Genesis · chapter 46 · verse 8
Genesis 46:8 in Kannada
ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.
Aiguptakke banda israayelana makkala hesaru galu yaavavandare, yaakobanu mattu avana makkalu: yaakobana chochchala maganaada roobe nanu.
Genesis 46:8 in English
- King James Version (KJV)
- And these [are] the names of the children of Israel, which came into Egypt, Jacob and his sons: Reuben, Jacob’s firstborn.
- World English Bible (WEB)
- These are the names of the children of Israel, who came into Egypt, Jacob and his sons: Reuben, Jacob’s firstborn.
- American Standard Version (ASV)
- And these are the names of the children of Israel, who came into Egypt, Jacob and his sons: Reuben, Jacob’s first-born.
- Bible in Basic English (BBE)
- And these are the names of the children of Israel who came into Egypt, even Jacob and all his sons: Reuben, Jacob's oldest son;
- Darby Translation (DBY)
- And these are the names of the sons of Israel who came into Egypt: Jacob and his sons. Jacob's firstborn, Reuben.
- Webster's Bible (WBS)
- And these [are] the names of the children of Israel, who came into Egypt, Jacob and his sons: Reuben, Jacob's first-born.
- Young's Literal Translation (YLT)
- And these [are] the names of the sons of Israel who are coming into Egypt: Jacob and his sons, Jacob's first-born, Reuben.
Read in context
- 6ಅವರು ತಮ್ಮ ದನಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು.
- 7ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.
- 8ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು.
- 9ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು.
- 10ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು.
Cross references
- Exodus 1:1–5 ವಿಮೋಚನಕಾಂಡ 1:1–5ಯಾಕೋಬನ ಜೊತೆಗೆ ಐಗುಪ್ತಕ್ಕೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲ್ ಮಕ್ಕಳ ಹೆಸರುಗಳು ಇವೇ: ರೂಬೇನ್ ಸಿಮೆಯೋನ್ ಲೇವಿ ಯೆಹೂದ ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್ ದಾನ್ ನಫ್ತಾಲಿ ಗಾದ್ ಆಶೇರ್. ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
