರ ಅಳತೆಗಳು; ಆ ದಿನದಿಂದ ಆ ಪಟ್ಟಣದ ಹೆಸರು ಕರ್ತನು ನೆಲೆ ಯಾಗಿರುವನು ಎಂಬದೇ ಆಗಿರುವದು.
Original words (Hebrew)
- Israel · H3478יִשְׂרָאֵל Yisrâʼêl
- dwelt · H7931שָׁכַן shâkan
- land · H776אֶרֶץ ʼerets
- Reuben · H7205רְאוּבֵן Rᵉʼûwbên
- went · H3212יָלַךְ yâlak
- lay · H7901שָׁכַב shâkab
- Bilhah · H1090בִּלְהָה Bilhâh
- father’s · H1אָב ʼâb
- concubine · H6370פִּילֶגֶשׁ pîylegesh
- Israel · H3478יִשְׂרָאֵל Yisrâʼêl
- heard · H8085שָׁמַע shâmaʻ
- sons · H1121בֵּן bên
- Jacob · H3290יַעֲקֹב Yaʻăqôb
- twelve · H8147שְׁנַיִם shᵉnayim