Genesis · chapter 42 · verse 13
Genesis 42:13 in Kannada
ಅದಕ್ಕವರು--ನಿನ್ನ ದಾಸರಾದ ನಾವು ಹನ್ನೆರಡು ಮಂದಿ ಸಹೋದರರು; ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಇಗೋ, ಈಗ ಚಿಕ್ಕವನು ನಮ್ಮ ತಂದೆಯೊಂದಿಗೆ ಇದ್ದಾನೆ. ಮತ್ತೊಬ್ಬನು ಇಲ್ಲ ಎಂದು ಹೇಳಿದರು.
Adakkavaru--ninna daasaraada naavu hanneradu mandi sahodararu; naavu kaanaan deshadalliruva obba manushyana makkalu. Igo, eega chikkavanu namma tandeyondige iddaane. Mattobbanu illa endu helidaru.
Genesis 42:13 in English
- King James Version (KJV)
- And they said, Thy servants [are] twelve brethren, the sons of one man in the land of Canaan; and, behold, the youngest [is] this day with our father, and one [is] not.
- World English Bible (WEB)
- They said, “We, your servants, are twelve brothers, the sons of one man in the land of Canaan; and behold, the youngest is today with our father, and one is no more.”
- American Standard Version (ASV)
- And they said, We thy servants are twelve brethren, the sons of one man in the land of Canaan; and, behold, the youngest is this day with our father, and one is not.
- Bible in Basic English (BBE)
- Then they said, We your servants are twelve brothers, sons of one man in the land of Canaan; the youngest of us is now with our father, and one is dead.
- Darby Translation (DBY)
- And they said, Thy servants were twelve brethren, sons of one man, in the land of Canaan; and behold, the youngest is this day with our father, and one is not.
- Webster's Bible (WBS)
- And they said, Thy servants [are] twelve brethren, the sons of one man in the land of Canaan; and behold, the youngest [is] this day with our father, and one [is] not.
- Young's Literal Translation (YLT)
- and they say, 'Thy servants [are] twelve brethren; we [are] sons of one man in the land of Canaan, and lo, the young one [is] with our father to-day, and the one is not.'
Read in context
- 11ನಾವೆಲ್ಲರೂ ಒಬ್ಬ ಮನುಷ್ಯನ ಕುಮಾರರಾಗಿದ್ದು ಸತ್ಯವಂತರಾಗಿದ್ದೇವೆ. ಆದದರಿಂದ ನಿನ್ನ ದಾಸರು ಗೂಢಚಾರರಲ್ಲ ಅಂದರು.
- 12ಆದರೆ ಅವನು ಅವರಿಗೆ--ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳುಕೊಳ್ಳುವದಕ್ಕೋಸ್ಕರವೇ ಬಂದಿದ್ದೀರಿ ಅಂದನು.
- 13ಅದಕ್ಕವರು--ನಿನ್ನ ದಾಸರಾದ ನಾವು ಹನ್ನೆರಡು ಮಂದಿ ಸಹೋದರರು; ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಇಗೋ, ಈಗ ಚಿಕ್ಕವನು ನಮ್ಮ ತಂದೆಯೊಂದಿಗೆ ಇದ್ದಾನೆ. ಮತ್ತೊಬ್ಬನು ಇಲ್ಲ ಎಂದು ಹೇಳಿದರು.
- 14ಆಗ ಯೋಸೇಫನು ಅವರಿಗೆ--ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ.
- 15ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.
Cross references
- Genesis 37:30 ಆದಿಕಾಂಡ 37:30ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು.
- Genesis 42:32 ಆದಿಕಾಂಡ 42:32ನಾವು ಒಬ್ಬನೇ ತಂದೆಗೆ ಹುಟ್ಟಿದ ಹನ್ನೆರಡು ಮಂದಿ ಸಹೋದರರಾಗಿದ್ದೇವೆ; ಒಬ್ಬನು ಇಲ್ಲ; ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ ಅಂದೆವು.