- 1 Chronicles 2:1–55 1 ಪೂರ್ವಕಾಲವೃತ್ತಾಂತ 2:1–55ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು, ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು. ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು. ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ. ಪೆರೆಚನ ಮಕ್ಕಳು--ಹೆಚ್ರೋನನು, ಹಾಮುಲನು; ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ. ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು. ಏತಾನನ ಮಗನುಅಜರ್ಯನು. ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್. ರಾಮನು ಅವ್ಮೆಾನಾದಾಬನನ್ನು ಪಡೆದನು. ಅವ್ಮೆಾನಾದಾಬನು ಯೆಹೂದನ ಮಕ್ಕಳಿಗೆ ಪ್ರಭು ವಾದ ನಹಶೋನನನ್ನು ಪಡೆದನು, ನಹಶೋನನು ಸಲ್ಮನನ್ನು ಪಡೆದನು. ಸಲ್ಮನು ಬೋವಜನನ್ನು ಪಡೆದನು. ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು. ಇಷಯನು ತನ್ನ ಚೊಚ್ಚಲ ಮಗನಾದ ಎಲೀಯಾಬನನ್ನೂ ಎರಡನೆಯವನಾದ ಅಬೀನಾದಾಬನನ್ನೂ ಮೂರ ನೆಯವನಾದ ಶಿಮ್ಮನನ್ನೂ ನಾಲ್ಕನೆಯವನಾದ ನೆತ್ ನೇಲನನ್ನೂ ಐದನೆಯವನಾದ ರದ್ದೈಯನನ್ನೂ ಆರನೆಯವನಾದ ಓಚೇಮನನ್ನೂ ಏಳನೆಯವನಾದ ದಾವೀದನನ್ನೂ ಪಡೆದನು. ಅವರ ಸಹೋದರಿಗಳು ಚೆರೂಯಳು ಅಬೀಗೈಲಳು. ಚೆರೂಯಳ ಮಕ್ಕಳುಅಬ್ಷೈನು ಯೋವಾಬನು ಅಸಾಹೇಲನು ಎಂಬ ಈ ಮೂವರು. ಅಬೀಗೈಲಳು ಅಮಾಸನನ್ನು ಹೆತ್ತಳು. ಅಮಾಸನ ತಂದೆಯು ಇಷ್ಮಾಯೇಲ್ಯನಾದ ಯೇತೆರನು. ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡ ತಿಯಾದ ಅಜೂಬಳಿಂದ ಯೆರ್ಯೋತಳನ್ನು ಪಡೆದನು. ಇವಳ ಮಕ್ಕಳು -- ಯೇಷೆರನು, ಶೋಬಾಬನು, ಅರ್ದೋನನು. ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು. ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲ ನನ್ನು ಪಡೆದನು. ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು. ಸೆಗೂಬನು ಯಾಯಾರನನ್ನು ಪಡೆದನು. ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು. ಹೆಚ್ರೋನನು ಕಾಲೇಬನ ಎಫ್ರಾ ತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವಿನ ತಂದೆಯು. ಹೆಚ್ರೋನನ ಚೊಚ್ಚಲ ಮಗನಾದ ಯೆರಹ್ಮೇ ಲನ ಮಕ್ಕಳು--ಚೊಚ್ಚಲ ಮಗನಾದ ರಾಮನು, ಬೂನನು, ಓರೆನನು, ಓಚೆಮನು, ಅಹೀಯನು. ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು; ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ. ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು ಮಾಚನು, ಯಾವಿಾನನು, ಏಕೆರೆನು. ಓನಾಮನ ಮಕ್ಕಳು--ಶಮ್ಮೈಯನು, ಯಾದಾವನು. ಶಮ್ಮೈಯನ ಮಕ್ಕಳು--ನಾದಾಬನು, ಅಬೀಷೂರನು. ಅಬೀ ಷೂರನ ಹೆಂಡತಿಯ ಹೆಸರು ಅಬೀಹೈಲು; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು. ನಾದಾಬನ ಮಕ್ಕಳು--ಸೆಲೆದನು, ಅಪ್ಪಯಿಮನು. ಸೆಲೆದನು ಮಕ್ಕಳಿಲ್ಲದೆ ಸತ್ತನು. ಅಪ್ಪಯಿಮನ ಮಗನು ಇಷ್ಷೀಯು; ಇಷ್ಷೀಯ ಮಗನು ಶೇಷಾನನು; ಶೇಷಾನನ ಮಗನು ಅಹ್ಲೈಯನು. ಶಮ್ಮೈಯನ ಸಹೋದರನಾದ ಯಾದನ ಮಕ್ಕಳು--ಯೆತೆರ್, ಯೋನಾತಾನನು. ಯೆತೆರನು ಮಕ್ಕಳಿಲ್ಲದೆ ಸತ್ತನು. ಯೋನಾತಾನನ ಮಕ್ಕಳು--ಪೆಲೆತನು, ಜಾಜನು. ಇವರೇ ಯೆರಹ್ಮೇಲನ ಮಕ್ಕಳಾಗಿದ್ದರು. ಆದರೆ ಶೇಷಾನನಿಗೆ ಕುಮಾರರಿಲ್ಲದೆ ಕುಮಾರ್ತೆಗಳಿದ್ದರು. ಮತ್ತು ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಐಗುಪ್ತನಾದ ಸೇವಕನಿದ್ದನು. ಶೇಷಾನನು ತನ್ನ ಕುಮಾರ್ತೆಯನ್ನು ತನ್ನ ಸೇವಕನಾದ ಯರ್ಹನಿಗೆ ಹೆಂಡತಿಯಾಗಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು. ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು. ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು. ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು. ಅಜ ರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸ ನನ್ನು ಪಡೆದನು. ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು. ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನು ಎಲೀಷಾಮನನ್ನು ಪಡೆದನು. ಯೆರಹೇಲ್ಮನ ಸಹೋದರನಾದ ಕಾಲೇಬನ ಮಕ್ಕಳು -- ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಮತ್ತು ಹೆಬ್ರೋ ನ್ಯನ ತಂದೆಯಾದ ಮಾರೇಷನಿಗೆ ಮಕ್ಕಳು ಉಂಟಾ ಗಿದ್ದರು. ಹೆಬ್ರೋನನ ಮಕ್ಕಳು--ಕೋರಹನು, ತಪ್ಪೊಹನು, ರೆಕಮನು, ಶೆಮವನು. ಶೆಮವನು ಯೊರ್ಕೆಯಾಮ್ಯನ ತಂದೆಯಾದ ರಹಮ್ಯನನ್ನು ಪಡೆ ದನು; ರೆಕಮನು ಶಮ್ಮೈಯನನ್ನು ಪಡೆದನು. ಶಮ್ಮೈ ಯಿಯ ಮಗನು ಮಾವೋನನು; ಈ ಮಾವೋನನು ಬೆತ್ಸೂರಿಗೆ ತಂದೆಯಾಗಿದ್ದನು. ಕಾಲೇಬನ ಉಪ ಪತ್ನಿಯಾದ ಏಫಳು ಹಾರಾನನನ್ನೂ, ಮೋಚನನ್ನೂ, ಗಾಜೇಜನನ್ನೂ ಹೆತ್ತಳು. ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳ ಮಕ್ಕಳು--ರೆಗೆಮನು, ಯೋತಾಮನು, ಗೇಷಾನನು, ಪೆಲಟನು, ಏಫನು, ಶಾಫನು. ಕಾಲೇಬನ ಉಪಪತ್ನಿಯಾದ ಮಾಕಳು ಶೆಬೆರನನ್ನೂ ತಿರ್ಹನನ್ನೂ ಹೆತ್ತಳು. ಇದಲ್ಲದೆ ಅವಳು ಮದ್ಮನ್ನನ ತಂದೆಯಾದ ಶಾಫನನ್ನೂ ಮಕ್ ಬೇನನಿಗೂ ಗಿಬ್ಯನಿಗೂ ತಂದೆಯಾದ ಶೆವನನ್ನೂ ಹೆತ್ತಳು. ಕಾಲೇಬನ ಮಗಳು ಅಕ್ಸಾಹಳು. ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು. ಬೇತ್ಲೆಹೇಮ್ಯರಿಗೆ ತಂದೆಯಾದ ಸಲ್ಮನು, ಬೇತ್ಗಾ ದೇರಿಗೆ ತಂದೆಯಾದ ಹಾರೇಫನು. ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು. ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು; ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು. ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.
- Deuteronomy 33:6 ಧರ್ಮೋಪದೇಶಕಾಂಡ 33:6ರೂಬೇನನು ಸಾಯದೆ ಬದುಕಲಿ; ಅವನ ಜನ ಸ್ವಲ್ಪವಾಗದಿರಲಿ.
- Numbers 2:10–13 ಅರಣ್ಯಕಾಂಡ 2:10–13ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು. ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೊಂಭತ್ತು ಸಾವಿರದ ಮುನ್ನೂರು.
