1 Chronicles · chapter 2 · verse 1
1 Chronicles 2:1 in Kannada
ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,
Israayelana makkalu -- roobenanu, simeyonanu, leviyu,
1 Chronicles 2:1 in English
- King James Version (KJV)
- These [are] the sons of Israel; Reuben, Simeon, Levi, and Judah, Issachar, and Zebulun,
- World English Bible (WEB)
- These are the sons of Israel: Reuben, Simeon, Levi, Judah, Issachar, Zebulun,
- American Standard Version (ASV)
- These are the sons of Israel: Reuben, Simeon, Levi, and Judah, Issachar, and Zebulun,
- Bible in Basic English (BBE)
- These are the sons of Israel: Reuben, Simeon, Levi and Judah, Issachar and Zebulun;
- Darby Translation (DBY)
- These are the sons of Israel: Reuben, Simeon, Levi and Judah, Issachar and Zebulun,
- Webster's Bible (WBS)
- These [are] the sons of Israel; Reuben, Simeon, Levi, and Judah, Issachar, and Zebulun,
- Young's Literal Translation (YLT)
- These [are] sons of Israel: Reuben, Simeon, Levi, and Judah, Issachar, and Zebulun,
Read in context
- 1ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,
- 2ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು.
- 3ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು.
Cross references
- Genesis 32:28 ಆದಿಕಾಂಡ 32:28ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.
- Revelation 7:5–8 ಪ್ರಕಟನೆ 7:5–8ಯೂದನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ರೂಬೇನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಗಾದನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಅಷೇರನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ನೆಫ್ತಲೀಮನ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಮನಸ್ಸೆಯ ಗೋತ್ರದವ ರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಸಿಮೆ ಯೋನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ಲೇವಿಯ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಇಸ್ಸಾಕಾರನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ.
- Genesis 35:22–26 ಆದಿಕಾಂಡ 35:22–26ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು. ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು. ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು. ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು. ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.
- Genesis 49:2 ಆದಿಕಾಂಡ 49:2ಯಾಕೋಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾ ಯೇಲನಿಗೆ ಕಿವಿಗೊಡಿರಿ.
- Genesis 46:8–27 ಆದಿಕಾಂಡ 46:8–27ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು. ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು. ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು. ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು. ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು. ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು. ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು. ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ. ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು. ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು. ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು. ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು. ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು. ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ. ದಾನನ ಮಗನು ಹುಶೀಮನು. ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು. ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ. ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು. ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