- Genesis 44:20 ಆದಿಕಾಂಡ 44:20ನಾವು ನಮ್ಮ ಒಡೆಯನಿಗೆ--ನಮಗೆ ಮುದುಕನಾದ ತಂದೆಯೂ ಅವನಿಗೆ ಮುದಿಪ್ರಾಯದಲ್ಲಿ ಹುಟ್ಟಿದ ಚಿಕ್ಕಮಗನೂ ಇದ್ದಾರೆ; ಅವನ ಸಹೋದರನು ಸತ್ತುಹೋಗಿದ್ದಾನೆ. ಆದದರಿಂದ ಅವನೊಬ್ಬನೇ ತನ್ನ ತಾಯಿಗೆ ಉಳಿದಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿ ಮಾಡುತ್ತಾನೆ ಎಂದು ಹೇಳಿದೆವು.
- Genesis 43:7 ಆದಿಕಾಂಡ 43:7ಅವರು ಅವನಿಗೆ--ಆ ಮನುಷ್ಯನು ನಮ್ಮ ವಿಷಯದಲ್ಲಿಯೂ ನಮ್ಮ ವಂಶದ ವಿಷಯದಲ್ಲಿಯೂ ನೇರವಾಗಿ ಕೇಳಿ--ನಿಮ್ಮ ತಂದೆ ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ಸಹೋದರನು ಇದ್ದಾನೋ ಎಂದು ಕೇಳಿ ದನು. ಆಗ ಈ ಮಾತುಗಳಿಗೆ ತಕ್ಕ ಹಾಗೆ ನಾವು ಅವನಿಗೆ ತಿಳಿಸಿದೆವು. ನಿಮ್ಮ ತಮ್ಮನನ್ನು ಕರಕೊಂಡು ಬನ್ನಿರಿ ಎಂದು ಅವನು ನಮಗೆ ಹೇಳುವನೆಂದು ನಮಗೆ ಹೇಗೆ ತಿಳಿಯುವದು ಅಂದರು.
- 1 Chronicles 2:1–8 1 ಪೂರ್ವಕಾಲವೃತ್ತಾಂತ 2:1–8ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು, ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು. ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು. ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ. ಪೆರೆಚನ ಮಕ್ಕಳು--ಹೆಚ್ರೋನನು, ಹಾಮುಲನು; ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ. ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು. ಏತಾನನ ಮಗನುಅಜರ್ಯನು.
- Genesis 46:8–27 ಆದಿಕಾಂಡ 46:8–27ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು. ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು. ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು. ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು. ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು. ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು. ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು. ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ. ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು. ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು. ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು. ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು. ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು. ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ. ದಾನನ ಮಗನು ಹುಶೀಮನು. ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು. ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಕುಮಾರರು ಇವರಾ ಗಿದ್ದರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲಾ ಕೂಡಿ ಏಳು ಮಂದಿ. ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು. ಇದಲ್ಲದೆ ಐಗುಪ್ತದಲ್ಲಿ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಐಗುಪ್ತಕ್ಕೆ ಬಂದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.