- Numbers 26:4–11 ಅರಣ್ಯಕಾಂಡ 26:4–11ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು. ಇಸ್ರಾಯೇಲ್ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ; ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ. ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ. ಪಲ್ಲೂವಿನ ಕುಮಾರರು; ಎಲೀಯಾಬ್. ಎಲೀಯಾ ಬನ ಕುಮಾರರು: ನೆಮೂವೇಲ್, ದಾತಾನ್, ಅಬೀ ರಾಮ್; ಈ ದಾತಾನನೂ ಅಬೀರಾಮನೂ ಸಭೆಯಲ್ಲಿ ಪ್ರಸಿದ್ಧರಾಗಿದ್ದು, ಕೋರಹನ ಗುಂಪಿನಲ್ಲಿದ್ದು ಕರ್ತ ನಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು. ಭೂಮಿಯು ತನ್ನ ಬಾಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು; ಹಾಗೆಯೇ ಗುಂಪಿನವರು ಸತ್ತರು; ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು; ಅವರು ದೃಷ್ಟಾಂತವಾದರು. ಆದಾಗ್ಯೂ ಕೋರಹನ ಮಕ್ಕಳು ಸಾಯಲಿಲ್ಲ.
- Numbers 1:5 ಅರಣ್ಯಕಾಂಡ 1:5ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
- Exodus 6:14–18 ವಿಮೋಚನಕಾಂಡ 6:14–18ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್ ಫಲ್ಲು ಹೆಚ್ರೋನ್ ಕರ್ವಿಾ; ಇವರೇ ರೂಬೇನನ ಗೋತ್ರಗಳು. ಸಿಮೆಯೋನನ ಕುಮಾರರು: ಯೆಮೂಯೇಲ್, ಯಾವಿಾನ್ ಓಹದ್ ಯಾಕೀನ್ ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು. ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು. ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು. ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು.
- Numbers 1:20–21 ಅರಣ್ಯಕಾಂಡ 1:20–21ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು.
- Genesis 29:32 ಆದಿಕಾಂಡ 29:32ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್ ಎಂದು ಹೆಸರಿಟ್ಟಳು.