- Genesis 49:4–28 ಆದಿಕಾಂಡ 49:4–28ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ; ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ. ನನ್ನ ಪ್ರಾಣವೇ, ಅವರ ರಹಸ್ಯವಾದ ಸಭೆಯಲ್ಲಿ ಸೇರಬೇಡ.ನನ್ನ ಘನವೇ, ಅವರೊಂದಿಗೆ ಬೆರಿಕೆಯಾಗಬೇಡ; ಅವರು ತಮ್ಮ ಕೋಪದಲ್ಲಿ ಮನುಷ್ಯನನ್ನು ಕೊಂದರು. ಅವರು ಸ್ವಇಚ್ಛೆಯಿಂದ ಗೋಡೆಯನ್ನು ಕೆಡವಿಹಾಕಿ ದರು. ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು. ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು? ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು. ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಯನ್ನೂ ಶ್ರೇಷ್ಠ ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಮರಿಯನ್ನೂ ಕಟ್ಟುತ್ತಾನೆ. ದ್ರಾಕ್ಷಾರಸದಲ್ಲಿ ತನ್ನ ವಸ್ತ್ರಗಳನ್ನೂ ದ್ರಾಕ್ಷೇ ಹಣ್ಣುಗಳ ರಕ್ತದಲ್ಲಿ ತನ್ನ ಬಟ್ಟೆಗಳನ್ನೂ ತೊಳೆಯುತ್ತಾನೆ. ದ್ರಾಕ್ಷಾರಸ ದಿಂದ ಅವನ ಕಣ್ಣುಗಳು ಕೆಂಪಾಗಿರುವವವು; ಹಾಲಿ ನಿಂದ ಅವನ ಹಲ್ಲುಗಳು ಬಿಳುಪಾಗಿರುವವು. ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು. ಇಸ್ಸಾಕಾರನು ಎರಡು ಭಾರಗಳ ನಡುವೆ ಮಲಗಿ ಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು. ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು. ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು. ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ. ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು. ಆಶೇರನಿಂದ ಕೊಬ್ಬಿದ ಆಹಾರವು ಬರುವದು. ಅವನು ಅರಸರ ಸವಿಯೂಟ ವನ್ನು ಕೊಡುವನು. ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ. ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ. ಬಿಲ್ಲುಗಾರರು ಅವನನ್ನು ಬಹಳವಾಗಿ ದುಃಖ ಪಡಿಸಿ ಬಾಣಗಳನ್ನು ಎಸೆದು ಅವನನ್ನು ಹಗೆ ಮಾಡುವರು. ಆದರೆ ಅವನ ಬಿಲ್ಲು ಬಲವಾಗಿ ನೆಲೆಸಿತ್ತು. ಅವನ ಕೈತೋಳುಗಳು ಯಾಕೋಬನ ಪರಾಕ್ರಮಿಯಾದ ದೇವರ ಕೈಗಳಿಂದ, ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.) ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ. ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು. ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
- Exodus 1:2–4 ವಿಮೋಚನಕಾಂಡ 1:2–4ರೂಬೇನ್ ಸಿಮೆಯೋನ್ ಲೇವಿ ಯೆಹೂದ ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್ ದಾನ್ ನಫ್ತಾಲಿ ಗಾದ್ ಆಶೇರ್.
- Genesis 35:18 ಆದಿಕಾಂಡ 35:18(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
- Numbers 26:5–65 ಅರಣ್ಯಕಾಂಡ 26:5–65ಇಸ್ರಾಯೇಲ್ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ. ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ. ಪಲ್ಲೂವಿನ ಕುಮಾರರು; ಎಲೀಯಾಬ್. ಎಲೀಯಾ ಬನ ಕುಮಾರರು: ನೆಮೂವೇಲ್, ದಾತಾನ್, ಅಬೀ ರಾಮ್; ಈ ದಾತಾನನೂ ಅಬೀರಾಮನೂ ಸಭೆಯಲ್ಲಿ ಪ್ರಸಿದ್ಧರಾಗಿದ್ದು, ಕೋರಹನ ಗುಂಪಿನಲ್ಲಿದ್ದು ಕರ್ತ ನಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು. ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು. ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ. ಕುಟುಂಬಗಳ ಪ್ರಕಾರ ಸಿಮೆಯೋನನ ಕುಮಾ ರರು: ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ; ಯಾವಿಾನನಿಂದ ಯಾವಿಾನ್ಯರ ಕುಟುಂಬ; ಯಾಕೀನ ನಿಂದ ಯಾಕೀನ್ಯರ ಕುಟುಂಬ; ಜೆರಹನಿಂದ ಜೆರಹಿ ಯರ ಕುಟುಂಬ; ಸೌಲನಿಂದ ಸೌಲ್ಯರ ಕುಟುಂಬ. ಸಿಮೆಯೋನನ ಕುಟುಂಬಗಳು ಇವೇ; ಇಪ್ಪತ್ತೆರಡು ಸಾವಿರದ ಇನ್ನೂರು ಮಂದಿ. ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನಿಂದ ಚೆಫೋನ್ಯರ ಕುಟುಂಬ; ಹಗ್ಗೀಯಿಂದ ಹಗ್ಗೀಯರ ಕುಟುಂಬ; ಶೂನೀಯಿಂದ ಶೂನೀಯರ ಕುಟುಂಬ. ಒಜ್ನೀಯಿಂದ ಒಜ್ನೀಯರ ಕುಟುಂಬ; ಏರೀಯಿಂದ ಏರೀಯರ ಕುಟುಂಬ; ಅರೋದನಿಂದ ಅರೋದ್ಯರ ಕುಟುಂಬ. ಅರೇಲೀಯಿಂದ ಅರೇಲೀ ಯರ ಕುಟುಂಬ. ಗಾದನ ಮಕ್ಕಳ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಸಾವಿರದ ಐನೂರು ಮಂದಿ. ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹೀಯರ ಕುಟುಂಬ. ಪೆರೆಚನ ಕುಮಾರರು; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಹಾಮೂ ಲನಿಂದ ಹಾಮೂಲ್ಯರ ಕುಟುಂಬ. ಯೆಹೂದನ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಎಪ್ಪತ್ತಾರು ಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಇಸ್ಸಾಕಾರನ ಕುಮಾರರು: ತೋಲನಿಂದ ತೋಲಾಯರ ಕುಟುಂಬ; ಪುವ್ವನಿಂದ ಪೂನ್ಯರ ಕುಟುಂಬ; ಯಾಶೂಬನಿಂದ ಯಾಶೂ ಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ. ಇಸ್ಸಾಕಾರನ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುನಾಲ್ಕು ಸಾವಿರದ ಮುನ್ನೂರು ಮಂದಿ. ಜೆಬುಲೂನನ ಕುಮಾ ರರು--ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನಿಂದ ಏಲೋನ್ಯರ ಕುಟುಂಬ; ಯಹಲೇಲನಿಂದ ಯಹಲೇಲ್ಯರ ಕುಟುಂಬ. ಜೆಬುಲೂನಿಯರ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ. ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ; ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ; ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ; ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ. ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ. ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ. ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ; ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ. ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ. ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ; ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ; ಬೆಲಗನ ಕುಮಾರರು; ಅರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ಬೆನ್ಯಾವಿಾನನ ಕುಮಾರರು ಇವರೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದು ಸಾವಿರದ ಆರು ನೂರು ಮಂದಿ. ಕುಟುಂಬಗಳ ಪ್ರಕಾರ ದಾನನ ಕುಮಾರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ದಾನನ ಕುಟುಂಬಗಳು ಇವೇ. ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಎಣಿಸಲ್ಪ ಟ್ಟವರು ಅರವತ್ತುನಾಲ್ಕು ಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನಿಂದ ಇಮ್ನಾಹ್ಯರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ. ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ. ಆಶೇರನ ಮಗಳ ಹೆಸರು ಸಾರಳು. ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ; ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದುಸಾವಿರದ ನಾನೂರು ಮಂದಿ. ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವರು ಇವರು; ಆರುಲಕ್ಷ ಒಂದುಸಾವಿರದ ಏಳುನೂರ ಮೂವತ್ತು ಮಂದಿ. ಕರ್ತನು ಮೋಶೆಯ ಸಂಗಡ ಮಾತನಾಡಿ ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು. ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ; ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು. ಆರೋನನಿಗೆ ನಾದಾಬ್ ಅಬೀಹೂ ಎಲ್ಲಾಜರನೂ ಈತಾಮಾರ್ ಹುಟ್ಟಿದರು. ಆದರೆ ನಾದಾಬನೂ ಅಬೀಹೂ ಕರ್ತನ ಮುಂದೆ ಅನ್ಯಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು. ಇವರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಇಪ್ಪತ್ತುಮೂರು ಸಾವಿರ ಮಂದಿಯಾಗಿದ್ದರು. ಇವ ರಿಗೆ ಇಸ್ರಾಯೇಲ್ ಮಕ್ಕಳಲ್ಲಿ ಸ್ವಾಸ್ತ್ಯವು ದೊರೆ ಯದ ಕಾರಣ ಅವರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ. ಎಣಿಸಲ್ಪಟ್ಟವರಾದ ಇವರನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲ್ ಮಕ್ಕ ಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು. ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ. ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Genesis 29:32–35 ಆದಿಕಾಂಡ 29:32–35ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್ ಎಂದು ಹೆಸರಿಟ್ಟಳು. ಮತ್ತೆ ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ನಾನು ತಾತ್ಸಾರ ಮಾಡಲ್ಪಟ್ಟೆನೆಂದು ಕರ್ತನು ಕೇಳಿ ಇವನನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು. ತಿರಿಗಿ ಆಕೆಯು ಮಗನನ್ನು ಹೆತ್ತು ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಯಾಕಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ; ಆದದರಿಂದ ಅವನಿಗೆ ಲೇವಿ ಎಂದು ಕರೆದಳು.ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು. ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು.