- Numbers 26:1–65 ಅರಣ್ಯಕಾಂಡ 26:1–65ಆದರೆ ವ್ಯಾಧಿಯ ತರುವಾಯ ಕರ್ತನು ಮೋಶೆಯ ಸಂಗಡಲೂ ಆರೋನನ ಮಗನೂ ಯಾಜಕನೂ ಆಗಿರುವ ಎಲ್ಲಾಜಾರನ ಸಂಗಡಲೂ ಮಾತನಾಡಿ-- ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗುವದಕ್ಕೆ ಶಕ್ತರಾದವರೆಲ್ಲರ ಲೆಕ್ಕವನ್ನು ಅವರ ತಂದೆಯ ಮನೆಗಳ ಪ್ರಕಾರ ತಕ್ಕೊಳ್ಳಿರಿ ಅಂದನು. ಆಗ ಮೋಶೆಯೂ ಯಾಜಕನಾದ ಎಲ್ಲಾಜಾರನೂ ಮೋವಾಬಿನ ಬೈಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು. ಇಸ್ರಾಯೇಲ್ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ. ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ. ಪಲ್ಲೂವಿನ ಕುಮಾರರು; ಎಲೀಯಾಬ್. ಎಲೀಯಾ ಬನ ಕುಮಾರರು: ನೆಮೂವೇಲ್, ದಾತಾನ್, ಅಬೀ ರಾಮ್; ಈ ದಾತಾನನೂ ಅಬೀರಾಮನೂ ಸಭೆಯಲ್ಲಿ ಪ್ರಸಿದ್ಧರಾಗಿದ್ದು, ಕೋರಹನ ಗುಂಪಿನಲ್ಲಿದ್ದು ಕರ್ತ ನಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು. ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು. ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ. ಕುಟುಂಬಗಳ ಪ್ರಕಾರ ಸಿಮೆಯೋನನ ಕುಮಾ ರರು: ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ; ಯಾವಿಾನನಿಂದ ಯಾವಿಾನ್ಯರ ಕುಟುಂಬ; ಯಾಕೀನ ನಿಂದ ಯಾಕೀನ್ಯರ ಕುಟುಂಬ; ಜೆರಹನಿಂದ ಜೆರಹಿ ಯರ ಕುಟುಂಬ; ಸೌಲನಿಂದ ಸೌಲ್ಯರ ಕುಟುಂಬ. ಸಿಮೆಯೋನನ ಕುಟುಂಬಗಳು ಇವೇ; ಇಪ್ಪತ್ತೆರಡು ಸಾವಿರದ ಇನ್ನೂರು ಮಂದಿ. ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನಿಂದ ಚೆಫೋನ್ಯರ ಕುಟುಂಬ; ಹಗ್ಗೀಯಿಂದ ಹಗ್ಗೀಯರ ಕುಟುಂಬ; ಶೂನೀಯಿಂದ ಶೂನೀಯರ ಕುಟುಂಬ. ಒಜ್ನೀಯಿಂದ ಒಜ್ನೀಯರ ಕುಟುಂಬ; ಏರೀಯಿಂದ ಏರೀಯರ ಕುಟುಂಬ; ಅರೋದನಿಂದ ಅರೋದ್ಯರ ಕುಟುಂಬ. ಅರೇಲೀಯಿಂದ ಅರೇಲೀ ಯರ ಕುಟುಂಬ. ಗಾದನ ಮಕ್ಕಳ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಸಾವಿರದ ಐನೂರು ಮಂದಿ. ಯೆಹೂದನ ಕುಮಾರರು: ಏರನೂ ಓನಾನನೂ; ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಕುಟುಂಬಗಳ ಪ್ರಕಾರ ಯೆಹೂದನ ಕುಮಾರರು; ಶೇಲಹನಿಂದ ಶೇಲಹ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹೀಯರ ಕುಟುಂಬ. ಪೆರೆಚನ ಕುಮಾರರು; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಹಾಮೂ ಲನಿಂದ ಹಾಮೂಲ್ಯರ ಕುಟುಂಬ. ಯೆಹೂದನ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಎಪ್ಪತ್ತಾರು ಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಇಸ್ಸಾಕಾರನ ಕುಮಾರರು: ತೋಲನಿಂದ ತೋಲಾಯರ ಕುಟುಂಬ; ಪುವ್ವನಿಂದ ಪೂನ್ಯರ ಕುಟುಂಬ; ಯಾಶೂಬನಿಂದ ಯಾಶೂ ಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ. ಇಸ್ಸಾಕಾರನ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುನಾಲ್ಕು ಸಾವಿರದ ಮುನ್ನೂರು ಮಂದಿ. ಜೆಬುಲೂನನ ಕುಮಾ ರರು--ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನಿಂದ ಏಲೋನ್ಯರ ಕುಟುಂಬ; ಯಹಲೇಲನಿಂದ ಯಹಲೇಲ್ಯರ ಕುಟುಂಬ. ಜೆಬುಲೂನಿಯರ ಕುಟುಂಬಗಳು ಇವೇ. ಅವರಲ್ಲಿ ಎಣಿಸಲ್ಪಟ್ಟವರು ಅರವತ್ತುಸಾವಿರದ ಐನೂರು ಮಂದಿ. ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ. ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ; ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ; ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ; ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ. ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ. ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ. ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ; ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ. ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ. ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ; ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ; ಬೆಲಗನ ಕುಮಾರರು; ಅರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ಬೆನ್ಯಾವಿಾನನ ಕುಮಾರರು ಇವರೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದು ಸಾವಿರದ ಆರು ನೂರು ಮಂದಿ. ಕುಟುಂಬಗಳ ಪ್ರಕಾರ ದಾನನ ಕುಮಾರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ದಾನನ ಕುಟುಂಬಗಳು ಇವೇ. ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಎಣಿಸಲ್ಪ ಟ್ಟವರು ಅರವತ್ತುನಾಲ್ಕು ಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನಿಂದ ಇಮ್ನಾಹ್ಯರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ. ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ. ಆಶೇರನ ಮಗಳ ಹೆಸರು ಸಾರಳು. ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ; ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ. ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದುಸಾವಿರದ ನಾನೂರು ಮಂದಿ. ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವರು ಇವರು; ಆರುಲಕ್ಷ ಒಂದುಸಾವಿರದ ಏಳುನೂರ ಮೂವತ್ತು ಮಂದಿ. ಕರ್ತನು ಮೋಶೆಯ ಸಂಗಡ ಮಾತನಾಡಿ ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು. ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಸಲ್ಪ ಟ್ಟವರು ಇವರೇ. ಗೆರ್ಷೋನನಿಂದ ಗೆರ್ಷೋನ್ಯರ ಕುಟುಂಬ; ಕೆಹಾತನಿಂದ ಕೆಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ. ಲೇವಿಯರ ಕುಟುಂಬಗಳು ಇವೇ: ಲಿಬ್ನೀಯರ ಕುಟುಂಬ; ಹೆಬ್ರೋನ್ಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹಿಯರ ಕುಟುಂಬ; ಆದರೆ ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಐಗುಪ್ತದಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆ ಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು. ಆರೋನನಿಗೆ ನಾದಾಬ್ ಅಬೀಹೂ ಎಲ್ಲಾಜರನೂ ಈತಾಮಾರ್ ಹುಟ್ಟಿದರು. ಆದರೆ ನಾದಾಬನೂ ಅಬೀಹೂ ಕರ್ತನ ಮುಂದೆ ಅನ್ಯಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು. ಇವರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಇಪ್ಪತ್ತುಮೂರು ಸಾವಿರ ಮಂದಿಯಾಗಿದ್ದರು. ಇವ ರಿಗೆ ಇಸ್ರಾಯೇಲ್ ಮಕ್ಕಳಲ್ಲಿ ಸ್ವಾಸ್ತ್ಯವು ದೊರೆ ಯದ ಕಾರಣ ಅವರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ. ಎಣಿಸಲ್ಪಟ್ಟವರಾದ ಇವರನ್ನು ಮೋಶೆಯೂ ಯಾಜಕನಾದ ಎಲ್ಲಾಜಾರನೂ ಇಸ್ರಾಯೇಲ್ ಮಕ್ಕ ಳಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು. ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ. ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Genesis 42:38 ಆದಿಕಾಂಡ 42:38ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.