- Genesis 29:1–30 ಆದಿಕಾಂಡ 29:1–30ತರುವಾಯ ಯಾಕೋಬನು ಪ್ರಯಾಣ ಮಾಡಿ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು. ಅವನು ಕಣ್ಣೆತ್ತಿ ನೋಡಲಾಗಿ ಹೊಲದಲ್ಲಿ ಒಂದು ಬಾವಿ ಇತ್ತು. ಇಗೋ, ಅದರ ಸವಿಾಪದಲ್ಲಿ ಮೂರು ಕುರಿಗಳ ಮಂದೆಗಳು ಮಲಗಿದ್ದವು. ಆ ಬಾವಿಯ ನೀರನ್ನು ಮಂದೆಗಳಿಗೆ ಅವರು ಕುಡಿಸು ತ್ತಿದ್ದರು. ಆ ಬಾವಿಯ ಮೇಲೆ ಒಂದುದೊಡ್ಡ ಕಲ್ಲು ಇತ್ತು. ಅಲ್ಲಿ ಮಂದೆಗಳನ್ನೆಲ್ಲಾ ಕೂಡಿಸಿದಾಗ ಬಾವಿಯ ಮೇಲಿದ್ದ ಕಲ್ಲನ್ನು ಉರುಳಿಸಿ ಕುರಿಗಳಿಗೆ ನೀರನ್ನು ಕುಡಿಸಿ ಕಲ್ಲನ್ನು ಮತ್ತೆ ಅದರ ಸ್ಥಳದಲ್ಲಿ ಇಡುತ್ತಿದ್ದರು. ಯಾಕೋಬನು ಅವರಿಗೆ--ನನ್ನ ಸಹೋದರರೇ, ನೀವು ಎಲ್ಲಿಯವರು ಅಂದಾಗ ಅವರು--ನಾವು ಖಾರಾನಿನವರು ಅಂದರು. ಅದಕ್ಕ ವನು ಅವರಿಗೆ--ನಾಹೋರನ ಮಗನಾದ ಲಾಬಾನ ನನ್ನು ನೀವು ಬಲ್ಲಿರೋ ಅಂದಾಗ ಅವರು-- ನಾವು ಅವನನ್ನು ಬಲ್ಲೆವು ಅಂದರು. ಅವನು ಅವರಿಗೆ--ಅವನು ಕ್ಷೇಮವಾಗಿದ್ದಾನೋ ಎಂದು ಕೇಳಿ ದಾಗ ಅವರು--ಕ್ಷೇಮವಾಗಿದ್ದಾನೆ. ಇಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಾಳೆ ಅಂದರು. ಅವನು ಅವರಿಗೆ--ಇಗೋ, ಇನ್ನೂ ಹೊತ್ತು ಬಹಳವಿದೆ; ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ; ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ ಅಂದನು. ಅದಕ್ಕೆ ಅವರು--ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಮುಚ್ಚುತ್ತಾರೆ; ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ ಅಂದರು. ಯಾಕೋಬನು ಇನ್ನೂ ಅವರ ಸಂಗಡ ಮಾತನಾಡು ತ್ತಿದ್ದಾಗ ಕುರಿಗಳನ್ನು ಮೇಯಿಸುವವಳಾಗಿದ್ದ ರಾಹೇ ಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು. ಯಾಕೋಬನು ತನ್ನ ತಾಯಿಯ ಸಹೋದರನಾದ ಲಾಬಾನನ ಮಗಳಾದ ರಾಹೇಲಳನ್ನೂ ಅವನ ಕುರಿಗಳನ್ನೂ ನೋಡಿದಾಗ ಯಾಕೋಬನು ಹತ್ತಿರ ಬಂದು ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು. ಆಗ ಯಾಕೋ ಬನು ರಾಹೇಲಳಿಗೆ ಮುದ್ದಿಟ್ಟು ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು. ಯಾಕೋಬನು ರಾಹೇಲಳಿಗೆ ತಾನು ಆಕೆಯ ತಂದೆಗೆ ಸೋದರಳಿಯನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ಆಕೆಯು ಓಡಿಹೋಗಿ ತನ್ನ ತಂದೆಗೆ ತಿಳಿಸಿದಳು. ಲಾಬಾನನು ತನ್ನ ಸಹೋದರಿಯ ಮಗನಾದ ಯಾಕೋಬನ ಸುದ್ದಿಯನ್ನು ಕೇಳಿದಾಗ ಅವನನ್ನು ಸಂಧಿಸುವದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು. ಆಗ ಲಾಬಾನನು ಅವನಿಗೆ--ನಿಶ್ಚಯವಾಗಿ ನೀನು ನನ್ನ ಎಲುಬೂ ಮಾಂಸವೂ ಆಗಿದ್ದೀ ಅಂದನು. ಇದಲ್ಲದೆ ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು. ತರುವಾಯ ಲಾಬಾನನು ಯಾಕೋಬನಿಗೆ--ನೀನು ನನ್ನ ಸಹೋದರ ಸಂಬಂಧಿಯಾಗಿರುವದರಿಂದ ಸುಮ್ಮನೆ ನನ್ನನ್ನು ಸೇವಿಸತಕ್ಕದ್ದೋ? ನಿನ್ನ ಸಂಬಳ ಎಷ್ಟೆಂಬದನ್ನು ನನಗೆ ಹೇಳು ಅಂದನು. ಲಾಬಾನನಿಗೆ ಇಬ್ಬರು ಕುಮಾರ್ತೆಯರಿದ್ದರು. ಹಿರಿಯಳ ಹೆಸರು ಲೇಯಳು, ಕಿರಿಯಳ ಹೆಸರು ರಾಹೇಲಳು. ಲೇಯಳ ಕಣ್ಣುಗಳು ಮೃದುವಾಗಿದ್ದವು; ಆದರೆ ರಾಹೇಲಳು ಬಹು ಸುಂದರಿಯೂ ರೂಪವತಿಯೂ ಆಗಿದ್ದಳು. ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು. ಅದಕ್ಕೆ ಲಾಬಾನನು--ಅವಳನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದು ಒಳ್ಳೆಯದು. ಆದದರಿಂದ ನನ್ನ ಸಂಗಡ ವಾಸವಾಗಿರು ಅಂದನು. ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು. ತರುವಾಯ ಯಾಕೋಬನು ಲಾಬಾನನಿಗೆ--ನನ್ನ ದಿನಗಳು ಪೂರ್ತಿಯಾದವು; ನಾನು ನನ್ನ ಹೆಂಡತಿಯ ಬಳಿಗೆ ಹೋಗುವ ಹಾಗೆ ಆಕೆಯನ್ನು ನನಗೆ ಕೊಡು ಅಂದನು. ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು. ಸಾಯಂಕಾಲದಲ್ಲಿ ಅವನು ತನ್ನ ಮಗಳಾದ ಲೇಯಳನ್ನು ಅವನ ಬಳಿಗೆ ಕರೆತಂದನು. ಆಗ ಅವನು ಆಕೆಯ ಬಳಿಗೆ ಬಂದನು. ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಾಳನ್ನು ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು. ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಅವನು ಲಾಬಾನನಿಗೆ--ಇದೇನು ನೀನು ನನಗೆ ಮಾಡಿದ್ದಿ? ರಾಹೇಲಳಿಗೋಸ್ಕರ ನಾನು ನಿನ್ನಲ್ಲಿ ಸೇವೆಮಾಡಿದೆನಲ್ಲಾ? ಯಾಕೆ ನನಗೆ ಮೋಸಮಾಡಿದಿ ಅಂದನು. ಅದಕ್ಕೆ ಲಾಬಾನನು--ಹಿರಿಯಳಿಗಿಂತ ಮುಂಚೆ ಕಿರಿಯಳನ್ನು ಕೊಡುವದು ನಮ್ಮ ದೇಶದಲ್ಲಿ ಇಲ್ಲ. ಈಕೆಯ ವಾರವನ್ನು ಪೂರೈಸು. ತರುವಾಯ ನೀನು ನನ್ನಲ್ಲಿ ಬೇರೆ ಏಳು ವರುಷಗಳ ವರೆಗೆ ಸೇವೆಮಾಡಿದರೆ ನಾವು ಆಕೆಯನ್ನೂ ನಿನಗೆ ಕೊಡು ತ್ತೇವೆ ಅಂದನು. ಯಾಕೋಬನು ಅದರಂತೆ ಮಾಡಿ ಅವಳ ವಾರವನ್ನು ಪೂರೈಸಿದನು. ಆಗ ಅವನು ತನ್ನ ಮಗಳಾದ ರಾಹೇಳಲನ್ನು ಅವನಿಗೆ ಹೆಂಡತಿ ಯಾಗಿ ಕೊಟ್ಟನು. ಲಾಬಾನನು ತನ್ನ ಮಗಳಾದ ರಾಹೇಲಳಿಗೆ ತನ್ನ ದಾಸಿಯಾದ ಬಿಲ್ಹಳನ್ನು ದಾಸಿ ಯಾಗಿ ಕೊಟ್ಟನು. ಇದಲ್ಲದೆ ಅವನು ರಾಹೇಲಳ ಬಳಿಗೂ ಬಂದು ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಮಾಡಿ ಇನ್ನೂ ಏಳು ವರುಷ ಅವನ ಬಳಿಯಲ್ಲಿ ಸೇವೆಮಾಡಿದನು.
