Numbers · chapter 1 · verse 5
Numbers 1:5 in Kannada
ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
Nimma sangada nillabekaada manushyara hesarugalu ive: rooben gotra dinda shedeyoorana maganaada eleechoor,
Numbers 1:5 in English
- King James Version (KJV)
- And these [are] the names of the men that shall stand with you: of [the tribe of] Reuben; Elizur the son of Shedeur.
- World English Bible (WEB)
- These are the names of the men who shall stand with you: Of Reuben: Elizur the son of Shedeur.
- American Standard Version (ASV)
- And these are the names of the men that shall stand with you. Of Reuben: Elizur the son of Shedeur.
- Bible in Basic English (BBE)
- These are the names of those who are to be your helpers: from Reuben, Elizur, the son of Shedeur;
- Darby Translation (DBY)
- And these are the names of the men that shall stand with you: for Reuben, Elizur the son of Shedeur;
- Webster's Bible (WBS)
- And these [are] the names of the men that shall stand with you: Of [the tribe of] Reuben; Elizur the son of Shedeur.
- Young's Literal Translation (YLT)
- 'And these [are] the names of the men who stand with you: 'For Reuben — Elizur son of Shedeur.
Read in context
- 3ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ.
- 4ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
- 5ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
- 6ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್,
- 7ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್,
Cross references
- Numbers 7:30 ಅರಣ್ಯಕಾಂಡ 7:30ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು.
- Numbers 2:10 ಅರಣ್ಯಕಾಂಡ 2:10ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ;
- Revelation 7:4–8 ಪ್ರಕಟನೆ 7:4–8ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ. ಯೂದನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ರೂಬೇನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಗಾದನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಅಷೇರನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ನೆಫ್ತಲೀಮನ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಮನಸ್ಸೆಯ ಗೋತ್ರದವ ರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಸಿಮೆ ಯೋನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ಲೇವಿಯ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಇಸ್ಸಾಕಾರನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ.
- Genesis 29:32–35 ಆದಿಕಾಂಡ 29:32–35ಲೇಯಳು ಗರ್ಭಿಣಿ ಯಾಗಿ ಮಗನನ್ನು ಹೆತ್ತು--ನಿಜವಾಗಿಯೂ ಕರ್ತನು ನನ್ನ ಬಾಧೆಯನ್ನು ನೋಡಿದ್ದಾನೆ; ಆದದರಿಂದ ನನ್ನ ಗಂಡನು ನನ್ನನ್ನು ಪ್ರೀತಿಮಾಡುವನೆಂದು ಹೇಳಿ (ಮಗುವಿಗೆ) ರೂಬೇನ್ ಎಂದು ಹೆಸರಿಟ್ಟಳು. ಮತ್ತೆ ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ನಾನು ತಾತ್ಸಾರ ಮಾಡಲ್ಪಟ್ಟೆನೆಂದು ಕರ್ತನು ಕೇಳಿ ಇವನನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು. ತಿರಿಗಿ ಆಕೆಯು ಮಗನನ್ನು ಹೆತ್ತು ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಯಾಕಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ; ಆದದರಿಂದ ಅವನಿಗೆ ಲೇವಿ ಎಂದು ಕರೆದಳು.ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು. ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು--ಈಗ ನಾನು ಕರ್ತನನ್ನು ಸ್ತುತಿಸುವೆನು ಎಂದು ಹೇಳಿ ಅವನಿಗೆ ಯೆಹೂದನೆಂದು ಹೆಸರಿಟ್ಟಳು. ಆಕೆಯು ಹೆರುವದು ನಿಂತುಹೋಯಿತು.