- Exodus 1:2–5 ವಿಮೋಚನಕಾಂಡ 1:2–5ರೂಬೇನ್ ಸಿಮೆಯೋನ್ ಲೇವಿ ಯೆಹೂದ ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್ ದಾನ್ ನಫ್ತಾಲಿ ಗಾದ್ ಆಶೇರ್. ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
- Numbers 34:1–29 ಅರಣ್ಯಕಾಂಡ 34:1–29ಕರ್ತನು ಮೋಶೆಯ ಸಂಗಡ ಮಾತನಾಡಿ-- ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಕಾನಾನ್ ದೇಶದೊಳಗೆ ಬರುವಾಗ ನಿಮಗೆ ಸ್ವಾಸ್ತ್ಯಕ್ಕಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು. ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು. ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ ಜಿನ್ಗೆ ಹಾದು ಕಾದೇಶ್ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು ಅಲ್ಲಿಂದ ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು. ಮೇರೆ ಅಚ್ಮೋನಿನಿಂದ ಐಗುಪ್ತದ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು. ಪಶ್ಚಿಮದ ಮೇರೆಯಾದರೆ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು; ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವದು. ನಿಮ್ಮ ಉತ್ತರ ಮೇರೆ ಯಾವದಂದರೆ--ನೀವು ದೊಡ್ಡ ಸಮುದ್ರದಿಂದ ಹೋರ್ ಪರ್ವತದ ವರೆಗೂ ಸಾಲು ಮಾಡಿಕೊಂಡು ಹೋರ್ ಪರ್ವತದಿಂದ ಹಮಾತಿನ ಪ್ರದೇಶದ ವರೆಗೆ ಸಾಲು ಮಾಡಿರಿ; ಮೇರೆಯು ಚೆದಾದಿಗೆ ಹೊರಟು ಜಿಫ್ರೋನಿಗೆ ಹೋಗಿ ಹಚರೇನಾನಿನಲ್ಲಿ ಮುಗಿಯಲಿ; ಇದು ನಿಮ್ಮ ಉತ್ತರ ಮೇರೆ. ಪೂರ್ವದ ಮೇರೆಗೋಸ್ಕರ ಹಚರೇನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ. ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ. ಅಲ್ಲಿಂದ ಮೇರೆಯು ಯೊರ್ದನ್ ನದಿಗೆ ಅನುಸಾರ ವಾಗಿ ಇಳಿದು ಉಪ್ಪಿನ ಸಮುದ್ರದಲ್ಲಿ ಮುಗಿಯುವದು; ಇದು ಅದರ ಸುತ್ತಮುತ್ತಲ ಮೇರೆಗಳ ಪ್ರಕಾರ ನಿಮ್ಮ ದೇಶವಾಗಿರಬೇಕು. ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾ ಪಿಸಿ--ನೀವು ಚೀಟಿನಿಂದ ಸ್ವಾಧೀನಪಡಿಸಿಕೊಳ್ಳ ಬೇಕಾದ ದೇಶವು ಒಂಭತ್ತುವರೆ ಗೋತ್ರಗಳಿಗೆ ಕೊಡ ಬೇಕೆಂದು ಕರ್ತನು ಆಜ್ಞಾಪಿಸಿದ ದೇಶವು ಇದೇ. ರೂಬೇನನ ಮಕ್ಕಳ ಗೋತ್ರವೂ ಗಾದನ ಮಕ್ಕಳ ಗೋತ್ರವೂ ಮನಸ್ಸೆಯ ಅರ್ಧ ಗೋತ್ರವೂ ತಮ್ಮ ಪಿತೃಗಳ ಮನೆಯ ಪ್ರಕಾರವಾಗಿ ತಮ್ಮ ಸ್ವಾಸ್ತ್ಯವನ್ನು ಪಡೆದುಕೊಂಡಿದ್ದಾರೆ. ಎರಡೂವರೆ ಗೋತ್ರಗಳು ತಮ್ಮ ಸ್ವಾಸ್ತ್ಯವನ್ನು ಯೊರ್ದನಿನ ಈಚೆಯಲ್ಲಿ ಯೆರಿ ಕೋವಿಗೆ ಸೂರ್ಯನು ಉದಯಿಸುವ ಪೂರ್ವ ದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ ಎಂದು ಹೇಳಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ ದೇಶವನ್ನು ನಿಮಗೆ ಹಂಚಬೇಕಾದ ಮನುಷ್ಯರ ಹೆಸರುಗಳು ಇವೇ: ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ. ಈ ಮನುಷ್ಯರ ಹೆಸರುಗಳು ಇವೇ: ಯೆಹೂದನ ಕುಟುಂಬದಿಂದ ಯೆಪುನ್ನೆಯ ಮಗನಾದ ಕಾಲೇಬನೂ ಸಿಮೆಯೋನನ ಮಕ್ಕಳ ಗೋತ್ರದಿಂದ ಅವ್ಮೆಾಹೂ ದನ ಮಗನಾದ ಶೆಮೂವೇಲನೂ ಬೆನ್ಯಾವಿಾನನ ಗೋತ್ರದಿಂದ ಕಿಸ್ಲೋನನ ಮಗನಾದ ಎಲೀದಾದನೂ ದಾನನ ಮಕ್ಕಳ ಗೋತ್ರದ ಪ್ರಧಾನನು ಯೊಗ್ಲೀಯ ಮಗನಾದ ಬುಕ್ಕೀಯೂ ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಎಫೋದನ ಮಗನಾದ ಹನ್ನೀಯೇಲನೂ ಎಫ್ರಾಯಾಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗನಾದ ಕೆಮೂವೇಲನೂ ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗನಾದ ಎಲೀಚಾಫಾನನೂ ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗನಾದ ಪಲ್ಟೀಯೇಲನೂ ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗನಾದ ಅಹೀಹೂದನೂ ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅವ್ಮೆಾಹೂದನ ಮಗನಾದ ಪೆದಹೇಲನೂ.ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ. ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ.
- Genesis 42:36 ಆದಿಕಾಂಡ 42:36ಆಗ ಅವರ ತಂದೆಯಾದ ಯಾಕೋಬನು ಅವರಿಗೆ--ನನ್ನನ್ನು ಮಕ್ಕಳಿಲ್ಲದವ ನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾವಿಾನನ್ನೂ ಕರಕೊಂಡು ಹೋಗುವದಕ್ಕಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ ಅಂದನು.
- Numbers 10:1–36 ಅರಣ್ಯಕಾಂಡ 10:1–36ಕರ್ತನು ಮೋಶೆಗೆ ಹೇಳಿದ್ದೇನೆಂದರೆ ಬೆಳ್ಳಿಯಿಂದ ಎರಡು ತುತೂರಿಗಳನ್ನು ಒಂದೇ ತುಂಡಿನಿಂದ ಮಾಡಿಸಿಕೋ; ಸಭೆಯನ್ನು ಕರೆಯುವದಕ್ಕಾಗಿಯೂ ಪಾಳೆಯಗಳ ಪ್ರಯಾಣಕ್ಕಾ ಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು. ಅವುಗಳನ್ನು ಊದುವಾಗ ಸಭೆಯೆಲ್ಲಾ ಸಭೆಯ ಗುಡಾರದ ಬಾಗಲ ಬಳಿಯಲ್ಲಿರುವ ನಿನ್ನ ಬಳಿಗೆ ಕೂಡಿಬರಬೇಕು. ಒಂದರಿಂದ ಊದುವಾಗ ಮಾತ್ರ ಇಸ್ರಾಯೇಲಿನ ಸಹಸ್ರಗಳಿಗೆ ಮುಖ್ಯಸ್ಥರಾದ ಪ್ರಧಾ ನರು ನಿನ್ನ ಬಳಿಗೆ ಕೂಡಿಬರಬೇಕು. ನೀವು ಎಚ್ಚರಿಸು ವಂತೆ ಊದುವಾಗ ಪೂರ್ವದಲ್ಲಿ ಇರುವಂತ ಪಾಳೆಯ ಗಳು ಮುಂದೆ ಹೊರಡಬೇಕು. ನೀವು ಎರಡನೇ ಸಾರಿ ಎಚ್ಚರಿಸುವಂತೆ ಊದುವಾಗ ದಕ್ಷಿಣದಲ್ಲಿ ಇರು ವಂತ ಪಾಳೆಯಗಳು ಪ್ರಯಾಣಮಾಡಬೇಕು; ಅವರ ಪ್ರಯಾಣಕ್ಕೆ ಎಚ್ಚರಿಸುವಂತೆ ಊದಬೇಕು. ಸಭೆ ಯನ್ನು ಕೂಡಿಸುವಾಗ ನೀವು ಊದಬೇಕು. ಎಚ್ಚರಿಸು ವಂತೆ ಶಬ್ದಮಾಡಬೇಡಿರಿ. ಯಾಜಕರಾಗಿರುವ ಆರೋನನ ಕುಮಾರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು. ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ನೀವು ತುತೂರಿಗಳನ್ನು ಎಚ್ಚರಿಸುವಂತೆ ಊದಬೇಕು. ಆಗ ನಿಮ್ಮ ದೇವರಾದ ಕರ್ತನ ಸಮ್ಮುಖದಲ್ಲಿ ನೀವು ಜ್ಞಾಪಕ ಮಾಡಲ್ಪಟ್ಟು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ. ನಿಮ್ಮ ಸಂತೋಷದ ದಿವಸದಲ್ಲಿಯೂ ಹಬ್ಬಗಳ ಲ್ಲಿಯೂ ತಿಂಗಳಿನ ಆರಂಭದಲ್ಲಿಯೂ ನಿಮ್ಮ ದಹನ ಬಲಿಗಳನ್ನು ನಿಮ್ಮ ಸಮಾಧಾನದ ಬಲಿಗಳನ್ನು ಅರ್ಪಿಸು ವಾಗ ಅವುಗಳನ್ನು ಊದಬೇಕು. ಅವು ನಿಮಗೆ ನಿಮ್ಮ ದೇವರ ಎದುರಿನಲ್ಲಿ ಜ್ಞಾಪಕವಾಗಿರುವವು. ನಿಮ್ಮ ದೇವರಾಗಿರುವ ಕರ್ತನು ನಾನೇ. ಎರಡನೆಯ ವರುಷದ ಎರಡನೇ ತಿಂಗಳಿನ ಇಪ್ಪತ್ತನೇ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎತ್ತಲ್ಪಟ್ಟಿತು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಅರಣ್ಯ ದಿಂದ ಪ್ರಯಾಣ ಮಾಡಿದರು; ಮೇಘವು ಪಾರಾನೆಂಬ ಅರಣ್ಯದಲ್ಲಿ ನಿಂತಿತು. ಆಗ ಅವರು ಮೊದಲನೇ ಸಾರಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಪ್ರಯಾಣಮಾಡಿದರು. ಯೂದನ ಮಕ್ಕಳ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅವ್ಮೆಾನಾದಾಬನ ಮಗನಾದ ನಹಶೋ ನನು ಇದ್ದನು. ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗನಾದ ನೆತನೇಲನು ಇದ್ದನು. ಜೆಬುಲೂನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗನಾದ ಎಲೀಯಾಬನು ಇದ್ದನು. ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು. ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು. ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು. ಗಾದನ ಮಕ್ಕಳ ಗೋತ್ರದ ಸೈನ್ಯದ ಮೇಲೆ ದೆಗೂವೇಲನ ಮಗನಾದ ಎಲ್ಯಾಸಾಫನು ಇದ್ದನು. ಪರಿಶುದ್ಧ ಸ್ಥಳವನ್ನು ಹೊರುವ ಕೆಹಾತ್ಯರು ಹೊರಟರು; ಇವರು ಬರುವಷ್ಟರೊಳಗೆ ಅವರು ಗುಡಾರವನ್ನು ನಿಲ್ಲಿಸಿದರು. ಎಫ್ರಾಯಾಮಿನ ಮಕ್ಕಳ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಅವ್ಮೆಾಹೂದನ ಮಗನಾದ ಎಲೀಷಾಮನು ಇದ್ದನು. ಮನಸ್ಸೆಯ ಮಕ್ಕಳ ಗೋತ್ರದ ಮೇಲೆ ಪೆದಾಚೂರನ ಮಗನಾದ ಗವ್ಮೆಾಯೇಲನು ಇದ್ದನು. ಬೆನ್ಯಾವಿಾನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗನಾದ ಅಬೀದಾನನು ಇದ್ದನು. ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು. ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು. ನಫ್ತಾಲಿಯ ಮಕ್ಕಳ ಗೋತ್ರದ ಸೈನ್ಯದ ಮೇಲೆ ಏನಾನ ಮಗನಾದ ಅಹೀರನು ಇದ್ದನು. ಈ ಪ್ರಕಾರ ಇಸ್ರಾಯೇಲ್ ಮಕ್ಕಳು ತಮ್ಮ ಸೈನ್ಯಗಳ ಪ್ರಕಾರ ಪ್ರಯಾಣವಾಗಿ ಹೊರಡುತ್ತಿದ್ದರು. ಮೋಶೆ ತನ್ನ ಮಾವನಾದ ಮಿದ್ಯಾನಿನ ರೆಗೂ ವೇಲನ ಮಗನಾದ ಹೋಬಾಬನಿಗೆ--ನಿಮಗೆ ಕೊಡು ತ್ತೇನೆಂದು ಕರ್ತನು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ; ನಮ್ಮ ಸಂಗಡ ನೀನು ಬಾ; ನಾವು ನಿನಗೆ ಒಳ್ಳೇದನ್ನು ಮಾಡುವೆವು; ಕರ್ತನು ಇಸ್ರಾಯೇ ಲ್ಯರನ್ನು ಕುರಿತು ಒಳ್ಳೇದನ್ನು ಹೇಳಿದ್ದಾನೆ ಎಂದು ಹೇಳಿದನು. ಅದಕ್ಕೆ ಅವನು--ನಾನು ಬರುವದಿಲ್ಲ: ನಾನು ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗು ತ್ತೇನೆ ಅಂದನು. ಅದಕ್ಕೆ ಮೋಶೆ--ನಮ್ಮನ್ನು ಬಿಟ್ಟುಹೋಗಬೇಡ, ನಾವು ಎಲ್ಲಿ ಇಳುಕೊಳ್ಳಬೇಕೋ ನಿನಗೆ ತಿಳಿದದೆ; ನೀನು ನಮಗೆ ಕಣ್ಣುಗಳಾಗಿರುವಿ. ನೀನು ನಮ್ಮ ಸಂಗಡ ಬಂದರೆ ಹೌದು, ಕರ್ತನು ನಮಗೆ ಮಾಡಲಿಕ್ಕಿರುವ ಒಳ್ಳೇದನ್ನು ನಾವು ನಿನಗೆ ಮಾಡುವೆವು ಅಂದನು. ಅವರು ಕರ್ತನ ಪರ್ವತದ ಬಳಿಯಿಂದ ಮೂರು ದಿವಸಗಳ ವರೆಗೆ ಪ್ರಯಾಣಮಾಡಿದರು. ಕರ್ತನ ಒಡಂಬಡಿಕೆಯ ಮಂಜೂಷವು ಅವರಿಗೆ ಇಳು ಕೊಳ್ಳುವ ಸ್ಥಳವನ್ನು ಹುಡುಕುವದಕ್ಕಾಗಿ ಮೂರು ದಿವಸ ಗಳ ಪ್ರಯಾಣದಷ್ಟು ಅವರ ಮುಂದಾಗಿ ಹೋಯಿತು. ಅವರು ಪಾಳೆಯದಿಂದ ಹೊರಟಾಗ ಕರ್ತನ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು. ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು.ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು. ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು.
Original words (Hebrew)
- said · H559אָמַר ʼâmar
- servants · H5650עֶבֶד ʻebed
- twelve · H8147שְׁנַיִם shᵉnayim
- brethren · H251אָח ʼâch
- sons · H1121בֵּן bên
- one · H259אֶחָד ʼechâd
- man · H376אִישׁ ʼîysh
- land · H776אֶרֶץ ʼerets
- Canaan · H3667כְּנַעַן Kᵉnaʻan
- youngest · H6996קָטָן qâṭân
- day · H3117יוֹם yôwm
- father · H1אָב ʼâb
- one · H259אֶחָד ʼechâd