- 1 Chronicles 8:1–40 1 ಪೂರ್ವಕಾಲವೃತ್ತಾಂತ 8:1–40ಬೆನ್ಯಾವಿಾನನು ತನ್ನ ಚೊಚ್ಚಲ ಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲ ನನ್ನೂ, ಮೂರನೆಯವನಾದ ಅಹ್ರಹನನ್ನೂ ನಾಲ್ಕನೆ ಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು. ಬೆಳನ ಕುಮಾರರು--ಅದ್ವಾರನು ಗೇರನು ಅಬೀಹೂದನು ಅಬೀಷೂವನು ನಾಮಾ ನನು ಅಹೋಹನು ಗೇರನು ಶೆಪೂಫಾನನು ಹೂರಾ ಮನು. ಏಹೂದನ ಕುಮಾರರು--ನಾಮಾನನು, ಅಹೀಯನು, ಗೇರನು. ಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು. ಅವರನ್ನು ತಕ್ಕೊಂಡು ಹೋದ ತರುವಾಯ ಉಚ್ಚನನ್ನೂ ಅಹೀಹುದನನ್ನೂ ಪಡೆದನು. ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹೂಷೀಮಳೂ ಬಾರಳೂ ಅವನಿಗೆ ಪತ್ನಿಯರಾಗಿದ್ದರು. ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಕುಮಾರರಾದ ಇವರು ಪಿತೃಗಳಲ್ಲಿ ಯಜಮಾನರಾಗಿದ್ದರು. ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು. ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು. ಇದಲ್ಲದೆ ಅವನು ಗತ್ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು. ಬೆರೀಯನ ಕುಮಾರರು -- ಅಹ್ಯೋನು, ಶಾಷಕನು, ಯೆರೇಮೋತನು, ಜೆಬದ್ಯನು, ಅರಾ ದನು, ಎದೆರನು, ವಿಾಕಾಯೇಲನು, ಇಷ್ಪನು, ಯೋಹನು, ಜೆಬದ್ಯನು, ಮೆಷುಲ್ಲಾಮ್, ಹಿಜ್ಕೀ, ಹೆಬೆರ್, ಇಷ್ಮೆರೈ, ಇಜ್ಲೀಯ, ಯೋಬಾಬ್ಇವರು ಎಲ್ಪಾಲನ ಕುಮಾರರು-- ಯಾಕೀಮನು, ಜಿಕ್ರೀಯು, ಜಬ್ದಿಯು, ಎಲೀಗೇನೈ, ಚಿಲ್ಲೆತೈ, ಎಲೀಯೇಲ್, ಅದಾಯ, ಬೆರಾಯ, ಶಿಮ್ರಾತ್ ಇವರು ಶಿವ್ಮೆಾಯ ಕುಮಾರರು. ಇಷ್ಪಾನ್, ಏಬೆರ್, ಎಲೀಯೇಲ್, ಅಬ್ದೋನನು, ಜಿಕ್ರೀಯು, ಹಾನಾ ನನು, ಹನನ್ಯನು, ಏಲಾಮನು, ಅನೆತೋತಿಯನು, ಇಫ್ದೆಯನು, ಪೆನೂವೇಲನು ಇವರು ಶಾಷಕನ ಕುಮಾರರು. ಶಂಷೆರೈ, ಶೆಹರ್ಯ, ಅತಲ್ಯ, ಯಾರೆಷ್ಯನು, ಏಲೀಯನು, ಜಿಕ್ರಿಯು--ಇವರು ಯೆರೋಹಾಮನ ಕುಮಾರರು. ಇವರೇ ಪಿತೃಗಳಲ್ಲಿ ಯಜಮಾನರಾಗಿದ್ದು ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಗಿಬ್ಯೋನಿಯ ತಂದೆ ಗಿಬ್ಯೋನಿನಲ್ಲಿ ವಾಸವಾಗಿ ದ್ದನು; ಅವನ ಹೆಂಡತಿಯ ಹೆಸರು ಮಾಕಳು. ಅವನ ಚೊಚ್ಚಲ ಮಗನು ಅಬ್ದೋನನು; ಚೂರನು, ಕೀಷನು, ಬಾಳನು, ನಾದಾಬನು, ಗೆದೋರನು, ಅಹ್ಯೋನು, ಜೆಕೆರನು. ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ಸಹೋದರರಿಗೆದುರಾಗಿ ಅವರ ಸಂಗಡ ವಾಸ ವಾಗಿದ್ದರು. ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾ ತಾನನನ್ನೂ, ಮಲ್ಕೀಷೂವನನ್ನೂ ಅಬೀನಾದಾಬ ನನ್ನೂ, ಎಷ್ಬಾಳನನ್ನೂ ಪಡೆದನು. ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ವಿಾಕನನ್ನು ಪಡೆದನು. ವಿಾಕನ ಕುಮಾರರು--ಪಿತೋನನು, ಮೆಲೆಕನು, ತರೇಯನು, ಆಹಾಜನು. ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾ ಹನು ಆಲೆಮೆತೆನನ್ನೂ, ಅಜ್ಮಾವೆತನನ್ನೂ, ಜಿವ್ರೆಾ ಯನ್ನೂ ಪಡೆದನು. ಜಿವ್ರೆಾಯು ಮೋಚನನ್ನು ಪಡೆದನು. ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು. ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು. ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು. ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