- Numbers 13:4–15 ಅರಣ್ಯಕಾಂಡ 13:4–15ಅವರ ಹೆಸರುಗಳು ಯಾವವಂದರೆ: ರೂಬೇನ್ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು, ಸಿಮೆಯೋನ್ ಗೋತ್ರದ ಹೋರಿಯ ಮಗನಾದ ಶಾಫಾಟನು, ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು, ಇಸ್ಸಾಕಾರ್ ಗೋತ್ರದ ಯೋಸೇಫನ ಮಗನಾದ ಇಗಾಲನು, ಎಫ್ರಾಯಾಮ್ ಗೋತ್ರದ ನೂನನ ಮಗನಾದ ಹೋಶೇಯನು, ಬೆನ್ಯಾವಿಾನ್ ಗೋತ್ರದ ರಾಫೂವನ ಮಗನಾದ ಪಲ್ಟೀಯು, ಜೆಬುಲೂನ್ ಗೋತ್ರದ ಸೋದೀಯ ಮಗನಾದ ಗದ್ದೀಯೇಲ್, ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗನಾದ ಗದ್ದೀ, ದಾನ್ ಗೋತ್ರದ ಗೆಮಲ್ಲೀಯನ ಮಗನಾದ ಅವ್ಮೆಾಯೇಲನು, ಆಶೇರ್ ಗೋತ್ರದ ವಿಾಕಾ ಯೇಲನ ಮಗನಾದ ಸೆತೂರ್, ನಫ್ತಾಲಿ ಗೋತ್ರದ ವಾಪೆಸೀಯನ ಮಗನಾದ ನಹಬೀ, ಗಾದನ ಗೋತ್ರದ ಮಾಕೀಯನ ಮಗನಾದ ಗೆಯೂವೇಲ್.
- Genesis 30:5–24 ಆದಿಕಾಂಡ 30:5–24ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು. ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು. ರಾಹೇಲಳ ದಾಸಿಯಾದ ಬಿಲ್ಹಳು ತಿರಿಗಿ ಗರ್ಭಿಣಿ ಯಾಗಿ ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. ಆಗ ರಾಹೇಲಳು--ಅಧಿಕವಾದ ಹೋರಾಟ ಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು. ಲೇಯಳು ತಾನು ಹೆರುವದು ನಿಂತಿತೆಂದು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ತಕ್ಕೊಂಡು ಯಾಕೋಬ ನಿಗೆ ಹೆಂಡತಿಯಾಗಿ ಕೊಟ್ಟಳು. ಲೇಯಳ ದಾಸಿ ಯಾದ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು. ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು. ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು. ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆ--ನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು. ಅದಕ್ಕೆ ಆಕೆಯು--ನೀನು ನನ್ನ ಗಂಡನನ್ನು ತಕ್ಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯಗಳನ್ನು ಸಹ ತಕ್ಕೊಳ್ಳುವಿಯೋ ಅಂದಾಗ ರಾಹೇಲಳು--ಆದದರಿಂದ ನಿನ್ನ ಮಗನು ತಂದ ದುದಾಯಗಳಿ ಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ ಅಂದಳು. ಯಾಕೋಬನು ಸಾಯಂಕಾಲ ದಲ್ಲಿ ಹೊಲದಿಂದ ಬಂದಾಗ ಲೇಯಳು ಅವನೆದುರಿಗೆ ಹೊರಟುಹೋಗಿ--ನೀನು ನನ್ನ ಬಳಿಗೆ ಬರಬೇಕು; ನನ್ನ ಮಗನ ದುದಾಯಗಳ ಬಾಡಿಗೆಯಿಂದ ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ ಅಂದಳು. ಆದದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು. ಆಗ ದೇವರು ಲೇಯಳನ್ನು ಆಲೈಸಿದ್ದರಿಂದ ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು. ಆಗ ಲೇಯಳು--ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟದ್ದರಿಂದ ದೇವರು ನನಗೆ ಕೂಲಿಯನ್ನು ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಇಸ್ಸಾಕಾರ ಎಂದು ಹೆಸರಿಟ್ಟಳು. ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು; ಲೇಯಳು--ದೇವರು ನನಗೆ ಒಳ್ಳೇ ಬಳುವಳಿಯನ್ನು ಕೊಟ್ಟಿದ್ದಾನೆ; ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ ನನ್ನ ಗಂಡನು ನನ್ನ ಸಂಗಡ ವಾಸಿಸುವನು ಎಂದು ಹೇಳಿ ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು. ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು ಆಕೆಗೆ ದೀನಾ ಎಂದು ಹೆಸರಿಟ್ಟಳು. ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿ ಕೊಂಡನು. ದೇವರು ಆಕೆಯನ್ನು ಆಲೈಸಿ ಆಕೆಯ ಗರ್ಭವನ್ನು ತೆರೆದನು. ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾನೆ ಅಂದಳು. ಆಕೆಯು--ಕರ್ತನು ನನಗೆ ಮತ್ತೊಬ್ಬ ಮಗನನ್ನು ಕೂಡಿಸುವನೆಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.