- Deuteronomy 33:1–29 ಧರ್ಮೋಪದೇಶಕಾಂಡ 33:1–29ದೇವರ ಮನುಷ್ಯನಾದ ಮೋಶೆ ಸಾಯುವದಕ್ಕಿಂತ ಮುಂಚೆ ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ಆಶೀರ್ವಾದವು ಯಾವದಂದರೆ-- ಕರ್ತನು ಸೀನಾಯಿ ಬೆಟ್ಟದಿಂದ ಬಂದನು, ಸೇಯಾರಿನಿಂದ ಅವರಿಗೆ ಉದಯಿಸಿದನು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದನು, ಹತ್ತು ಸಾವಿರ ಪರಿಶುದ್ಧರ ಸಂಗಡ ಬಂದನು. ಆತನ ಬಲಪಾರ್ಶ್ವದಿಂದ ಅವರಿಗೆ ಬೆಂಕಿಯ ನ್ಯಾಯಪ್ರಮಾಣವು ಹೊರಟಿತು. ಹೌದು, ಆತನು ಜನಗಳನ್ನು ಪ್ರೀತಿಮಾಡಿದನು. ಆತನ ಪರಿಶುದ್ಧರೆಲ್ಲರು ನಿನ್ನ ಕೈಯಲ್ಲಿ ಇದ್ದಾರೆ. ಅವರು ನಿನ್ನ ಪಾದದ ಬಳಿಯಲ್ಲಿ ಕೂತುಕೊಂಡು ನಿನ್ನ ವಾಕ್ಯಗಳನ್ನು ಹೊಂದುತ್ತಾರೆ. ಮೋಶೆ ನಮಗೆ ನ್ಯಾಯಪ್ರಮಾಣವನ್ನು ಆಜ್ಞಾಪಿ ಸಿದ್ದಾನೆ. ಅದೇ ಯಾಕೋಬನ ಸಭೆಯ ಬಾಧ್ಯತೆಯು. ಜನರ ಮುಖ್ಯಸ್ಥರೂ ಇಸ್ರಾಯೇಲಿನ ಗೋತ್ರ ಗಳೂ ಕೂಡಿಕೊಂಡಿದ್ದಾಗ ಆತನು ಯೆಶುರೂನಿನಲ್ಲಿ ಅರಸನಾಗಿದ್ದನು. ರೂಬೇನನು ಸಾಯದೆ ಬದುಕಲಿ; ಅವನ ಜನ ಸ್ವಲ್ಪವಾಗದಿರಲಿ. ಯೂದನ ಆಶೀರ್ವಾದವು ಇದೇ; ಕರ್ತನೇ, ಯೂದನ ಶಬ್ದವನ್ನು ಕೇಳು; ಅವನನ್ನು ತನ್ನ ಜನರ ಬಳಿಗೆ ಸೇರಿಸು; ತನ್ನ ಕೈಗಳು ಅವನಿಗೆ ಸಾಕಾಗಿವೆ. ಅವನ ವೈರಿಗಳ ವಿಷಯದಲ್ಲಿ ಅವನಿಗೆ ಸಹಾಯ ವಾಗಿರು ಎಂದು ಹೇಳಿದನು. ಲೇವಿಯ ವಿಷಯವಾಗಿ--ನಿನ್ನ ತುವಿಾ್ಮೇಮ್ ನಿನ್ನ ಊರೀಮ್ ಮಸ್ಸದಲ್ಲಿ ನೀನು ಶೋಧಿಸಿದಂಥ ಮೆರೀ ಬಾದ ನೀರಿನ ಬಳಿಯಲ್ಲಿ ನೀನು ವಿವಾದ ಮಾಡಿದಂಥ ನಿನ್ನ ಪರಿಶುದ್ಧನ ಬಳಿಯಲ್ಲಿ ಇರುವವು; ಅವನು ತನ್ನ ತಂದೆ ತಾಯಿಗಳಿಗೆ--ನಾನು ಅವ ನನ್ನು ನೋಡಲಿಲ್ಲ ಅಂದನು. ತನ್ನ ಸಹೋದರರ ಗುರುತನ್ನು ತಿಳುಕೊಳ್ಳಲಿಲ್ಲ. ತನ್ನ ಸ್ವಂತ ಮಕ್ಕಳನ್ನು ಅರಿಯಲಿಲ್ಲ. ಯಾಕಂದರೆ ಅವರು (ಲೇವಿಯರು) ನಿನ್ನ ವಾಕ್ಯವನ್ನು ಕೈಕೊಂಡು