- Genesis 49:1–33 ಆದಿಕಾಂಡ 49:1–33ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ. ಯಾಕೋಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾ ಯೇಲನಿಗೆ ಕಿವಿಗೊಡಿರಿ. ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ. ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ; ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ. ನನ್ನ ಪ್ರಾಣವೇ, ಅವರ ರಹಸ್ಯವಾದ ಸಭೆಯಲ್ಲಿ ಸೇರಬೇಡ.ನನ್ನ ಘನವೇ, ಅವರೊಂದಿಗೆ ಬೆರಿಕೆಯಾಗಬೇಡ; ಅವರು ತಮ್ಮ ಕೋಪದಲ್ಲಿ ಮನುಷ್ಯನನ್ನು ಕೊಂದರು. ಅವರು ಸ್ವಇಚ್ಛೆಯಿಂದ ಗೋಡೆಯನ್ನು ಕೆಡವಿಹಾಕಿ ದರು. ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು. ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು? ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು. ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಯನ್ನೂ ಶ್ರೇಷ್ಠ ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಮರಿಯನ್ನೂ ಕಟ್ಟುತ್ತಾನೆ. ದ್ರಾಕ್ಷಾರಸದಲ್ಲಿ ತನ್ನ ವಸ್ತ್ರಗಳನ್ನೂ ದ್ರಾಕ್ಷೇ ಹಣ್ಣುಗಳ ರಕ್ತದಲ್ಲಿ ತನ್ನ ಬಟ್ಟೆಗಳನ್ನೂ ತೊಳೆಯುತ್ತಾನೆ. ದ್ರಾಕ್ಷಾರಸ ದಿಂದ ಅವನ ಕಣ್ಣುಗಳು ಕೆಂಪಾಗಿರುವವವು; ಹಾಲಿ ನಿಂದ ಅವನ ಹಲ್ಲುಗಳು ಬಿಳುಪಾಗಿರುವವು. ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು. ಇಸ್ಸಾಕಾರನು ಎರಡು ಭಾರಗಳ ನಡುವೆ ಮಲಗಿ ಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು. ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು. ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು. ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ. ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು. ಆಶೇರನಿಂದ ಕೊಬ್ಬಿದ ಆಹಾರವು ಬರುವದು. ಅವನು ಅರಸರ ಸವಿಯೂಟ ವನ್ನು ಕೊಡುವನು. ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ. ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ. ಬಿಲ್ಲುಗಾರರು ಅವನನ್ನು ಬಹಳವಾಗಿ ದುಃಖ ಪಡಿಸಿ ಬಾಣಗಳನ್ನು ಎಸೆದು ಅವನನ್ನು ಹಗೆ ಮಾಡುವರು. ಆದರೆ ಅವನ ಬಿಲ್ಲು ಬಲವಾಗಿ ನೆಲೆಸಿತ್ತು. ಅವನ ಕೈತೋಳುಗಳು ಯಾಕೋಬನ ಪರಾಕ್ರಮಿಯಾದ ದೇವರ ಕೈಗಳಿಂದ, ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.) ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ. ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು. ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು. ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ. ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.