Genesis · chapter 37 · verse 20
Genesis 37:20 in Kannada
ಬನ್ನಿರಿ, ಈಗ ಅವನನ್ನು ಕೊಂದು--ಯಾವದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ; ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
Banniri, eega avanannu kondu--yaavado ondu kaadumrugavu avanannu tindubittitendu helona; taruvaaya avana kanasugalu enaaguvavo nodona endu obbarigobbaru maatanaadikondaru.
Genesis 37:20 in English
- King James Version (KJV)
- Come now therefore, and let us slay him, and cast him into some pit, and we will say, Some evil beast hath devoured him: and we shall see what will become of his dreams.
- World English Bible (WEB)
- Come now therefore, and let’s kill him, and cast him into one of the pits, and we will say, ‘An evil animal has devoured him.’ We will see what will become of his dreams.”
- American Standard Version (ASV)
- Come now therefore, and let us slay him, and cast him into one of the pits, and we will say, An evil beast hath devoured him: and we shall see what will become of his dreams.
- Bible in Basic English (BBE)
- Let us now put him to death and put his body into one of these holes, and we will say, An evil beast has put him to death: then we will see what becomes of his dreams.
- Darby Translation (DBY)
- And now come and let us kill him, and cast him into one of the pits, and we will say, An evil beast has devoured him; and we will see what becomes of his dreams.
- Webster's Bible (WBS)
- Come now therefore, and let us slay him, and cast him into some pit; and we will say, Some evil beast hath devoured him; and we shall see what will become of his dreams.
- Young's Literal Translation (YLT)
- and now, come, and we slay him, and cast him into one of the pits, and have said, An evil beast hath devoured him; and we see what his dreams are.'
Read in context
- 18ಅವರು ದೂರದಿಂದ ಅವನನ್ನು ನೋಡಿದಾಗ ಅವನು ಅವರ ಸವಿಾಪಕ್ಕೆ ಬರುವದಕ್ಕೆ ಮುಂಚೆಯೇ ಅವರು ಅವನನ್ನು ಕೊಂದುಹಾಕಬೇಕೆಂದು ಅವ ನಿಗೆ ವಿರೋಧವಾಗಿ ಒಳಸಂಚುಮಾಡಿಕೊಂಡರು.
- 19ಅವರು--ಇಗೋ, ಈ ಕನಸಿನವನು ಬರುತ್ತಿದ್ದಾನೆ;
- 20ಬನ್ನಿರಿ, ಈಗ ಅವನನ್ನು ಕೊಂದು--ಯಾವದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ; ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
- 21ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು.
- 22ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು.
Cross references
- Titus 3:3 ತೀತನಿಗೆ 3:3ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
- Proverbs 27:4 ಜ್ಞಾನೋಕ್ತಿಗಳು 27:4ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು?
- Matthew 2:2–16 ಮತ್ತಾಯನು 2:2–16ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು. ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು. ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ-- ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು. ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು. ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ, ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು. ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು. ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು. ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು. ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು. ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು. ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
- 2 Kings 2:24 2 ಅರಸುಗಳು 2:24ಅವನು ಹಿಂದಿರುಗಿ ಅವರನ್ನು ನೋಡಿ--ಕರ್ತನ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯೊಳಗಿಂದ ಎರಡು ಹೆಣ್ಣು ಕರಡಿಗಳು ಹೊರಟು ಅವರಲ್ಲಿ ನಾಲ್ವತ್ತೆರಡು ಹುಡುಗ ರನ್ನು ಸೀಳಿಬಿಟ್ಟವು.ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲು ಬೆಟ್ಟಕ್ಕೆ ಹೋದನು; ಅಲ್ಲಿಂದ ಸಮಾರ್ಯಕ್ಕೆ ಹಿಂತಿರುಗಿದನು.
- Proverbs 1:11–12 ಜ್ಞಾನೋಕ್ತಿಗಳು 1:11–12ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ. ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ.
- 1 Samuel 26:2 1 ಸಮುವೇಲನು 26:2ಆಗ ಸೌಲನು ಎದ್ದು ಜೀಫ್ ಅರಣ್ಯ ದಲ್ಲಿರುವ ದಾವೀದನನ್ನು ಹುಡುಕಲು ಇಸ್ರಾಯೇಲಿ ನಲ್ಲಿ ಆಯಲ್ಪಟ್ಟ ಮೂರು ಸಾವಿರ ಜನರ ಸಂಗಡ ಜೀಫ್ ಅರಣ್ಯಕ್ಕೆ ಹೋಗಿ ಯೆಷಿಮೋನಿಗೆ ಎದುರಾಗಿ ಮಾರ್ಗದಲ್ಲಿರುವ ಹಕೀಲಾ ಬೆಟ್ಟದಲ್ಲಿ ದಂಡಿಳಿದನು.
- Proverbs 10:18 ಜ್ಞಾನೋಕ್ತಿಗಳು 10:18ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು.
- Psalm 64:5 ಕೀರ್ತನೆಗಳು 64:5ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ.
- John 12:10–11 ಯೋಹಾನನು 12:10–11ಆದರೆ ಪ್ರಧಾನ ಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು. ಯಾಕಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಹೋಗಿ ಯೇಸುವಿನಲ್ಲಿ ನಂಬಿಕೆಯಿಟ್ಟರು.
- John 3:12 ಯೋಹಾನನು 3:12ನಾನು ಭೂಲೋಕ ದವುಗಳನ್ನು ನಿಮಗೆ ಹೇಳಿದರೆ ನೀವು ನಂಬುವದಿಲ್ಲ; ಆದರೆ ಪರಲೋಕದವುಗಳನ್ನು ನಿಮಗೆ ಹೇಳಿದರೆ ಹೇಗೆ ನಂಬೀರಿ?
- Acts 4:16–18 ಅಪೊಸ್ತಲರ ಕೃತ್ಯಗಳು 4:16–18ಈ ಮನುಷ್ಯರಿಗೆ ನಾವೇನು ಮಾಡೋಣ? ನಿಜ ವಾಗಿಯೂ ಅವರ ಮೂಲಕ ನಡೆದ ಪ್ರಸಿದ್ಧವಾದ ಒಂದು ಅದ್ಭುತಕಾರ್ಯವು ಯೆರೂಸಲೇಮಿನಲ್ಲಿ ವಾಸಮಾಡುವವರಿಗೆಲ್ಲಾ ಗೊತ್ತಾಗಿರುವದರಿಂದ ನಾವು ಅದನ್ನು ಅಲ್ಲಗಳೆಯಲಾರೆವು. ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು ಅವರನ್ನು ಕರೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದು, ಬೋಧಿ ಸಲೂಬಾರದು ಎಂದು ಅವರಿಗೆ ಅಪ್ಪಣೆಕೊಟ್ಟರು.
- Matthew 27:40–42 ಮತ್ತಾಯನು 27:40–42ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು. ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ-- ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.ಇವನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವು ಅವನನ್ನು ನಂಬುವೆವು;