ನಿನ್ನ ಒಡಂಬಡಿಕೆಯನ್ನು ಕಾಪಾಡಿದ್ದಾರೆ. ಅವರು ಯಾಕೋಬನಿಗೆ ನಿನ್ನ ನ್ಯಾಯಗಳನ್ನೂ ಇಸ್ರಾಯೇಲಿಗೆ ನಿನ್ನ ನ್ಯಾಯಪ್ರಮಾಣವನ್ನೂ ಬೋಧಿಸುವರು; ನಿನ್ನ ಮುಂದೆ ಧೂಪವನ್ನೂ ನಿನ್ನ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಇಡುವರು. ಕರ್ತನೇ, ಅವನ ಆಸ್ತಿಯನ್ನು ಆಶೀರ್ವದಿಸು; ಅವನ ಕೈಕೆಲಸವನ್ನು ಅಂಗೀಕರಿಸು. ಅವನಿಗೆ ವಿರೋಧ ವಾಗಿ ಏಳುವವರ ಮತ್ತು ಅವನನ್ನು ಹಗೆಮಾಡುವವರ ಸೊಂಟಗಳನ್ನು ಅವರು ತಿರಿಗಿ ಏಳದ ಹಾಗೆ ಹೊಡೆ ಅಂದನು. ಅವನು ಬೆನ್ಯಾವಿಾನನ ವಿಷಯವಾಗಿ--ಕರ್ತ ನಿಗೆ ಪ್ರಿಯನು ಸುರಕ್ಷಿತವಾಗಿ ಆತನ ಬಳಿಯಲ್ಲಿ ವಾಸ ಮಾಡುವನು; ಆತನು ಅವನಿಗೆ ದಿನವೆಲ್ಲಾ ಮರೆಯಾಗಿ ರುವನು; ಅವನು ಆತನ ಹೆಗಲುಗಳ ನಡುವೆ ವಾಸ ಮಾಡುವನು ಅಂದನು. ಯೋಸೇಫನ ವಿಷಯವಾಗಿ--ಅವನ ದೇಶವು ಆಕಾಶದ ಅಮೂಲ್ಯವಾದವುಗಳಿಂದಲೂ ಮಂಜಿ ನಿಂದಲೂ ಕೆಳಗೆ ಮಲಗಿರುವ ಅಗಾಧದಿಂದಲೂ ಸೂರ್ಯನ ಆದಾಯದ ಅಮೂಲ್ಯವಾದ ಫಲಗಳಿಂದಲೂ ಚಂದ್ರನ ಆದಾಯದ ಅಮೂಲ್ಯವಾದ ವುಗಳಿಂದಲೂ ಪೂರ್ವಕಾಲದ ಪರ್ವತಗಳ ಮುಖ್ಯವಾದವುಗ ಳಿಂದಲೂ ನಿತ್ಯವಾದ ಬೆಟ್ಟಗಳ ಅಮೂಲ್ಯವಾದ ವುಗಳಿಂದಲೂ ಭೂಮಿಯ ಅಮೂಲ್ಯವಾದವುಗಳಿಂದಲೂ ಅದರ ಸಂಪೂರ್ಣತೆಯಿಂದಲೂ ಕರ್ತನ ಕಡೆಯಿಂದ ಆಶೀರ್ವಾದ ಹೊಂದಲಿ; ಪೊದೆಯಲ್ಲಿ ವಾಸವಾಗಿ ದ್ದಾತನ ದಯೆಯು ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕವಾದವನ ತಲೆಯ ಮೇಲೆಯೂ ಬರಲಿ. ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು. ಅವನು ಜೆಬುಲೂನನ ವಿಷಯವಾಗಿ--ಜೆಬು ಲೂನನೇ, ನೀನು ಹೊರಡುವದರಲ್ಲಿ ಸಂತೋಷ ಪಡು. ಇಸ್ಸಾಕಾರನೇ ನಿನ್ನ ಗುಡಾರಗಳಲ್ಲಿ ಸಂತೋಷ ಪಡು. ಅವರು ಜನಗಳನ್ನು ಬೆಟ್ಟಕ್ಕೆ ಕರೆಯುವರು. ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಯಾಕಂದರೆ ಸಮುದ್ರಗಳ ಉಗ್ರಾಣವನ್ನೂ ಮರಳಿನ ಗುಪ್ತವಾದ ದ್ರವ್ಯವನ್ನೂ ಹೀರಿಕೊಳ್ಳುವರು ಎಂದು ಹೇಳಿದನು. ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ. ಅವನು ಮೊದಲನೇ ಪಾಲನ್ನು ತನಗೆ ಒದಗಿಸಿ ಕೊಂಡನು; ಯಾಕಂದರೆ ಅಲ್ಲಿ ನ್ಯಾಯಾಧಿಪತಿಯ ಭಾಗ ನೇಮಿಸಲ್ಪಟ್ಟದೆ; ಜನರ ಮುಖ್ಯಸ್ಥರ ಸಂಗಡ ಬಂದು ಕರ್ತನ ನೀತಿಯನ್ನೂ ಇಸ್ರಾಯೇಲಿನ ಸಂಗಡ ಆತನ ನ್ಯಾಯಗಳನ್ನೂ ತೀರಿಸಿದನು ಎಂದು ಹೇಳಿದನು. ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು. ಅವನು ನಫ್ತಾಲಿಯ ವಿಷಯವಾಗಿ--ಓ ನಫ್ತಾಲಿಯೇ, ಅನುಗ್ರಹದಿಂದ ತೃಪ್ತನೇ, ಕರ್ತನ ಆಶೀರ್ವಾದದಿಂದ ತುಂಬಿದವನೇ, ಪಶ್ಚಿಮವನ್ನೂ ದಕ್ಷಿಣವನ್ನೂ ಸ್ವಾಧೀನಮಾಡಿಕೋ ಎಂದು ಹೇಳಿದನು. ಅವನು ಆಶೇರನ ವಿಷಯವಾಗಿ--ಆಶೇರನು ಮಕ್ಕಳ ಆಶೀರ್ವಾದವನ್ನು ಹೊಂದಲಿ. ತನ್ನ ಸಹೋದ ರರ ಅಂಗೀಕಾರವನ್ನು ಹೊಂದಲಿ. ಅವನ ಕಾಲು ಎಣ್ಣೆಯಲ್ಲಿ ಅದ್ದಿರಲಿ. ಕಬ್ಬಿಣವೂ ತಾಮ್ರವೂ ನಿನ್ನ ಪಾದರಕ್ಷೆಯಾಗಿರಲಿ. ನಿನ್ನ ದಿವಸಗಳ ಪ್ರಕಾರ ನಿನ್ನ ಬಲವು ಇರಲಿ ಎಂದು ಹೇಳಿದನು. ಯೆಶುರೂನನ ದೇವರ ಹಾಗೆ ಯಾರೂ ಇಲ್ಲ. ಆತನು ನಿನ್ನ ಸಹಾಯಕ್ಕೆ ಪರಲೋಕದಲ್ಲಿಯೂ ತನ್ನ ಘನತೆಯಲ್ಲಿಯೂ ಆಕಾಶದ ಮೇಲೆಯೂ ಬರುತ್ತಾನೆ. ನಿತ್ಯನಾದ ದೇವರು ನಿನ್ನ ಆಶ್ರಯವು; ಆತನ ನಿತ್ಯವಾದ ತೋಳುಗಳು ಕೆಳಗಿವೆ, ಶತ್ರುವನ್ನು ನಿನ್ನ ಮುಂದೆ ಹೊರಡಿಸಿ--ಅವರನ್ನು ನಾಶಮಾಡು ಎಂದು ಹೇಳುವನು. ಇಸ್ರಾಯೇಲು ಒಂಟಿಯಾಗಿ ಭರವಸದಿಂದ ಸುರಕ್ಷಿತವಾಗಿ ವಾಸಿಸುವದು. ಧಾನ್ಯ ದ್ರಾಕ್ಷಾರಸಗಳ ದೇಶದಲ್ಲಿ ಯಾಕೋಬನ ಬುಗ್ಗೆ ಇರುವದು. ಅವನ ಆಕಾಶಗಳು ಸಹ ಮಂಜನ್ನು ಸುರಿಸುವವು.ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ. ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.
- Genesis 46:8–24 ಆದಿಕಾಂಡ 46:8–24ಐಗುಪ್ತಕ್ಕೆ ಬಂದ ಇಸ್ರಾಯೇಲನ ಮಕ್ಕಳ ಹೆಸರು ಗಳು ಯಾವವಂದರೆ, ಯಾಕೋಬನು ಮತ್ತು ಅವನ ಮಕ್ಕಳು: ಯಾಕೋಬನ ಚೊಚ್ಚಲ ಮಗನಾದ ರೂಬೇ ನನು. ರೂಬೇನನ ಕುಮಾರರು: ಹನೋಕ್ ಫಲ್ಲೂ ಹೆಚ್ರೋನ್ ಕರ್ಮಿ ಎಂಬವರು. ಸಿಮೆಯೋನನ ಮಕ್ಕಳು: ಯೆಮೂವೇಲ್ ಯಾವಿಾನ್ ಓಹದ್ ಯಾಕೀನ್ ಚೋಹರ್ ಕಾನಾನ್ಯಳ ಮಗನಾದ ಸೌಲ ಎಂಬವರು. ಲೇವಿಯ ಮಕ್ಕಳು: ಗೆರ್ಷೋನ್ ಕೆಹಾತ್ ಮೆರಾರೀ ಎಂಬವರು. ಯೆಹೂದನ ಮಕ್ಕಳು: ಏರ್ ಓನಾನ್ ಶೇಲಾಹ ಪೆರೆಚ್ ಜೆರಹ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಹಾಮೂಲ್ ಎಂಬವರು. ಇಸ್ಸಾಕಾರನ ಮಕ್ಕಳು: ತೋಲಾ ಪುವ್ವಾ ಯೋಬ್ ಶಿಮ್ರೋನ್ ಎಂಬವರು. ಜೆಬು ಲೂನನ ಮಕ್ಕಳು: ಸೆರೆದ್ ಏಲೋನ್ ಯಹ್ಲೇಲ್ ಎಂಬವರು. ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಕುಮಾರರೂ ಕುಮಾರ್ತೆಯರೂ ಎಲ್ಲಾ ಮೂವತ್ತು ಮೂರು ಮಂದಿ. ಗಾದನ ಮಕ್ಕಳು: ಚಿಪ್ಯೋನ್ ಹಗ್ಗೀ ಶೂನೀ ಎಚ್ಬೋನ್ ಏರೀ ಅರೋದೀ ಅರೇಲೀ ಎಂಬವರು. ಆಶೇರನ ಮಕ್ಕಳು: ಇಮ್ನಾ ಇಷ್ವಾ ಇಷ್ವೀ ಬೆರೀಗಾ ಅವರ ಸಹೋದರಿಯಾದ ಸೆರಹ; ಬೆರೀಗಾ ಕುಮಾರರು: ಹೆಬೆರ್ ಮಲ್ಕಿಯೇಲ್ ಎಂಬ ವರು. ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಹದಿನಾರು ಮಂದಿಯಾಗಿದ್ದ ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಯಾಕೋಬನ ಹೆಂಡತಿಯಾದ ರಾಹೇಲಳ ಕುಮಾರರು: ಯೋಸೇಫ್ ಬೆನ್ಯಾವಿಾನ್ ಎಂಬವರು. ಯೋಸೇಫನಿಗೆ ಐಗುಪ್ತ ದೇಶದಲ್ಲಿ ಮಕ್ಕಳು ಹುಟ್ಟಿದರು: ಓನಿನ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತಳು ಮನಸ್ಸೆಯನ್ನೂ ಎಫ್ರಾಯಾಮ ನನ್ನೂ ಅವನಿಗೆ ಹೆತ್ತಳು. ಬೆನ್ಯಾವಿಾನನ ಕುಮಾ ರರು: ಬಿಳಾ ಬೆಕೆರ್ ಅಶ್ಬೇಲ್ ಗೇರಾ ನಾಮಾನ್ ಏಹೀರೋಷ್ ಮುಪ್ಪೀಮ್ ಹುಪ್ಪೀಮ್ ಆರ್ದ ಎಂಬವರು. ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಕುಮಾರರು. ಎಲ್ಲಾ ಕೂಡಿ ಹದಿನಾಲ್ಕು ಮಂದಿ. ದಾನನ ಮಗನು ಹುಶೀಮನು. ನಫ್ತಾ ಲಿಯ ಕುಮಾರರು: ಯಹೇಲ್ ಗೂನೀ ಯೇಚೆರ್ ಶಿಲ್ಲೇಮ್ ಎಂಬವರು.
- Numbers 10:18 ಅರಣ್ಯಕಾಂಡ 10:18ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು.
- Genesis 49:1–33 ಆದಿಕಾಂಡ 49:1–33ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ. ಯಾಕೋಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾ ಯೇಲನಿಗೆ ಕಿವಿಗೊಡಿರಿ. ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ. ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ; ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ. ನನ್ನ ಪ್ರಾಣವೇ, ಅವರ ರಹಸ್ಯವಾದ ಸಭೆಯಲ್ಲಿ ಸೇರಬೇಡ.ನನ್ನ ಘನವೇ, ಅವರೊಂದಿಗೆ ಬೆರಿಕೆಯಾಗಬೇಡ; ಅವರು ತಮ್ಮ ಕೋಪದಲ್ಲಿ ಮನುಷ್ಯನನ್ನು ಕೊಂದರು. ಅವರು ಸ್ವಇಚ್ಛೆಯಿಂದ ಗೋಡೆಯನ್ನು ಕೆಡವಿಹಾಕಿ ದರು. ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು. ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು. ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು? ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು. ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಯನ್ನೂ ಶ್ರೇಷ್ಠ ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಮರಿಯನ್ನೂ ಕಟ್ಟುತ್ತಾನೆ. ದ್ರಾಕ್ಷಾರಸದಲ್ಲಿ ತನ್ನ ವಸ್ತ್ರಗಳನ್ನೂ ದ್ರಾಕ್ಷೇ ಹಣ್ಣುಗಳ ರಕ್ತದಲ್ಲಿ ತನ್ನ ಬಟ್ಟೆಗಳನ್ನೂ ತೊಳೆಯುತ್ತಾನೆ. ದ್ರಾಕ್ಷಾರಸ ದಿಂದ ಅವನ ಕಣ್ಣುಗಳು ಕೆಂಪಾಗಿರುವವವು; ಹಾಲಿ ನಿಂದ ಅವನ ಹಲ್ಲುಗಳು ಬಿಳುಪಾಗಿರುವವು. ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು. ಇಸ್ಸಾಕಾರನು ಎರಡು ಭಾರಗಳ ನಡುವೆ ಮಲಗಿ ಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ. ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು. ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು. ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು. ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ. ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು. ಆಶೇರನಿಂದ ಕೊಬ್ಬಿದ ಆಹಾರವು ಬರುವದು. ಅವನು ಅರಸರ ಸವಿಯೂಟ ವನ್ನು ಕೊಡುವನು. ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ. ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ. ಬಿಲ್ಲುಗಾರರು ಅವನನ್ನು ಬಹಳವಾಗಿ ದುಃಖ ಪಡಿಸಿ ಬಾಣಗಳನ್ನು ಎಸೆದು ಅವನನ್ನು ಹಗೆ ಮಾಡುವರು. ಆದರೆ ಅವನ ಬಿಲ್ಲು ಬಲವಾಗಿ ನೆಲೆಸಿತ್ತು. ಅವನ ಕೈತೋಳುಗಳು ಯಾಕೋಬನ ಪರಾಕ್ರಮಿಯಾದ ದೇವರ ಕೈಗಳಿಂದ, ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.) ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ. ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು. ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು. ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ. ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
- Exodus 1:2–5 ವಿಮೋಚನಕಾಂಡ 1:2–5ರೂಬೇನ್ ಸಿಮೆಯೋನ್ ಲೇವಿ ಯೆಹೂದ ಇಸ್ಸಾಕಾರ್ ಜೆಬುಲೂನ್ ಬೆನ್ಯಾವಿಾನ್ ದಾನ್ ನಫ್ತಾಲಿ ಗಾದ್ ಆಶೇರ್. ಯಾಕೋಬನಿಂದ ಹುಟ್ಟಿದವರೆಲ್ಲಾ ಒಟ್ಟು ಎಪ್ಪತ್ತು ಮಂದಿ. ಯೋಸೇಫನು ಮೊದಲೇ ಐಗುಪ್ತ ದಲ್ಲಿ ಇದ್ದನು.
- Genesis 30:5–20 ಆದಿಕಾಂಡ 30:5–20ಆಗ ಬಿಲ್ಹಳು ಗರ್ಭಿಣಿಯಾಗಿ ಯಾಕೋಬನಿಗೆ ಮಗನನ್ನು ಹೆತ್ತಳು. ರಾಹೇಲಳು--ದೇವರು ನನಗೆ ನ್ಯಾಯತೀರಿಸಿ ನನ್ನ ಮೊರೆ ಕೇಳಿ ನನಗೆ ಮಗನನ್ನು ಕೊಟ್ಟಿದ್ದಾನೆ ಎಂದು ಹೇಳಿದಳು. ಆದದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು. ರಾಹೇಲಳ ದಾಸಿಯಾದ ಬಿಲ್ಹಳು ತಿರಿಗಿ ಗರ್ಭಿಣಿ ಯಾಗಿ ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. ಆಗ ರಾಹೇಲಳು--ಅಧಿಕವಾದ ಹೋರಾಟ ಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು. ಲೇಯಳು ತಾನು ಹೆರುವದು ನಿಂತಿತೆಂದು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ತಕ್ಕೊಂಡು ಯಾಕೋಬ ನಿಗೆ ಹೆಂಡತಿಯಾಗಿ ಕೊಟ್ಟಳು. ಲೇಯಳ ದಾಸಿ ಯಾದ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು. ಆಗ ಲೇಯಳು--ಒಂದು ಸೈನ್ಯ ಬರುತ್ತದೆ ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು. ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು. ಆಗ ಲೇಯಳು--ನಾನು ಧನ್ಯಳಾದೆನು. ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯು ವರು ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು. ರೂಬೇನನು ಗೋದಿ ಕೊಯ್ಯುವ ಕಾಲದಲ್ಲಿ ಹೋಗಿ ಹೊಲದಲ್ಲಿ ದುದಾಯಗಳನ್ನು ಕಂಡು ತಾಯಿಯಾದ ಲೇಯಳ ಬಳಿಗೆ ತಂದಾಗ ರಾಹೇಲಳು ಲೇಯಳಿಗೆ--ನಿನ್ನ ಮಗನ ದುದಾಯಗಳಲ್ಲಿ ಕೆಲವನ್ನು ನನಗೆ ಕೊಡು ಅಂದಳು. ಅದಕ್ಕೆ ಆಕೆಯು--ನೀನು ನನ್ನ ಗಂಡನನ್ನು ತಕ್ಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯಗಳನ್ನು ಸಹ ತಕ್ಕೊಳ್ಳುವಿಯೋ ಅಂದಾಗ ರಾಹೇಲಳು--ಆದದರಿಂದ ನಿನ್ನ ಮಗನು ತಂದ ದುದಾಯಗಳಿ ಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ ಅಂದಳು. ಯಾಕೋಬನು ಸಾಯಂಕಾಲ ದಲ್ಲಿ ಹೊಲದಿಂದ ಬಂದಾಗ ಲೇಯಳು ಅವನೆದುರಿಗೆ ಹೊರಟುಹೋಗಿ--ನೀನು ನನ್ನ ಬಳಿಗೆ ಬರಬೇಕು; ನನ್ನ ಮಗನ ದುದಾಯಗಳ ಬಾಡಿಗೆಯಿಂದ ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ ಅಂದಳು. ಆದದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು. ಆಗ ದೇವರು ಲೇಯಳನ್ನು ಆಲೈಸಿದ್ದರಿಂದ ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು. ಆಗ ಲೇಯಳು--ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟದ್ದರಿಂದ ದೇವರು ನನಗೆ ಕೂಲಿಯನ್ನು ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಇಸ್ಸಾಕಾರ ಎಂದು ಹೆಸರಿಟ್ಟಳು. ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು; ಲೇಯಳು--ದೇವರು ನನಗೆ ಒಳ್ಳೇ ಬಳುವಳಿಯನ್ನು ಕೊಟ್ಟಿದ್ದಾನೆ; ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ ನನ್ನ ಗಂಡನು ನನ್ನ ಸಂಗಡ ವಾಸಿಸುವನು ಎಂದು ಹೇಳಿ ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು.
- Genesis 35:17–26 ಆದಿಕಾಂಡ 35:17–26ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು. (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು. ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್. ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ. ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರೆಂಬ ಗೋಪುರದ ಹಿಂದುಗಡೆಯಲ್ಲಿ ತನ್ನ ಗುಡಾರವನ್ನು ಹಾಕಿದನು. ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು. ಅವರಲ್ಲಿ ಲೇಯಳ ಕುಮಾರರು: ಯಾಕೋಬನ ಚೊಚ್ಚಲ ಮಗನಾದ ರೂಬೇನನು ಸಿಮೆಯೋನನು ಲೇವಿಯು ಯೆಹೂದನು ಇಸ್ಸಾಕಾರನು ಮತ್ತು ಜೆಬೂಲೂನನು. ರಾಹೇಲಳ ಕುಮಾರರು: ಯೋಸೇಫನು ಮತ್ತು ಬೆನ್ಯಾವಿಾನನು. ರಾಹೇಲಳ ದಾಸಿಯಾದ ಬಿಲ್ಹಳ ಕುಮಾರರು: ದಾನನು ಮತ್ತು ನಫ್ತಾಲಿಯು. ಲೇಯಳ ದಾಸಿ ಯಾದ ಜಿಲ್ಪಳ ಕುಮಾರರು: ಗಾದನು ಮತ್ತು ಆಶೇರನು. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬ ನಿಗೆ ಹುಟ್ಟಿದ ಕುಮಾರರು.